ಹೀಗಾಗಿ ಬಿಟ್ಟಳು...!

ಪ್ರತಿ ಎಲೆಗೊಂದೊಂದು ರೂಪ ನೆರಳು
ಬುಡ ತುಂಬಾ ಬೇರು
ಮೇಲೆ ಹುಳುಕು ಮುಚ್ಚಲು ಕಟ್ಟೆ
ಅಶ್ವತ್ಥದ ಕಟ್ಟೆಗೆ
ಪ್ರದಕ್ಷಿಣೆ ಮಾಡಿ
ನಮಸ್ಕಾರ ಮಾಡುತಿದ್ದ
ಅವಳು ಬಸಿರಾಗಿದ್ದಳು
ಸೂರ್ಯನತ್ತಲೆ ಮುಖ ಮಾಡಿ
ದೃಷ್ಟಿ ಬದಲಾಯಿಸಿ ಇವಳತ್ತ ನೋಡಿ
ನದಿಯಲ್ಲಿ ಮುಳುಗೇಳುತಿದ್ದ
ಪಡ್ಡೆ ಹುಡುಗರು ದಂಗಾಗಿದ್ದರು
ಸುದ್ದಿ ತಿಳಿದಾಗೆಲ್ಲ ಒಬ್ಬರ ಮೇಲೊಬ್ಬ
ಯುವಕರ ನಡುವೆ ಸಂಶಯ
ಅಪರಿಚಿತ ಹಿರಿಯರೆಂದರು
ಒಳ್ಳೆ ಹುಡುಗಿ ಹೀಗಾಗಿಬಿಟ್ಟಳು
ದೇಗುಲದ ಅರ್ಚಕರು, ಬಾಣಸಿಗರು
ಬಾವಿಕಟ್ಟೆ ಮೇಲೆ ಶುದ್ಧಿಕರಣಕೆ
ಜಲ ಎತ್ತುವಾಗ ತಮ್ಮ ಹುಳುಕು ಮುಚ್ಚಲು
ಕಚ್ಚೆ ಎತ್ತಿ ಕಟ್ಟಿ ಮತ್ತೆ ಅವಳದೆ ಚರ್ಚೆ
ಸಹಿಸಲಾರದ ಮಲ್ಲಿಗೆ ಅಂಗಡಿ ಮುದುಕಿ
ರಥ ಬೀದಿಯಲಿ ಕೇಳಿಯೇಬಿಟ್ಟಳು
ಹುಡುಗಿ ಅಂದಳು "ದಂಡಿಗೆ ಹೋದ ಗಂಡ
ಕಾಶ್ಮೀರದಿಂದ ಬರುತ್ತಾನೆ ವಾರದ ಒಳಗೆ"












Click it and Unblock the Notifications