ಸಿಂಗಪುರ ಕನ್ನಡ ಸಾಹಿತ್ಯ ರಸದೌತಣಕ್ಕೆ ದಿನಗಣನೆ

ಸಿಂಗಪುರಿನಲ್ಲಿ ನೆಲಸಿರುವ ಕನ್ನಡಿಗರಿಗೆ ತಾಯ್ನಾಡಿನ ಕಲಾವಿದರನ್ನು ನೋಡುವ, ಅವರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉತ್ಸಾಹ ದಿನೇ ದಿನೇ ಹೆಚ್ಚುತ್ತಿದೆ. ಈ ಕಾರ್ಯಕ್ರಮವನ್ನು ಎಂದಿನಂತೆ ಅಚ್ಚುಕಟ್ಟಾಗಿ ನಡೆಸಲು ಸಿಂಗಪುರ ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಉತ್ಸಾಹಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕರ್ನಾಟಕದಿಂದ ಬರುತ್ತಿರುವ ನೂರಾರು ಕಲಾವಿದರನ್ನು ಒಂದುಗೂಡಿಸಿ, ಎರಡು ದಿನಗಳು ಸಾಂಸ್ಕೃತಿಕ ಮತ್ತು ಮನರಂಜಿಸುವ ಕಾರ್ಯಕ್ರಮಗಳನ್ನು ಲೋಪ ದೋಷವಿಲ್ಲದೆ ನಡೆಸುವುದು ಸುಲಭದ ಮಾತಲ್ಲವಲ್ಲ. ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಈ ಮೆಗಾ ಕಾರ್ಯಕ್ರಮಕ್ಕೆ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ. ಟಿಕೆಟ್ ಮಾರಾಟ ಬಿಸಿ ರೊಟ್ಟಿಯಂತೆ ಮಾರಾಟವಾಗುತ್ತಿದೆ. ಕಾರ್ಯಕ್ರಮವನ್ನು ನೋಡಲು ಸಿಂಗಪುರ ಅಲ್ಲದೆ ನೆರೆಯ ದೇಶವಾದ ಮಲೇಶಿಯದಿಂದಲೂ ಕನ್ನಡಿಗರು ಬರುತ್ತಿದ್ದಾರೆ. ಒಟ್ಟಿನಲ್ಲಿ ಸಿಂಗನ್ನಡಿಗರಿಗೆ ಭಾರಿ ರಸದೌತಣ ಕಾದಿದೆ!
ಎರಡು ದಿನ ಭರ್ಜರಿಯಾಗಿ ನಡೆಯುವ ಸಮ್ಮೇಳನದಲ್ಲಿ ಹೆಸರಾಂತ ಕಲಾವಿದರಿಂದ ಸುಶ್ರಾವ್ಯ ಸಂಗೀತ, ಹಾಸ್ಯ ಕಲಾವಿದರಿಂದ ಹಾಸ್ಯ ಮಂಜರಿ, ಯಕ್ಷಗಾನ, ಹಾಸ್ಯ ನಾಟಕಗಳು, ವೀರಗಾಸೆ, ಡೊಳ್ಳು ಕುಣಿತ, ಶಾಸ್ತ್ರೀಯ ನೃತ್ಯ, ಸ್ಯಾಂಡಲ್‌ವುಡ್‌ನಿಂದ ವಿಶೇಷವಾಗಿ ಆಗಮಿಸುವ ಪ್ರಖ್ಯಾತ ನಟ ನಟಿಯರಿಂದ ರಂಗುರಂಗಿನ ಕಾರ್ಯಕ್ರಮಗಳಿವೆ. "ನ ಭೂತೋ ನ ಭವಿಷ್ಯತಿ" ಆಗುವ ಎಲ್ಲಾ ಲಕ್ಷಣವಿರುವ ಈ ಕಾರ್ಯಕ್ರಮಕ್ಕೆ ಬರುವ ಕಲಾವಿದರ ಪಟ್ಟಿ ದಿನವೂ ಬೆಳೆಯುತ್ತಲಿದೆ. ಎಲ್ಲರೂ ಅವರವರ ಕ್ಷೇತ್ರದಲ್ಲಿ ದಿಗ್ಗಜರೆ! ಸಿಂಗಪುರಕ್ಕೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಗಣ್ಯರ ಪಟ್ಟಿ ದಟ್ಸ್ ಕನ್ನಡ ತಾಣದಲ್ಲಿ ಸದ್ಯದಲ್ಲೇ ಪ್ರಕಟವಾಗಲಿದೆ. ಯಾರ್‍ಯಾರು ಬರುತ್ತಿದ್ದಾರೆ ಎಂದು ತಿಳಿದುಕೊಳ್ಳಲು ದಟ್ಸ್ ಕನ್ನಡಕ್ಕೆ ಭೇಟಿ ನೀಡುತ್ತಿರಿ.
ಸಾಂಸ್ಕೃತಿಕ ಕಾರ್ಯಕ್ರಮವಲ್ಲದೆ ಕವಿಗೋಷ್ಠಿ, ವೈದ್ಯಕೀಯಗೋಷ್ಠಿ, ಮಾಧ್ಯಮಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ ಮುಂತಾದ ವಿಶೇಷ ಕಾರ್ಯಕ್ರಮಗಳು ಕೂಡ ಇವೆ. ಅಲ್ಲದೆ ಮೊದಲ ಬಾರಿಗೆ ಸಿಂಗಪುರದಲ್ಲಿ ಕನ್ನಡಿಗರನ್ನು ಒಂದುಗೂಡಿಸುವ (ನೆಟ್ವರ್ಕಿಂಗ್) ಹೊಸ ಪ್ರಯೋಗ ಕೂಡ ನಡೆಯಲಿದೆ.
Zee TV, HDFC, masti 96.3, Thatskannada, United land bank, Esteem group, Premier properties, ಹೃದಯ ವಾಹಿನಿ ಮತ್ತು ಇನ್ನು ಹಲವು ಸಂಸ್ಥೆಗಳು ಈ ವೈಭವದ ಕಾರ್ಯಕ್ರಮವನ್ನು ಪ್ರಾಯೋಜಿಸಲು ಉತ್ಸಾಹದಿಂದ ಮುಂದೆ ಬಂದಿವೆ.
ಒಟ್ಟಿನಲ್ಲಿ ಕನ್ನಡವನ್ನು ನಾಡಿನಾಚೆಯಲ್ಲೂ ಉಳಿಸಿ ಬೆಳಸುವ ಇಂತಹ ಮಹತ್ಕಾರ್ಯಗಳಿಗೆ ಕನ್ನಡಿಗರೆಲ್ಲರ ಬೆಂಬಲ, ಪ್ರೋತ್ಸಾಹ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಉತ್ಸಾಹದಿಂದ ಭಾಗವಹಿಸುವಿಕೆಯ ಅಗತ್ಯವಿದೆ. ಇನ್ನೂ ಹೆಚ್ಚಿನ ಮಾಹಿತಿಗಳಿಗೆ ದಟ್ಸ್ ಕನ್ನಡ ತಪ್ಪದೇ ಓದುತ್ತಿರಿ!
ಸದ್ಯದಲ್ಲೇ ನಿರೀಕ್ಷಿಸಿ - ಭಾಗವಹಿಸುವ ಸಂಗೀತಗಾರರು ಯಾರು? ಸಿನೆಮಾ ನಟ ನಟಿಯರು ಯಾರು? ಕವಿಗಳು ಯಾರು? ಜನಪದ ಕಲಾವಿದರು ಯಾರು?
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications