ಅಭಿಮಾನ


ಅಭಿಮಾನ
Sukumar.S.Raghuram
ಗೋಪುರದ ನೆತ್ತಿಯನು ಮುತ್ತಿಡುವ ತವಕದಲಿ
ಒಟ್ಟಿನಲಿ ಗತ್ತಿನಲಿ ಹುಟ್ಟಿಬನ್ನಿ

ಚಕ್ರವ್ಯೂಹವ ಬಡಿದು ಸ್ವರ್ಣಕಮಲವ ಮೆರೆದು
ಕೇಸರಿಗೆ ಕೇಸರಿಯ ತೊಡಿಸಬನ್ನಿ

ಸಿಂಧುವಿನ ಬೆತ್ತಲಲಿ ಸರಸತಿಯ ಕತ್ತಲಲಿ
ಗಂಗೆ ಯಮುನೆಯ ಜೋಡಿ ಛಲದಿ ಬನ್ನಿ

ಗೋಪಿಯರ ರಕ್ಷಿಸಲು ಕಂಸರನು ಶಿಕ್ಷಿಸಲು
ಸದ್ದಿನಲಿ ಮತ್ತಿನಲಿ ಸಿಡಿದು ಬನ್ನಿ

ತಿಂಗಳಿನ ನೆನಪಿನಲಿ ಮಂಗಳನ ಕನಸಿನಲಿ
ಸಿಂಧೂರ ಸೇತುವನು ಕಟ್ಟಬನ್ನಿ

ಗಾಂಧಾರ ದೇಶವನು ಶಕುನಿಯರ ಕುಹಕವನು
ಕಿತ್ತೊಗೆವ ವೀರರನು ಬೆಳೆಸಬನ್ನಿ

ಇಂದಿರನ ಚಂದಿರನ ಸಮಸಮದಿ ನಡೆನಡೆದು
ಮೇನಕೆಯ ರೋಹಿಣಿಯ ಗೆದ್ದು ಬನ್ನಿ

ತೇಜಸ್ವಿ ರಸ ಹೀರಿ ಪಾಂಚಜನ್ಯವ ಮೀರಿ
ಅಭ್ಯುದಯದಮೃತವ ಕುಡಿಯಬನ್ನಿ

ಹಂಪೆ ಹಳೆಬೀಡಾದಿ ಸೋಮೇಶ್ವರದ ಗೋರಿ
ಮರುಹುಟ್ಟು ಪಡೆಯಲಿವೆ ದಿಟ್ಟ ಬನ್ನಿ

ಕೈಲಾಸ ಗಂಗೋತ್ರಿ ಮಥುರೆ ದ್ವಾರಕೆ ವಿಂಧ್ಯೆ
ಕಾವೇರಿಯರ ಸೊಬಗ ನೋಡಬನ್ನಿ

ಗುಡಿಗಳಿಗೆ ಗಡಿಗಳಿಗೆ ರಣಕಹಳೆ ಶೃಂಗಾರ
ಭೀಮಾರ್ಜುನರೆ ಮತ್ತೆ ಎದ್ದು ಬನ್ನಿ

ಸರಯುವಿನ ಸಿರಿಗಳಿಗೆ ಬೆಂಕಿ ತಟ್ಟುವ ಮೊದಲೆ
ರಾಮರಾಜ್ಯದ ವಿಜಯ ಸಾರಿ ಬನ್ನಿ


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+