‘ಸುವರ್ಣವಾಹಿನಿ’ ಮುಖಪುಟ
''ಬಂಗಾರವ ಎರಕ ಹೊಯ್ದು ಮೈಯ ಮಾಡಿದನೇ... ಸಿಂಗಾರಕ್ಕೆ ಕಳಶ ಇರಿಸಿ ಅಮೃತ ತುಂಬಿದನೇ..."" ಅಂತೊಂದು ಚಿತ್ರಗೀತೆಯಿದೆ. ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ 'ಸುವರ್ಣ ವಾಹಿನಿ"ಯ ಬಗ್ಗೆ ಅದೇ ಮಾತುಗಳನ್ನು ಹೇಳಬಹುದು!
ನಮ್ಮೆಲ್ಲರ ಹೆಮ್ಮೆಯ ಕರ್ನಾಟಕ ರಾಜ್ಯವು ಸ್ವರ್ಣಸಂಭ್ರಮದಲ್ಲಿರುವಾಗಲೇ ಆಯೋಜಿತವಾಗಿರುವ ಈ ಸಮ್ಮೇಳನದ ಸ್ಮರಣ ಸಂಚಿಕೆಗೆ ಸೂಕ್ತವಾದ ಮತ್ತು ಅರ್ಥಪೂರ್ಣವಾದ ' ಸುವರ್ಣ ವಾಹಿನಿ" ಎಂಬ ಹೆಸರನ್ನಿಡಲಾಗಿದೆ. ಒಳಗಿನ ಹೂರಣ ಅಕ್ಷರಗಳಿಂದಾದ ಅಮೃತವೆಂಬುದು ಸಂಚಿಕೆ ಕೈಸೇರಿದಾಗ ಓದುಗನ ಅನುಭವಕ್ಕೆ ಬರಬಹುದು.
ಈ ಬಾರಿಯ ಸಮ್ಮೇಳನದ ಸ್ಮರಣಸಂಚಿಕೆಯ ವೈಶಿಷ್ಟ್ಯವೆಂದರೆ ನೋಂದಣಿ ಮಾಡಿರುವ ಪ್ರತಿಯೊಬ್ಬರಿಗೂ (ಒಂದು ಕುಟುಂಬಕ್ಕೆ ಒಂದು) ' ಸುವರ್ಣ ವಾಹಿನಿ" ಮುಖ್ಯ ಸಂಚಿಕೆಯ ಜತೆಯಲ್ಲೇ ಸಣ್ಣಕಥೆಗಳ ಸಂಕಲನದ 'ಕಥಾ ವಾಹಿನಿ", ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನಗಳ ಸಂಕಲನ 'ತಂತ್ರ-ವಿಜ್ಞಾನ ವಾಹಿನಿ" ಮತ್ತು ಕಾದಂಬರಿ ಸ್ಪರ್ಧೆಯಲ್ಲಿ ವಿಜೇತ 'ಭರದ್ವಾಜ" ಕಾದಂಬರಿ - ಹೀಗೆ ಮೂರು ಇತರ ಪುಸ್ತಕಗಳೂ ದೊರೆಯುತ್ತವೆ.

ಸ್ಮರಣಸಂಚಿಕೆಗಳ ಸಂಪಾದಕ ಮಂಡಳಿಯ ನೇತೃತ್ವ ವಹಿಸಿದವರು ಡಾ।ಮೈ.ಶ್ರೀ.ನಟರಾಜ. ಪ್ರಧಾನ ಸಂಪಾದಕರು ಸಂಜೀವ ಮನಗೋಳಿ. ಸ್ಮರಣಸಂಚಿಕೆಗೆ ಕರ್ನಾಟಕದಲ್ಲಿ ಸಂಯೋಜಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದವರು ಶಿಕಾರಿಪುರ ಹರಿಹರೇಶ್ವರ. ರಕ್ಷಾಕವಚದ ವಿನ್ಯಾಸಕಾರ ಜನಾರ್ಧನ ಸ್ವಾಮಿ (ಕ್ಯಾಲಿಫೊರ್ನಿಯಾ). ಈ ಸಲದ ಸಂಚಿಕೆಯೂ ಸೇರಿದಂತೆ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಮರಣಸಂಚಿಕೆಗಳ ಮುಖಪುಟವಿನ್ಯಾಸದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ ಜನಾರ್ಧನ ಸ್ವಾಮಿ.
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected]












Click it and Unblock the Notifications