ವಲಸೆ ಹಕ್ಕಿಯ ಹಾಡು


‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎನ್ನುವ ದಾಸರ ಮಾತಿನಂತೆ, ನಮ್ಮ ಚಡಪಡಿಕೆ ನಿರಂತರ. ಏನನ್ನೋ ಪಡೆಯಲು ಹೋಗಿ, ಎಲ್ಲವನ್ನೂ ಕಳೆದುಕೊಂಡಂತೆ ತಳಮಳ. ಆದರೆ ನಮಗೆ ರೆಕ್ಕೆಗಳಿವೆಯಲ್ಲ ಎನ್ನುವ ಸಮಾಧಾನ... ಪಯಣ ಎಲ್ಲಿಂದ ಎಲ್ಲೆಲ್ಲಿಗೋ? ಮತ್ತು ಯಾಕೋ? ಯಾರ ಜೊತೆಗೋ?

Soliloquies of a displaced birdವಲಸೆ ಬಂದ ಹಕ್ಕಿಗಳು ನಾವು
ಗೂಡು ಕಟ್ಟಿಹೆವು ಇಲ್ಲಿ, ಪರದೇಶದಲ್ಲಿ.
ಹೊಂಗನಸು, ಹುರುಪು, ಸ್ವೇಚ್ಛೆಯಲ್ಲಿ
ಬದುಕೊಂದು ಕಾವ್ಯ ಸಂಗಾತಿ ಜೊತೆಯಲ್ಲಿ.

ಅನುದಿನವು ನಿರೀಕ್ಷೆ, ಪ್ರೀತಿಗೆ ಹಾತೊರೆತ
ಆ ಹಣ್ಣೆಲೆಗಳಲ್ಲಿ, ತಾಯ್ನಾಡಿನಲ್ಲಿ.
ವಲಸೆ ಹೋದ ಹಕ್ಕಿಗಳೇ, ಮರಳಿ ಬನ್ನಿ
ಬಾಂಧವ್ಯದ ಬೆಸುಗೆಗೆ ಸೇರಬನ್ನಿ ಎಂಬ ಕರೆ.

ಉರುಳುತ್ತಿರುವ ಕಾಲಚಕ್ರದ ಜೊತೆ ಹೊಸ ಹಕ್ಕಿಗಳ ಆಗಮನ
ಸಾಕಿ ಸಲುಹುವ ಕಡೆಗೆ ಗಮನ
ಹೋಗಲಾರೆವು ಅಲ್ಲಿ ಹಣ್ಣೆಲೆಗಳ ಆಧಾರಕ್ಕೆ
ಇರಬೇಕಾಗಿದೆ ಇಲ್ಲಿ ಮರಿಹಕ್ಕಿಗಳ ಭವಿಷ್ಯಕ್ಕೆ.

ತೂಗುಯ್ಯಾಲೆ ಆಗಿದೆ ಮನ ಭಾರದಲ್ಲಿ
ಎಲ್ಲಿರಬೇಕೆಂಬುದೇ ಚಿಂತೆ ಇಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+