ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಪುರ ಸಾಹಿತ್ಯ ಸಂಭ್ರಮ: 6ನೇ ದಿನದ ಆಕರ್ಷಣೆಯ ವಿವರ

Google Oneindia Kannada News

15 ನೇ ಜೈಪುರ ಸಾಹಿತ್ಯ ಉತ್ಸವದ ಆರನೇ ದಿನದಂದು ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಯುಲಿದೆ. ಭೌಗೋಳಿಕ ರಾಜಕೀಯ, ಅಂತಾರಾಷ್ಟ್ರೀಯ ಸಂಘರ್ಷಗಳು, ಡೇಟಾ ಪತ್ರಿಕೋದ್ಯಮ ಮತ್ತು ಹೆಚ್ಚಿನವುಗಳ ಬಗ್ಗೆ ಗಂಭೀರ ಚರ್ಚೆಗಳನ್ನು ಗುರುವಾರ ಸಾಹಿತ್ಯ ಸಂಭ್ರಮದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಜಿಯೋಪಾಲಿಟಿಕ್ಸ್ ಮತ್ತು ತಂತ್ರಜ್ಞಾನದ ಪ್ರಮುಖ ಜಾಗತಿಕ ಸಲಹೆಗಾರ ಬ್ರೂನೋ ಮಾಸೆಸ್ ಅವರು ಮಾಜಿ ರಾಜತಾಂತ್ರಿಕ ಮತ್ತು ಲೇಖಕ ನವತೇಜ್ ಸರ್ನಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ವಿಶ್ವದ ರಾಜಕೀಯ ಭವಿಷ್ಯದ ಕುರಿತು ಸಂವಾದ ನಡೆಸಲಿದ್ದಾರೆ. ಅವರು ತಮ್ಮ ಪುಸ್ತಕ ಜಿಯೋಪಾಲಿಟಿಕ್ಸ್ ಫಾರ್ ದಿ ಎಂಡ್ ಟೈಮ್: ಫ್ರಮ್ ದಿ ಪ್ಯಾಂಡೆಮಿಕ್ ಟು ದಿ ಕ್ಲೈಮೇಟ್ ಕ್ರೈಸಿಸ್ ಬಗ್ಗೆ ಚರ್ಚೆ ನಡೆಸಲಿದ್ದಾರೆ.

 ಜೈಪುರ ಸಾಹಿತ್ಯ ಹಬ್ಬ: ಗಾಯಕಿ ಉಷಾ ಉತ್ತುಪ್, ಮೊಜ್ದಾಹ್ ಜಮಾಲ್ಜಾದಾ ಸಾಹಿತ್ಯದೌತಣ ಜೈಪುರ ಸಾಹಿತ್ಯ ಹಬ್ಬ: ಗಾಯಕಿ ಉಷಾ ಉತ್ತುಪ್, ಮೊಜ್ದಾಹ್ ಜಮಾಲ್ಜಾದಾ ಸಾಹಿತ್ಯದೌತಣ

ಡೇಟಾ-ಜರ್ನಲಿಸಂ ಪ್ರವರ್ತಕಿ ರುಕ್ಮಿಣಿ ಎಸ್ ಮತ್ತು ಮಾಜಿ ಭಾರತೀಯ ರಾಜತಾಂತ್ರಿಕ, ವಿಶ್ವಸಂಸ್ಥೆಯ ಮಾಜಿ ಸಹಾಯಕ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯ ಮಹಿಳಾ ಮಾಜಿ ಉಪ ಕಾರ್ಯನಿರ್ವಾಹಕ ನಿರ್ದೇಶಕಿ ಲಕ್ಷ್ಮಿ ಪುರಿ ಅವರು ಅರ್ಥಶಾಸ್ತ್ರಜ್ಞ ಶೈಲೇಂದ್ರ ರಾಜ್ ಮೆಹ್ತಾ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.

15th Jaipur Literature Festival: Here are the Prime Attractions of Day 6

ರುಕ್ಮಿಣಿ ಎಸ್ ಅವರು ತಮ್ಮ ಪುಸ್ತಕ ಹೋಲ್ ನಂಬರ್ಸ್ ಅಂಡ್ ಹಾಫ್ ಟ್ರುತ್ಸ್: ವಾಟ್ ಡಾಟಾ ಕ್ಯಾನ್ ಅಂಡ್ ಕೆನಾಟ್ ಟೆಲ್‌ ಅಸ್‌ ಅಬೌಟ್ ಮಾಡರ್ನ್ ಇಂಡಿಯಾದಲ್ಲಿ ಸುಮಾರು ಎರಡು ದಶಕಗಳ ಆನ್-ಗ್ರೌಂಡ್ ರಿಪೋರ್ಟಿಂಗ್ ಅನುಭವವನ್ನು ಪ್ರಸ್ತುತಪಡಿಸಿದ್ದಾರೆ. ಮಾನವ ಹಕ್ಕುಗಳು, ಸುಸ್ಥಿರ ಅಭಿವೃದ್ಧಿ, ಪರಿಸರವಾದ, ಲಿಂಗ ಸಮಾನತೆ, ಶಾಂತಿ ಮತ್ತು ಭದ್ರತೆಗಳ ವಿಚಾರದಲ್ಲಿ ವಾದ ಮಂಡನೆ ಮಾಡುವ ವಕೀಲರಾದ ಲಕ್ಷ್ಮಿ ಪುರಿ ಬಹುಪಕ್ಷೀಯ ಸಂವಾದ ಹಾಗೂ ಕ್ರಿಯೆಯ ವಿಚಾರದ ಸಂವಾದಕ್ಕೆ ಬೆಂಬಲ ನೀಡಲಿದ್ದಾರೆ.

ಜೈಪುರ ಸಾಹಿತ್ಯ ಉತ್ಸವ: ನಂದನ್ ನಿಲೇಕಣಿ ಮತ್ತು ತನುಜ್ ಭೋಜ್ವಾನಿ ದಿನ 4ರ ಆಕರ್ಷಣೆಜೈಪುರ ಸಾಹಿತ್ಯ ಉತ್ಸವ: ನಂದನ್ ನಿಲೇಕಣಿ ಮತ್ತು ತನುಜ್ ಭೋಜ್ವಾನಿ ದಿನ 4ರ ಆಕರ್ಷಣೆ

15 ನೇ ಆವೃತ್ತಿಯ ಜೈಪುರ ಸಾಹಿತ್ಯ ಉತ್ಸವದ ಆರನೇ ದಿನದಂದು ಸಂಗೀತಗಾರ ರೆಮೋ ಫೆರ್ನಾಂಡಿಸ್ ಅವರು ಸಂಜೋಯ್ ಕೆ. ರಾಯ್ ಜೊತೆ ಸಂಗೀತ, ಕಲೆ, ಬರವಣಿಗೆ ಮತ್ತು ಅವರ ತಾಯ್ನಾಡು ಗೋವಾದಲ್ಲಿನ ಜೀವನದ ಬಗ್ಗೆ ಚರ್ಚಿಸುತ್ತಿದ್ದಾರೆ. ಅವರು ತಮ್ಮ ಜೀವನಚರಿತ್ರೆ Remo: The Autobiography of Remo Fernandes ಕುರಿತು ಮಾತನಾಡಲಿದ್ದಾರೆ.

ಚೊಚ್ಚಲ ಕಾದಂಬರಿಯು ಹೊಸ ಧ್ವನಿಗಳು, ತಾಜಾ ದೃಷ್ಟಿಕೋನವನ್ನು ಹೊಂದಿದೆ. ಸಾಹಿತ್ಯದ ಚೊಚ್ಚಲ ತೂಕ ಎಷ್ಟು? ಅದು ಹೇಗೆ ಅಸ್ತಿತ್ವಕ್ಕೆ ಬರುತ್ತದೆ? ಲಿಂಡ್ಸೆ ಪೆರೇರಾ, ರಿಜುಲಾ ದಾಸ್, ಶಬೀರ್ ಅಹ್ಮದ್ ಮಿರ್ ಮತ್ತು ದರಿಭಾ ಲಿಂಡೆಮ್ ಮೊದಲ ಬಾರಿಗೆ ಲೇಖಕರ ಅನುಭವಗಳನ್ನು ಚರ್ಚಿಸುತ್ತಾರೆ.

15th Jaipur Literature Festival: Here are the Prime Attractions of Day 6

ತೀವ್ರವಾದ ಅಂತಾರಾಷ್ಟ್ರೀಯ ಬೆಳವಣಿಗೆಗಳು ಮತ್ತು ಸಂಘರ್ಷ, ಮಾನವ ಹಕ್ಕುಗಳು ಮತ್ತು ಯುದ್ಧದ ಸಾಧನದ ಸುತ್ತಲಿನ ಹಿಂದೆಂದಿಗಿಂತಲೂ ತೀವ್ರವಾದ ವಿಚಾರಗಳ ಬಗ್ಗೆ ಚರ್ಚೆಗೆ ಬೆಳಕು ಚೆಲ್ಲಲಿದ್ದಾರೆ. ಶಾಂತಿಯುತ ಅಥವಾ ಪರಭಕ್ಷಕ ಸಮಾಜಗಳ ಸಾಧ್ಯತೆಗಳ ಬಗ್ಗೆ ಪ್ರಸ್ತಾಪ ನಡೆಯಲಿದೆ. ಯುದ್ಧ ಮತ್ತು ಪ್ರಪಂಚದ ವಿರೋಧಾಭಾಸಗಳ ನಡುವೆ ನಾವು ಶಾಂತಿಯ ಮನಸ್ಥಿತಿಯನ್ನು ಹೇಗೆ ಬೆಳೆಸಿಕೊಳ್ಳುತ್ತೇವೆ? ನಾವು ಎಂದಾದರೂ ಶಾಂತಿಯ ಕನಸು ಕಾಣಬಹುದೇ ಅಥವಾ ಆಕ್ರಮಣಶೀಲ ಪ್ರವೃತ್ತಿಯು ತಪ್ಪಿಸಿಕೊಳ್ಳಲಾಗದು? ಎಂಬ ವಿಚಾರದಲ್ಲಿ ವಿಚಾರಗೋಷ್ಠಿ ನಡೆಯಲಿದೆ.

ಐದನೇ ದಿನದ ರೌಂಡ್‌ ಅಪ್‌

ಬುಧವಾರದಂದು, ಜೈಪುರ ಸಾಹಿತ್ಯ ಸಂಭ್ರಮದಲ್ಲಿ ಭಾರತೀಯ ಪಾಪ್ ಗಾಯಕಿ ಉಷಾ ಉತ್ತುಪ್, ಪತ್ರಕರ್ತೆ ಸೃಷ್ಟಿ ಝಾ ಮತ್ತು ಸಂಗೀತಗಾರ್ತಿ ವಿದ್ಯಾ ಶಾ "ದಿ ಕ್ವೀನ್ ಆಫ್ ಪಾಪ್-ದಿ ಆಥರೈಸ್ಡ್ ಬಯೋಗ್ರಫಿ" ಕುರಿತು ಚರ್ಚೆ ನಡೆಸಿದರು. ಝಾ ಅವರು ಇಂಗ್ಲಿಷ್‌ನಲ್ಲಿ ಭಾಷಾಂತರಿಸಿದ ಪುಸ್ತಕ ಇದಾಗಿದೆ.

ವಿಕಾಸ್ ಕುಮಾರ್ ಝಾ ಅವರ ಉಲ್ಲಾಸ್ ಕಿ ನವ್ ಕುರಿತು ಮಾತನಾಡಿದ ಉಷಾ ಉತ್ತುಪ್ 2 ವರ್ಷಗಳ ಹಿಂದೆ ಜೈಪುರ ಸಾಹಿತ್ಯ ಉತ್ಸವದಲ್ಲಿ ಆಚರಿಸಲಾಯಿಗಿದೆ ಎಂಬುವುದನ್ನು ಪ್ರಸ್ತಾಪ ಮಾಡಿದರು. "ಈಗಾಗಲೇ 2 ವರ್ಷಗಳು ಕಳೆದಿವೆ ಮತ್ತು ಇಲ್ಲಿ ನಾವು ಒಟ್ಟಿಗೆ ಇದ್ದೇವೆ ಎಂದು ನಾನು ಊಹಿಸಲು ಸಹ ಸಾಧ್ಯವಿಲ್ಲ. ಜೈಪುರ ಸಾಹಿತ್ಯ ಸಂಭ್ರಮದಲ್ಲಿ ಇರುವುದು ಯಾವಾಗಲೂ ಸಂತಸದ ವಿಚಾರವಾಗಿದೆ. ನಾನು ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನವನ್ನು ಕಂಡಿದ್ದೇನೆ. ಇದರ ಭಾಗವಾಗುವುದು ನನಗೆ ಸಂತಸದ ವಿಚಾರ. ಸಂಗೀತದ ನಡುವೆ, ಸಂಸ್ಕೃತಿಯ ನಡುವೆ, ಸಾಹಿತ್ಯದ ನಡುವೆ ಬಹಳ ಸಂಬಂಧಗಳಿದೆ ಎಂದು ನಾನು ಭಾವಿಸುತ್ತೇನೆ," ಎಂದು ಗಾಯಕಿ ಉಷಾ ಉತ್ತುಪ್ ಹೇಳಿದರು.

ಮತ್ತೊಂದು ಅಧಿವೇಶನದಲ್ಲಿ ಇಂದ್ರಜಿತ್ ರಾಯ್, ಲೇಖಕ ಹರ್ಷ್ ಮಂದರ್ ಮತ್ತು ಚಲನಚಿತ್ರ ನಿರ್ಮಾಪಕ, ಅಂಕಣಕಾರ ಮತ್ತು ಲೇಖಕಿ ನತಾಶಾ ಬಧ್ವರ್ ಭಾರತದಲ್ಲಿ ಪ್ರಜಾಪ್ರಭುತ್ವದ ಪೌರತ್ವದ ಭವಿಷ್ಯಕ್ಕಾಗಿ ಬೆಳೆಯುತ್ತಿರುವ ಆತಂಕಗಳು ಮತ್ತು ಪ್ರಶ್ನೆಗಳ ನಡುವೆ ಭರವಸೆಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು. ಕಳೆದ ಕೆಲವು ವರ್ಷಗಳಲ್ಲಿ ಪ್ರಪಂಚದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿರುವ ಬಿಕ್ಕಟ್ಟಿನ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಮಾನವ ಸ್ವಭಾವದಲ್ಲಿ ಒಳ್ಳೆಯತನದ ಒಳಸಂಬಂಧದ ಬಗ್ಗೆ ಮಾತನಾಡಿದ ಮಂದರ್, "ಇತಿಹಾಸದ ಕಮಾನು ದೀರ್ಘವಾಗಿರಬಹುದು ಆದರೆ ಕೊನೆಯಲ್ಲಿ ಅದು ನ್ಯಾಯದ ಕಡೆಗೆ ಬಾಗುತ್ತದೆ. ನನಗೆ ಅದರ ಬಗ್ಗೆ ಮನವರಿಕೆಯಾಗಿದೆ," ಎಂದು ಹೇಳಿದರು. ಬ್ರಿಟಿಷ್ ಲೇಖಕಿ ಮೋನಿಕಾ ಅಲಿ ಅವರ ಚೊಚ್ಚಲ ಕಾದಂಬರಿ ಬ್ರಿಕ್ ಲೇನ್ ಅನ್ನು ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬ್ರಿಟಿಷ್ ಲೇಖಕಿ ಮೋನಿಕಾ ಅಲಿ, ಬೀ ರೌಲಟ್ ಜೊತೆ ಸಂವಾದ ನಡೆಸಿದ್ದಾರೆ. ಇನ್ನು ಒಂದು ವರ್ಷದಲ್ಲಿ ಹೊಸ ಪುಸ್ತಕವೊಂದು ಪ್ರಕಟವಾಗಲಿದೆ.

Recommended Video

Jaipur Literature Festival 2022 | Oneindia Kannada

ನೋಂದಣಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಜೈಪುರ ಸಾಹಿತ್ಯೋತ್ಸವದ ವೆಬ್‌ಸೈಟ್‌ಗೆ ಭೇಟಿ ನೀಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X