• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರ ಸಾಂಸ್ಕೃತಿಕ ಹಬ್ಬದ ಮೊದಲನೇ ದಿನ!

By * ಗಿರೀಶ್ ಜಮದಗ್ನಿ, ಸಿಂಗಪುರ
|

ಕನ್ನಡ ಸಂಘ ಸಿಂಗಪುರ ಮತ್ತು ಮಂಗಳೂರಿನ ಹೃದಯವಾಹಿನಿ ಅವರು ಜಂಟಿಯಾಗಿ ಆಯೋಜಿಸಿರುವ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನವು ಶನಿವಾರ ಮತ್ತು ಭಾನುವಾರ ವಿಜೃಂಭಣೆಯಿಂದ ನಡೆಯಲಿದೆ! ಕಾರ್ಯಕ್ರಮದ ಸಕಲ ಸಿದ್ಧತೆಗಳು ಪೂರ್ರ್‍ಣಗೊಂಡಿದ್ದು, ಹಬ್ಬಕ್ಕೆ ಇಲ್ಲಿನ ಡೋವರ್ ಕನ್ವೆನ್ಷನ್ ಸಂಕೀರ್ಣವು ಅಲಂಕರಿಸಿಕೊಂಡು ನವವಧುವಿನಂತೆ ಸಜ್ಜಾಗಿ ನಿಂತಿದೆ. ಅತಿಥಿಗಳು ಆಗಲೇ ಬಂದಿಳಿಯುತ್ತಿದ್ದಾರೆ. ಈ ಸಮ್ಮೇಳನವನ್ನು ಎಲ್ಲ ರೀತಿಯಿಂದಲೂ ಯಶಸ್ವಿಗೊಳಿಸಲು ಸಂಘದ ಹತ್ತು ಹಲವು ಸಮಿತಿಗಳ ಕಾರ್ಯಕರ್ತರು ಅವಿರತವಾಗಿ ದುಡಿಯುತ್ತಿದ್ದಾರೆ. ಈ ಸಮ್ಮೇಳನಕ್ಕೆ ಒಂದು ವರ್ಷದಿಂದಲೇ ಸಿದ್ಧತೆಗಳು ಪ್ರಾರಂಭವಾಗಿದ್ದು ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಯೋಚಿಸಿ ಆಯೋಜಿಸಲಾಗಿದೆ.

ಇಂದು ಬೆಳಗ್ಗೆ 9 ಘಂಟೆಗೆ ವಾಣಿಜ್ಯ ವೇದಿಕೆ ಮತ್ತು ಸಮಾವೇಶದೊಂದಿಗೆ ಪ್ರಾರಂಭವಾಗುವ ಭರ್ಜರಿ ಸಮ್ಮೇಳನವು ಇಲ್ಲಿನ ಕನ್ನಡಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾರ್ಯಕ್ರಮ ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ಮಂಗಳ ಧ್ವನಿಯೊಂದಿಗೆ ಮಧ್ಯಾನ್ಹ ಉದ್ಘಾಟಣೆಗೊಂಡು ರಾತ್ರಿ ಬದ್ರಿ ಪ್ರಸಾದ್ ಮತ್ತು ಅನುರಾಧ ಭಟ್ ಅವರ ಚಿತ್ರ ಮಂಜರಿಯೊಂದಿಗೆ ಮೊದಲನೇ ದಿನದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಇಂದಿನ ಇನ್ನೂ ಕೆಲವು ವಿಶೇಷಗಳು - ಪುತ್ತೂರ್ ನರಸಿಂಹ ನಾಯಕ್ ಅವರಿಂದ ದಾಸಮಂಜರಿ, ಪ್ರಯೋಗ ರಂಗ ಅವರ ನಾಟಕ, ಕವಿಗೋಷ್ಠಿ, ಜನಪದ ಮತ್ತು ಇತರ ನೃತ್ಯಗಳು ಹಾಗು ವಿಶ್ವಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ.

ಹೊರದೇಶದಲ್ಲಿ ಕಾರ್ಯನಿಮಿತ್ತ ವಲಸೆ ಹೋಗಿ ತಾಯ್ನಾಡಿನಿಂದ ದೂರವಾಗಿ ವಾಸಿಸುತ್ತಿರುವ ಕನ್ನಡಿಗರಿಗೆ ಕರ್ನಾಟಕದ ಕಲೆ, ಸಾಹಿತ್ಯವನ್ನು ಪುನರ್ ಪರಿಚಯಿಸುವ ಮತ್ತು ಹೊರದೇಶದಲ್ಲೇ ಹುಟ್ಟಿ ಬೆಳೆದಿರುವ ಯುವ ಜನಾಂಗಕ್ಕೆ ಕರ್ನಾಟಕದ ಹಿರಿಮೆಯನ್ನು ತೋರುವ ಸದುದ್ದೇಶವನ್ನು ಹೊಂದಿರುವ ಈ ವಿಶ್ವ ಕನ್ನಡ ಸಮ್ಮೇಳನವು, ಈ ಹಿಂದೆ 2004 (ಅಬುಧಾಭಿ), 2005 (ಸಿಂಗಪುರ), 2006 (ಬಹಮಿಯನ್), 2007 (ಕುವೈತ್), 2008 (ಕತಾರ್) ಮತ್ತು 2009 (ದುಬೈ)ನಲ್ಲಿ ಯಶಸ್ವಿಯಾಗಿ ನಡೆದಿದೆ.

ಸಮ್ಮೇಳನದ ಎರಡು ದಿನವೂ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳಿರುತ್ತವೆ. ಇಲ್ಲಿ ಕರ್ನಾಟಕದ ಗ್ರಾಮೀಣ ಆಟಗಳನ್ನು ಆಡಬಹುದು, ಕನ್ನಡದ ಹಳೆಯ ದಿನಪತ್ರಿಕೆಗಳನ್ನು ಓದಬಹುದು ಮತ್ತು ವಿಶ್ವ ವಿಖ್ಯಾತ ಮೈಸೂರು ಶೈಲಿಯ ತೈಲವರ್ಣಗಳನ್ನು ನೋಡಬಹುದು!

ಬನ್ನಿ ಈ ಸಾಂಸ್ಕೃತಿಕ ಹಬ್ಬದಲ್ಲಿ ಇಂದು ಮತ್ತು ನಾಳೆ ಪಾಲ್ಗೊಳ್ಳಿ. ಕನ್ನಡಮ್ಮನ ರಥವನೆಳೆಯಲು ನೀವು ಕೈ ನೀಡಿ. ಸಮ್ಮೇಳನದಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳ ಮಿಂಚಿನ ವರದಿಗಳಿಗೆ ದಟ್ಸ್ ಕನ್ನಡಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
7th World Kannada Cultural Convention 2010, Singapore is beginning on Saturday, November 27. The convention will be inaugurated with the melodious rendition by Saxophone Kadri Gopalanath. First day events by Girish Jamadagni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more