16 ವರ್ಷದ ಹುಡುಗನ ಮೇಲೆ 6 ಜನ ರೇಪ್

ಇಷ್ಟೇ ಅಲ್ಲದೆ ಲೈಂಗಿಕ ಕಿರುಕುಳಕ್ಕೆ ಒಳಗಾದ ಹುಡುಗನನ್ನು ಬೆದರಿಸಿ ಅವನ ಬಳಿ ಇದ್ದ ಹಣವನ್ನು ಕಸಿದುಕೊಳ್ಳಲಾಗಿದೆ. ಪೊಲೀಸರಿಗೆ ವಿಷಯ ತಿಳಿಸಿದರೆ ಎಂಎಂಎಸ್ ಹಂಚುವುದಾಗಿ ಎಚ್ಚರಿಕೆ ನೀಡಲಾಗಿದೆ.
ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿರುವ ಹುಡುಗ ಕಳೆದ ಒಂದು ವಾರದಿಂದ ಶಾಲೆ ಚಕ್ಕರ್ ಹಾಕುತ್ತಿದ್ದ. ಇದನ್ನು ಗಮನಿಸಿದ ಪೋಷಕರು ಕಾರಣ ಏನು ಎಂದು ವಿಚಾರಿಸಿದ್ದಾರೆ. ಆಗುಂತಕರು ದುಡ್ಡಿಗಾಗಿ ಪೀಡಿಸುತ್ತಿರುವ ವಿಷಯವನ್ನು ಹುಡುಗ ಭಯದಿಂದ ಹೇಳಿದ್ದಾನೆ.
ಈ ಬಗ್ಗೆ ಹುಡುಗನ ಕಸಿನ್ ನೊಬ್ಬನನ್ನು ಪೋಷಕರು ಪ್ರಶ್ನಿಸಿದಾಗ ಲೈಂಗಿಕ ಕಿರುಕುಳದ ಪ್ರಕರಣ ಬೆಳಕಿಗೆ ಬಂದಿದೆ. ಹುಡುಗ ನೆಲೆಸಿದ್ದ ಕಾಲೋನಿ ಬಳಿಯೇ ಇರುವ ಆರು ಜನ ಆತನನ್ನು ಚೆನ್ನಾಗಿ ಬಳಸಿಕೊಂಡು ಹಣ ಪೀಕಿಸುತ್ತಿದ್ದರು ಎಂದು ಕಸಿನ್ ಹೇಳಿದ್ದಾನೆ.
ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಪೋಷಕರು, ಎಂಎಂಎಸ್ ಹರಡದಂತೆ ತಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಸಿಹಾನಿ ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಹುಡುಗನ ವೈದ್ಯಕೀಯ ಪರೀಕ್ಷೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ ಪಿ ಎಸ್ ಎಸ್ ಯಾದವ್ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)











Click it and Unblock the Notifications