Maxvolt Energy: ಈ ರಾಜ್ಯದಲ್ಲಿ ₹700 ಕೋಟಿ ಹೂಡಿಕೆ! ಬೃಹತ್ EV ಬ್ಯಾಟರಿ ಘಟಕಕ್ಕೆ ಶಂಕುಸ್ಥಾಪನೆ
Maxvolt Energy: ಉತ್ತರ ಪ್ರದೇಶ ರಾಜ್ಯದ ಅಲಿಗಢದಲ್ಲಿ 700 ಕೋಟಿ ರೂಪಾಯಿ ವೆಚ್ಚದ ಅತ್ಯಾಧುನಿಕ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಇಂದು 'ಭೂಮಿ ಪೂಜೆ' ನೆರವೇರಿಸಲಾಯಿತು.ಈ ಮೂಲಕ ಮ್ಯಾಕ್ಸ್‌ವೋಲ್ಟ್ ಎನರ್ಜಿ ಇಂಡಸ್ಟ್ರೀಸ್ ಕಂಪನಿಯು (Maxvolt Energy Industries Limited) ಉತ್ಪಾದನೆಯಲ್ಲಿ ದೇಶದಲ್ಲಿ ವಿಸ್ತರಣೆ ಮಾಡಿದ್ದು, ಇವಿ ವಾಹನಗಳ ಬಳಕೆಗೆ ಬೂಸ್ಟ್ ನೀಡಲಿದೆ.
ಈ ಭೂಮಿ ಪೂಜೆ ವೇಳೆ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ (IID) ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಲೋಕ್ ಕುಮಾರ್ (IAS) ಅವರು ಮ್ಯಾಕ್ಸ್‌ವೋಲ್ಟ್ ಎನರ್ಜಿಯ ನಾಯಕತ್ವದ ತಂಡ ಮತ್ತು ಇತರ ಪಾಲುದಾರರು ಅಡಿಗಲ್ಲು ಕಾರ್ಯ ನೆರವೇರಿಸಿದರು.

6 ಎಕರೆ ಜಾಗದಲ್ಲಿ ತಲೆ ಎತ್ತಲಿದೆ ಘಟಕ
ಈ ಎಲೆಕ್ಟ್ರಿಕ್ ಮೊಬಿಲಿಟಿ, ಶಕ್ತಿ ಸಂಗ್ರಹಣೆ (energy storage) ಮತ್ತು OEM ಅನ್ವಯಿಕೆಗಳ ಕ್ಷೇತ್ರಗಳಲ್ಲಿ ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ನಾಲ್ಕು ಚಕ್ರದ ವಾಹನಗಳ EV ಬ್ಯಾಟರಿಗಳ ಉತ್ಪಾದನಾ ಕ್ಷೇತ್ರಕ್ಕೆ ಪ್ರವೇಶಿಸಲು ಈ ಉತ್ಪಾದನಾ ಘಟಕವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಒಟ್ಟು ಬರೋಬ್ಬರಿ 23,576 ಚದರ ಮೀಟರ್ (6 ಎಕರೆ) ವಿಶಾಲ ಜಾಗದಲ್ಲಿ ಘಟಕ ಸ್ಥಾಪನೆಗೆ ಅಡಿಗಲ್ಲು ಹಾಕಲಾಯಿತು. ತಲಾ 5 GWh (ಗಿಗಾ ವ್ಯಾಟ್) ಸಾಮರ್ಥ್ಯದ ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲು ಪ್ಲ್ಯಾನ್ ಮಾಡಲಾಗಿದೆ. ವರ್ಷಕ್ಕೆ 10 GWh ಸಾಮರ್ಥ್ಯದ ಉತ್ಪಾದನಾ ಗುರಿ ಹಾಕಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಎರಡು ಹಂತಗಳ ಒಟ್ಟು ವಾಷಿರ್ಕ ಕೆಪಾಸಿಟಿ 12.5 GWh ತಲುಪುತ್ತದೆ.

ಈ ಘಟಕವು 1kW ನಿಂದ 5 MW ವರೆಗಿನ ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಉತ್ಪಾದಿಸಲಿದೆ. ಚಾರ್ಜಿಂಗ್, L3 ಮತ್ತು L5 ವೇಗದ ಚಾರ್ಜಿಂಗ್ ಅನ್ವಯಿಸಲಿವೆ. ಅತ್ಯಗತ್ಯ ಬ್ಯಾಟರಿ ನಿರ್ವಹಣಾ ವ್ಯವಸ್ಥೆ (BMS) ಸಾಮರ್ಥ್ಯ ಘಟಕದಲ್ಲಿರಲಿದೆ. ಗ್ರಾಹಕರ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ಬ್ಯಾಟರಿಗಳ ತಯಾರಿಕೆಗೆ ಕಂಪನಿ ಆದ್ಯತೆ ನೀಡುತ್ತಿದೆ. ಇಲ್ಲಿ ಬೈಕ್ ಮತ್ತು ಆಟೋಗಳು (ತ್ರಿಚಕ್ರ) ಬ್ಯಾಟರಿಗಳ ಜೊತೆಗೆ, ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಉತ್ಪಾದನೆಗೆ ಕಾರ್ಯ ವಿಸ್ತರಣೆ ಆಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರ ಪ್ರದೇಶ ರಾಜ್ಯದ ಸರ್ಕಾರದ ಮೂಲ ಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಹಾಗೂ ಎನ್‌ಆರ್ ಐ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಲೋಕ್ ಕುಮಾರ್ ಅವರು, 'ರಾಜ್ಯವು ಬ್ಯಾಟರಿ ಮತ್ತು EV ಉತ್ಪಾದನಾ ನೆಲೆಯಾಗಲಿದೆ. ಇಂತಹ ಬೃಹತ್ ಯೋಜನೆಗಳ ಮೂಲಕವೇ ರಾಜ್ಯವು ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ಬರಲಿದೆ. ಇಂತಹ ಕೈಗಾರಿಕಾ ಉದ್ದೇಶಗಳ ಹೂಡಿಕೆ ಆಕರ್ಷಿಸಲು ರಾಜ್ಯದಲ್ಲಿ 'ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮೊಬಿಲಿಟಿ ನೀತಿ' ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ವಾರ್ಷಿಕ 6,800 ಕೋಟಿ ರೂ. ವಹೀವಾಟು ಗುರಿ
ಅದರಲ್ಲೂ ಇಂತಹ ದೊಡ್ಡ ಘಟಕ ಸ್ಥಾಪನೆಯಾದ ಬಳಿಕ ಬಿಡಿಭಾಗಗಳ ಪೂರೈಕೆದಾರರಿಂದ ಹಿಡಿದು ನುರಿತ ಉದ್ಯೋಗಾವಕಾಶಗಳ ಸೃಷ್ಟಿ ಆಗಲಿವೆ. ಈ ಒಂದು ಘಟಕವು ಕೈಗಾರಿಕಾ ಹಬ್ ಆಗಿ ಬದಲಾಗಲಿದೆ. ಕಳೆದ ಒಂದೇ ವರ್ಷದಲ್ಲಿ 4,500 ಘಟಕಗಳು ಕಾರ್ಯಾರಂಭ ಮಾಡಿ ದಾಖಲೆಯ ಮೈಲಿಗಲ್ಲು ನಿರ್ಮಿಸಲಾಗಿದೆ. ದಶಕದ ಹಿಂದೆ ಹತ್ತು ವರ್ಷಗಳಲ್ಲಿ ಆಗುತ್ತಿದ್ದ ಅಭಿವೃದ್ಧಿಯು ಇದೀಗ ಒಂದೇ ವರ್ಷದಲ್ಲಿ ಆಗುತ್ತಿದೆ. ಪ್ರಸ್ತುತ ಯೋಜನೆಗೆ 700 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇಲ್ಲಿಂದ ಮುಂದೆ ವಾರ್ಷಿಕ 6,800 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಯಲಿದೆ ಎಂದು ಅವರು ಭರವಸೆ ನೀಡಿದರು. ಇಷ್ಟು ವಹೀವಾಟು ನಡೆಸುವ ಉದ್ದೇಶದಿಂದಲೇ ಉತ್ಪಾದನೆ, ಎಂಜಿನಿಯರಿಂಗ್, ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ. ಘಟಕದಲ್ಲಿ ಒಟ್ಟು 1,500-2,000 ನೇರ ಗರಿಷ್ಠ 10,000 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಘಟಕವು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕಂಪನಿಯು ಉತ್ಪನ್ನಗಳ ವೈವಿಧ್ಯಮಯಗೊಳಿಸುವ ಜೊತೆಗೆ ಮಾರುಕಟ್ಟೆಯನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಣೆ ಮಾಡಿಕೊಳ್ಳಲಾಗುವುದು. 2030ರ ವೇಳೆಗೆ 100ಕ್ಕೂ ಹೆಚ್ಚು ಸಂಗ್ರಹಣಾ ಕೇಂದ್ರಗಳ ಮೂಲಕ ವಾರ್ಷಿಕವಾಗಿ 5,00,000 ಬ್ಯಾಟರಿ ಮರುಪಡೆಯುವ (ಮರು ಬಳಕೆ) ಗುರಿ ಇಟ್ಟುಕೊಳ್ಳಲಾಗಿದೆ.

ಅಲಿಗಢ ಘಟಕದಲ್ಲಿ ನುರಿತ ತಂಡದಿಂದ ಕಾರ್ಯ
ಅಲಿಗಢ ಘಟಕವನ್ನು ಸಂಪೂರ್ಣವಾಗಿ ಮ್ಯಾಕ್ಸ್‌ವೋಲ್ಟ್ ಎನರ್ಜಿಯ ಕಂಪನಿಯು ಮುನ್ನಡೆಸುತ್ತದೆ. ಇಲ್ಲಿರುವ ತಂಡದಲ್ಲಿ ಸತೇಂದ್ರ ಶುಕ್ಲಾ, ಭುವನೇಶ್ವರ್ ಪಾಲ್ ಸಿಂಗ್, ವಿಶಾಲ್ ಗುಪ್ತಾ, ಸಚಿನ್ ಗುಪ್ತಾ ಮತ್ತು ಮುಕೇಶ್ ಗುಪ್ತಾ ಇರಲಿದ್ದಾರೆ. ಅವರಿಗೆ ಕಂಪನಿಯ ಒಇಎಂ, ತಂತ್ರಜ್ಞಾನ, ಸಂಶೋಧನೆ ಮತ್ತು ವಾಹನ ಬಿಡಿಭಾಗಗಳ ಪೂರೈಕೆದಾರರ ಪರಿಸರ ವ್ಯವಸ್ಥೆಯ ಒದಗಿಸಲಾಗುತ್ತದೆ. ಇನ್ನೂ ಮ್ಯಾಕ್ಸ್‌ವೋಲ್ಟ್ ಕಂಪನಿಯು 22 ರಾಜ್ಯಗಳು ಮತ್ತು 1,300ಕ್ಕೂ ಹೆಚ್ಚು ಪಿನ್‌ಕೋಡ್‌ಗಳ ವ್ಯಾಪ್ತಿಯಲ್ಲಿ 950ಕ್ಕೂ ಹೆಚ್ಚು ಡೀಲರ್‌ಗಳನ್ನು ಹಂದಿದೆ. ಕಂಪನಿಯ ಸೇವಾ ಜಾಲವು ದೊಡ್ಡದಿದ್ದು, 30ಕ್ಕೂ ಅಧಿಕ ಒಇಎಂ ಪಾಲುದಾರನ್ನು ಹೊಂದಿದೆ.

ಇಂದಿನ ಶಂಕುಸ್ಥಾಪನೆ ಮೂಲಕ ಮ್ಯಾಕ್ಸ್‌ವೋಲ್ಟ್ ಎನರ್ಜಿ ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ತಲುಪಿಸಿದೆ. ಘಟಕ ಆರಂಭವಾದ ಕೆಲವೇ ತಿಂಗಳಲ್ಲಿ ಕಂಪನಿಯು ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಲಿದೆ. ಹೊಸ ಇವಿ (EV) ಹಾಗೂ ಇಂಧನ ಸಂಗ್ರಹಣಾ ಅನ್ವಯಿಕ ರಂಗದಲ್ಲೂ ಸೇವೆ ವಿಸ್ತರಣೆ ಆಗಲಿದೆ. ಇದು ಇವಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡುತ್ತಿರುವ ಭಾರತದ ಬ್ಯಾಟರಿ ಉತ್ಪಾದನಾ ಕ್ಷೇತ್ರದಲ್ಲಿ ಮಾರಾಟ ಬಲಗೊಳ್ಳಲಿದೆ.
ಇನ್ನೂ ಕಂಪನಿಯು ಒಂದೇ ತಿಂಗಳಲ್ಲಿ ಘಟಕ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸಿತು.


Click it and Unblock the Notifications
