ನಾವಿಕ ಸಮ್ಮೇಳನ ಮುಖಪುಟ ವಿನ್ಯಾಸ ಸ್ಪರ್ಧೆ

ಕನ್ನಡ ಜಗತ್ತಿನ ನಾನಾ ಲೇಖಕರು, ಚಿತ್ರಕಾರರು, ಕವಿಗಳು ಮತ್ತು ಚಿಂತಕರ ಸೃಜನಶೀಲ ಕಾಣಿಕೆಗಳಿಂದ ಕಂಗೊಳಿಸಲಿರುವ 'ಅಲೆವಾಣಿ' ಒಂದು ಮಹೋನ್ನತ ಮತ್ತು ಸಂಗ್ರಹಯೋಗ್ಯ ಸಂಪುಟವಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಸಮಿತಿ ಹೊಂದಿದೆ. 'ಅಲೆವಾಣಿ' ಸಾರುವ ಮುಖ್ಯ ಸಂದೇಶವಾಣಿ “ವಿಶ್ವವ್ಯಾಪ್ತಿ ಕನ್ನಡ : ಅಂದು, ಇಂದು,ಮುಂದು."
ಕನ್ನಡ ನಾಡಿನ ಶ್ರೀಮಂತ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ಸಂಚಿಕೆಗೆ ಸೂಕ್ತವಾದ ಮುಖಪುಟ ವಿನ್ಯಾಸ ಬೇಕಾಗಿರುತ್ತದೆ. ಕನ್ನಡ ಕೃತಿಗಳಿಗೆ ಮುಖಪುಟ ವಿನ್ಯಾಸ ಮಾಡುವ ನುರಿತ ಕಲಾವಿದರು ಅಲೆವಾಣಿಯ ಧ್ಯೇಯವಾಕ್ಯಕ್ಕೆ ಅನುಗುಣವಾದ ವಿನ್ಯಾಸ ರೂಪಿಸಿ ಸ್ಮರಣ ಸಂಚಿಕೆಯ ಸಂಪಾದಕರಿಗೆ ಕಳಿಸಬೇಕೆಂದು ಕೋರಲಾಗಿದೆ. ಸಂಪಾದಕರು, ಶ್ರೀಕಾಂತ್ ಬಾಬು.
ವಿಶ್ವಕನ್ನಡಿಗರ ಸೃಜನಶೀಲತೆಯ ಅಭಿವ್ಯಕ್ತಿಗೆ ಇದೊಂದು ಸದವಕಾಶವೆಂದು ನಾವಿಕ ಸಾಹಿತ್ಯ ಸಮಿತಿ ವಿಶ್ವಾಸವಿರಿಸುತ್ತದೆ. ಆಯ್ಕೆಯಾದ ಮುಖಪುಟ ವಿನ್ಯಾಸವನ್ನು ಅಲೆವಾಣಿ ಸಂಚಿಕೆಯ ರಕ್ಷಾಕವಚಕ್ಕೆ ಬಳಸಿಕೊಳ್ಳಲಾಗುವುದು. ಹಾಗೂ, ಆಯ್ಕೆಯಾದ ಅತ್ಯುತ್ತಮ ವಿನ್ಯಾಸ ರಚಿಸಿದ ಕಲಾವಿದರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ ಎಂದೂ ಅಲೆವಾಣಿಯ ಸಂಪಾದಕರು ದಟ್ಸ್ ಕನ್ನಡಕ್ಕೆ ತಿಳಿಸಿದರು. ಮುಖಪುಟ ವಿನ್ಯಾಸ ಕಳುಹಿಸಲು ಕೊನೆಯ ದಿನ: 30 ಏಪ್ರಿಲ್ 2010. ವಿಳಾಸ : [email protected]
ಮುಖಪುಟದ ವಿನ್ಯಾಸವಲ್ಲದೆ ಸ್ಮರಣ ಸಂಚಿಕೆಗೆ ಕಥೆ, ಕವಿತೆ, ಲೇಖನ, ಪ್ರವಾಸ ಕಥನ, ಅನುಭವ ಕಥನ, ನಾಟಕ ಮತ್ತು ಮಕ್ಕಳ ಚಿತ್ರಕಲೆ ಮುಂತಾದ ಕನ್ನಡ ಸಾಮಗ್ರಿಗಳನ್ನು ಅಲೆವಾಣಿ ಅಪೇಕ್ಷಿಸಿದ್ದು ವಿವರಗಳಿಗೆ ಇಲ್ಲಿ ನೋಡಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications