ಸಿಂಗಪುರದಲ್ಲಿ ಕರ್ನಾಟಕ ವೈಭವ ಸಮ್ಮೇಳನ

Singapore Karnataka Vybhava 2010
ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಶುಭಾವಸರದಲ್ಲಿ ಸಿಂಗಪುರ ಕರ್ನಾಟಕ ವೈಭವ ಸಂಸ್ಥೆಯು ಶನಿವಾರ ಮತ್ತು ಭಾನುವಾರ ನವಂಬರ್ 6 ಮತ್ತು 7, 2010ರಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜಿಸಿದೆ. ಕನ್ನಡ ಸಂಸ್ಕೃತಿ ಪ್ರೀತಿಯ ಈ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಖ್ಯಾತ ಸಾಹಿತಿಗಳು, ಕವಿಗಳು, ಕಲಾವಿದರು, ಪತ್ರಕರ್ತರು, ತಜ್ಞರು ಸಿಂಗಪುರಕ್ಕೆ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಿಂಗಪುರ ನಿವಾಸಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಸಾಹಿತ್ಯಗೋಷ್ಠಿಗಳಲ್ಲಿ, ವಿವಿಧ ಸಂಗೀತ, ನೃತ್ಯ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹಾಗೂ ಪ್ರೌಡಿಮೆಯನ್ನು ಪ್ರದರ್ಶಿಸಲಿದ್ದಾರೆ.

ಈ ಸಮ್ಮೇಳನದ ವಿಶೇಷವೆಂದರೆ ಆಮಂತ್ರಿತ ಗಣ್ಯರ ಸಂಖ್ಯೆಯ ಮೇಲೆ ಬಿಗಿ ಹತೋಟಿ ಇರುತ್ತದೆ. ಅಂಕಿ ಸಂಖ್ಯೆಗಳಿಗಿಂತ, ಕನ್ನಡ ಮತ್ತು ಕನ್ನಡಿಗರ ಗುಣ ಸತ್ವಗಳೇ ರಾರಾಜಿಸಬೇಕೆಂಬುದು ಕರ್ನಾಟಕ ವೈಭವ ಸಂಸ್ಥೆಯ ಧ್ಯೇಯೋದ್ದೇಶವಾಗಿರುತ್ತದೆ. ಆಹ್ವಾನಿತ ಪ್ರತಿಯೊಬ್ಬರಿಗೂ ತಮ್ಮ ಕಲೆ, ವಿದ್ವತ್ ಪ್ರದರ್ಶನಕ್ಕೆ ಯಥೋಚಿತ ಸಮಯಾವಕಾಶ ನೀಡಬೇಕೆಂದು ಕಾರ್ಯಕರ್ತರು ನಿಶ್ಚಯಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಂಗಪುರಕ್ಕೆ ಬರಲಿರುವ ಗಣ್ಯರ ಹೆಸರುಗಳನ್ನು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಪ್ರಕಟಿಸಲಾಗುತ್ತದೆ.

ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿಚ್ಚಿಸುವ ಕನ್ನಡಿಗರು [email protected] ಅಥವಾ ದೂರವಾಣಿ ಸಂಖ್ಯೆ: +65 63339153 ಮುಖೇನ ಸಂಪರ್ಕಿಸಬಹುದು ಎಂದು ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಹೆಗಡೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+