ಕನ್ನಡ ಮಾತೆ ಹೇ ಭುವನೇಶ್ವರಿ

Nagabhushana Moolki, Chicago, USAಕನ್ನಡಾಂಬೆ ಸ್ತುತಿಸುವ ಈ ಪದ್ಯ ರಚಿಸಿದ್ದು ನಾಗಭೂಷಣ ಮೂಲ್ಕಿ, ಶಿಕಾಗೊ, ಅಮೆರಿಕಾ. ಮೋಹನ ರಾಗದಲ್ಲಿರುವ ಈ ಪದ್ಯವನ್ನು ಯಾವುದೇ ಸಭೆ, ಸಮಾರಂಭದಲ್ಲಿ ರಾಗ ಸಂಯೋಜಿಸಿ ಹಾಡಬಹುದು.

ರಚನೆ -- ನಾಗಭೂಷಣ್ ಮೂಲ್ಕಿ
ರಾಗ -- ಮೋಹನ


ಕನ್ನಡ ಮಾತೆ ಹೇ ಭುವನೇಶ್ವರಿ
ಚಂದ್ರಮನೋಹರಿ ಪ್ರಿಯಕರೀ... ಪ್ರಿಯಕರೀ.. ||ಕನ್ನಡ||

ಭೂತ ಭೌತಗತ ಆಶಾಛಾಯದಿ
ತೃಷ್ಣಾಧೂಮವು ಮನದಲಿ ತುಂಬಿ
ಅನುರಾಗವಿರಲಿಲ್ಲಾ, ನಿನ್ನಲಿ ಅನುರಾಗವಿರಲಿಲ್ಲಾ
ಎನ್ನಲ್ಲಿ ವೈರಾಗ್ಯ ಬರಲಿಲ್ಲಾ. ||ಕನ್ನಡ||

ಮನದಲಿ ಅಳುಕು, ಮೈಯಲಿ ನಡುಕ
ಭಾವಾಲೋಕದ ಭಾವಶೂನ್ಯತೆ
ಕಾವ್ಯ ಬರೆಯಲಿಲ್ಲಾ, ನಿನ್ನನು ಸ್ತುತಿಸಿ ಹಾಡಲಿಲ್ಲಾ
ನಿನ್ನನು ಹಾಡಿ ಹೊಗಳಲಿಲ್ಲಾ ||ಕನ್ನಡ||

ಅಂಧಾಕಾರದ ಜ್ಯೋತಿಯಾಗಿ ಬಾ
ನೊಂದಾಜೀವಿಯ ಸಂತೈಸಲು ಬಾ
ಕರೆಯ ಕೇಳಿ ನೀ ಬಾ, ಓ ಎನ್ನ ಪ್ರೇಮಪುತ್ಥಳಿಯೆ ಬಾ
ಓ ಎನ್ನ ಪ್ರಿಯದರ್ಶಿನಿಯೆ ಬಾ ||ಕನ್ನಡ||

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+