ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಕಷ್ಟೆ ಹೊತ್ತು ಸಾಕು ರಂಗುರಂಗಿನ ಬದುಕು..

By Staff
|
Google Oneindia Kannada News


ಲೈಫ್‌ ಈಸ್‌ ಶಾರ್ಟ್‌ ಮೇಕ್‌ ಇಟ್‌ ಸ್ವೀಟ್‌

Life is short make it sweetಎಲ್ಲಿಂದಲೊ ತಂದು
ಬಲಕ್ಕೊಂದು ಬಿದಿರ
ಕೋಲು ಕೊಟ್ಟು
ತಿಂಗಳ ಹಿಂದೆ ನೆಟ್ಟ
ಬೇರು ಆಳಕ್ಕಿಳಿದು
ಬುಡ ಭದ್ರವಾಗಿರದ
ಅಳೇತ್ತರದ ಪುಟ್ಟ
ಲಿಂಬೆ ಗಿಡದ ರೆಂಬೆ ಮೇಲೆ
ಕುಳಿತ ಗಂಡು ಗುಬ್ಬಚ್ಚಿ
ಗಾಳಿಗೆ ವಾಲುತ್ತ
ಲೆಕ್ಕ ಹಾಕುತಿತ್ತು;
ಕೆಳಗೆ ಕಾಳು ಹೆಕ್ಕುತಿದ್ದ
ಹೆಣ್ಣು ಗುಬ್ಬಿ ತಲೆ ಎತ್ತಿ
ಮೇಲೆ ನೋಡುತಿತ್ತು;
ಅಗಸ ಒಂದಿಷ್ಟು ನೀಲಿ-ಬಿಳಿ
ಭೂಮಿ ಮತ್ತಷ್ಟು ಹಸಿರು-ಕೆಂಪು
ನೀರು ಹಸಿರು-ನೀಲಿ
ಹೊಂಚು ಹಾಕುವ ಬೆಕ್ಕು
ಜಿಗಿದು ನುಂಗುವ ಮುನ್ನ
ಬೊಗಸೆಯಲ್ಲಿ ಬಚ್ಚಿಟ್ಟು
ನಕ್ಕಷ್ಟೆ ಹೊತ್ತು ಸಾಕು
ರಂಗು ರಂಗಿನ ಬದುಕು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X