ಮನ

ಮೌನದೊಳಗೆ
ಮನೆ ಮಾಡಿದೆ ಮನವು
ಎದೆಯ ಕದವ ತಟ್ಟಿ,
ಕರೆದರೂ.. ಓ ಗೊಡದೆ ಅಡಗಿದೆ
ಎಲ್ಲೂ ಕೊಡದೆ ಸುಳಿವು
ಕವಿದಿದೆ ಕಗ್ಗತ್ತಲ ಮೋಡದೊಳಗೆ
ಅರಿಯೆ, ಏಕೋ ಇಲ್ಲ ಸಲ್ಲದ ಕೋಪ
ಮಿಂಚು- ಗುಡುಗುಗಳ ಆರ್ಭಟದ
ಕಣ್ಣು ಮುಚ್ಚಾಲೆಯಲ್ಲಿ
ಅವಿತು ಕೊಂಡಿದೆಯೊ ... ಕಾದುಕೊಂಡು
ಮುಂದೆ ಬೆಳಗಬಹುದೆಂದು ಆಶಾದೀಪ
ತಿಳಿ ಹೇಳಬಯಸಿದ್ದೇನೆ,
ಕತ್ತಲು-ಬೆಳಕು
ಮಿಂಚು-ಗುಡುಗು-ಮಳೆಯು ಪ್ರಕೃತಿಯ
ನಿಯಮ
ಬೆಳೆಸಿಕೊಳ್ಳಬೇಕು ನೀನೊಂದಿಷ್ಟು
ಸಹನೆ-ಸಂಯಮ
ಅರ್ಥವಾಯಿತೆನೋ,
ಜೊತೆಗೂಡುವೆನೆಂದು ಆಶ್ವಾಸನೆಯಲ್ಲಿ
ಕದವ ತೆರೆದಿದೆ,
ಜೀವನದ ಪ್ರತಿಕ್ಷಣವ ಹಸಿರಾಗಿಸುವ
ಉತ್ಸಾಹದಲ್ಲಿ ಮತ್ತೆ ನನ್ನ ಜೊತೆಗೂಡಿದೆ.












Click it and Unblock the Notifications