• search

ಅಕ್ಕ ಚಲನಚಿತ್ರೋತ್ಸವ ಸಮಿತಿ ಮುಖ್ಯಸ್ಥ ಮಲ್ಲಿಕ್ ಮಾತು

Posted By: ಸಂದರ್ಶನ : ಅನಿಲ್ ಭಾರದ್ವಾಜ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಸೆಪ್ಟೆಂಬರ್ 2ರಿಂದ ಮೂರು ದಿನಗಳ ಕಾಲ ಅಮೆರಿಕದ ನ್ಯೂ ಜೆರ್ಸಿಯ ಅಟ್ಲಾಂಟಾ ಸಿಟಿಯಲ್ಲಿ ನಡೆಯಲಿರುವ 9ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಆಕರ್ಷಣೆಯ ಕೇಂದ್ರಬಿಂದುವೆಂದರೆ ಚಲನಚಿತ್ರೋತ್ಸವ ಮತ್ತು ಸಿನೆಮಾ ರಂಜನೆ ಕುರಿತ ಮತ್ತಿತರ ಕಾರ್ಯಕ್ರಮಗಳು.

  ವಿಶ್ವ ಕನ್ನಡಿಗರಿಗೆ ವಿಶಿಷ್ಟ ಬಗೆಯ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವುದು ಮಾತ್ರವಲ್ಲ, ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ವಿದೇಶದಲ್ಲಿಯೂ ಮಾರುಕಟ್ಟೆಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಸಂದರ್ಶನದಲ್ಲಿ ಮಲ್ಲಿಕ್ ಪ್ರಸಾದ್ ಅವರು ಹೇಳಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ.

  ಅನಿಲ್ ಭಾರದ್ವಾಜ್ : 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ವಿಶೇಷ ನಿಮ್ಮ ಪ್ರಕಾರ ಯಾವುದು?

  ಮಲ್ಲಿಕ್ ಪ್ರಸಾದ್ : ಕನ್ನಡ ಚಿತ್ರರಂಗದ ಸಾಧನೆಗಳನ್ನು ಹೊರನಾಡ ಕನ್ನಡಿಗರಿಗೆ ತಲುಪಿಸುವ ಪ್ರಯತ್ನವಾಗಿ ಈ ಬಾರಿಯ ಅಕ್ಕ ಕನ್ನಡ ಸಮ್ಮೇಳನದಲ್ಲಿ 'ಕನ್ನಡ ಚಲನಚಿತ್ರ ಹಬ್ಬ' ಎಂಬ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕನ್ನಡ ಚಿತ್ರರಂಗ ನಡೆದು ಬಂದ ಹಾದಿಯನ್ನು ವಿವರಿಸುವ ಛಾಯಾಚಿತ್ರ ಮತ್ತು ವಿಡಿಯೋ ಪ್ರದರ್ಶನಗಳು ಈ ಚಲನಚಿತ್ರ ಹಬ್ಬದ ಆಕರ್ಷಣಾ ಬಿಂದುಗಳು. [ಅಕ್ಕ ಸಮ್ಮೇಳನದ ಸಾರಥಿ ಚಂದ್ರು ಮನದಾಳದ ಮಾತುಗಳು]

  Film festival at AKKA conference : Mallik Prasad interview

  ಈ ಕಾರ್ಯಕ್ರಮ ರಾಷ್ಟ್ರೀಯ ಮತ್ತು ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಲನಚಿತ್ರಗಳ ಪ್ರಚಾರಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸಿ ಕೊಡಲಿದೆ. ಅಕ್ಕ ಕನ್ನಡ ಚಲನಚಿತ್ರ ಹಬ್ಬದ ಮುಖ್ಯ ವಿಷಯ - "ಕನ್ನಡ ಸಿನೆಮಾ ಬೇರು ಮತ್ತು ಹೊಸ ಚಿಗುರು".

  ಅನಿಲ್ ಭಾರದ್ವಾಜ್ : ಕನ್ನಡ ಚಲನಚಿತ್ರ ಹಬ್ಬ ಹೇಗೆ ಭಾಗವಿಹಿಸಬಹುದು? ಹೇಗೆ ನಡೆಯುತ್ತದೆ?

  ಮಲ್ಲಿಕ್ ಪ್ರಸಾದ್ : ಈ ಮೇಲಿನ ವಿಷಯಾಧಾರಿತ ಚಲನಚಿತ್ರ ಹಬ್ಬದಲ್ಲಿ ಸರಿ ಸುಮಾರು 12 ಚಿತ್ರಗಳ ಪ್ರದರ್ಶನಕ್ಕೆ ಅವಕಾಶವಿದೆ. 85-90 ಪ್ರತಿಶತ ಚಿತ್ರಗಳು ಹೊಸ ಚಿಗುರು ವರ್ಗದಲ್ಲಿ ಹಾಗೂ ಉಳಿದ 10-15 ಪ್ರತಿಶತ ಚಿತ್ರಗಳು ಕನ್ನಡ ಶಾಸ್ತ್ರೀಯ ವರ್ಗದಲ್ಲಿ ಪ್ರದರ್ಶನಗೊಳ್ಳಲಿವೆ.

  ಅಕ್ಕ ಚಲನ ಚಿತ್ರ ಹಬ್ಬದಲ್ಲಿ ಪ್ರದರ್ಶಿಸಲ್ಪಡುವ ಚಲನಚಿತ್ರಗಳು filmfestival2016@akkaonline.comಗೆ ಆಗಸ್ಟ್ 10ರ ಒಳಗಾಗಿ ಇಮೇಲ್ ಮುಖಾಂತರ ನಮಗೆ ವಿವರಗಳೊಂದಿಗೆ ತಲುಪಿವೆ. ಚಿತ್ರದ ಸಾರಾಂಶ, ಪಡೆದ ಪ್ರಶಸ್ತಿ ಅಥವಾ ಮೆಚ್ಚುಗೆಯ ವಿವರಗಳು, ಪಾತ್ರವರ್ಗ ಹಾಗೂ ಚಿತ್ರ ತಂಡದ ವಿವರ ಹಾಗೂ ಚಿತ್ರವನ್ನು ಅಕ್ಕ ಚಲನಚಿತ್ರ ಹಬ್ಬದಲ್ಲಿ ಪ್ರದರ್ಶಿಸಲು ಮತ್ತು ಪ್ರಚಾರ ಪಡಿಸಲು ನಿರ್ದೇಶಕ ಮತ್ತು ನಿರ್ಮಾಪಕರ ಅನುಮತಿ ತಲುಪಿವೆ.. [ಅಕ್ಕ ಸಮ್ಮೇಳನದ ಕಾರ್ಯದರ್ಶಿ ಧನಂಜಯ ಕೆಂಗಯ್ಯ ಸಂದರ್ಶನ]

  Film festival at AKKA conference : Mallik Prasad interview

  ಚಲನಚಿತ್ರ ಹಬ್ಬದ ನಿಯಮಗಳು:

  *. ಪೂರ್ಣ ಪ್ರಮಾಣದ ಕನ್ನಡ ಚಿತ್ರಗಳು ಮಾತ್ರ ಅಕ್ಕ ಚಲನಚಿತ್ರ ಹಬ್ಬದಲ್ಲಿ ಪ್ರದರ್ಶಿತವಾಗಲು ಅರ್ಹ.
  *. ಚಿತ್ರವು ಮೂಲತಃ ಕನ್ನಡದಲ್ಲಿ ನಿರ್ಮಿತವಾಗಿರಬೇಕು. ಬೇರೆ ಬಾಷೆಗಳಿಂದ ಡಬ್ ಮಾಡಿದ ಚಿತ್ರಗಳಿಗೆ ಅವಕಾಶವಿಲ್ಲ.
  *. 'ಹೊಸ ಚಿಗುರು' ವರ್ಗದಲ್ಲಿ ಜನವರಿ 1, 2014ರ ನಂತರ ಪೂರ್ಣಗೊಂಡ ಚಿತ್ರಗಳಿಗೆ ಮಾತ್ರ ಅವಕಾಶ.
  *. 'ಹಳೆ ಬೇರು' ವರ್ಗದಲ್ಲಿ ಪ್ರದರ್ಶಿತಗೊಳ್ಳುವ ಚಿತ್ರಗಳು ಜನವರಿ 1, 2014ರ ಹಿಂದೆ ನಿರ್ಮಾಣ ಗೊಂಡದ್ದಾಗಿರಬೇಕು.
  *. ಸ್ಯಾಂಡಲ್ ವುಡ್ ನ ಗಣ್ಯ ತಂತ್ರಜ್ಞರು ಹಾಗೂ ಅಕ್ಕ ಚಲನಚಿತ್ರ ಹಬ್ಬದ ಸದಸ್ಯರನ್ನೊಳಗೊಂಡ ತಂಡ ಚಿತ್ರಗಳ ಆಯ್ಕೆಯನ್ನು ಮಾಡಲಿದೆ.
  *. ಆಯ್ಕೆಯಾದ ಚಲನಚಿತ್ರಗಳಿಗೆ ಅಕ್ಕದಿಂದ ಪರಿಹಾರ/ ಪ್ರಯಾಣ ಧನ ಇರುವುದಿಲ್ಲ ಮತ್ತು ಚಲನಚಿತ್ರ ಹಬ್ಬದ ಎಲ್ಲಾ ಚಟುವಟಿಕೆಗಳಿಗೆ AKFF ತಂಡದ ನಿರ್ಧಾರಗಳೇ ಅಂತಿಮ.

  ಅನಿಲ್ ಭಾರದ್ವಾಜ್ : ಈ ಕನ್ನಡ ಚಲನ ಚಿತ್ರ ಹಬ್ಬದಿಂದ ಏನು ಪ್ರಯೋಜನ?

  ಮಲ್ಲಿಕ್ ಪ್ರಸಾದ್ : ಈ ಕಾರ್ಯಕ್ರಮಗಳಿಂದಾಗಿ ತಮ್ಮಂತಹ ಸಮಾನ ಮನಸ್ಕ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಜೊತೆಗೂಡಿ ಕನ್ನಡ ಚಿತ್ರರಂಗದ ಅಭಿವೃದ್ದಿಗಾಗಿ ಈ ಕೆಳಗಿನ ವಿಧಾನಗಳ ಮೂಲಕ ಶ್ರಮಿಸುವ ಪ್ರಯತ್ನ ನಮ್ಮದು. [ಅಕ್ಕ ಸಮ್ಮೇಳನದ ಸೂತ್ರಧಾರಿ ಶರತ್ ಭಂಡಾರಿ ಸಂದರ್ಶನ]

  Film festival at AKKA conference : Mallik Prasad interview

  *. ಎಲ್ಲರೂ ಒಂದು ಗೂಡಿ ಅಮೆರಿಕಾದಲ್ಲಿ ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಿಸುವ ಪ್ರಯತ್ನ.
  *. ಹೊರನಾಡ ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರ ನಡುವೆ ಸಂವಾದ ಕಾರ್ಯಕ್ರಮ.
  *. ಹೊಸ ಹೊಸ ವಿಚಾರ ವಿನಿಮಯಗಳಿಂದ ಕನ್ನಡ ಚಿತ್ರರಂಗದ ಪ್ರಗತಿ.
  *. ಅನಿವಾಸಿ ಕನ್ನಡಿಗರು ಕನ್ನಡ ಚಿತ್ರರಂಗದಲ್ಲಿ ಪಾಲ್ಗೊಳ್ಳಲು ಮಾರ್ಗ, ಸಂಪರ್ಕ ಮತ್ತು ವ್ಯವಸ್ಥೆ ಕಲ್ಪಿಸೋಣ.

  ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರ ಮತ್ತು ಪ್ರಾಯೋಜಕತ್ವಕ್ಕೆ ಸವಿನಯ ಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ. ['ಅಕ್ಕ' ಕಾರ್ಯನಿರ್ವಾಹಕ ಸಮಿತಿ ಜೊತೆ ಸಂದರ್ಶನ]

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  AKKA World Kannada Conference film festival committee chairman Mallik Prasad interview by Anil Bharadwaj. Kannada film festival has been organized to showcase the best movies and to provide international market to them. 9th AKKA WKC will be held in Atlantic City in New Jersey from September 2 to 4.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more