ಭಾರತೀಯರು ಎಂದೂ ಮರೆಯದ ದೇಶ ವಿಭಜನೆಯ ಕರಾಳ ದುರಂತಗಳು

ಭಾರತ, ಆಗಸ್ಟ್ 14: ಸುಮಾರು 200 ವರ್ಷಗಳ ಬ್ರಿಟಿಷರ ಆಳ್ವಿಕೆಯನ್ನು ಹೊಗಲಾಡಿಸಲು ಅಖಂಡ ಭಾರತದಲ್ಲಿ ಹಲವು ಹೋರಾಟಗಳು, ಸತ್ಯಾಗ್ರಹಗಳು ನಡೆದವು. ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗನ್ನು ಮಾಡಿದರು. ಅದರ ಫಲವಾಗಿ ಆಗಸ್ಟ್ 15, 1947 ರಂದು ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ದೊರಕಿತು.

ಹಲವು ಸಭೆ, ಚರ್ಚೆಗಳ ನಂತರ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನವನ್ನಾಗಿ ತುಂಡರಿಸಿ, ಸ್ವಾತ್ರಂತ್ರ್ಯ ನೀಡಲಾಯಿತು. ಪಾಕಿಸ್ತಾನ ಆಗಸ್ಟ್ 14 ರಂದು ತನ್ನ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಿಕೊಂಡರೆ, ಭಾರತ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಿಕೊಳ್ಳುತ್ತಿದೆ.

ದೇಶಾದ್ಯಂತ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಸಂಭ್ರಮವೇನೋ ಸರಿ. ಆದರೆ ಅದಕ್ಕೂ ಮುನ್ನ ನಡೆದ ಹತ್ಯೆ, ಹಿಂಸೆ ಮತ್ತು ಅತ್ಯಾಚಾರಗಳನ್ನೂ ಭಾರತ ದೇಶ ಮರೆಯುವಂತಿಲ್ಲ.

Partition Horrors Remembrance Day on August 14; Know History and Significance

ಅವನ್ನೆಲ್ಲ ಓದುವುದಕ್ಕೆ, ಸ್ಮರಿಸುವುದಕ್ಕೆ ತುಂಬ ಕಷ್ಟವೇ ಆದರೂ ಅವುಗಳಿಂದ ಕಲಿತ ಪಾಠವನ್ನು ಮರೆಯುವಂತಿಲ್ಲ. ಸ್ವಲ್ಪವೇ ಮೈಮರೆತರೂ ಸಮುದಾಯಗಳನ್ನೇ ಇಲ್ಲವಾಗಿಸುವ ಹಿಂಸಾತ್ಮಕ ಶಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕೆಂಬ ಪಾಠವನ್ನು ದೇಶ ವಿಭಜನೆಯ ಇತಿಹಾಸ ನಮಗೆ ಹೇಳುತ್ತದೆ.

ದೇಶದ ಜನರ ಮನಸ್ಸಿನಿಂದ ಇನ್ನೂ ದೇಶ ವಿಭಜನೆಯ ಕಾಲದಲ್ಲಿ ಮತ್ತು ನಂತರದಲ್ಲಾದ ಆ ದುರಂತಗಳು ಮಾಸಿಲ್ಲ. ಹೀಗಾಗಿಯೇ ಆಗಸ್ಟ್ 14ನ್ನು 'ದೇಶ ವಿಭಜನೆ ಕರಾಳ ದಿನ'ವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.

ಸ್ವಾತಂತ್ರ್ಯ ಸಂಭ್ರಮದಲ್ಲಿ ಮುಂದಿನ ಪೀಳಿಗೆಗಳು ಮರೆತು ಮುಂದೆ ಹೋಗಿಬಿಡಬಹುದಾಗಿದ್ದ ಅಧ್ಯಾಯವನ್ನು ಹಾಗಾಗದಂತೆ ತಡೆಯುವುದಕ್ಕೆ ಮೋದಿ ಸರ್ಕಾರದ ಈ ಸ್ಮೃತಿ ದಿನದ ಘೋಷಣೆ ಸಹಾಯ ಮಾಡಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬುದ್ಧಿಹೀನ ದ್ವೇಷ ಮತ್ತು ಹಿಂಸೆಯಿಂದಾಗಿ ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡರು. ಅನೇಕರು ಜೀವವನ್ನು ಕಳೆದುಕೊಂಡರು. ನಮ್ಮ ಜನರ ಹೋರಾಟ ಮತ್ತು ತ್ಯಾಗಗಳ ನೆನಪಿಗಾಗಿ, ಆಗಸ್ಟ್ 14 ಅನ್ನು 'ದೇಶ ವಿಭಜನೆ ಕರಾಳ ದಿನ'ವಾಗಿ ಆಚರಿಸಲಾಗುತ್ತದೆ," ಎಂದಿದ್ದಾರೆ.

ಸಾಮಾಜಿಕ ವಿಭಜನೆ, ಅಸಾಮರಸ್ಯದ ವಿಷವನ್ನು ತೆಗೆದುಹಾಕುವ ಮತ್ತು ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣದ ಚೈತನ್ಯವನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ವಿಭಜನೆಯ ಭೀಕರ ದಿನವು ನೆನಪಿಸಲಿ ಎಂದಿದ್ದಾರೆ.

ದೇಶ ವಿಭಜನೆಯ ಕಾಲದಲ್ಲಿ ಮತ್ತು ನಂತರದಲ್ಲಿ ಯಾವ ಯಾವ ದುರಂತಗಳು ನಡೆದವು ಎಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.

ಭಾರತ ಮತ್ತು ಪಾಕಿಸ್ತಾನ ದೇಶಗಳ ವಿಭಜನೆಯ ಹಿಂಸೆಗೆ ಹಲವು ಆಯಾಮಗಳಿವೆ. ಇಂದಿನ ಪಾಕಿಸ್ತಾನ ಹಾಗೂ ಅಂದಿನ ಪೂರ್ವ ಪಾಕಿಸ್ತಾನಗಳೆರಡೂ ಕಡೆಗಳಿಂದ ಎದೆ ಹಿಂಡುವ ಭಯಾನಕ ಘಟನೆಗಳಿಗೆ ಭಾರತ ದೇಶ ಸಾಕ್ಷಿಯಾಯಿತು. ಆ ಪೈಕಿ ದೇಶ ವಿಭಜನೆಯ ಭೀಕರತೆಯನ್ನು ಸಾರುವಲ್ಲಿ ಕೆಲ ರೈಲಿನ ಚಿತ್ರಗಳು ನೂರು ಕತೆಗಳನ್ನು ಕಟ್ಟಿಕೊಡುತ್ತಿವೆ. ಅನೇಕ ರೈಲುಗಳು ಸಾವಿರಾರು ಹೆಣದ ರಾಶಿ ಹೊತ್ತು ಬಂದವು.

ಸ್ವಾತಂತ್ಯ ನಂತರ ಪಾಕಿಸ್ತಾನದಿಂದ ಭಾರತೀಯರನ್ನು ಹೊರದಬ್ಬಲಾಯಿತು. ಹಿಂಸೆ, ಕೊಲೆ, ಅತ್ಯಾಚಾರಗಳಂತಹ ಘಟನೆಗಳು ನಡೆದವು. ಮುಖ್ಯವಾಗಿ ಪಂಜಾಬ್ ಪ್ರಾಂತ್ಯವನ್ನು ಗುರಿಯಾಗಿರಿಸಿಕೊಂಡು ನಡೆದ ಕೆಲವು ಹೃದಯವಿದ್ರಾವಕ ಹಿಂಸಾಚಾರ ಮತ್ತು ಹತ್ಯೆಗಳನ್ನು ಇಲ್ಲಿವೆ.

ಕಮೊಕೆ ರೈಲು ಹತ್ಯಾಕಾಂಡ
ಸೆಪ್ಟೆಂಬರ್ 1947ರಂದು 5,000 ಮುಸ್ಲಿಮೇತರ ಧರ್ಮಗಳಿಗೆ ಸೇರಿದ ಜನ ಭಾರತಕ್ಕೆ ರೈಲಿನಲ್ಲಿ ಹಿಂತಿರುಗುತ್ತಿದ್ದರು. ಪಾಕಿಸ್ತಾನಿ ಸೇನೆಯಿಂದ ಬೆಂಬಲ ಹೊಂದಿದ್ದ ಗುಂಪು ರೈಲು ಪ್ರವೇಶಿಸಿ ಹೆಚ್ಚಿನ ಪುರುಷರನ್ನೆಲ್ಲ ಕೊಂದು ಹಾಕಿತು. ಸುಮಾರು 800 ಮಹಿಳೆಯರನ್ನು ದಾಳಿಕೋರರು ತಮ್ಮ ನಡುವೆ ಉಡುಗೊರೆಯಂತೆ ಹಂಚಿಕೊಂಡರು.

ಹರ್ಬನ್ಸ್‌ಪುರ ಹತ್ಯಾಕಾಂಡ
ದೇಶ ವಿಭಜನೆಯದಾಗ 1,500 ನಿರಾಶ್ರಿತರು ಪಾಕಿಸ್ತಾನದಿಂದ ಭಾರತಕ್ಕೆ ರೈಲಿನಲ್ಲಿ ಹಿಂತಿರುಗುತ್ತಿದ್ದರು. ಮಧ್ಯರಾತ್ರಿಯಲ್ಲಿ ದಾಳಿ ನಡೆಸಿದ ಗುಂಪೊಂದು ಅವರೆಲ್ಲರನ್ನೂ ಕೊಂದು ಹಾಕಿತು.

ನಿಜಾಮ್‌ಬಾದ್ ಹತ್ಯಾಕಾಂಡ
ಜಮ್ಮು- ಸಿಯಾಲ್ಕೋಟ್ ಮತ್ತು ವಾಜಿರ್ಬಾದ್ ಕಡೆಯಿಂದ ಬರುತ್ತಿದ್ದವರಿಗೆ ನಿಜಾಮ್‌ಬಾದ್ ಕೂಡುಸ್ಥಳವಾಗಿತ್ತು. 1947ರ ಆಗಸ್ಟ್ 15ರಂದು ನಿರಾಶ್ರಿತರನ್ನು ಹೊತ್ತು ಬರುತ್ತಿದ್ದ ರೈಲನ್ನು ನಿಲ್ಲಿಸಿ ಸುಮಾರು ನೂರು ನಿರಾಶ್ರಿತರನ್ನು ಕೊಲೆ ಮಾಡಲಾಯಿತು. ಇದರ ದುಪಟ್ಟು ಜನರು ಗಾಯಗೊಂಡರು.

ಇಂತಹ ಅನೇಕ ಉದಾಹರಣೆಗಳು ಇತಿಹಾಸದ ಪುಟದಲ್ಲಿ ಸೇರಿವೆ. ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಹಿಂತಿರುಗುತ್ತಿದ್ದ ಸಾವಿರಾರು ಇಸ್ಲಾಮೇತರ ಮಂದಿಯ ಮೇಲಾಗಿರುವ ಅತ್ಯಾಚಾರ- ಹಿಂಸಾಚಾರಗಳು ಇತಿಹಾಸದ ಕರಾಳ ಅನುಭವಗಳ ಕಂತು ಕಂತು ಕತೆಗಳು ಇತಿಹಾಸ ಸೇರಿವೆ. ಅಂತಹ ಕರಾಳ ನೆನಪುಗಳನ್ನು ದೇಶ ಮರೆಯಬಾರದು ಎಂದು ಆಗಸ್ಟ್ 14ನ್ನು 'ದೇಶ ವಿಭಜನೆ ಕರಾಳ ದಿನ'ವನ್ನಾಗಿ ಆಚರಿಸಲಾಗುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+