Get Updates
Get notified of breaking news, exclusive insights, and must-see stories!

ನಾವಿಕ 5ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಾಗಿದೆ ಭರದ ಸಿದ್ಧತೆ

ಲಾಸ್‌ ಏಂಜಲಿಸ್/ಸಿನ್ಸಿನಾಟಿ, ಫೆಬ್ರವರಿ 15 : ಬಹು ನಿರೀಕ್ಷಿತ ನಾವಿಕ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ಈ ಬಾರಿ ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಭರದ ಸಿದ್ಧತೆಗಳು ಆರಂಭಗೊಂಡಿವೆ. ಸಾಗರದಾಚೆ ಸಾವಿರಾರು ಮೈಲುಗಳ ದೂರದಲ್ಲಿದ್ದರೂ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡತನವನ್ನು ಗಟ್ಟಿಗೊಳಿಸಲು ಟೊಂಕ ಕಟ್ಟಿ ನಿಂತಿರುವ ಇಲ್ಲಿನ ಅನೇಕ ಉತ್ಸಾಹಿ ಕನ್ನಡಿಗರು, ಅಮೆರಿಕ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ 2 ವರ್ಷಗಳಿಗೊಮ್ಮೆ ಸಮ್ಮೇಳನವನ್ನು ಆಯೋಜಿಸುತ್ತಾರೆ.

ನಾವಿಕ 5ನೇ ವಿಶ್ವ ಕನ್ನಡ ಸಮಾವೇಶವು ಆಗಸ್ಟ್‌ 30, 31 ಹಾಗೂ ಸೆಪ್ಟೆಂಬರ್‌ 1ರಂದು ಮೂರು ದಿನಗಳ ಕಾಲ ಸಿನ್ಸಿನಾಟಿ ನಗರದ ಡ್ಯೂಕ್‌ ಎನರ್ಜಿ ಕನ್ವೆನ್ಷನ್‌ ಸೆಂಟರಿನಲ್ಲಿ ನಡೆಯಲಿದೆ.

Navika 5th World Kannada Conference, preparation in full flow

ಸಮ್ಮೇಳನಕ್ಕೆ ಬೇಕಾದ ನಾನಾ ಸಮಿತಿಗಳು ಈಗಾಗಲೇ ರಚನೆಗೊಂಡಿದ್ದು ಆಯಾ ಸಮಿತಿಗಳು ತಮ್ಮ ತಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಲು ಹಲವು ಸುತ್ತಿನ ಸಭೆಗಳನ್ನು ನಡೆಸಿವೆ. ಅಮೆರಿಕದ ನಾನಾ ಭಾಗಗಳಲ್ಲಿರುವ ಸಂಘಟನಾ ನೈಪುಣ್ಯತೆ ಹೊಂದಿರುವ ಅನುಭವಿ ಕನ್ನಡಿಗರು ಈ ಎಲ್ಲ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿರುವುದು ವಿಶೇಷ.

ಮೂರು ದಿನಗಳ ಕಾರ್ಯಕ್ರಮಗಳಿಗಾಗಿ ಹೋಟೆಲ್‌ಗಳನ್ನು ಕಾಯ್ದಿರಿಸುವುದು, ಊಟೋಪಚಾರ, ಅಮೆರಿಕ ದೇಶದ ಮೂಲೆಮೂಲೆಗಳಿಗೆ ಸಮ್ಮೇಳನದ ಬಗ್ಗೆ ಮಾಹಿತಿ ರವಾನಿಸಲು ಪ್ರಚಾರ ಕಾರ್ಯ, ಸ್ಥಳೀಯ ಹಾಗೂ ಭಾರತದಿಂದ ಕರೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಕಲಾವಿದರ ಪಟ್ಟಿ ತಯಾರಿಕೆ, ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಅಗತ್ಯ ಮಾಹಿತಿಗಳನ್ನು ನೀಡುವುದಕ್ಕಾಗಿ ಸ್ವಾಗತ ಸಮಿತಿ ರಚನೆ, ಖರ್ಚು ವೆಚ್ಚ ನಿರ್ವಹಣೆಗಾಗಿ ಹಣಕಾಸು ಸಮಿತಿ ರಚನೆ ಹೀಗೆ ಏಕಕಾಲಕ್ಕೆ ಸಕಲ ಕಾರ್ಯಗಳು ಆರಂಭಗೊಂಡಿವೆ.

Navika 5th World Kannada Conference, preparation in full flow

ಸಿನಿ ತಾರೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಇವರ ಆಗಮನ ಬಹುತೇಕ ಖಚಿತವಾಗಿದೆ ಎಂದು ನಾವಿಕದ ಸಂಚಾಲಕರಾದ ವಲ್ಲೀಶ ಶಾಸ್ತ್ರೀ ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದಕ್ಕಾಗಿ ಭಾರತದ ಕೆಲವು ಗಾಯಕ ಗಾಯಕಿಯರನ್ನೂ ಆಹ್ವಾನಿಸಲಾಗಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

Navika 5th World Kannada Conference, preparation in full flow

ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಖ್ಯಾತ ನೃತ್ಯ ಜೋಡಿ ನಿರುಪಮ - ರಾಜೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು, ಅವರು ಸಮ್ಮೇಳನದಲ್ಲಿ ಕಾಯಕ್ರಮ ನೀಡಲು ಒಪ್ಪಿಕೊಂಡಿದ್ದಾರೆ.

ಈಗಾಗಲೇ ನೋಂದಣೆ ಶುರುವಾಗಿದ್ದು ಅರ್ಲಿ ಬರ್ಡ್‌ (ಮುಂಗಡವಾಗಿ ಕಾಯ್ದಿರಿದುವಿಕೆ) ಟೆಕೆಟ್‌ ಕೊಳ್ಳುವವರಿಗಾಗಿ ವಿಶೇಷ ರಿಯಾಯಿತಿಯನ್ನೂ ನೀಡಲಾಗಿದೆ. ಇದರ ಸದುಪಯೋಗ ಪಡೆಸಿಕೊಳ್ಳುವಂತೆ ನಾವಿಕ ಅಧ್ಯಕ್ಷರಾದ ಸುರೇಶ್‌ ರಾಮಚಂದ್ರ ಕೋರಿದ್ದಾರೆ.

Navika 5th World Kannada Conference, preparation in full flow

ಸಮ್ಮೇಳನಾಧ್ಯಕ್ಷ ಡಾ.ಮನಮೋಹನ್‌ ಕಟಪಾಡಿ, ಸಮ್ಮೇಳನ ಉಪಾಧ್ಯಕ್ಷ ಡಾ.ಸುರೇಶ್‌ ಶ್ರಾಫ್‌, ಸಹ ಸಂಚಾಲಕ ಅರುಣ್‌ ಕುಮಾರ್‌, ಪುಷ್ಮಲತಾ ನವೀನ್‌ ಮತ್ತು ಅರುಡಿ ರಾಜಗೋಪಾಲ್‌ ಸಮ್ಮೇಳನದ ನೇತೃತ್ವ ವಹಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+