ಅಕ್ಕ ಸಮ್ಮೇಳನದ ಕಾಮಿಡಿ ಕಮೀಟಿ ಕಿಲಾಡಿಗಳು

ಮುರುಳಿ ಗೌಡ (ಕಮೀಟಿ ಚೇರ್): ಕಮೀಟಿಯ ಸಾರಥ್ಯವಹಿಸಿಕೊಂಡಿರೋ ಮುರುಳಿಯವರು ಸ್ಟ್ಯಾಂಡ್-ಅಪ್ ಕಾಮಿಡಿ ಮಾಡೋದು ಮತ್ತು ನಾಟಕಗಳನ್ನು ಬರೆಯೋದರ ಮೂಲಕ ನೂ ಜೆಸಿ೯ಯಲ್ಲಿ ಚಿರಪರಿಚಿತರು. ಕಮೀಟಿ ಮೀಟಿಂಗಗಳನ್ನು ಅವರ ಮನೇಲೆ ಇಟ್ಕೊಂಡು ರುಚಿ-ರುಚಿಯಾದ ನಳಪಾಕ ಖುದ್ದಾಗಿ ಅವರ ಕೈಯಿಂದ ಮಾಡಿ ಹಾಕಿ ಕಮೀಟಿ ಸದಸ್ಯರಿಂದ ಪ್ರಶಂಸೆಗೊಳ್ಳಗಾದ ಪಾಕಪ್ರವೀಣರು.
ಶ್ರೀನಿವಾಸ ಕೊಮಲಾ೯ (ಕೋ-ಚೇರ್): ಕನೇಕ್ಟೀಕಟ್ ಕನ್ನಡ ಕೂಟದ ಅಧ್ಯಕ್ಷರಾದ ಇವರು ಕನ್ನಡ ಸೇವೆಗೆ ಸದಾ ಸಿದ್ದರು. ಕಾಮಿಡಿ ಪಾತ್ರಗಳನ್ನ ಮಾಡೊದ್ರಲ್ಲಿ ಸಿದ್ದಹಸ್ತರು. ಕನೇಕ್ಟಿಕಟ್‌ನಿಂದ ನ್ಯೂ ಜೆಸಿ೯ ಬಂದು ಮೀಟಿಂಗ್‌ಗಳಿಗೆ ಹಾಜರಾಗುತ್ತಿದ್ದ ಸ್ವಯ೦ಸೇವಕರು.
ಸತೀಶ್ ನಾಗಪ್ಪ : ಕನ್ನಡ ಚಟುವಟಿಕೆಗಳಿಗೆ ಯಾವಾಗಲೂ ಕೆಲಸಮಾಡುತ್ತಿರುವ ಸತೀಶ್ ಹಾಸನ ಮೂಲದವರಾದರೂ, ಕನಾ೯ಟಕದ ಎಲ್ಲಾ ಭಾಗಗಳಲ್ಲಿ ಇದ್ದ ಅನುಭವ ಅವರಿಗಿದೆ. ವೃತ್ತಿಯಲ್ಲಿ ಸಾಫ್ಟ್-ವೇರ್ ಇಂಜಿನಿಯರ್.
ಶ್ರೀದರ್ ಭಟ್ : ದಾವಣಗೇರಿ ಬಿ.ಡಿ.ಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಕನಾ೯ಟಕದ ಭಟ್ಕಳನಿಂದ ಬಂದವರು. ಜಾನಪದ ಗೀತೆಗಳನ್ನು ಸುಲಲಿತವಾಗಿ ಹೇಳುವುದರಲ್ಲಿ ಎತ್ತಿದ ಕೈ.
ಆಶಾ ತಡಿಮರಿ: ಕೆಲಸ ಮಾಡೋದು ನ್ಯೂಯಾಕ್೯ ಸಿಟಿಯಾದರೂ ನೆಲೆಸಿರೋದು ನ್ಯೂ ಜೆಸಿ೯ಯಲ್ಲಿ. ಮೈಸೂರು ಮೂಲದವರಾದ, ಸ್ಪಷ್ಟ ಕನ್ನಡ ಮಾತಾಡುವ ಈ ಅಚ್ಚಕನ್ನಡತಿ ಕನ್ನಡ ಸೇವೆಗೆ ಯಾವಾಗಲೂ ಸಿದ್ದ.
ವೈಷ್ಣವೀ ಪಟ್ಟುಮುಡಿ : ವೃತ್ತಿಯಲ್ಲಿ ವಕೀಲರಾಗಿರುವ ವೈಷ್ಣವೀ ಉಡುಪಿಯ ಮೂಲದವರು. ಕಮೀಟಿ ಮೀಟಿಂಗಗಳಲ್ಲಿ ಸದಾ ಹೂಸ ಹೂಸ ವಿಚಾರಗಳನ್ನು ಗಮನಕ್ಕೆ ತರುತ್ತಿದ್ದ ಇವರ ಕನ್ನಡ ಪ್ರೀತಿ ಅಪಾರ. ಕಾಮಿಡಿ ಶೋ ಮತ್ತು ಮನರಂಜನೆ ನೀಡುವ ಕನ್ನಡದ ಕಾಯ೯ಕ್ರಮಗಳೆಂದರೆ ಇವರಿಗೆ ಪಂಚಪ್ರಾಣ.
ಮನೋರಮಾ ಸವಣೂರು : ನೂ ಜೆಸಿ೯ಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿರುವ ಇವರು ಗಂಡು ಮೆಟ್ಟಿದ ನೆಲ ಹುಬ್ಬಳ್ಳಿಯವರು, ಸದಾ ಕನ್ನಡದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎನ್ನುವ ಹಂಬಲ.












Click it and Unblock the Notifications