ಕಪ್ಪಿನಿಯ *
ಕನ್ನಡದಲ್ಲಿ ಕ್ಲೆರಿಹ್ಯುಗಳು
ಬಹಳ ದಿನಗಳ ನಂತರ
ಓದಿ ಬರೆದರೆ ನಿನ್ನಯನಿಸಿಕೆ
ಇಲ್ಲವೆನ್ನಭ್ಯಂತರ

- ಕಪ್ಪಿನಿಯ *
[email protected]
ಎಂಬೋ ಮನ್ಷನ್ತಲೇಲಿ
ಭೂಮಿ ಸೂರ್ಯನ್ಸುತ್ತ
ಗಿರ್ರಂತ್ ತಿರಗ್ತಿತ್ತ?
*
ಆಲ್ಬರ್ಟ್ ಐನ್‌ಸ್ಟೈನ್
ತುಟಿಗೇರ್ಸ್ ಬಿಯರ್ ಸ್ಟೈನ್
ಹೇಳ್ದ, ‘ನನ್ ಸುತ್ತ
ಸೂರ್ಯ ತಿರ್ಗ್ತಾನ್ ಗೊತ್ತಾ?’
*
ವಿಚಿತ್ರಾನ್ನದ ಶ್ರೀವತ್ಸ
ಬಡಿಸ್ದಾಗ ಹತ್‌ಹತ್ಸ-
ರ್ತಿ ಉಣ್ಣೋವ್ರ್ ಸಾಲಲ್ಲಿ
ನ್ಯೂಯಾರ್ಕು ನ್ಯೂಡೆಲ್ಲಿ
*
ಅಂಬಿಕಾತನಯದತ್ತ
‘ಇಳಿದು ಬಾ ನನ್ನತ್ತ’
ಅಂದ್ರೆ ಹೇಳೋದೆ ಗಂಗೆ
‘ತೊಂದ್ರೆ ಕೊಡ್ಬೇಡ ನಂಗೆ?’
ನಿಘಂಟು ವಿವರ್ಸೊಕ್ಕೋಸ್ಕರ
ನಿರುಕ್ತ ಹೇಳ್ದ ಯಾಸ್ಕರ
ನೆನಪಿಗಿರಲಿ ನನ್ನದು
ಕ್ಲೆರಿಹ್ಯು ಒಂದು ಸಣ್ಣದು
*
ಕುಂಬಕೋಣದ್ರಾಮಾನುಜನ್
ಕೇಳ್ದ ಒಂದ್ಸಲ ಹಾರ್ಡಿಯನ್
‘ಸಾವಿರ್ದೇಳ್ನೂರಿಪ್ಪತೊಂಬತ್ತು!
ಇದರ ಬಗ್ಗೆ ನಿಂಗೇನ್ಗೊತ್ತು?!’
*
ದಲಾಯಿ ಲಾಮ ಪೆರುವಿನ ಲಾಮ
ನೋಡಿದ್ರಂತೆ
ಯಾಕ್ ಇದು ಯಾಕ್ ಹಾಗ್
ಇಲ್ಲಾಂದ್ರಂತೆ
*
ಜಿ.ವೆಂಕಟಸುಬ್ಬಯ್ಯ
ಶೊನ್ನಾರಂಗೊ, ‘‘ಎನ್ನಾಯ್ಯ
ಪಾರು’ ‘ಇಗೋ ಕನ್ನಡ’
ಕೇಫು ‘ನಾನು’ ಶೊನ್ನದ’’
*
ಅಷ್ಟಾಧ್ಯಾಯಿ ಪಾಣಿನಿ
ಬರ್ದ್ಬಿಟ್ ಹೇಳ್ದ, ‘‘ವಾಣಿ, ನೀ
ನಾನ್ಹೇಳ್ದ್ ಹಾಗೇ ಕೇಳಮ್ಮ
ಸಂಸ್ಕೃತಳಾಗಿ ಬಾಳಮ್ಮ’’
*
ಪತಂಜಲಿ
‘‘ಇದನ್ ಕಲಿ’’
ಅಂದಾಗವ್ನೊಬ್ ಶಿಷ್ಯ
ಕಲ್ತ ಮಹಾಭಾಷ್ಯ
*
ವರ್ನರ್ ಹೈಸೆನ್‌ಬರ್ಗು
ಮನೆ ಸೇರೋವರ್ಗು
ಅವ್ನ್ ಹೆಂಡ್ತೀಗವನ್ ವೇಗ
ತಿಳ್ಯೋದ್ ಬಲ್ ಸರಾಗ
*
ಹೆಮ್ಮಿಗೆ ಎಸ್. ಬಿಳಿಗಿರಿ
ಬರೆದಿದ್ದೋದ್ಬಿಟ್ ಪಳಗಿರಿ
ಬರೆಯೋದಕ್ನೀವ್ ಲಿಮರಿಕ್ಕು
ಆಗೋದಕ್ಕೆ ಲಾಯಕ್ಕು
*
ರಾಜಾ ರಾಮಮೋಹನ ರಾಯ-
ರದೊಂದಭಿಪ್ರಾಯ:
ಸತಿ
ಕೆಟ್ಟ ಪದ್ಧತಿ
*
ಬೆಂಜಮಿನ್ ಫ್ರ್ಯಾಂಕ್ಲಿನ್
ಗಾಳಿಪಟ ಹಾರ್ಸ್ಲಿನ್-
ತವ್ನ್ ಹೆಂಡ್ತಿ ಬಿಟ್ಳಂತೆ
ತೊಡೊಕ್ ರೇನ್ಕೋಟ್ ಕೊಟ್ಲಂತೆ
*
‘‘ಸರ್ ಮಿರ್ಜಾ, ಇಸ್ಮೆಯಿಲ್,’’
ಅಂದಾಗವ್ರು ನಕ್ರಂತೆ
ಫೋಟೊಗ್ರ್ಯಾಫರ್ ತೆಗೆದಿದ್ ಫೋಟೋಲ್
ಬಹಳ ಚೆನ್ನಾಗ್ ಬಿದ್ರಂತೆ
*
ಮಾಗಡಿ ಕೆಂಪೇಗೌಡ
ಬೇಕಿತ್ ಹೆಂಡ್ತೀಗ್ ಪೌಡ-
ರ್ರಂತ ಕೊಳ್ಲಿಕ್ ಹೋಗಿದ್ದೂರೇ
ಬೆಂಗಳೂರೇ?
*
ಶಿವಗಂಗೆಯಲ್ಲಿ ಶಾಂತಲೆ
‘‘ಬಿಟ್ಟಿದೇವ, ಬಾ’’ಂತಲೆ
ಹೇಳುತಿದ್ದರೂನು ಅವನು
ಹಳೇಬೀಡ ಬಿಟ್ಟು ಬರನು
*
ಸುಭಾಷ್ ಚಂದ್ರ ಬೋಸು
ಜರ್ಮನೀಲಿ ಕೋಸು
ತಿಂದೂ ತಿಂದೂ ಬೇಜಾರಾಗಿ
ಮೀನನ್ ತಿಂದ್ರು ಜಪಾನಿಗ್ ಹೋಗಿ
*
ಯೋಸೆಫ್ ಜುಗಾಶ್ವಿಲಿ
ಕ್ರೆಮ್ಲಿನ್ನಲ್ಲೊಂದಿಲಿ
ನೋಡೊಂದ್ ಬೋನನ್ನಿಟ್ಟ
ಇಟ್ಟದನ್ ಹಿಡ್ದ್‌ಹಾಕ್ಬಿಟ್ಟ
*
ವ್ಲಾದಿಮೀರ್ ಉಲ್ಯನೋವ್
ಅಂದ, ‘‘ಇದೊಂದ್ ತಲೆನೋವ್
ಸೈಬೀರಿಯಾಗಿದ್ ಕಳಿಸಯ್ಯ
ಅಲ್ಲದ್ರ್ ಸಂತತಿ ಬೆಳಸಯ್ಯ’’
*
ಕೃಷ್ಣದೇವರಾಯ
ತನ್ನ ಕುದುರೆ ಲಾಯ-
ದೊಂದು ಕುದುರೆಯೇರಿ
ಹೊರಟ ಪ್ರಭಾತ್‌ಫೇರಿ
***
ಟಿಪ್ಪಣಿಗಳು :
*ಕಪ್ಪಿನಿಯ. ಕಪಿನಯ್ಯ ಅಲ್ಲ
ಗಣಿತಜ್ಞ ರಾಮಾನುಜನ್ 20ನೆಯ ಶತಮಾನದ ಮೊದಲ ಭಾಗದಲ್ಲಿ ಇಂಗ್ಲೆಂಡಿನಲ್ಲಿದ್ದಾಗ ನಡೆದ ಒಂದು ಸಂಗತಿ ಇಲ್ಲಿದೆ. ಅವನನ್ನು ಇಂಗ್ಲೆಂಡಿಗೆ ಕರೆಸಿಕೊಂಡಿದ್ದ ಗಣಿತಜ್ಞ ಹಾರ್ಡಿ, ಅವನನ್ನು ಪಟ್ಣಿ ಎಂಬ ಊರಿನಲ್ಲಿ, ಖಾಯಿಲೆ ಬಿದ್ದು ಮಲಗಿದ್ದಾಗ ನೋಡಲು ಹೋದರಂತೆ. ಅವರು ಅಲ್ಲಿಗೆ ಹೋಗಲು ಬಳಸಿದ ಟಾಕ್ಸಿಯ ಸಂಖ್ಯೆ 1729 ಆಗಿತ್ತು. ಅವರು ರಾಮಾನುಜನ್ನಿಗೆ, ‘‘ನನಗೆ ಈ ಸಂಖ್ಯೆ ಅಂಥ ಸ್ವಾರಸ್ಯವಾದದ್ದು ಎಂದು ಅನ್ನಿಸುವುದಿಲ್ಲ. ಅದು ಅಪಶಕುನದ ಕುರುಹಲ್ಲ ಎಂದು ಆಶಿಸುತ್ತೇನೆ’’ ಎಂದರಂತೆ.
ಆಗ ರಾಮಾನುಜನ್ ‘‘ಇಲ್ಲ! ಅದು ಬಹಳ ಸ್ವಾರಸ್ಯವಾದ ಸಂಖ್ಯೆ; ಅದು ಎರಡು ಘನಸಂಖ್ಯೆಗಳ ಮೊತ್ತವಾಗಿ ಎರಡು ರೀತಿ ಬರಯಲಾಗುವ ಸಂಖ್ಯೆಗಳಲ್ಲಿ ಅತಿ ಚಿಕ್ಕದು!’’ ಎಂದರಂತೆ. ಅಂದರೆ, 1729 = 10^3 + 9^3 ಮತ್ತು 12^3 + 1^3 ಆಗಿಯೂ ಇದೆ. ಮತ್ತು ಅದಕ್ಕಿಂತ ಚಿಕ್ಕ ಸಂಖ್ಯೆ ಯಾವುದನ್ನೂ ಈ ರೀತಿ ಬರೆಯಲಾಗುವುದಿಲ್ಲ ಎನ್ನುವ ಸಂಖ್ಯೆಯ ಗುಣ ರಾಮಾನುಜನ್ನಿಗೆ ಗೊತ್ತಿತ್ತು. ಈ ವಿಲಕ್ಷಣ ಪ್ರತಿಭೆ ಅವರಿಗೆ ಇದ್ದದ್ದರಿಂದಲೇ, ಹಾರ್ಡಿಯವರ ಆಪ್ತ ಸ್ನೇಹಿತ ಮತ್ತು ಸಹಸಂಶೋಧಕ, ಲಿಟ್ಲ್‌ವುಡ್, ರಾಮಾನುಜನ್ನಿಗೆ ಪ್ರತಿ ಸೊನ್ನೆಗಿಂತ ಹೆಚ್ಚಾದ ಪೂರ್ಣಸಂಖ್ಯೆ ಆತ್ಮೀಯ ಗೆಳೆಯ ಎಂದು ಒಂದು ಸಲ ಹೇಳಿದ್ದರಂತೆ.
ವೆಂಕಟಸುಬ್ಬಯ್ಯ. ಉಕಾರದ ನಂತರದ ’ ಚಿಹ್ನೆ, ತಮಿಳಿನಲ್ಲಿರುವ, ಕನ್ನಡದಲ್ಲಿಲ್ಲದ ಒಂದು ಸ್ವರವನ್ನು ಸೂಚಿಸುತ್ತದೆ.












Click it and Unblock the Notifications