ತಾಯಿಗೆ ನಮನ

Malati Avadhani (71)
ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿರುವ ಕಾವೇರಿ ಕನ್ನಡ ಸಂಘದ ಆಜೀವ ಸದಸ್ಯರಾಗಿರುವ ಅನಿತಾ ಕುಲಕರ್ಣಿಯವರು ನವೆಂಬರ್ 12ರಂದು ಬೆಂಗಳೂರಿನಲ್ಲಿ ಅಗಲಿದ ತಮ್ಮ ತಾಯಿ ಮಾಲತಿ ಅವಧಾನಿ(71)ಯವರಿಗೆ ಪದ್ಯ ರೂಪದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಾಲತಿಯವರು ಪತಿ, 4 ಮಕ್ಕಳು ಮತ್ತು 7 ಮೊಮ್ಮಕ್ಕಳನ್ನು ಅಗಲಿದ್ದಾರೆ.

* ಅನಿತಾ ಕುಲಕರ್ಣಿ; ಮೇರಿಲ್ಯಾಂಡ್

ಮುತಾಲಿಕರ ಐಶ್ವರ್ಯವಂತರ ಮನೆಯಲ್ಲಿ ಹುಟ್ಟಿ
ನಾಡಗೌಡರ ಮನೆಯ ಮಗಳಾಗಿ ಬೆಳೆದು
ಅವಧಾನಿ ಮನೆತನವನ್ನು ಸೊಸೆಯಾಗಿ ಬೆಳಗಿದ
ನನ್ನ ತಾಯಿ ನಿನಗೆ ನನ್ನ ನಮನ

ಸಿಂಧೂ ನದಿಯಾಗಿ ಬಿಜಾಪುರದಿಂದ ಹರಿದು ಬಂದು
ಮಾಲತಿಯಾಗಿ ಬೆಳಗಾವಿ ಮೋಹನದಾಸರ ಮನದಲ್ಲಿ ನಿಂದು
ಶ್ರೀರಂಗನಾಥನ ಸನ್ನಿಧಿಯಲ್ಲಿ ಕಾವೇರಿ ನದಿಯನ್ನು ಸೇರಿದ
ಸಿಂಧೂ ತಾಯಿ ನಿನಗೆ ನನ್ನ ನಮನ

ಮೂರು 'ತಾ'ರೆ ಗಳ ಪ್ರೀತಿಯ ಅಮ್ಮನಾಗಿ
ಅವಧಾನಿ ಮನೆತನಕ್ಕೆ ಕುಲದೀಪಕನ ಕೊಟ್ಟು
ಏಳು ಮೊಮ್ಮಕ್ಕಳಿಗೆ ಅಕ್ಕರೆಯ ಅಜ್ಜಿಯಾಗಿ
ಮೆರೆದ ಮಾಲತಿ ಬಾಯಿ ನಿನಗೆ ನನ್ನ ನಮನ

ರಾಘವೇಂದ್ರ ಸ್ವಾಮಿಗಳ ಆರಾಧ್ಯ ಭಕ್ತಳಾಗಿ
ಹೆಣ್ಣು ಮೊಮ್ಮಕ್ಕಳನ್ನು ಪಡೆದು ನಿರಾಶಳಾಗಿ
ಕೊನೆಗೂ ಗಂಡು ಮೊಮ್ಮಗನನ್ನು ಪಡೆದ
ಚಾಣಕ್ಯನ ಛಲಗಾತಿ ನಿನಗೆ ನನ್ನ ನಮನ

ವೈಕುಂಠ ಚತುರ್ದಶಿಯಂದು ಈ ಜಗತ್ತನ್ನಗಲಿ
ಮಾಡಿದೆ ನೀನು ನಮ್ಮನ್ನೆಲ್ಲ ತಬ್ಬಲಿ
ನಿನ್ನ ನೆನಪು ನಮ್ಮ ಮನದಲ್ಲಿ ಸದಾ ಬೆಳಗುತ್ತಿರುವ ಜ್ಯೋತಿ
ಆ ನರಸಿಂಹ ಸ್ವಾಮಿ ಕೊಡಲಿ ನಿನ್ನ ಆತ್ಮಕ್ಕೆ ಶಾಂತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+