ಅಕ್ಕ ಸ್ಮರಣ ಸಂಚಿಕೆ ತಂಡದಿಂದ ಲೇಖನಗಳಿಗೆ ಆಹ್ವಾನ

ಆಗಸ್ಟ್ 29, 30 ಮತ್ತು 31, 2014ರಂದು ಅಮೆರಿಕದ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟದ ಆಶ್ರಯದಲ್ಲಿ, ನಡೆಯಲಿರುವ ಎಂಟನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014' ಕಾರ್ಯಕ್ರಮದ ಅಂಗವಾಗಿ, ಸಮುದಾಯದ ಸಾಧನೆ-ಸಂಭ್ರಮ-ಸಂಕಲ್ಪಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದು ನಿಶ್ಚಯಿಸಲಾಗಿದೆ.

ಅತ್ಯಮೂಲ್ಯ ಲೇಖನಗಳನ್ನು, ಸಮಾಜದ ಧುರೀಣರ ಸಂದೇಶಗಳನ್ನು, ಸಾಹಿತ್ಯ ಪ್ರಪಂಚದ ದಿಗ್ಗಜರ ಹಾರೈಕೆಗಳನ್ನೂ, ಸಮ್ಮೇಳನದ ಸವಿ ನೆನಪುಗಳನ್ನೂ ಹೊತ್ತು ಬರಲಿರುವ ಈ ಅನರ್ಘ್ಯಮಣಿಗಳ ಭಂಡಾರವು ಮತ್ತಷ್ಟು ಉತ್ಕೃಷ್ಟವಾಗಿ ಮೂಡಿ ಬರಲು ನಿಮ್ಮ ಸಹಾಯ ಮತ್ತು ಸಹಕಾರ ಅತ್ಯಗತ್ಯ ಎಂದು ಸಂಘಟಕರು ಕೋರಿದ್ದಾರೆ.

Invitation to send articles for AKKA 2014 souvenir

ಲೇಖನಗಳು ಕನ್ನಡ ಸಣ್ಣಕಥೆ, ಕವನ, ಹನಿಗವನ, ಪ್ರಬಂಧ, ಪ್ರವಾಸ ಕಥನ, ಪದಬಂಧ ಇತ್ಯಾದಿ ಯಾವುದೇ ಸಾಹಿತ್ಯ ಪ್ರಕಾರದಲ್ಲಿ ಇರಬಹುದು. ಕಳಿಸಲಿರುವ ಲೇಖನಗಳು ಕೆಳಗೆ ನೀಡಿರುವ ನಿಯಮಗಳನ್ನು ಪಾಲಿಸುವಂತೆ ಇರಲಿ ಎಂದು ಕೋರಿಕೊಳ್ಳಲಾಗಿದೆ.

ಅಂದ ಹಾಗೆ, ಮೂರು ದಿನ ಈ ಕನ್ನಡ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ 'ಭಾರತರತ್ನ' ಪ್ರೊ. ಸಿಎನ್ಆರ್ ರಾವ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೇಂಜಿಂಗ್ ಸ್ಟಾರ್ ದರ್ಶನ್ ಮುಂತಾದವರು ಬರುತ್ತಿದ್ದು, ಸಿದ್ಧತೆ ಭರದಿಂದ ಸಾಗಿದೆ.

ಕಥೆ ಮತ್ತು ಕವನ ಸ್ಪರ್ಧೆ ನಿಯಮಗಳು ಕೆಳಗಿನಂತಿವೆ

* 'ಅಕ್ಕ 2014'ರ ಬೀಜಮಂತ್ರವಾದ 'ಸಾಧನೆ-ಸಂಭ್ರಮ-ಸಂಕಲ್ಪ'ಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಲೇಖನಗಳಿಗೆ ಆದ್ಯತೆ ನೀಡಲಾಗುತ್ತದೆ.

* ನಮಗೆ ಕಳುಹಿಸಲಿರುವ ಲೇಖನಗಳು ಬೇರೆ ಯಾವುದೇ ಪತ್ರಿಕೆ, ಪುಸ್ತಕ ಅಥವಾ ಅಂತರ್ಜಾಲದ ತಾಣಗಳಲ್ಲಿ ಪ್ರಕಟವಾಗಿರಬಾರದು.

* ಮಕ್ಕಳು ಬರೆದ ಲೇಖನಗಳನ್ನೂ ಸ್ವೀಕರಿಸಲಾಗುತ್ತದೆ. ಲೇಖನದ ಜೊತೆಗೆ ವಯಸ್ಸನ್ನೂ ನಮೂದಿಸತಕ್ಕದ್ದು.

* ಲೇಖನಗಳನ್ನು 'ಬರಹ' ತಂತ್ರಾಂಶವನ್ನು ಬಳಸಿ ಬರೆದಿರಬೇಕು. ನಿಮ್ಮ ಕಥೆಗಳು 2000 ಪದಗಳನ್ನು ಮೀರದಂತಿರಬೇಕು.

* ಸ್ವೀಕೃತವಾದ ಲೇಖನಗಳನ್ನು ಪ್ರಕಟಿಸುವಲ್ಲಿ ಸ್ಮರಣ ಸಂಚಿಕೆ ತಂಡದವರ ನಿರ್ಧಾರವೇ ಅಂತಿಮ.

* ನಿಮ್ಮ ಹೆಸರು, ವಿಳಾಸ, ಈ-ಮೇಲ್ ಐಡಿ, ಬಣ್ಣದ ಭಾವಚಿತ್ರ (High Resolution: For example 1200x1220 pixels) ಮತ್ತು ಸಂಕ್ಷಿಪ್ತ ಪರಿಚಯಗಳನ್ನು ಕಳುಹಿಸತಕ್ಕದ್ದು.

ಮುಖ್ಯ ವಿಷಯ : ಸ್ಪರ್ಧೆಗೆ ಕಥೆಗಳನ್ನು/ಕವನಗಳನ್ನು ಈ-ಮೇಲ್ ಮೂಲಕ ಕಳುಹಿಸತಕ್ಕದ್ದು. ಈ-ಮೇಲ್‌ನ ವಿಷಯದಲ್ಲಿ (Subject) 'ಕಥಾಸ್ಪರ್ಧೆ' ಅಥವ 'ಕವನ ಸ್ಪರ್ಧೆ' ಎಂದು ಸ್ಪಷ್ಟವಾಗಿ ನಮೂದಿಸಿ ಜೊತೆಗೆ ಕಥೆಯ ಅಥವ ಕವನದ ಹೆಸರನ್ನು ಬರೆಯತಕ್ಕದ್ದು. ಹೀಗೆ ನಮೂದಿಸದೇ ಇರುವ ಕಥೆಗಳನ್ನಾಗಲಿ ಕವನಗಳನ್ನಾಗಲಿ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಉದಾ : 'ಕಥಾಸ್ಪರ್ಧೆ' -
ಉದಾ : 'ಕವನ ಸ್ಪರ್ಧೆ' -

ಗಮನಿಸಿ : ಮೇಲೆ ಹೇಳಿದ ಯಾವುದೇ ಅಥವ ಎಲ್ಲ ವಿಭಾಗಗಳಿಗೆ, ನಿಮ್ಮ ಬರಹಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ ಮೇ 31, 2014. ನಿಮ್ಮ ಬರಹಗಳನ್ನು [email protected] ಅಂತರ್ಜಾಲ ವಿಳಾಸಕ್ಕೆ ಈ-ಮೇಲ್ ಮಾಡತಕ್ಕದ್ದು.

ಯುಗಾದಿ ವಿಶೇಷ ಕೊಡುಗೆ : ಅಕ್ಕ ಸಮ್ಮೇಳನಕ್ಕೆ ಹೆಚ್ಚಿನ ಕನ್ನಡಿಗರನ್ನು ಸೆಳೆಯುವ ಉದ್ದೇಶದಿಂದ ನೋಂದಾಯಿಸುವ ಸಹೃದಯ ಕನ್ನಡಿಗರಿಗೆ ಯುಗಾದಿ ಕೊಡುಗೆಯನ್ನು ವಿಶೇಷವಾಗಿ ನೀಡಲಾಗಿದೆ. ಇದು ಮಾರ್ಚ್ 2ರಿಂದ ಆರಂಭವಾಗಿದ್ದು, ಮೇ 15ರವರೆಗೆ ಮಾತ್ರ ಲಭ್ಯವಿರುತ್ತದೆ. ಮೇ 15ರೊಳಗೆ ನೋಂದಾಯಿಸಿಕೊಂಡವರಿಗೆ ಶೇ.30ರಷ್ಟು ರಿಯಾಯಿತಿ ದೊರೆಯಲಿದೆ. ತ್ವರೆ ಮಾಡಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+