ಬಾಲ್ಟಿಮೋರ್‌ನಲ್ಲಿ ತ್ರಿಲೋಕ ಸಂಚಾರಿ ನಾರದ ಮಹರ್ಷಿ!

  • ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌.
    [email protected]
Murali dancing to tune of Gurukiranತ್ರಿಲೋಕ ಸಂಚಾರಿಯಾದ ನಾರದನು ‘ನಾರಾಯಣ ನಾರಾಯಣ’ ಎನ್ನುತ್ತಾ ವೈಕುಂಠಾಧಿಪತಿಗೆ ವಂದಿಸಿದನು. ಮಹಾವಿಷ್ಣುವು ‘ನಾರದರೇ, ಭೂಲೋಕದ ವಿಶೇಷವೇನು?’ ಎಂದ.

ನಾರದನು ನಸುನಗುತ್ತಾ ‘ಪ್ರಭೂ, ಎಲ್ಲವನ್ನೂ ಬಲ್ಲ ನೀನು, ನನ್ನ ಬಾಯಲ್ಲೇ ವಿಷಯವನ್ನು ಕೇಳುವ ಆಸೆಯೇ? ಇರಲಿ, ಹೇಳುವೆನು ಕೇಳು.. ಅಮೆರಿಕಾ ದೇಶದ ಬಾಲ್ಟಿಮೋರ್‌ ಎಂಬ ನಗರದಲ್ಲಿ ಸಹಸ್ರಾರು ಕನ್ನಡಿಗರು ಸೇರಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷ ಸುದ್ದಿ. ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ತಮ್ಮಲ್ಲೇ ‘ಕಂಗ್ಲಿಷ್‌’ ಭಾಷೆ ಮಾತನಾಡುತ್ತ ಆನಂದಿಸಿದ್ದು ನೋಡಲು ಕೇಳಲು ಸೊಗಸಾಗಿತ್ತು.’.

ಮಹಾವಿಷ್ಣುವು ನಾರದರನ್ನು ಅಲ್ಲೇ ತಡೆದು ‘ಈ ಕಂಗ್ಲಿಷ್‌ ಭಾಷೆ ಯಾವುದು? ಮೊದಲು ಅದನ್ನು ಪೇಳುವಂತವನಾಗು’ ಎಂದ.

ನಾರದರು ‘ಪ್ರಭೂ, ಇದೊಂದು ವಿಶೇಷ ಭಾಷೆ. ಊಟದ ಮನೆಯಲ್ಲಿ ನಡೆದ ಸಂಭಾಷಣೆ ಹೀಗಿದೆ. ಅದಲ್ಲದೆ ನನ್ನ ಕಿವಿಗೆ ಬಿದ್ದ ಹಾಗೂ ನೋಡಿದ ಹಲವಾರು ವಿಷಯಗಳನ್ನು ಹೇಳುತ್ತೇನೆ. listen’

***

  • hello everybody.
  • ಎಲ್ಲರೂ ದಯವಿಟ್ಟೂ ಸ್ಲೋ ಆಗಿ ಊಟ ಮಾಡಿ. Programs are going on at the center.ಅದನ್ನು ಮಿಸ್‌ ಮಾಡಬೇಡಿ. ಪೀಪಲ್‌ ಹೊರಗೆ ಲಂಚ್‌ಗೆ waitಮಾಡ್ತಾ ಇದ್ದಾರೆ. you may discuss outside. thank you
  • ಇಬ್ಬರು ಮಹಿಳೆಯರು ಊಟದ ಮನೆಯಲ್ಲಿ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು, ತಾವಿಬ್ಬರೂ ಬೆಂಗಳೂರಿನವರೇ ಎಂದು ತಿಳಿದು ತಮ್ಮ ಶಾಲಾ ದಿನಗಳು, ಕಾಲೇಜು ದಿನಗಳು, ತಾವು ಇಲ್ಲಿಗೆ ಎಂದು, ಹೇಗೆ ಬಂದದ್ದು ಎಂಬುದನ್ನೆಲ್ಲ ಬರೀ ಇಂಗ್ಲಿಷಿನಲ್ಲೇ ಮುಗಿಸಿದರು. ಇಬ್ಬರೂ ಕನ್ನಡಿಗರೇ!!
  • ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಊಟವನ್ನು ಏರ್ಪಡಿಸಿದ್ದ ಹೋಟೆಲ್ಲಿಗೆ ಕರೆದೊಯ್ದು ವಾಪಸ್ಸು ಕರೆದುಕೊಂಡು ಬಿಡುತ್ತಿದ್ದ ಹಲವಾರು ಬಸ್ಸಿನ ಡ್ರೈವರುಗಳು ‘ಬೇಗ ಬನ್ನಿ’, ‘ಒಳಗೆ ಹೋಗಿ’, ‘ಧನ್ಯವಾದ’ ಎಂಬ ಪದಗಳನ್ನು ಸುಲಲಿತವಾಗಿ ಬಳಸುತ್ತಿದ್ದುದು ಕೇಳಲು ಚೆನ್ನಾಗಿತ್ತು.
  • ಅತೀ ನಿರೀಕ್ಷಿತ ಕಾರ್ಯಕ್ರಮಗಳಲ್ಲಿ ‘ಗುರುಕಿರಣ್‌’ ಅವರ ಸಂಗೀತ ಸಂಜೆಯೂ ಒಂದು. ಕಾರಣಾಂತರಗಳಿಂದ ಕಾರ್ಯಕ್ರಮ ತಡವಾಗಿ ಆರಂಭಗೊಂಡಿತು. ಹಾಗಾಗಿ ಪ್ರೇಕ್ಷಕರು ಗಲಾಟೆ ಎಬ್ಬಿಸಿದರು. ಕಾರ್ಯಕ್ರಮ ಕೊನೆಗೂ ಆರಂಭವಾಯಿತು. ಆದರೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆರೆ ಹಿಡಿಯಲು ಸೋತರು. ಉಪೇಂದ್ರ ಅಭಿನಯದ ‘ಎಂ ಟೀವಿ ಸುಬ್ಬಲಕ್ಷ್ಮಿಗೆ ಬರಿ ಓಳು’ ಎಂದು ಹಾಡುತ್ತಾ ಒಮ್ಮೆ ಅದೇ ಧಾಟಿಯಲ್ಲಿ ‘ಬಾಲ್ಟೀಮೋರ್‌ ಅಕ್ಕ ಸಮ್ಮೇಳನಾ’ ಎಂದು ಮಿಕ್ಕ ಸಾಹಿತ್ಯಕ್ಕೆ ಮೈಕನ್ನು ಪ್ರೇಕ್ಷರಿಗೆ ಹಿಡಿದರೆ ಅವರು ‘ಬರಿ ಓಳು’ ಎನ್ನೋದೇ...!!! ತಾವೇನು ಹಾಡುತ್ತಿದ್ದೇವೆ ಎಂಬ ಅರಿವೇ ಇರಲಿಲ್ಲ ಅವರಿಗೆ!
  • ‘ವಡೆ ಹಳಸಿತ್ತು’, ‘ಊಟ ಸಾಕಾಗಲಿಲ್ಲ’ ‘ಚಪಾತಿ ಗಟ್ಟಿ’ ಎಂಬ ಟೀಕೆ-ಟಿಪ್ಪಣಿಗಳು ಹೇರಳವಾಗಿ ಕೇಳಿಸುತ್ತಿದ್ದವು. ಹಾಗೆ ಯಾರೋ ಜೋರಾಗೇ ಗೊಣಗಿದ್ದಕ್ಕೆ ಮಿನರ್ವಾ ಹೋಟೆಲಿನ ಪ್ರತಿನಿಧಿ ಹೇಳಿದರು ‘ನಮಗೆ ಹೇಳಿದ್ದು ಮೂರೂವರೆ ಸಾವಿರದ ಜನರ ಊಟ. ಆದರೆ ಬಂದಿರೋದು ಐದು ಸಾವಿರ. ನಾವೇನು ಮಾಡೋಕಾಗುತ್ತೆ?.’ ಎಲ್ಲ ಸರಿಯಿದ್ದೂ ಏನಾದರೂ ಗೊಣಗುವುದೇ ಜನರ ಕೆಲಸ.
  • ಅಷ್ಟು ಜನ ಸೇರಿರುವಾಗ ಪರಸ್ಪರ ಹಾಸ್ಯಕ್ಕೇನು ಕಡಿಮೆ. ಒಬ್ಬರು ಇನ್ನೊಬ್ಬರನ್ನು ‘ಪ್ರವೀಣ್‌ ಗೋಡ್ಖಿಂಡಿ ಅವರ ಕೊಳಲು ಕೇಳಬೇಕು. ಎಲ್ಲಿದೆ?’ ಅಂತ ಕೇಳಿದರು. ಅದಕ್ಕೆ ಅವರು ‘ನಾನು ಕಡೆ ಸಾರಿ ನೋಡಿದಾಗ ಅವರ ಕೈಯಲ್ಲೇ ಇತ್ತು’ ಅಂತ ಹೇಳಿದರು! ಅವರ ಉದ್ದೇಶ ಯಾವ ಹಾಲ್‌ನಲ್ಲಿ ಕಾರ್ಯಕ್ರಮ ನಡೆದಿದೆ ಅಂತ. ಆ ಕಾರ್ಯಕ್ರಮ ನೋಡಿ ಹೊರಗೆ ಬರುತ್ತಿದ್ದ ಒಬ್ಬರು ಇನ್ನೊಬ್ಬರನ್ನು ಭೇಟಿಯಾದಾಗ ಕೇಳಿದರು ‘ಗೋಡ್ಖಿಂಡಿ ಅವರ ಕೊಳಲು ಕೇಳಿದಿರೇನು?’ ಅದಕ್ಕೆ ಅವರು ಹೇಳಿದರು ‘ಕೇಳಿದೆ ... ಆದರೆ ಅವರು ಕೊಡಲಿಲ್ಲ!’
  • ಕೊನೆಯ ದಿನ ಊಟದ ಸಮಯದಲ್ಲಿ ಯಾರ ಬಳಿಯೂ ಕೂಪನ್‌ ತೆಗೆದುಕೊಳ್ಳದೆ ಹಾಗೇ ಒಳಗೆ ಬಿಡುತ್ತಿದ್ದರು. ಕೂಪನ್‌ ಕೊಟ್ಟವರಿಗೆಲ್ಲ ಅಲ್ಲಿನ ಉಸ್ತುವಾರಿ ವಹಿಸಿದ್ದವರು ಹೇಳುತ್ತಿದ್ದರು ‘ಪರವಾಗಿಲ್ಲ ಒಳಗೆ ಹೋಗಿ. ಇದು ಕಡೇ ಊಟ!’ ಅಂತ!
  • ಯಾವುದು ಏನೇ ಆಗಲಿ, ಶುಕ್ರವಾರ ಸಂಜೆಯಿಂದ ಭಾನುವಾರ ರಾತ್ರಿಯವರೆಗೂ ತಿಂಡಿ ಹಾಗೂ ಊಟ ಹಾಕುವ ಹೊಣೆ ಹೊತ್ತ ವಿಜಯೇಂದ್ರ ಹಾಗೂ ತಂಡದವರ ಪರಿಶ್ರಮ ಶ್ಲಾಘನೀಯ!!!!
  • ಕಾರ್ಯಕ್ರಮ ನಡೆದಿದ್ದ ಸ್ಥಳದಿಂದ ಊಟಕ್ಕೆ ಹೋಗಿ ಬರುವ ಓಡಾಟದಲ್ಲೇ ಹಲವಾರು ಒಳ್ಳೆಯ ಕಾರ್ಯಕ್ರಮಗಳು ನೋಡಲು ತಪ್ಪಿದ್ದು ಬೇಸರದ ಸಂಗತಿ. ಬಾಲ್ಟಿಮೋರ್‌ ಸೆಂಟರ್‌ನವರು ತಮ್ಮಲ್ಲೇ ಊಟದ ವ್ಯವಸ್ಥೆ ಮಾಡಲು ಪರ್ಮಿಷನ್‌ ಕೊಡದಿದ್ದುದೇ ಈ ಆಭಾಸಕ್ಕೆ ಕಾರಣ ಎಂಬುದು ಕೆಲವರ ಅಂಬೋಣ !
  • ಯಾರೋ ನವ ನಟನಂತೆ. ಮುರಳೀ ಅಂತ ಅವನ ಹೆಸರು. ಸ್ಟೇಜಿನ ಮೇಲೆ ಹೋದಾಗ ಹೇಳಿದ ‘ನನ್ನ ಮೊದಲ ಸಿನಿಮಾ ಆರು ನೂರು ದಿನಗಳ ಕಾಲ ಥಿಯೇಟರ್‌ ಬಿಟ್ಟು ಅಲ್ಲಾಡಲಿಲ್ಲ’ ಅಂತ. ಅದನ್ನು ಕೇಳಿ ಯಾರೋ ಹೇಳಿದರು ‘ನಾವೇನು ಕಿವಿ ಮೇಲೆ ಹೂವ ಇಟ್ಟುಕೊಂಡಿಲ್ಲ ಗುರೂ’ ಅಂತ. ಇಂತಹ ಅಮೋಘ ನಟ, ಕಾರ್ಯಕ್ರಮದ ಮೊದಲು ಮುಂದಿನ ಸೀಟಿನಲ್ಲಿ ಅರ್ಧ ಗಂಟೆ ಕೂತಿದ್ದರೂ ಇವನನ್ನು ಯಾರೂ ಗುರುತಿಸಲಿಲ್ಲ. ಕೊನೆಗೆ ತಾನೇ ಪಕ್ಕದಲ್ಲಿ ಕುಳಿತವರಿಗೆ ಹೇಳಿದ ತಾನೊಬ್ಬ ಸಿನಿಮಾ ನಟ ಎಂದು. ಅದಕ್ಕೆ ಅವರು ಹೇಳಿದರು O! is it. I did not know that you are an actor. have u acted in any movies...? !!!
  • ಅಮೆರಿಕದಲ್ಲೇ ಹುಟ್ಟಿ ಬೆಳೆದ ಕನ್ನಡಿಗ ಯುವಕನೊಬ್ಬನಿಗೆ ಅವನ ಮನೆಯವರು ಕೇಳುತ್ತಿದ್ದರು Did u like Vidyaabhushanaas songs?. ಅವನ ಉತ್ತರ Oh! this man is awesome. He took the audience to a different world. He sings effortless.
  • ಊಟದ ಮನೆಯಲ್ಲಿ, ಬಹಳ ವರ್ಷಗಳಿಂದ ಇಲ್ಲೇ ನೆಲೆಸಿರುವ ವಯಸ್ಸಾದ ಒಬ್ಬ ಹಿರಿಯ ಮಹಿಳೆ ವಯಸ್ಸಿಗೆ ಬಂದಿದ್ದ ತನ್ನ ಮೊಮ್ಮಗಳಿಗೆ ಹೇಳುತ್ತಿದ್ದ ಮಾತು - If you don’t like sweets don’t take and waste it on your plate. ಎಂತಹ ನಿಲುವು!
***

‘ಪ್ರಭು, ಸಮ್ಮೇಳನದ ಬಗ್ಗೆ ಹೇಳ್ತಾ ಹೋದರೆ ಮುಗಿಯುವುದಿಲ್ಲ. ಅಂದ ಹಾಗೆ You know what Prabhoo. Next time the Kannada Conference is in Toranto ಅಂತೆ. ಮಿಸ್‌ ಮಾಡೊದು ಬೇಡ ಓಕೇ ?’ ಎಂದು ನಾರದ ತನ್ನ ವರದಿಯನ್ನು ಮುಗಿಸಿದ. ಎರಡು ದಿನ ಕನ್ನಡಿಗರ ಜೊತೆ ಇದ್ದದ್ದಕ್ಕೇ ನಾರದ ಕಂಗ್ಲಿಷ್‌ ಮಾತಾಡುವ ಶೈಲಿ ಕೇಳಿ ಮಹಾ ವಿಷ್ಣು ಮೂಕನಾದ!

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+