July Jamboree: 'ಜುಲೈ ಜಂಬೋರೆ' ಡಿಜಿಟಲ್ ಅವಾರ್ಡ್ಸ್ ಸಂಭ್ರಮ!
ಇದು ಡಿಜಿಟಲ್ ಜಮಾನ, ಇಲ್ಲಿ ಏನಿದ್ದರೂ ಡಿಜಿಟಲ್ ಮೂಲಕವೇ ನಡೆಯುತ್ತೆ. ಹೀಗೆ ಭವಿಷ್ಯದಲ್ಲೂ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರ ದೊಡ್ಡ ಸಾಧನೆ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಸಾಧನೆ ಮಾಡುವವರನ್ನ ಗುರುತಿಸಿ ಗೌರವಿಸುತ್ತಾ ಬಂದಿದೆ 'ಜುಲೈ ಜಂಬೋರೆ'. ಈ ಬಾರಿಯೂ ಇಂಕ್‌ಸ್ಪೆಲ್ ಮೀಡಿಯಾ (Inkspell Media) ಸಂಸ್ಥೆಯ 2023ರ 'ಜುಲೈ ಜಂಬೋರೆ' ಸಖತ್ ಸದ್ದು ಮಾಡಿದೆ.
ಅಂದಹಾಗೆ ಇಂಕ್‌ಸ್ಪೆಲ್ ಮೀಡಿಯಾ ಆಯೋಜಿಸುವ ಎಂಕ್ಯೂಬ್ ಅವಾರ್ಡ್ಸ್ 2023 ಮತ್ತು ಅನ್ಲಾಕ್ಡ್ ಅವಾರ್ಡ್ಸ್ 2023ರ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದೆ. ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಆವಿಷ್ಕಾರ & ವಿಷಯ ವಿಶ್ಲೇಷಣೆ ವಿಭಾಗದ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಈ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಾಧಕರನ್ನ ಗುರುತಿಸುತ್ತಿದೆ ಇಂಕ್‌ಸ್ಪೆಲ್ ಮೀಡಿಯಾ ಸಂಸ್ಥೆ. ಡಿಜಿಟಲ್ ಮೀಡಿಯಾ ಇನ್ನೋವೇಶನ್ಸ್ & ಕಂಟೆಂಟ್ ಅನಾಲಿಟಿಕ್ಸ್‌ನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರನ್ನು ಗುರುತಿಸಿ ಗೌರವಿಸಲಾಗುತ್ತದೆ.

ಸಾಧಕರಿಗೆ ಸನ್ಮಾನ ಸಮಾರಂಭ!
ಇಂಕ್‌ಸ್ಪೆಲ್ ಮೀಡಿಯಾ ಮತ್ತು ಗ್ಲೋಬಲ್ ಟ್ರೆಂಡ್ಸ್ ಫೋರಮ್‌ನ ಅನ್ಲಾಕ್ಡ್ ಅವಾರ್ಡ್ಸ್ 2023ರ ಮೂಲಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ತಂದವರನ್ನು ಗುರುತಿಸಲಾಗುತ್ತಿದೆ. ಅಷ್ಟಕ್ಕೂ ಡಿಜಿಟಲ್ ಕ್ಷೇತ್ರದಲ್ಲಿ ಮಾದರಿ ಆಗಬಲ್ಲ ಕ್ಯಾಂಪೇನ್‌ಗಳು, ಕಾರ್ಯಕ್ರಮ, ಉತ್ಪನ್ನಗಳೂ ಸೇರಿದಂತೆ ಸೇವೆ ಮತ್ತು ಪರಿಹಾರ ಪ್ರಾರಂಭಿಸುವ ಮೂಲಕ ಡಿಜಿಟಲ್ ಕ್ಷೇತ್ರದ ದಿಕ್ಕನ್ನು ಬದಲಾಯಿಸಲು ಕೊಡಗೆ ನೀಡಿದವರನ್ನ ಪ್ರೋತ್ಸಾಹಿಸಲಾಗುತ್ತದೆ. ಈ ಬಾರಿ ಕೂಡ ಇದೇ ರೀತಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಪ್ರತಿಷ್ಠಿತ ಸಂಸ್ಥೆಗಳ ಸಾಧಕರು ಪ್ರಶಸ್ತಿ ಸ್ವೀಕರಿಸಿದರು.
ಇನ್ನು ಈ ಸಾಧಕರ ಪಟ್ಟಿಯಲ್ಲಿ ಸಿಸಿ ಅವೆನ್ಯೂ - ಇನ್ಫಿಬೀಮ್ ಅವೆನ್ಯೂಸ್ ಲಿಮಿಟೆಡ್, ಅನ್‌ಸ್ಪೋಕನ್ - #ಸ್ಟೋರಿಆಫ್‌ಎಫಾದರ್‌ಆಂಡ್‌ಸನ್, ಧಾರ್ ಮನ್ - ಶಾರ್ಟ್ ವಿಡಿಯೋಸ್, ವಿಷನ್, ಸ್ಟಾರ್‌ಬಕ್ಸ್ ಇಂಡಿಯಾ, ಇಂಟೆಂಟ್ ಫಾರ್ಮ್ ಎಕ್ಸ್ ಕ್ಯೂಬೆಲೆಲೊ ಸೇರಿ ಇನ್ನೂ ಅನೇಕರು ಇದ್ದರು. ಪ್ರಶಸ್ತಿ ಪುರಸ್ಕೃತರು ಉತ್ಕೃಷ್ಟತೆ ಉದಾಹರಿಸಿ, ತಮ್ಮ ಉದ್ಯಮದಲ್ಲಿ ಹೊಸ ಎತ್ತರವನ್ನು ತಲುಪಲು ಪ್ರೇರೇಪಿಸಿದರು.
ಪ್ರಶಸ್ತಿ ಪಡೆದ ಸಾಧಕರ ಮಾತು
ಇನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲು ಹಲವು ಮಾನದಂಡ ಅನುಸರಿಸಲಾಗುತ್ತದೆ. ಹಾಗೇ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದ ಪರಿಣಿತರು ಮತ್ತು ಮಾರ್ಕೆಟಿಂಗ್ ತಜ್ಞರನ್ನ ಒಳಗೊಂಡ ಸಮಿತಿ ಈ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುತ್ತದೆ. ನಾವೀನ್ಯತೆ, ಸೃಜನಶೀಲತೆ ಸೇರಿ ಪ್ರಭಾವ ಮತ್ತು ಸುಸ್ಥಿರತೆಯಂತಹ ಮಾನದಂಡದ ಆಧಾರದಲ್ಲಿ ಮೌಲ್ಯಮಾಪನ ಮಾಡುವ ಮೂಲಕ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಕಾರ್ಯಕ್ರಮದಲ್ಲಿ ಅವಾರ್ಡ್ ಪಡೆದ ಸಾಧಕರು ತಮ್ಮ ವೃತ್ತಿ ಜೀವನದ ಸವಾಲುಗಳು ಮತ್ತು ಅನುಭವ ಹಂಚಿಕೊಂಡು ಇತರರಿಗೂ ಸ್ಫೂರ್ತಿ ತುಂಬಿದರು.
ಸಾಧಕರ ಅನುಭವ ಕ್ಷೇತ್ರಕ್ಕೆ ಸ್ಫೂರ್ತಿ
ಇನ್ನು ಕಾರ್ಯಕ್ರಮದಲ್ಲಿ ಇಂಕ್‌ಸ್ಪೆಲ್ ಮೀಡಿಯಾ ಅಲಯನ್ಸ್‌ನ ಮುಖ್ಯಸ್ಥೆ ಚಿತ್ರಾ ಸುರಾನಾ ಅವರು, ವಿಜೇತರು ಮತ್ತು ನಾಮಿನಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇವರ ಸಾಧನೆಯು ಉದ್ಯಮಕ್ಕೆ ಸ್ಫೂರ್ತಿ ನೀಡಲಿದೆ ಎಂದರು. ವೀಡಿಯೋ ಮಾರ್ಕೆಟಿಂಗ್ ಮತ್ತು ಕಂಟೆಂಟ್ ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮ, ಮೊಬೈಲ್ ಮಾರ್ಕೆಟಿಂಗ್ ಕ್ಷೇತ್ರದ ಸಾಧನೆಗಳನ್ನು ಕಾರ್ಯಕ್ರಮದಲ್ಲಿ ಗುರುತಿಸಲಾಗುತ್ತದೆ. ಈ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಭವಿಷ್ಯ ಮತ್ತಷ್ಟು ಉಜ್ವಲಗೊಳಿಸುವ ಸಾಧಕರನ್ನು ಸನ್ಮಾನಿಸಲಾಗುತ್ತಿದೆ.
ಪ್ರಖ್ಯಾತ ಸಂಸ್ಥೆಗಳಾದ ಮೈಕ್ರೋಸಾಫ್ಟ್, ಟೆಕ್ ಮಹೀಂದ್ರಾ, ಜೀ5, ಸೋನಿಲಿವ್ ಮತ್ತು ಪೈಸಾ ಬಜಾರ್.ಕಾಂ ಕಂಪನಿಗಳ ಪ್ರಮುಖ ವೃತ್ತಿಪರರು, ಸ್ಪೀಕರ್‌ಗಳು ಮತ್ತು ತೀರ್ಪುಗಾರರ ವಿಶೇಷ ಸಮಿತಿಯನ್ನು ರಚಿಸಿದ್ದರು. ಪ್ರಮುಖ ವಿಜೇತರಲ್ಲಿ ಮದರ್ಸ್ ಡೇ ಕ್ಯಾಂಪೇನರ್ ಝೀ ಬಾಂಗ್ಲಾ, ಅನ್‌ಸ್ಪೋಕನ್ - #ಸ್ಟೋರಿಆಫ್‌ಎಫಾದರ್‌ಆಂಡ್‌ಸನ್, ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ #ಮಾರ್ಕೆಟ್‌ಮಸಾಲಾ, ನೆಟ್‌ಫ್ಲಿಕ್ಸ್ ಇಂಡಿಯಾದ #ದೇಶ್‌ಕೆಲಿಯೇಮಜ್ನು, ಜಿಯೋ ವಿಐಪಿ ಬಾಕ್ಸ್ ಮತ್ತಿತರರು ಇದ್ದರು. ವಿಜೇತರು ಡಿಜಿಟಲ್ ಮಾರ್ಕೆಟಿಂಗ್ ಭವಿಷ್ಯ ರೂಪಿಸುವಲ್ಲಿ ಡೇಟಾ-ಚಾಲಿತ ಒಳನೋಟಗಳ ಪರಿವರ್ತಕ ಶಕ್ತಿಯನ್ನು ಪ್ರದರ್ಶಿಸಿದರು.
ಇನ್ನು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದ ಈ ಮಹತ್ವದ ಇವೆಂಟ್‌ಗೆ ಜೋಶ್ ಆ್ಯಪ್ - ವೆರ್ಸ್ ಇನ್ನೋವೇಷನ್ಸ್ ಸೇರಿದಂತೆ ಪಿಂಕ್ ವಿಲ್ಲಾ, ಗ್ಲೋಬಲ್ ಟ್ರೆಂಡ್ಸ್ ಫೋರಂ ಹಾಗೂ ಇಂಡಿಯಾ ಕ್ರಿಯೇಟಿವ್ ಇಂಡಸ್ಟ್ರೀಸ್ ಕೌನ್ಸಿಲ್, ಕೆನ್ಸಿಯೊ, ಒನ್ ಇಂಡಿಯಾ, ಫಾರ್ ಪ್ರೆಸ್ ರಿಲೀಸ್, ಇಡಿ ಟೈಮ್ಸ್, 24 ಫ್ರೇಮ್ಸ್ ಡಿಜಿಟಲ್, ಜಿಯೋ ನ್ಯೂಸ್, ಈಜಿಡೈನರ್ ಹಾಗೂ ಪ್ರಮುಖ ಸಂಸ್ಥೆಗಳು ಬೆಂಬಲ ನೀಡಿದ್ದವು.
'ಜುಲೈ ಜಂಬೋರೆ' ಕುರಿತು ಹೆಚ್ಚಿನ ಮಾಹಿತಿಗೆ ಹಾಗೂ ವಿಜೇತ ಸಂಪೂರ್ಣ ಪಟ್ಟಿಯನ್ನ ವಿಕ್ಷಿಸಲು https://www.mcubeawards.com ಮತ್ತು https://www.unlockedawards.com/ ಗೆ ವಿಸಿಟ್ ಮಾಡಿ.












Click it and Unblock the Notifications