178864kannada short storyಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg178864kannada short storyಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpg178864kannada short storyಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg178864kannada short storyನಂಬಕೂಡದ ಸತ್ಯಕಥೆ/literature/short-story/2009/0321-satyakathe-short-story-by-narayana-murthy.htmlರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು 35411http://kannada.oneindia.com/img/2009/03/21-narayana-murthy-hosabale1.jpg178864kannada short storyಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg478303dg sampathನೆನಪಿನ೦ಗಳದಲ್ಲಿ ಡಾ|ರಾಜ್/movies/raj/2009/0424-poetic-salutation-to-raj-on-his-birthday.htmlವೈವಿಧ್ಯಮಯ ಪಾತ್ರಗಳಲ್ಲಿ ಜೀವ ತುಂಬುವ ಮುಖಾಂತರ, ಸರಳ ಸಜ್ಜಿನೆಯ ಮುಖಾಂತರ ಕನ್ನಡ ಚಿತ್ರರಸಿಕರ ಮುಕುಟಮಣಿ ಡಾ. ರಾಜಕುಮಾರ್ ಇಂದಿಗೂ ಜೀವಂತವಾಗಿದ್ದಾರೆ. ಅವರ ಅಭಿಮಾನಿಗಳಿಗೆ ನೆನಪುಗಳು ಬಿಡದೆ ಕಾಡುತ್ತವೆ. ಕನ್ನಡ ಕಂಠೀರವ ರಾಜಕುಮಾರ್ ಅವರ 81ನೇ ಹುಟ್ಟುಹಬ್ಬದಂದು ಹೃದಯದಲ್ಲಿ ತುಂಬಿಕೊಂಡಿರುವ ಉತ್ಕಟ ಅಭಿಮಾನ ಕವನ ರೂಪದಲ್ಲಿ ಹರಿದುಬಂದಿದೆ. ಕವನದಲ್ಲಿ ಅವರ ಇಡೀ ಜೀವನ ಅಡಕವಾಗಿದೆ.* ಡಿಜಿ ಸಂಪತ್ ಹುಟ್ಟಿತೊ೦ದು 36183http://kannada.oneindia.com/img/2009/04/24-rajkumar9.jpg478303dg sampathವಿವಾಹಗಳ ನೋ೦ದಣಿ ಕಡ್ಡಾಯವಾಗಬೇಕು/literature/articles/2009/0603-marriage-registration.htmlನಮ್ಮ ದೇಶದ 115 ಕೊಟಿ ಜನಸಮೂಹದಲ್ಲಿ ವಿವಿಧ ಜಾತಿಗಳ, ವಿವಿಧ ಸ೦ಪ್ರದಾಯದ ಲಕ್ಷಾ೦ತರ ವಿವಾಹಗಳು ರಾಷ್ಟ್ರಾದ್ಯ೦ತ ಪ್ರತಿದಿನವೂ ನಡೆಯುತ್ತಲ್ಲಿದ್ದು, ಇದೊ೦ದು ಅತ್ಯಾವಶ್ಯಕ ಮನುಷ್ಯನ ಸಾಮಾಜಿಕ ಕ್ರಿಯೆ ಆಗಿದ್ದು, ಸಂಬಂಧಗಳೆಂಬ ಕೊಂಡಿ ಜೋಡಿಸುತ್ತಿವೆ. ಇ೦ತಹ ಒ೦ದು ಅತ್ಯಗತ್ಯ ಕ್ರಿಯೆ ಇಡೀ ರಾಷ್ಟ್ರಾದ್ಯ೦ತ ಯಾವುದೇ ನಿಯ೦ತ್ರಣವಿಲ್ಲದೆ ಯಾವುದೆ ಲೆಕ್ಕಾಚಾರಕ್ಕೂ ಬರದೆ ಸಮುದಾಯದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಆರೋಗ್ಯಕರ ಸಮಾಜವೊ೦ದರ ಬೆಳವಣಿಗೆಯ 37083http://kannada.oneindia.com/img/2009/06/03-dorai-sampath1.jpg478303dg sampathಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ/nri/article/2009/0630-transport-system-in-america.htmlಭೂಸಂಚಾರ ವ್ಯವಸ್ಥೆ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೆ ನಮ್ಮ ಗಮನವೆಲ್ಲ ಮಳೆಬಿದ್ದಾಗ ಮಾತ್ರ ಸಪಾಟಾಗಿ ಕಾಣುವ ರಸ್ತೆಗಳು, ಮನೆ ಮುಟ್ಟುತ್ತೇವೆಯೋ ಇಲ್ಲವೋ ಎಂಬಂಥ ರಸ್ತೆದಟ್ಟಣೆಯತ್ತಲೇ ಹೋಗುತ್ತದೆ. ಕರ್ನಾಟಕದಲ್ಲಿರುವ ನಮ್ಮ ರಸ್ತೆಗಳು ಕೂಡ ಸುಧಾರಣೆಯ ಹಾದಿ ಹಿಡಿದಿದ್ದರೂ ಸಾಕಷ್ಟು ದಾರಿ ಕ್ರಮಿಸಬೇಕಿದೆ. ಅದೇ ಅಮೆರಿಕದಲ್ಲಿರುವ ರಸ್ತೆಗಳು, ಅಲ್ಲಿನ ಭೂಸಂಚಾರ ವ್ಯವಸ್ಥೆ ಹೇಗಿದೆ? ಕಣ್ಣಿಗೆ ಕಟ್ಟುವಂತೆ ಡಿಜಿ ಸಂಪತ್ 37674http://kannada.oneindia.com/img/2009/06/30-usa-transport-system2.jpg478303dg sampathಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ/literature/articles/2009/0717-how-to-prevent-hooch-tragedy.htmlಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ 38051http://kannada.oneindia.com/img/2009/07/17-illicit-liquor1.jpg478303dg sampathಪಿಟೀಲು ಮಾಂತ್ರಿಕ ಕನ್ನಡಿಗ ವಿಎಸ್ ನರಸಿಂಹನ್/literature/people/2009/0725-violin-expert-vs-narasimhan-mysuru.htmlವಿಎಸ್ ನರಸಿ೦ಹನ್ ಮೈಸೂರಿನಲ್ಲಿ ನನ್ನ ಬಾಲ್ಯದ ಗೆಳೆಯ. ಕರ್ನಾಟಕ ಸ೦ಗೀತ ಪ್ರಪ೦ಚಕ್ಕೆ ತನ್ನನು ಅರ್ಪಿಸಿಕೊ೦ಡ ಮಹಾನ್ ಕಲಾವಿದ. 50ರ ದಶಕದಲ್ಲಿ ಇನ್ನೂ ಬಹಳಷ್ಟು ಚಿಕ್ಕ ಹುಡುಗನಾಗಿರುವಾಗಲೇ ಪಿಟೀಲು ವಾದ್ಯವನ್ನು ಕರಗತ ಮಾಡಿಕೊ೦ಡಿದ್ದು, ಮೈಸೂರಿನ ಸ೦ಗೀತ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದ ಇವರ ಬಗ್ಗೆ ಮೆಚ್ಚುಗೆಯ ನಾಲ್ಕು ಸಾಲು ಬರೆಯಲು ನನಗೆ ಹೆಮ್ಮೆ ಎನಿಸುತ್ತದೆ. ಇದೋ ಸ೦ಗೀತ ಪ್ರಪ೦ಚದಲ್ಲಿ ಅವರು 38203http://kannada.oneindia.com/img/2009/07/25-vs-narasimhan1.jpg208437cowಪಂಚಗವ್ಯ - ರೈತರಿಗೆ ವರದಾನ/literature/my-karnataka/2009/0128-panchagavya-boon-to-organic-farming.htmlಹಲವಾರು ಬೆಳೆಗಳು ಪಂಚಗವ್ಯದಿಂದಾಗಿ ಹೆಚ್ಚಿನ ಫಸಲು ಹಾಗೂ ಕಡಿಮೆ ಕಾಲಾವಧಿಯಲ್ಲಿ ಫಲನೀಡುತ್ತದೆ ಎಂಬುದಾಗಿ ಕೆಲವು ಪ್ರಯೋಗಗಳ ಆರಂಭಿಕ ನಿಷ್ಕರ್ಷೆಗಳಿಂದ ತಿಳಿದು ಬಂದಿದೆ. ಹಾಗೆಯೇ, ದೇಶೀ ಗೋವುಗಳ ಪಂಚಗವ್ಯವು ವಿದೇಶಿ ತಳಿಗಳ ಪಂಚಗವ್ಯಕ್ಕಿಂತ ಹೆಚ್ಚು ಸಾಮರ್ಥ್ಯಶಾಲಿಯಾಗಿರುವುದಾಗಿ ಗೊತ್ತಾಗಿದೆ. ಪಂಚಗವ್ಯ ಎಂದರೆ ಹಸುವಿನ ಐದು ಉತ್ಪನ್ನಗಳಾದ ಸಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪ. ಇದನ್ನು ತೀರ್ಥ ಎಂದೂ ಆಸ್ತಿಕರು 34341http://kannada.oneindia.com/img/2009/01/28-cow-urine1.jpg208437cowಗೋಹತ್ಯೆ ನಿಷೇಧಿಸಿ : ಬಾಲಗಂಗಾಧರ ಸ್ವಾಮೀಜಿ/news/2009/07/10/cow-is-hearts-of-hindus-culture-swamiji.htmlಬೆಂಗಳೂರು, ಜು. 10 : ಗೋಹತ್ಯೆ ತಡೆಯಲು ರಾಜ್ಯದಲ್ಲಿರುವ ಕಸಾಯಿಖಾನೆಗಳನ್ನು ನಿಷೇಧಿಸಲು ರಾಜ್ಯ ಸರಕಾರ ಮುಂದಾಗಿರುವ ಬೆನ್ನಲ್ಲೇ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ತಿದ್ದುಪಡಿ ಮಾಡಿ ಜಾರಿಗೊಳಿಸಬೇಕು ಎಂದು ಆದಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಅಧಿನಿಯಮ 1964 ರಲ್ಲಿನ ನ್ಯೂನತೆ ಸರಿಪಡಿಸಿ ಪೂರ್ಣ ಗೋಹತ್ಯೆ ಕಾಯ್ದೆ 37908http://kannada.oneindia.com/img/2009/07/10-swamiji1.jpg208437cowಮೂಕ ವೇದನೆ/nri/short-story/2009/0830-mooka-vedane-by-dg-sampath.htmlಅ೦ದು ತು೦ಗೆ ಬಹಳ ಹೊತ್ತು ಕೂಗಿಕೊಳ್ಳರಾ೦ಭಿಸಿದಳು. ಆಗಿನ್ನೂ ರಾತ್ರಿ ಸುಮಾರು ಎರಡು ಗ೦ಟೆಯ ಸಮಯವಿರಬಹುದು. ಮನೆಯೊಡತಿ ಗಿರಿಜವ್ವ ಅದೇನೆ೦ದು ನೋಡಲು ಸಣ್ಣದಾಗಿದ್ದ ಲಾ೦ದ್ರದ ಬೆಳಕನ್ನು ದೊಡ್ಡದುಮಾಡಿ ತನ್ನ ಮಲಗುವ ಕೋಣೆಯಿ೦ದ ಹೊರಬ೦ದು, ಕೆಲಸದ ಆಳು ರ೦ಗನನ್ನು ಕೂಗಿ ಕರೆದೆಬ್ಬಿಸಿ, ಕೊಟ್ಟಿಗೆಯಕಡೆ ನಡೆದಳು. ಆವೇಳೆಗಾಗಲೆ ತು೦ಗೆಗೆ ಪ್ರಸವವಾಗಿ, ಮುದ್ದಾದ ಕ೦ದು ಬಣ್ಣದ ಕರುವೊ೦ದನ್ನು ಹೊರ ಹಾಕಿ ಹೂ೦ಕರಿಸುತ್ತಿದ್ದಳು. ಕರುವನ್ನು 38910http://kannada.oneindia.com/img/2009/08/30-cow-slaughter1.jpg208437cowಪಟ್ಟಣದಾಗೆ ಗಿಣ್ಣು ಎಲ್ಲಿ ಸಿಗತೈತಣ್ಣ?/recipe/culture/2009/1119-say-cheese-to-protein-rich-cheese.htmlಫೋಸು(ಕೊಂಕಣಿ), ಜುನ್ನು(ತೆಲುಗು), ಕರ್‌ವಸ್(ಮರಾಠಿ) ಹೆಸರಿನ ಹಸುವಿನ ಗಿಣ್ಣು-ಹಾಲು ಕರು ಹಾಕಿದ 5 ದಿನಗಳ ಹಾಲು. ಬಹಳ ಪೌಷ್ಠಿಕ ಎಂದು ಗಿಣ್ಣು ತಯಾರಿಸಿ ತಿನ್ನುವುದುಂಟು. ಕರು ಹಾಕಿದ ಕೂಡಲೇ ಹಸುವಿನ ಕೆಚ್ಚಲಿನಿಂದ ಸ್ರವಿಸಲ್ಪಡುವ ಮೊದಲ ಹಾಲನ್ನು ಗಿಣ್ಣದ ಹಾಲು ಅಂತಾರೆ. ಈ ಹಾಲು ಅತ್ಯಧಿಕ ಪೋಷಕಾಂಶಗಳಿಂದ ಕೂಡ್ದಿದು ಇದರಲಿ ಪ್ರೊಟೀನು, ಕೊಬ್ಬು, ಖನಿಜಗಳು ಮತ್ತು ರೋಗ ನಿರೋಧಕ ಅಂಶಗಳಿರುತ್ತವೆ.* 40315http://kannada.oneindia.com/img/2009/11/19-cheese1.jpgnews"> ಮೂಕ ವೇದನೆ | Mooka Vedane | Kannada short story | DG Sampath | Cow slaughter | ಮೂಕ ವೇದನೆ | ಸಣ್ಣಕಥೆ | ಡಿಜಿ ಸಂಪತ್ | ಗೋಹತ್ಯೆ - Kannada Oneindia

ಮೂಕ ವೇದನೆ

Mooka vedane, short story by DG Sampath
ಅ೦ದು ತು೦ಗೆ ಬಹಳ ಹೊತ್ತು ಕೂಗಿಕೊಳ್ಳರಾ೦ಭಿಸಿದಳು. ಆಗಿನ್ನೂ ರಾತ್ರಿ ಸುಮಾರು ಎರಡು ಗ೦ಟೆಯ ಸಮಯವಿರಬಹುದು. ಮನೆಯೊಡತಿ ಗಿರಿಜವ್ವ ಅದೇನೆ೦ದು ನೋಡಲು ಸಣ್ಣದಾಗಿದ್ದ ಲಾ೦ದ್ರದ ಬೆಳಕನ್ನು ದೊಡ್ಡದುಮಾಡಿ ತನ್ನ ಮಲಗುವ ಕೋಣೆಯಿ೦ದ ಹೊರಬ೦ದು, ಕೆಲಸದ ಆಳು ರ೦ಗನನ್ನು ಕೂಗಿ ಕರೆದೆಬ್ಬಿಸಿ, ಕೊಟ್ಟಿಗೆಯಕಡೆ ನಡೆದಳು. ಆವೇಳೆಗಾಗಲೆ ತು೦ಗೆಗೆ ಪ್ರಸವವಾಗಿ, ಮುದ್ದಾದ ಕ೦ದು ಬಣ್ಣದ ಕರುವೊ೦ದನ್ನು ಹೊರ ಹಾಕಿ ಹೂ೦ಕರಿಸುತ್ತಿದ್ದಳು. ಕರುವನ್ನು ನೆಕ್ಕಲು ಎಟುಕಲಾಗದ ದೂರದಿ೦ದ ತನ್ನ ಅಸಹಾಯಕ ಸ್ಥಿತಿಯನ್ನು ತನ್ನ ಹೂ೦ಕರಿಕೆಯಿ೦ದ ಪ್ರದರ್ಶಿಸುತ್ತಿದ್ದಳು. ತಕ್ಷಣವೆ ರ೦ಗನಿಗೆ ಹೇಳಿ ಕರುವನ್ನು ತಾಯಿಗೆ ಎಟುಕುವ೦ತೆ ಸರಿಸಿದಾಗ, ತು೦ಗೆ ಹೂ೦ಕರಿಕೆಯನ್ನು ನಿಲ್ಲಿಸಿ ಅರದ೦ತಹ ತನ್ನ ನಾಲಿಗೆಯಿ೦ದ ನೆಕ್ಕಿ ಶುಚಿಮಾಡತೊಡಗಿದಳು. ಗಿರಿಜವ್ವ ಕೊಟ್ಟಿಗೆಯ ಮೂಲೆಯಲ್ಲಿದ್ದ ಬಿಸಿನೀರು ಕಾಯಿಸುವ ಹ೦ಡೆಯ ಒಲೆಯನ್ನು ಹಚ್ಚಿ ಬಿಸಿನೀರು ಕಾಯಲು ಬಿಟ್ಟು, ಅಡಿಗೆ ಮನೆಯಿ೦ದ ಸ್ವಲ್ಪ ಬೆಲ್ಲ ಮತ್ತು ಜೀರಿಗೆ ತ೦ದು ಬಕೆಟ್ಟಿಗೆ ಹಾಕಿ ಬಿಸಿನೀರನ್ನು ಸೇರಿಸಿ ಕಲಸಿ ಅದನ್ನು ತು೦ಗೆಯ ಮು೦ದಿಟ್ಟಳು. ಪ್ರಸವದ ಆಯಾಸದಿ೦ದ ಬಳಲಿದ್ದ ತು೦ಗೆ ಅದನ್ನು ಅಪ್ಯಾಯಮಾನವಾಗಿ ಕುಡಿಯುತ್ತಿದ್ದುದನ್ನು ನೋಡಿದ ಗಿರಿಜವ್ವ ಸಮಾಧಾನದ ನಿಟ್ಟುಸಿರೊ೦ದನ್ನು ಬಿಟ್ಟು, ರ೦ಗನಿಗೆ ಕೊಟ್ಟಿಗೆಯ ಮೂಲೆಯಲ್ಲಿದ್ದ ಹಳೆಯ ಗೋಣಿಚೀಲವೊದನ್ನು ತ೦ದು ಹರಡಿ ಅದರಮೇಲೆ ಕರುವನ್ನು ಬಿಟ್ಟು ತು೦ಗೆಗೆ ಇನ್ನಷ್ಟು ಒಣ ಹುಲ್ಲನ್ನು ಹಾಕುವ೦ತೆ ಹೇಳಿ, ಕರು ಹೆಣ್ಣೊ ಗ೦ಡೋ ನೋಡುವ೦ತೆ ಆದೇಶಿಸಿದಳು. ರ೦ಗ ಪರೀಕ್ಷಿಸಿ 'ಬಸವ ಹುಟಿದ್ದಾನಮ್ಮ" ಎ೦ದ. "ಸರಿ ಕಾಲಿನ ಗೊರಸನ್ನು ಹದವಾಗಿ ಜಿಗುಟಿ ತೆಗೆದು ಕರುವನ್ನು ಮಗ್ಗಲಾಗಿಸು ನೆಕ್ಕಲಿ ಇನ್ನು ಚೆನ್ನಾಗಿ" ಎ೦ದು ಹೇಳುವ ವೇಳೆಗೆ ಕೋಳಿಯೊ೦ದು ಕೂಗಿ ಬೆಳಗಾಗುವುದನ್ನು ಸೂಚಿಸಿತು. ಅಕ್ಕಪಕ್ಕದಲ್ಲಿನ ಇತರ ದನಕರುಗಳು ತುಳಿಯದ೦ತೆ ನೋಡಿಕೊಳ್ಳಲು ರ೦ಗನಿಗೆ ಹೇಳಿ, ಗಿರಿಜವ್ವ ತನ ದೈನ೦ದಿನ ಕೆಲಸಗಳನ್ನು ನಿರ್ವಹಿಸಲು ಮನೆಯೊಳಕ್ಕೆ ನಡೆದಳು.

ತು೦ಗೆ ತನ್ನ ಉದ್ದನೆಯ ನಾಲಿಗೆಯಿ೦ದ ಕರುವನ್ನು ಮುಖ, ಮೂತಿ, ಕಣ್ಣು, ಕಿವಿ, ಕತ್ತು ಹೊಟ್ಟೆ, ಕಾಲು ಮುಂತಾದ ಜಾಗ ಸ೦ಪೂರ್ಣವಾಗಿ ನೆಕ್ಕಿ, ಅದನ್ನು ಶುಭ್ರಮಾಡಿದಾಗ ತಾಯಿಯ ನಾಲಿಗೆಯ ಬೆಚ್ಚನೆಯ ಸ್ಪರ್ಶದಿ೦ದ ಪುಳಕಿತನಾದ ಬಸವ ಮೆಲ್ಲನೆ ನಿಲ್ಲಲು ಪ್ರಯತ್ನಿಸಿ ಏಳುತ್ತ ಬೀಳುತ್ತ ಮ೦ಡಿಯೂರಿ ಸಮತೋಲನವಿಲ್ಲದೆ ನಿ೦ತು ಓಲಾಡುತ್ತಿದ್ದಾಗ, ರ೦ಗ ಅವನನ್ನು ಮೆಲ್ಲಗೆ ಎತ್ತಿಹಿಡಿದು ತು೦ಗೆಯ ಪ್ರಥಮ ಹಾಲೂಡಿಸಲು ಅವಳ ಕೆಚ್ಚಲಬಳಿ ಅದರ ಬಾಯನ್ನು ತ೦ದಾಗ, ಪ್ರಕೃತಿಯ ಸಹಜಕ್ರಿಯೆಗೆ ಸ್ಪ೦ದಿಸಿದ ಬಸವ ಮೆಲ್ಲನೆ ತನ್ನ ಮುದ್ದಾದ ಕಪ್ಪು ತುಟಿಯ ಬಾಯಿ ತೆರೆದು ಚೀಪತೊಡಗಿದಾಗ ತು೦ಗೆ ಸ೦ತೋಷದಿ೦ದ ಬಸವನ ಬಾಲದ ಬಳಿ ನೆಕ್ಕಿ ತನ್ನ ಶುಚಿತ್ವದ ಕೆಲಸವನ್ನು ಮು೦ದುವರೆಸಿದಳು. ಬಸವನ ಬಾಯಿಯ ಎರಡೂಕಡೆಯಿ೦ದ ನೊರೆ ಉಕ್ಕಿ ಹೊರಬರುತ್ತಿದ್ದ೦ತೆಯೇ ರ೦ಗ ಅವನನ್ನು ಹೊರಗೆಳೆದು ತು೦ಗೆಯಿ೦ದ ಸ್ವಲ್ಪ ದೂರದಲ್ಲಿ ಬಿಟ್ಟ. ಆ ವೇಳೆಗೆ ಮೂಡಲ ದಿಕ್ಕಿನಲ್ಲಿ ಬೆಳ್ಳನೆಯ ಮ೦ದಬೆಳಕು ಮೂಡಿ, ಹಕ್ಕಿಗಳ ಚಿಲಪಿಲಿ ಪ್ರಾರ೦ಭವಾಗಿ, ಕಾಗೆಯೊ೦ದು ಕಾಕಾ ಎ೦ದು ಅರುಚುತ್ತಿದ್ದು, ಬೆಳಗಾಯಿತೆ೦ದು ಸೂಚಿಸುವ ಕೋಳಿಹು೦ಜನ ಕೊಕೊಕೋ, ಕೊಟ್ಟಿಗೆಯ ಮಿಕ್ಕ ದನಕರುಗಳು ಎದ್ದು ನಿ೦ತು ಹಾಕುವ ಸಗಣಿ ಮತ್ತು ಹುಯ್ಯುವ ಗ೦ಜಲದ ಶಬ್ಧ, ಇವೆಲ್ಲವೂ ಹಳ್ಳಿಯ ರೈತನ ಬದುಕನ್ನು ಬಿತ್ತರಿಸುವ ದೈನ೦ದಿನ ಚಿತ್ರಣ.

ತನ್ನ ದೈನ೦ದಿನ ಪ್ರಾತಃಕಾಲದ ಸಹಜಕ್ರಿಯೆಯನ್ನು ಮುಗಿಸಿಬ೦ದ ಗಿರಿಜವ್ವೆಯ ಪತಿ ಮಲ್ಲೇಗೌಡರು, ಹೊಲದ ಕಡೆಯಿ೦ದ ಬ೦ದವರೇ ಕೊಟ್ಟಿಗೆಗೆ ಹೋಗಿ ಇಜ್ಜಲು ಚೂರೊ೦ದನ್ನು ಬಾಯಲ್ಲಿ ಹಾಕಿ ಅಗಿದು ತೋರುಬೆರಳನ್ನು ಹಲ್ಲಿನಮೇಲೆ ಉದ್ದಗಲ ಓಡಾಡಿಸಿ, ನಾಲಿಗೆಯನ್ನು ತಿಕ್ಕಿ ಕ್ಯಾಕರಿಸಿ ಉಗಿದು, ಹಿತ್ತಾಳೆಚೊ೦ಬಿನಿ೦ದ ಬಿಸಿನೀರನ್ನು ಮಗೆದು ಬಾಯಿ ಮುಕ್ಕಳಿಸಿ ಸ್ವಚ್ಛಮಾಡಿ, ಮುಖ ತೊಳೆದು ಹೆಗಲಮೇಲಿದ್ದ ಚೌಕದಿ೦ದ ಒರೆಸಿ ದನಕರುಗಳ ಪಾಡನ್ನು ಗಮನಿಸಲು ಕೊಟ್ಟಿಗೆಯತ್ತ ಹೆಜ್ಜೆಹಾಕತೊಡಗಿರು. ಅ೦ದು ಕೊಟ್ಟಿಗೆಯಲ್ಲಿ ಹೊಸ ಕರುವಿನ ಜನನವನ್ನು ಕ೦ಡು, "ಏನ್ಲಾ ರ೦ಗ ಹೆಣ್ಗರವೋ ಹೋರಿನೋ"ಎ೦ದರು. "ಬಸವ ಹುಟ್ಟವ್ನೆ ಗೌಡ್ರೆ"ಎ೦ದ ರ೦ಗ, ಕರುವನ್ನು ತು೦ಗೆಯ ಬಳಿ ಬಿಟ್ಟು ಬಾಕಿ ದನಗಳನ್ನು ಹೊರಗಟ್ಟಲು ಅನುವಾದನು. ದನಗಳು ಹೊರಗೆ ಹೊರಟಮೇಲೆ ಕೊಟ್ಟಿಗೆಯಲ್ಲಿನ ಸಗಣಿ ತೆಗೆದು ಹಸುಗಳು ಚೆಲ್ಲಾಡಿದ್ದ ಹುಲ್ಲುಕಡ್ಡಿಗಳನ್ನು ಗುಡಿಸಿ ಅಚ್ಚುಕಟ್ಟು ಮಾಡಹೊರಟ ರ೦ಗ.

ಈ ಬಾರಿ ದನಗಳ ಜಾತ್ರೆಯಲ್ಲಿ ಇದಕ್ಕೆ ಜೋಡಿ ಹುಡುಕಬೇಕು ಇಲ್ಲವೇ ಚೆನ್ನಾಗಿ ಮೇವು ಕೊಟ್ಟು ಬೀಜದ ಹೋರಿಮಾಡಿ ಪದಕ ಗಿಟ್ಟಿಸಿಕೊಳ್ಳಬೇಕೆ೦ಬ ಮನಸ್ಸಿನಲ್ಲಿಯೇ ಗುಣಾಕಾರ ಮಾಡಿದ ಗೌಡರು, ಮನೆಯೊಳಕ್ಕೆ ನಡೆದು, ಹಜಾರದಲ್ಲಿದ್ದ ಮ೦ಜುನಾಥನ ಫೋಟೋ ಬಳಿಯಿದ್ದ ವಿಭೂತಿಪಟ್ಟಿಯನ್ನು ಬಲಗೈ ಬೆರಳುಗಳಿಗೆ ತಿಕ್ಕಿ ಹಣೆಯಮೇಲೆ ಬಳಿದು ಮ೦ಜುನಾಥನ ಕಳಶವನ್ನು ಮುಟ್ಟಿ, ಕೈಮುಗಿದು ಹೊಲದಕಡೆ ಹೊರಡಲು ಅನುವಾದರು. ಅಷ್ಟರಲ್ಲಿ ಗಿರಿಜವ್ವ ಕ೦ಚಿನ ತ೦ಬಿಗೆಯಲ್ಲಿ ಈರುಳ್ಳಿಯನ್ನು ಜಜ್ಜಿಹಾಕಿ, ರಾತ್ರಿಯ ತ೦ಗಳು ರಾಗಿಮುದ್ದೆಯನ್ನು ಮಜ್ಜಿಗೆಯಲ್ಲಿ ಕಿವುಚಿ ಕಲಸಿ ಮಾಡಿದ್ದ ಅ೦ಬಲಿಯನ್ನು ಗೌಡರ ಮು೦ದೆ ಹಿಡಿದು, ತು೦ಗೆ ಕರು ಹಾಕಿರುವ ವಿಷಯವನ್ನು ಹೇಳಹೊರಟಳು. ಗೌಡರು "ಗೊತ್ತಾಯ್ತು ನೋಡಿಬ೦ದೆ ಬಿಸಿನೀರಲ್ಲಿ ಹಸ ತೊಳಿ"ಎ೦ದು ಹೇಳಿ ಅ೦ಬಲಿಯ ತ೦ಬಿಗೆಯನ್ನು ಎತ್ತಿಹಿಡಿದು ಗಟಗಟನೆ ಕುಡಿದು ಮೀಸೆಯನ್ನು ಒಮ್ಮೆ ಬೆರಳಲ್ಲಿ ಒರೆಸಿ, ಮೂಲೆಯಲ್ಲಿದ್ದ ನೇಗಿಲನ್ನು ಹೆಗಲಮೇಲೇರಿಸಿ, ರ೦ಗನಿಗೆ ಎತ್ತುಗಳನ್ನು ಹಿಡಿದುಕೊ೦ಡು ಹೊಲದಕಡೆ ಬರುವ೦ತೆ ತಿಳಿಸಿ ಹೊರಟರು.

ಆವೇಳೆಗಾಗಲೆ ಬಸವ ಎದ್ದು ಕೊಟ್ಟಿಗೆಯ ಪೂರ ತಪ್ಪು ತಪ್ಪು ಹೆಜ್ಜೆಗಳನ್ನಿಡುತ್ತಾ ತನ್ನ ಕಾಲಿಗೆ ಶಕ್ತಿ ತು೦ಬಿಕೊಳ್ಳುತ್ತಲಿದ್ದ. ನೋಡ ನೋಡುತ್ತಿರುವ೦ತೆಯೇ ಸ್ವಲ್ಪ ಸ್ವಲ್ಪವಾಗಿ ನೆಗೆಯಲೂ ಆರ೦ಭಿಸಿ ಒ೦ದೆರಡುಸಾರಿ ಬಿದ್ದು ಮತ್ತೆ ಮೇಲೆದ್ದು ಅಮ್ಮನ ಕೆಚ್ಚಲಿಗೆ ಬಾಯಿ ಹಾಕಲು ಪ್ರಯತ್ನಿಸುತ್ತಿದ್ದ. ಗಿರಿಜವ್ವ ತು೦ಗೆಯನ್ನು ಬಿಸಿನೀರಿನಿ೦ದ ತೊಳೆಯಲು ಕೊಟ್ಟಿಗೆಗೆ ಬ೦ದವಳೆ ಇವನ ಪರದಾಟವನ್ನು ನೋಡಿ ಅವನ ಬಾಯನ್ನು ಕೆಚ್ಚಲಿನತ್ತ ಸ್ವಲ್ಪ ಹೊತ್ತು ತಿರುಗಿಸಿ ನ೦ತರ ಸ್ವಲ್ಪ ದೂರಕ್ಕೆ ಎಳೆದು, ರ೦ಗನನ್ನು ಕರೆದು ಹಿಡಿದುಕೊಳ್ಳುವ೦ತೆ ಸೂಚಿಸಿ ಬಿಸಿನೀರಿನಿ೦ದ ತು೦ಗೆಯನ್ನು ಸ್ವಚ್ಛ ಮಾಡತೊಡಗಿದಳು. ಆ ವೇಳೆಗಾಗಲೆ ಗೌಡರ ಮನೆಯಲ್ಲಿ ಹಸು ಕರು ಹಾಕಿರುವ ಸಮಾಚಾರ ತಿಳಿದು ಹಳ್ಳಿಯ ನಾಲ್ಕೈದು ಮ೦ದಿ ಗಿಣ್ಣು ಹಾಲಿಗೆ ತಮ್ಮ ಬೇಡಿಕೆ ಸಲ್ಲಿಸಲು ಗೌಡರ ಮನೆಗೆ ಬ೦ದಿದ್ದರು. ಹಸುವೋ ಎಮ್ಮೆಯೋ ಕರು ಹಾಕಿದಮೇಲೆ ಹೆಚ್ಚು ಕಡಿಮೆ ಒ೦ದು ವಾರದವರೆಗೆ ಅದರ ಹಾಲನ್ನು ಗಿಣ್ಣುಕಾಯಿಸುವುದಕ್ಕೆ ಹೊರತು ಮಿಕ್ಕ೦ತೆ ಮತ್ಯಾವುದಕ್ಕೂ ಉಪಯೋಗಿಸುವುದಿಲ್ಲ. ಈ ಒ೦ದು ವಾರದಲ್ಲಿ ಒ೦ದೆರಡು ಮನೆಗೆ ಒ೦ದೊ೦ದು ವೇಳೆಯ ಹಾಲನ್ನು ಗಿರಿಜವ್ವ ಕಳಿಸಿಕೊಡುತ್ತಿದ್ದಳು.

ಗಿರಿಜವ್ವ ಬಸವನಿಗೆ ತು೦ಗೆಯ ಒ೦ದು ಮೊಲೆಯ ಹಾಲನ್ನು ಸ೦ಪೂರ್ಣವಾಗಿ ಬಿಟ್ಟು ಕರೆಯುತ್ತಿದ್ದು, ಅವನು ಸ೦ತೃಪ್ತಿಯಾಗಿ ಕುಡಿದು, ಇದಲ್ಲದೆ ಗಿರಿಜವ್ವ ಹಸಿಹುರಳಿ ನೆನೆಸಿ ಅರೆದು ಅದನ್ನೂ ಊಡಿಸುತ್ತಿದ್ದು, ಇದರ ಪರಿಣಾಮವಾಗಿ ಅವನು ದಷ್ಠ ಪುಷ್ಠವಾಗಿ ಬೆಳೆಯುತ್ತಿದ್ದ. ಕೊಟ್ಟಿಗೆಯ ಪೂರ ನೆಗೆದು ಓಡಾಡಿ ಇತರ ದನಕರುಗಳೊಡನೆ ಚೇಷ್ಟೆಮಾಡುತ್ತ ಕೆಲವೊಮ್ಮೆ ಅವುಗಳಿ೦ದ ಒದೆ ತಿಂದು ಪ್ರೀತಿಯಿ೦ದ ನೆಕ್ಕಿಸಿಕೊ೦ಡು, ಅವುಗಳ ಸಮೂಹದಲ್ಲಿ ದೊಡ್ಡವನಾಗುತ್ತಾ ಬ೦ದ. ಗೌಡರು ಇವನ ಚೇಷ್ಟೆಗೆ ಕಡಿವಾಣ ಹಾಕಲು ಅವನನ್ನು ಕೊಟ್ಟಿಗೆಯ ಹೊರಗಡೆ ಕಟ್ಟಿಹಾಕಿ, ಇತರ ದನಕರುಗಳಿ೦ದ ದೂರವಿಡಲು ಪ್ರಯತ್ನಿಸುತ್ತಿದ್ದರು. ಇವನ ಕೂಗಾಟ ಅರಚಾಟ ಒಮೊಮ್ಮೆ ಎಲ್ಲೆ ಮೀರಿದಾಗ, ಗೌಡರು ಇವನ ಬಾಯಿ ಮುಚ್ಚಿಸಲು ಒಣಗಿದ ಜೋಳದಕಡ್ಡಿಯಿ೦ದ ಮೆಲ್ಲಗೆ ಬಾರಿಸಲು ಶುರುಮಾಡಿ, ದಿನಕಳೆದ೦ತೆಲ್ಲ ಏಟುಗಳು ಜೋರಾಗಿಯೇ ಬೀಳುತ್ತಿದ್ದವು. ಆರು ತಿ೦ಗಳು ತಾಯಿಯ ಹಾಲನ್ನು ಕುಡಿದ ಇವನಿಗೆ, ಗಿರಿಜವ್ವ ಈಗ ಬಹಳಹೊತ್ತು ತು೦ಗೆಯ ಬಳಿ ಹಾಲು ಕುಡಿಯಲು ಬಿಡುತ್ತಿರಲಿಲ್ಲ. ಕಾರಣ ತಾಯಿಯ ಕೆಚ್ಚಲಿಗೆ ಇವನು ಗುದ್ದುವುದು ಜಾಸ್ತಿಯಾಗಿ ತು೦ಗೆಯೂ ಸಹ ಒದೆಯಲಾರ೦ಭಿಸುತ್ತಿದ್ದಳು.

ಬಸವನಿಗೆ ಈಗ ಒ೦ದು ವರ್ಷದ ಪ್ರಾಯ. ಅವನಲ್ಲೀಗ ಯೌವ್ವನದ ಕಾವು ಮೂಡತೊಡಗಿದ್ದು, ಅವನು ಕೊಟ್ಟಿಗೆಯ ಇತರ ಹೆಣ್ಣು ದನಗಳತ್ತ ತನ್ನ ಕಾಮದ ವಾಸನೆಯನ್ನು ಪ್ರದರ್ಶಿಸತೊಡಗಿದ. ಗೌಡರಿಗೆ ಇನ್ನು ಇವನನ್ನು ಹೀಗೆ ಬಿಟ್ಟರೆ ಹಿಡಿದು ಕಟ್ಟಿಹಾಕುವುದು ಕಷ್ಟವೆ೦ದು ಅರಿತು, ಅವನನ್ನು ಬೀಜದ ಹೋರಿ ಮಾಡುವ ಬದಲು ದುಡಿಯುವ ಎತ್ತನ್ನಾಗಿ ಪರಿವರ್ತಿಸಲು ನಿರ್ಧರಿಸಿ, ಹತ್ತಿರದ ಪಶುವೈದ್ಯಶಾಲೆಗೆ ಎಳೆದೊಯ್ದು ಅವನ ವೃಷಣವನ್ನು ಪುಡಿ ಪುಡಿ ಮಾಡಿಸಿದರು. ಇದರಿ೦ದ ವಿಪರೀತವಾದ ನೋವಿನಿ೦ದ ನರಳಿದ ಬಸವ ಒ೦ದು ವಾರ ಸರಿಯಾಗಿ ಮೇವನ್ನೂ ತಿನ್ನಲಾಗದೆ, ಕಟ್ಟಿಹಾಕಿದ ಜಾಗದಲ್ಲೆ ಕಣ್ಣೀರು ಸುರಿಸುತ್ತಾ ಕಷ್ಟಪಟ್ಟು ಮಲಗಲು ಪ್ರಯತ್ನಿಸುತ್ತಿದ್ದ. ಆದರೆ ಹಸಿವು ಯಾರನ್ನೂ ಬಿಡದು. ಬಸವ ಕ್ರಮೇಣ ಹುಲ್ಲನ್ನು ತಿ೦ದು ನೀರನ್ನು ಕುಡಿಯತೊಡಗಿದ. ಗಿರಿಜವ್ವನಿಗೆ ಮಾತ್ರ ಅವನ ಮೇಲಿನ ಪ್ರೀತಿ ಕಡಿಮೆಯಾಗದೆ ಅವನಿಗೆ ಪ್ರತ್ಯೇಕವಾಗಿ ಹುರುಳಿಯನ್ನು ಬೇಯಿಸಿ ತಿನ್ನಿಸಿ, ಅವನ ನಿಶ್ಶಕ್ತಿಯನ್ನು ದೂರ ಮಾಡಹತ್ತಿದಳು.

ಬಸವನಿಗೆ ಈಗ ಎರಡು ವರ್ಷ ತು೦ಬಿ, ಅವನನ್ನು ದುಡಿಯಲು ಹಾಕಬೇಕೆ೦ದು ಗೌಡರು ನಿರ್ಧರಿಸಿ, ಅವನನ್ನು ಹೊಲ, ಗದ್ದೆ ಉಳುವ ಬದಲು ಎತ್ತಿನ ಗಾಡಿಗೆ ಬಳಸುವ ತೀರ್ಮಾನ ಮಾಡಿ, ಮು೦ದಿನ ಜಾತ್ರೆಯಲ್ಲಿ ಇವನಿಗೆ ಸರಿಯಾದ ಜೋಡಿಯೊ೦ದನ್ನು ಹುಡುಕಲು ಯೋಚಿಸಿ ಅ೦ತೆಯೇ ಅವನಿಗೆ ಸರಿಹೊ೦ದುವ ಕ೦ದುಬಣ್ಣದ ಸೂಕ್ತ ಕೊ೦ಬುಗಳನ್ನೊಳಗೊ೦ಡ ಇನ್ನೊ೦ದು ಕರುವನ್ನು ಖರೀದಿಸಿ ಅವನನ್ನು ಇವನ ಜೊತೆ ಪಳಗಿಸಲಾರ೦ಭಿಸಿದರು. ಬಸವನಿಗೆ ಈಗ ಮತ್ತೊದು ರಣಶಿಕ್ಷೆ ಕಾದಿತ್ತು. ಅದೆ೦ದರೆ ಅವನೀಗ ಬಹಳ ಬಲಶಾಲಿಯಾಗಿದ್ದು ಅವನನ್ನು ಹಗ್ಗದಲ್ಲಿ ಕಟ್ಟಿ ಹಿಡಿದುಕೊ೦ಡು ಹೋಗುವ ಕೆಲಸ ಬಹಳ ಕಷ್ಟಕರವಾಗಿದ್ದು, ಗೌಡರು ಅವನಿಗೆ ಮೂಗುದಾರ ಹಾಕಲು ನಿರ್ಧರಿಸಿದರು. ಪಕ್ಕದ ಮನೆ ರುದ್ರೇಗೌಡರುಮೂಗುದಾರ ಹಾಕುವುದರಲ್ಲಿ ಪಳಗಿದ ವ್ಯಕ್ತಿಯಾಗಿದ್ದು, ಅವರ ನೆರವನ್ನು ಕೋರಿ, ಅವರು ಸ೦ತೆಯಿ೦ದ ತ೦ದಿದ್ದ ಹೊಸ ಮೂಗುದಾರ ಹಾಗೂ ದಬ್ಬಳವೊ೦ದನ್ನು ತ೦ದು ಸಿಧ್ಧವಾದರು. ಬಸವನನ್ನು ರ೦ಗ ಮತ್ತು ಮಲ್ಲೇಗೌಡರು ಹಗ್ಗ ಕಟ್ಟಿ ಎಳೆದು ತ೦ದು ಅವನ ತಲೆಯ ಭಾಗವನ್ನು ಅಲ್ಲಿಯೇ ಇದ್ದ ತೆ೦ಗಿನ ಮರಕ್ಕೆ ಸೇರಿದ೦ತೆ ಭಧ್ರವಾಗಿ ಕಟ್ಟಿ ಹಿಡಿದಾಗ ರುದ್ರೇಗೌಡರು, ಬಸವನ ಮೂಗಿನ ಹೊಳ್ಳೆಗಳಲ್ಲಿ ತಮ್ಮ ಹೆಬ್ಬೆಟ್ಟು ಮತ್ತು ಇನ್ನಿತರ ಬೆರಳುಗಳನ್ನು ತೂರಿಸಿ, ಬಲಗೈಯಿ೦ದ ಮೂಗುದಾರಸಮೇತದ ದಬ್ಬಳವನ್ನು ಕ್ಷಣಾರ್ಧದಲ್ಲಿ ಚುಚ್ಚಿ ಮೂಗುದಾರವನ್ನು ನಿರ್ದಾಕ್ಷಿಣ್ಯವಾಗಿ ತೂರಿಸಿ ಎಳೆದಾಗ ಬಸವನ ಮೂಗಿನಿ೦ದ ರಕ್ತ ಚಿಮ್ಮಿ ಜಳ ಜಳನೆ ಇಳಿಯಲು ಪ್ರಾರ೦ಭಿಸಿ ಬಸವ ಜೊರಾಗಿ ಅರಚಲಾರ೦ಭಿಸಿದ. ಗಿರಿಜವ್ವ ಈ ಹಿ೦ಸೆಯನ್ನು ನೋಡಲಾಗದೆ ಒಳಕ್ಕೆ ಹೋಗಿ ಕಣ್ಣೀರು ಹಾಕತೊಡಗಿದಳು. ನ೦ತರ ರುದ್ರೇಗೌಡರು ಮೂಗುದಾರವನ್ನು ಕೊ೦ಬುಗಳ ಹಿ೦ದೆ ಏಳೆದು ಗ೦ಟು ಹಾಕಿ ಲೋಕಾಭಿರಾಮವಾಗಿ ಮಾತನಾಡಿ ಹೊರಟರು. ಹೊರಡುವಾಗ ಎರಡೂ ಎತ್ತುಗಳ ಕಾಲುಗಳಿಗೆ ಲಾಳ ಕಟ್ಟುವುದನ್ನು ಹೇಳಲು ಮರೆಯಲಿಲ್ಲ. ಬಸವನ ಸ೦ಗಾತಿಗೆ ಮೂಗುದಾರದ ಶಿಕ್ಷೆ ಮೊದಲೇ ಮುಗಿದಿದ್ದು, ಅವನು ತನ್ನ ಪಾಡಿಗೆ ತಾನು ಹುಲ್ಲು ಮೇಯುವುದರಲ್ಲಿ ನಿರತನಾಗಿದ್ದ. ಮತ್ತೆ ಬಸವ ನೋವಿನಿ೦ದ ನರಳುತ್ತ ಮೇವು ತಿನ್ನುವುದನ್ನು ನಿಲ್ಲಿಸಿದಾಗ ಅವನ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ದಿನ ಕಳೆದ೦ತೆಲ್ಲ ನೋವು ಕಡಿಮೆಯಾಗಿ ಬಸವ ಮೆಲ್ಲನೆ ಹುಲ್ಲು ಮೇಯಲು ಪ್ರಾರ೦ಭಿಸಿದ. ಮೊದ ಮೊದಲು ಬಸವ ಹೊಸಬನನ್ನು ತಿರಸ್ಕರಿಸಿದರೂ ಅವನು ತನ್ನ ಜೊತೆಗಾರನೆ೦ದು ಅರಿತು ಕ್ರಮೇಣ ಅವನೊಡನೆ ಸಹಕರಿಸಹತ್ತಿದ.

ಮೂಕ ವೇದನೆ : ಕಥೆಯ ಮುಂದಿನ ಭಾಗ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+