ಬೆಂಕಿ ಬಸಣ್ಣನವರ ಎರಡು ಚುಟುಕು ಕವಿತೆ
ಕಾರಣವೇನು?
ಶೌಚಾಲಯದ ಮುಂದಿನ
ಹನುಮಂತನ ಬಾಲದಂತಹ
ಉದ್ದನೇ ಸಾಲಿಗೆ
ಕಾರಣವೇನೆಂದರೆ,
ಒಳಗಿರುವ ವ್ಯಕ್ತಿಗೆ
ಖಂಡಿತಾ ಇದೆ ರೋಗ,
ಒಂದು
ಮೂಲ-ವ್ಯಾಧಿ
ಇಲ್ಲಾ, ಇನ್ನೊಂದು
ಮೊಬೈಲ್- ವ್ಯಾಧಿ!
***

ಇರುವೆ
ಇರುವೆ
-ಯಾಗಿ
ಆದರೂ
ಬಂದು
ಸೇರುವೆ
ಹೇಳು
ನಲ್ಲೆ,
ನೀನು
ಎಲ್ಲಿ
ಇರುವೆ












Click it and Unblock the Notifications