ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾ, ಅನು ಪಾಲಿಗಿದು ಸಮಾಧಾನದ ಸುದ್ದಿ!

By Staff
|
Google Oneindia Kannada News

ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

(ದಟ್ಸ್‌ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಗೆ ಈಗ ಮಂಗಳ ಹಾಡುವ ಸಮಯ. ಈ ಕಂತಿನೊಂದಿಗೆ ಧಾರಾವಾಹಿಗೆ ತೆರೆ ಬೀಳುತ್ತಿದ್ದು, ಗುರುವಾರ ಲೇಖಕರ ಮಾತುಗಳನ್ನು ನಿಮ್ಮ ಮುಂದಿಡಲಿದ್ದೇವೆ. ಎದೆಯ ಕೂಗನ್ನು 52ವಾರಗಳ ಕಾಲ ಅಕ್ಕರೆಯಿಂದ ಓದಿದ ಓದುಗರಿಗೆ ಧನ್ಯವಾದಗಳು -ಸಂಪಾದಕ)

''ಡ್ಯಾನ್‌, ನಾನು ಅನು...""

''ಓಹ್‌, ಹಲೋ! ನೀನು ಕರೆ ಮಾಡಿದ್ದಕ್ಕೆ ಬಹಳ ಸಂತೋಷವಾಯಿತು...""

ಅವನು ಎದ್ದು ನಡೆಯುತ್ತಿರುವುದು ಅವಳಿಗೆ ಕೇಳಿಸಿತು. ಅವನು ತನ್ನ ಕುರ್ಚಿಯಿಂದ ಎದ್ದು, ಮಾತನಾಡಲು ಬಹುಶಃ ಹೊರಗೆ ಹೋಗುತ್ತಿರಬೇಕು. ಕರೆ ಬಂದಾಗಲೆಲ್ಲೆ ಹೀಗೆ ಎದ್ದು ಆಚೆ ಓಡುವುದನ್ನು ನೋಡಿ ಅವನ ಸಹೊದ್ಯೋಗಿಗಳು ಅವನೊಬ್ಬ ವಿಚಿತ್ರ ಪ್ರಾಣಿ ಎಂದುಕೊಂಡಿರಬೇಕು.

''...ನೀನು ಈಗ ಎಲ್ಲಿದ್ದೀಯ ಎಂದು ನಾನು ಕೇಳಬಹುದೆ?""

''ಭಾರತದಲ್ಲಿ, ಡ್ಯಾನ್‌. ನೀನು ಅದನ್ನು ಊಹಿಸಿರುತ್ತೀಯ ಎಂದುಕೊಂಡಿದ್ದೆ.""

''ಓಹ್‌, ಇಷ್ಟು ಬೇಗ! ನೀನು ಹೀಗೆ ಪ್ರಯಾಣದ ಸಿದ್ಧತೆಗಳನ್ನು ಮಾಡಿಕೊಂಡಾಗ ತಮಾಷೆ ಮಾಡಬಾರದು. ನನಗೆ ಹೇಳದೆ ಹೋಗಿಬಿಟ್ಟಿದ್ದೀಯ. ನನಗೆ ಕರೆ ಮಾಡಬಹುದಿತ್ತು, ಇಲ್ಲವೆ ಒಂದು ಸಂದೇಶವನ್ನು ಬಿಡಬಹುದಿತ್ತು. ಕನಿಷ್ಠ ಒಂದು ಚೀಟಿ, ಮತ್ತೇನಾದರೂ...""

''ನಾನು ಏನು ಯೋಚನೆ ಮಾಡಿದೆ ಎಂದರೆ, ನಿನಗೆ ನಾನು ಏನೂ ಹೇಳದೆ ಇರುವುದರಿಂದ ನಿನ್ನನ್ನು ಯಾರಾದರು ನನ್ನ ಬಗ್ಗೆ ಕೇಳಿದರೆ ನೀನು ಪ್ರಾಮಾಣಿಕವಾಗಿ ನಿನಗೆ ತಿಳಿದಿಲ್ಲವೆಂದು ಹೇಳಬಹುದು ಎಂದುಕೊಂಡೆ. ಪೋಲಿಸರಿಗೆ ಹೇಳಬೇಡವೆಂದು ನೀನೆ ನನಗೆ ಎಚ್ಚರಿಸಿದ್ದೆ. ಜೊತೆಗೆ, ನಾನು ಭಾರತಕ್ಕೆ ಹೋಗಬಹುದೆ ಎಂದು ನಿನ್ನನ್ನು ಆಗ ತಾನೆ ಕೇಳಿದ್ದೆ.""

''ಹೋಗಬಹುದೆ ಎಂದು ಕೇಳಿದ್ದೆ, ಹೌದು, ಆದರೆ ನೀನು ನಿಜವಾಗಲು ಹೋಗುತ್ತಿದ್ದೀಯೆಂದು ನನಗೆ ಹೇಳಲಿಲ್ಲ! ಕೊಲೆ ಪ್ರಕರಣದಲ್ಲಿ ಶಂಕಿತೆಯಾದ ನನ್ನ ಗರ್ಲ್‌ಫ್ರೆಂಡ್‌ ಎಲ್ಲಿದ್ದಾಳೆ ಎಂದು ನನಗೆ ಗೊತ್ತಿಲ್ಲ ಎಂದರೆ ಅದು ಬಹಳ ವಿಚಿತ್ರವಾಗಿ ಕಾಣಿಸುವುದಿಲ್ಲವೆ? ಆ ಸಬೂಬು ನನ್ನ ಕೆರಿಯರ್‌ಗೆ ಬಹಳ ಸಹಾಯ ಮಾಡುತ್ತದೆ!"" ಡ್ಯಾನ್‌ ನಿಟ್ಟುಸಿರುಬಿಟ್ಟ. ''ನಾನು ನಿನ್ನನ್ನು ಹುಚ್ಚನಂತೆ, ವಿಪರೀತವಾಗಿ ಮಿಸ್‌ ಮಾಡಿಕೊಂಡೆ. ನೀನು ಭಾರತಕ್ಕೆ ಹೋಗಿರಬಹುದು ಎಂದೇನೊ ನಾನು ಊಹಿಸಿದೆ. ಆದರೆ ಅದು ಯಾಕೆ ಎಂದು ನಾನು ತಿಳಿದುಕೊಳ್ಳಬಹುದೆ?""

''ಅದನ್ನು ನಾನು ನಿನಗೆ ಹೇಳಿ, ನಿನ್ನ ಪ್ರಯಾಣದ ವ್ಯವಸ್ಥೆ ಮಾಡಿದರೆ, ನೀನು ಇಲ್ಲಿಗೆ ಬರುತ್ತೀಯ?""

''ಅಲ್ಲಿಗೆ? ಭಾರತಕ್ಕೆ?""

''ಹೌದು!""

''ನಾವು ವಜ್ರದ ಉಂಗುರವನ್ನು ಖರೀದಿಸುವಂತಿದ್ದರೆ ಮಾತ್ರ. ಭಾರತದಲ್ಲಿ ವಜ್ರ ಬಹಳ ಅಗ್ಗ ಅಂತ ಹೇಳುತ್ತಾರೆ. ಹಾಗೆಯೆ ಅಲ್ಲಿ ಯಾರಿಗೂ ಬಾಯ್‌ಫ್ರೆಂಡ್ಸ್‌ಗಳಿರುವುದಿಲ್ಲ ಅಂತಲೂ ಹೇಳುತ್ತಾರೆ.""

ಡ್ಯಾನ್‌ ಅವಳನ್ನು ಮಾಮೂಲಿನಂತೆ ನಗಿಸಿದ. ''ನಾನು ಈಗ ಮಾತನಾಡಲು ಆಗುವುದಿಲ್ಲ."" ಪವನ್‌ ಅಲ್ಲಿಯೆ ಪಕ್ಕದಲ್ಲಿ ಅವಳ ಮುಖಭಾವವನ್ನು ಗಮನಿಸುತ್ತ ನಿಂತಿದ್ದ. ಅವನ ಕಣ್ಣಿನಲ್ಲಿ ಈಗಲೂ ಕುತೂಹಲದ ಮಿಂಚೊಂದನ್ನು ಅವಳು ಕಂಡು ಹಿಡಿಯಬಹುದಿತ್ತು.

''ಹ್ಞುಂ, ನೀನು ಒಪ್ಪಿಗೆ ಎಂದಷ್ಟೆ ಹೇಳಿದರೆ ಸಾಕು. ನನ್ನನ್ನು ಮದುವೆಯಾಗದೆ, ಕೇವಲ ಊರೂರು ಸುತ್ತಿಸುವ ಹುಡುಗಿಗಾಗಿ ನಾನು ಭಾರತಕ್ಕೆ ಬರಲಾರೆ.""

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X