ಅಮ್ಮಾ! ಅಬ್ಬಾ!!
| ಅಮ್ಮಾ! ಅಬ್ಬಾ!! | |
![]() |
ಣಾ-ಡಾಗ್ ನಾ-ದಾಗ್ ವ್ಯತ್ಯಾಸ್ವನ್ನ ತೋರಿಸ್ ಚೆನ್ನಾಗ್ ಹೇಳ್ಕೊಟ್ರಿ । ಹಾಗೇ ಮತ್ತೆರಡಕ್ಷರ್ಗಳ್ಗೂ ವ್ಯತ್ಯಾಸಾನ್ ನೀವ್ ಹೇಳ್ಕೊಟ್ರೆ । ಗುರುವಿಂತೆಂದನು: ನೀ ಕೇಳಿ ಕಲಿಯುತಿರಲೆನಗೆ ಸಂತಸವಯ್ಯ ಆಡುತಲೋಡುತ ಬೀಳುತ ಕೂಗುತ ರೋದಿಸೆ ಮಗ ‘’ಹಾ! ಅಮ್ಮಮ್ಮಾ!!’’। ಮಾವಿನ ತೋಟದೊಳೇರುತಲಿದೆ ಘಮ ಕಾಯ್ಗಳು ಹಣ್ಣಾಗಿರೆ ಮಾಗಿ । ಮಾಡಲು ಜಳಕವ ನದಿಗೆ ಹೋಗುವೆಯ? ಹೇಳುವೆ ಕೇಳೆನ್ನೀ ಮಾತ । ನಂದತನಯ ಗೋವಿಂದಮುಕುಂದನ ನೆನೆಯಲಿ ನಿತ್ಯವು ನಿನ್ನ ಮನ । ಮಳೆಯು ಸಕಾಲದಿ ಸುರಿಯುತ ಬಂದರೆ ಬೆಳೆಯುತ ಹಿರಿದಾಗುವುದು ಮರ । ತಾತನ ತಾತನ ಕಾಲದಾಸ್ತಿಯಿಹುದದನವನೆಂದೆಂದಿಗು ಮಾರ । ಹಣವಂತರು ಬೆಲೆ ಕೇಳುವುದಿಲ್ಲವು ಕೊಳ್ವುದಕಂಗಡಿಯಾಳು ಮಾಲ । ಸಾತ್ವಿಕ ರಾಜಸ ತಾಮಸ ಗುಣಗಳು; ಸಾತ್ವಿಕಗುಣವೇ ನಿರ್ಮಲವು । ತಂದೆತಾಯಿಗಳ ಗುರುಗಳ ಭಕ್ತನು ಹಿರಿಯರ ಮಾತನ್ನವ ಮೀರ । ಬೆಂಗಳೂರ ಬಳಿ ಯಾತ್ರಿಕರೇರುತ ತಂಪನು ಪಡೆಯಲು ನಂದಿ ಮಲೆ ಓದು ಬರಹಗಳ ಕಲಿವುದು ಕಷ್ಟವು ಬುದ್ಧಿಯಾತನದು ಬಲು ಮಂದ । ಸಾರ್ವಜನಿಕರಿರುವೆಡೆಯಲಿ ತೆಗಳಿರಲಾತನಿಗಾಗಿತ್ತವಮಾನ । ಗಾನವಿಶಾರದ ಪಕ್ಕವಾದ್ಯಗಳ ಕೂಡಿಸಿ ವೇದಿಕೆಯ ಮೇಗಡೆ । ದೂರದಿ ವಾಸವ ಮಾಡಲು ಹೊರಟಿಹ ಮಗನಿಗೆ ಪೇಳ್ದಳು ‘‘ಎಲವೊ! ಮರಿ!’’ । ಎಲ್ಲ ದೇಶಗಳೊಳಿರುವರು ಭೂಮಿಗೆ ಭಾರವ ತರುತಿಹ ಬಲು ಮಂದಿ । ಇಂತು ತೋರಿಹೆ ನಾನೀಗ ಮಬಗಳ್ಗಿರ್ಪ ಭೇದವಂ । * ‘‘ಭವಂತಿ ನಮ್ರಾಃ ತರವಃ ಫಲೋದ್ಗಮೈಃ’’ ಎಂದು ಸಂಸೃತ ಸುಭಾಷಿತದಲ್ಲಿರುವಂತ **ಬೀರ ಎನ್ನುವ ಪದ ಇಲ್ಲಿ ಪ್ರಥಮಾವಿಭಕ್ತಿಯ ನಾಮಪದ. ಕುಡಿಯುವ ಪದಾರ್ಥದ (beerಇನ) ದ್ವಿತೀಯಾವಿಭಕ್ತಿಯಲ್ಲ. ಅದರ ಸರಿಯಾದ ಉಚ್ಚಾರಣೆ ಬಿಯರ್ ಅಥವಾ ಬಿಅರ್, ಎಂದು. ಅನೇಕರು ಅದನ್ನು ಬೀರ್ ಎಂದೇ ಉಚ್ಚರಿಸುವುದರಿಂದ ಈ ಪದ್ಯವನ್ನು ‘ಕುಡಿಯುವನೈ ಬೀರ’ ಎಂದೂ ಮಾಡಿಕೊಳ್ಳಬಹುದು.) |













Click it and Unblock the Notifications