• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆಲೆ ಇರದ ಮೋಡಗಳು

By * ವಸಂತ ಕುಲಕರ್ಣಿ, ಸಿಂಗಪುರ
|

Vasant Kulkarni, Singapore
ಸಿಂಗಪುರಕ್ಕೆ ಬಂದು ಅದೆರಡು ತಿಂಗಳಾಗಿತ್ತು. ಆಂಗ್ ಮೋ ಕಿಯೋ ಬಡಾವಣೆಯಲ್ಲಿ ಮನೆ ಮಾಡಿದ್ದೆವು. ಹೊಸ ದೇಶ, ಹೊಸ ಪರಿಸರ ಮತ್ತು ಹೊಸ ಜನಗಳ ರೀತಿ ನೀತಿಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಬಡೋದೆಯ ನಿಧಾನ ಜೀವನ ಕ್ರಮಕ್ಕೆ ಹೊಂದಿಹೋಗಿದ್ದ ನಮಗೆ ಸಿಂಗಪುರದ ಬದುಕು ಜಟಕಾ ಬಂಡಿಯಲ್ಲ, ರಾಜಧಾನಿ ಎಕ್ಸ್‌ಪ್ರೆಸ್‌ನ ತರಹ ಅತೀ ವೇಗದ್ದು ಎನ್ನಿಸಿತ್ತು. ದಿನಗಳು ಒಂದರ ಮೇಲೊಂದರಂತೆ ಅತೀ ವೇಗದಿಂದ ಸರಿಯ ತೊಡಗಿದ್ದವು.

ಬಡೋದೆಯ ಮಾಮೂಲು ದಿನಚರಿಗೆ ಒಗ್ಗಿ ಹೋಗಿದ್ದ ನಾನು ಮತ್ತು ವಿರಜಾ ನಮ್ಮ ಇಲ್ಲಿಯ ಜೀವನದಲ್ಲಿ ಕೂಡ ಒಂದು routine ಒಂದನ್ನು ತರಲು ಪ್ರಯತ್ನಿಸುತ್ತಿದ್ದೆವು. ನಿತ್ಯ ರಾತ್ರಿ ಊಟವಾದ ಮೇಲೆ ಪುಟ್ಟ ಮಗಳು ವಿಭಾಳನ್ನು ಕರೆದುಕೊಂಡು ಒಂದು ಸಣ್ಣ walkಗೆ ಹೋಗುವದು ನಮ್ಮ ದಿನಚರಿಯಲ್ಲೊಂದು ಭಾಗವಾಗಿತ್ತು. ಈ ನಡಿಗೆ ಪ್ರತಿ ದಿನದ ಎಕ್ಸ್‌ಪ್ರೆಸ್ ಬದುಕಿನಿಂದ ಹೊರತಂದು, ಸ್ವಲ್ಪ ನಿಧಾನವಾಗಿ ದಿನದ ಆಗು ಹೋಗುಗಳನ್ನು ಕುರಿತು ಯೋಚಿಸಲು ಮತ್ತು ನಮ್ಮ ಪುಟ್ಟ ಸಂಸಾರದಲ್ಲಿಯ ಚಿಕ್ಕ ಆನಂದ ಮತ್ತು ದುಃಖಗಳನ್ನು ಅನುಭವಿಸಲು ಅನುವು ಮಾಡಿ ಕೊಡುತ್ತಿತ್ತು.

ಅದೊಂದು ದಿನ ಅದೇನೋ ಮನೆ ಕೆಲಸದಲ್ಲಿ ನಿರತಳಾಗಿದ್ದ ವಿರಜಾ ನಮ್ಮೊಂದಿಗೆ ಸಂಜೆಯ ಮಾಮೂಲು ನಡಿಗೆಗೆ ಬರಲಿಲ್ಲ. ನಾನು ಪುಟ್ಟ ವಿಭಾಳೊಂದಿಗೆ ಮಾತನಾಡುತ್ತ, ಆಗಲೇ ನರ್ಸರಿ ಸ್ಕೂಲಿಗೆ ಹೋಗಲಾರಂಭಿಸಿದ್ದ ಅವಳಿಗೆ ಅವಳ ಸ್ಕೂಲಿನ ಬಗ್ಗೆ ಪ್ರಶ್ನೆ ಮಾಡುತ್ತ, ಅವಳ ಮುಗ್ಧ ಮಾತುಗಳನ್ನು ಕೇಳಿ ಆನಂದ ಪಡುತ್ತ ನಡೆದಿದ್ದೆ.

ಅಂದು ಹುಣ್ಣಿಮೆಗೆ ಹತ್ತಿರದ ದಿನವಾದ್ದರಿಂದ ಚಂದ್ರನ ಬೆಳಕು ಹದವಾಗಿ ಎಲ್ಲೆಡೆ ಹರಡಿತ್ತು. ರಸ್ತೆಯ ಸುತ್ತ ಮುತ್ತ ದಟ್ಟವಾಗಿ ಎತ್ತರವಾಗಿ ಬೆಳೆದ ಗಿಡಗಳು ಬೆಳೆದು ಅಕ್ಕ ಪಕ್ಕದ ಬಹು ಮಹಡಿ ಮನೆಗಳ ಮತ್ತು ಎತ್ತರವಾದ ವಿದ್ಯುತ್ ಕಂಬಗಳ ಮಂದ ವಿದ್ಯುತ್ ಬೆಳಕು ಹೊರಬರದಂತೆ ತಡೆಯುತ್ತಿವು. ಆದರೆ ಚಂದ್ರನ ಕಿರಣಗಳು ಅಲ್ಲಲ್ಲಿ ನುಸುಳಿ ನೆಲಕ್ಕೆ ಮುಟ್ಟುತ್ತಿದ್ದವು. ರಾತ್ರಿಯ ಗಿಡಗಳ ಕಪ್ಪು ಆಕೃತಿಗಳ ಮಧ್ಯೆ ನುಸುಳುತ್ತಿದ್ದ ಚಂದ್ರನ ಕಿರಣಗಳು ಮಿಂಚಿನ ಕೋಲುಗಳಂತೆ ಕಾಣುತ್ತಿದ್ದ ಸೊಬಗನ್ನು ಮನದಲ್ಲೇ ಆಹ್ಲಾದಿಸುತ್ತಿದ್ದೆ. ಸುಮಾರು ಒಂದು ಕಿಲೋ ಮೀಟರ್ ದೂರದ ಬಸ್ ಸ್ಟಾಪ್‌ನವರೆಗೆ ಹೋಗಿ ಬರುವದು ನಮ್ಮ ರೂಢಿ. ಅವತ್ತು ಕೂಡ ಬಸ್ ಸ್ಟಾಪ್ ತಲುಪಿದೆ.

ಮಲಯ ಭಾಷಿಕ ಮುದುಕನೊಬ್ಬ ಸ್ವಲ್ಪ ದೂರದಲ್ಲಿ ನಿಂತು ಸಿಗರೇಟು ಸೇದುತ್ತ, ಬೀಸುತ್ತಿದ್ದ ತಂಪು ಗಾಳಿಯನ್ನು ಆನಂದಿಸುತ್ತಿದ್ದ. ಚರಪರ ಎಲೆಗಳ ಸದ್ದೊಂದನ್ನು ಬಿಟ್ಟರೆ, ಆಗಾಗ್ಗೆ ಬರುವ ಟ್ಯಾಕ್ಸಿ ಮತ್ತು ಕಾರುಗಳ ಸದ್ದೇ ಸುತ್ತಲಿನ ನಿಶ್ಯಬ್ದವನ್ನು ಕದಡುತ್ತಿದ್ದವು. ಇನ್ನೇನು ಹಿಂದಿರುಗಲೆಂದು ಹಿಂದೆ ತಿರುಗಿದೆ. ಎಲ್ಲಿಂದಲೋ ಒಬ್ಬ ವೃದ್ಧೆ ನನ್ನ ಬಳಿ ಬಂದಳು. ಮುಂದೆ ಒಂದು ಕಾಗದವನ್ನು ಹಿಡಿದಳು. "ಇದನ್ನು ಓದಿ ಹೇಳುತ್ತೀರಾ?" ಎಂದು ಇಂಗ್ಲಿಷಿನಲ್ಲಿ ಕೇಳಿದಳು. ಧ್ವನಿ ಆರ್ದ್ರವಾಗಿತ್ತು. ಅವಳತ್ತ ಗಮನವಿಟ್ಟು ನೋಡಿದೆ. ಚೀನೀ ಜನಾಂಗದವಳು. ವಯಸ್ಸು ಸುಮಾರು ಐವತ್ತಾಗಿರಬೇಕು ಎನಿಸಿತು. ಇಲ್ಲಿ ಎಂಥದೋ ಶಿಫಾರಸು ಪತ್ರ ಹಿಡಿದು ಧನ ಸಹಾಯ (ಒಂದು ರೀತಿಯಲ್ಲಿ ಭಿಕ್ಷೆ ಎನ್ನಿ) ಕೇಳುವದು ತುಂಬಾ ಕಡಿಮೆ. ಅದರಲ್ಲೂ ಚೀನೀಯರು ತುಂಬಾ ಸ್ವಾಭಿಮಾನಿಗಳು. ಭಿಕ್ಷೆ ಬೇಡುವವಳು ಎನ್ನಿಸಲಿಲ್ಲ. ಯಾರದೋ ಪತ್ರವಿರಬಹುದು, ಇವಳಿಗೆ ಓದಲು ಬರುವದಿಲ್ಲವೇನೋ ಎನಿಸಿ ಇಸಿದುಕೊಂಡೆ.

ಸಿಂಗಪೂರಿನಲ್ಲಿ ಚೀನೀ, ಮಲಯ ಮತ್ತು ತಮಿಳು ಭಾಷಿಕರು ಅಧಿಕರಾಗಿದ್ದರೂ, ಇಂಗ್ಲಿಷು ಭಾಷೆಯ ಬಳಕೆ ಸರ್ವೇ ಸಾಮಾನ್ಯ. ಕೂಲಿ ಕೆಲಸ ಮಾಡುವವರಿಗೆ ಕೂಡ ಇಂಗ್ಲಿಷು ಭಾಷೆ ಬರುತ್ತದೆ. ಅನೇಕ ಅನಕ್ಷರಸ್ಥ ವೃದ್ಧರೂ ಓದಲು ಬರುವದಿಲ್ಲವಾದರೂ, ಇಂಗ್ಲಿಷು ಭಾಷೆಯನ್ನು ಹರುಕು ಮುರುಕಾಗಿ ಅಗತ್ಯಕ್ಕನುಗುಣವಾಗಿ ಉಪಯೋಗಿಸಬಲ್ಲರು. ಆದುದರಿಂದ ನನಗೆ ಅದರಲ್ಲೇನೂ ವಿಶೇಷ ಕಾಣಿಸಲಿಲ್ಲ. ಕಾಗದ ಕೈಯಲ್ಲಿ ತೆಗೆದುಕೊಂಡು ಗಟ್ಟಿಯಾಗಿ ಓದಿದೆ. ಅದರಲ್ಲಿ ಹೀಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Moving clouds. A Kannada short story by Vasant Kulkarni, Singapore. People migrating to various parts of the world are like moving clouds. The coulds have to move whenever wind blows whichever way.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more