ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನಾಗುವ ಖುಷಿ.. ಕೆಲ ಕ್ಷಣಗಳಲ್ಲಿಯೇ ಆಘಾತ!

By Staff
|
Google Oneindia Kannada News

''ಯೋನಿನಾಳದ ರಕ್ತಸ್ರಾವ, ಗರ್ಭಕೋಶ ಸಂಕುಚಿತಗೊಳ್ಳುವುದು, ಹಾಗೂ ಕಿಬ್ಬೊಟ್ಟೆಯ ಸುಕೋಮಲತೆಯಂತಹ ಲಕ್ಷಣಗಳಿಂದ ಏನಾಗಿದೆ ಎಂದು ತೀರ್ಮಾನಿಸಲು ಆಗುವುದಿಲ್ಲ. ನಿಮ್ಮ ಸ್ಥಿತಿಯನ್ನು ಗಮನಿಸುತ್ತ ಇರಲು ನಾವು ನಿಮ್ಮನ್ನು ಇಲ್ಲಿಯೇ ಒಂದೆರಡು ದಿನ ಇಟ್ಟುಕೊಳ್ಳುತ್ತೇವೆ. ಕೆಲವು ಪರೀಕ್ಷೆಗಳನ್ನೂ ಮಾಡುತ್ತಿರುತ್ತೇವೆ. ನೀವೇನಾದರೂ ಈ ನಡುವೆ ಅಪಘಾತಕ್ಕೆ ಈಡಾಗಿದ್ದಿರಾ? ಇದು ತಿಂಗಳ ಹಿಂದೆ ಆಗಿದ್ದರೂ ಆಗಿರಬಹುದು. ನಾಲ್ಕರಿಂದ ಆರು ವಾರಗಳ ಹಿಂದಿನ ಅವಧಿಯಲ್ಲಿ ನಿಮಗೆ ಏನಾದರೂ ಆಗಿತ್ತೆ?""

ಅನೂಳ ಮನಸ್ಸು ಹಿಂದಿನದನ್ನೆಲ್ಲ ಜ್ಞಾಪಿಸಿಕೊಳ್ಳುತ್ತಿತ್ತು. ಅವಳಿಗೆ ಅದನ್ನು ನೆನಪಿಸಿಕೊಳ್ಳಲು ಜಿಗುಪ್ಸೆ ಆಯಿತು - ದೀಪಕ್‌! ಅವಳ ಹೊಟ್ಟೆಯ ಮೇಲೆ ಅವನು ಒದ್ದ ಒದೆತಗಳು. ಅವಳು ಅದರ ಬಗ್ಗೆ ಏನೂ ಹೇಳಲಿಲ್ಲ. ಆದರೆ ವೈದ್ಯರು ಅವಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದರು.

ನಾನು ತಾಯಿಯಾಗಲಿದ್ದೇನೆ. ಇದರ ಬಗ್ಗೆ ನಾನು ಎಂದೂ ಯೋಚಿಸಿರಲೇ ಇಲ್ಲ. ಆದರೂ ತಾಯಿಯಾದರೆ ಚೆನ್ನಾಗಿರುತ್ತದೆ. ದೀಪಕ್‌ ಅದರಿಂದಲಾದರೂ ಬಹುಶಃ ಒಳ್ಳೆಯವನಾಗಿ ಬದಲಾಗಬಹುದು.

ಡ್ಯಾನ್‌ ಆಸ್ಪತ್ರೆಯಲ್ಲಿಯೆ ಅವಳ ಹಾಸಿಗೆಯ ಪಕ್ಕದಲ್ಲಿ ಇಡೀ ರಾತ್ರಿ ಕುಳಿತಿದ್ದ. ನಾನು ಎಲ್ಲಿ ತಪ್ಪು ಮಾಡಿದ್ದು? ಡ್ಯಾನ್‌ ಇಷ್ಟೊಂದು ಕಾಳಜಿಯುಳ್ಳ ವ್ಯಕ್ತಿ ಎಂದು ಅದು ಹೇಗೆ ಅವಳಿಗೆ ಮೊದಲೆ ಗೊತ್ತಾಗಲಿಲ್ಲ? ದೀಪಕ್‌ ಅವಳ ಜೀವನದಲ್ಲಿ ಪ್ರವೇಶಿಸಿ ಅವಳ ಜೀವನವನ್ನೆ ತನ್ನ ಕೈಯಲ್ಲಿ ತೆಗೆದುಕೊಂಡು ಬಿಟ್ಟ. ಹಾಗೂ, ಅವಳೂ ಸಹ ಡ್ಯಾನ್‌ ಹೇಗೆ ಏನು ಎಂದು ತಿಳಿದುಕೊಳ್ಳಲು ತಾನಾಗಿ ಪ್ರಯತ್ನಿಸಿರಲಿಲ್ಲ.

ಆದರೆ ಅಮೆರಿಕಾದವರು ಮಾತ್ರ ಇಷ್ಟು ಭಿನ್ನವಾಗಿ ಇರುತ್ತಾರಾ? ಈ ಕ್ಷಣದಲ್ಲಿ ಇಲ್ಲಿ ಪವನ್‌ ಇದ್ದಿದ್ದರೂ ಅವನೂ ಸಹ ಡ್ಯಾನ್‌ ತರಹವೆ ನನ್ನ ಪಕ್ಕ ಇರುತ್ತಿದ್ದ. ದೀಪಕ್‌ಗೆ ಗೊತ್ತಾಗಿದ್ದರೂ ಅವನೂ ಇಲ್ಲಿರುತ್ತಿದ್ದ. ಅಥವ ಇರುತ್ತಿದ್ದನಾ?

ಮಾರನೆಯ ದಿನ ವೈದ್ಯರು ಮತ್ತೊಂದು ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಲು ಆದೇಶಿಸಿದರು. ''ಶ್ರೀಮತಿ ಸತ್ಯನ್‌,"" ಅದಾದ ನಂತರು ಅವರು ಹೇಳಿದರು, ''ಆಗಿರುವ ಅಪಾಯ ಬಹಳ ದೊಡ್ಡದು. ಭ್ರೂಣ ಜೀವಂತವಾಗಿಲ್ಲ. ನಾನು ಅದಕ್ಕೆ ವಿಷಾದಿಸುತ್ತೇನೆ. ಈಗ ನಾವು ಭ್ರೂಣವನ್ನು ಹೊರತೆಗೆಯಬೇಕು.""

ಅವರ ಮಾತಿನ ಅರ್ಥ ಸಂಪೂರ್ಣ ಗೊತ್ತಾಗದೆ ಅವಳು ಸುಮ್ಮನೆ ತಲೆಯಾಡಿಸಿದಳು. ಏನಾಯಿತು ಎಂದು ನಾನು ದೀಪಕ್‌ಗೆ ಎಂದೂ ಹೇಳುವುದಿಲ್ಲ. ಅವನೊಬ್ಬ ಕ್ರೂರಿ. ಅವಳಿಗೆ ಅವನ ಜೊತೆ ಮತ್ತೆ ಯಾವ ಸಂಬಂಧವೂ ಬೇಕಿರಲಿಲ್ಲ. ಈಗ್ಗೆ ಕೆಲವು ಗಂಟೆಗಳ ಮುಂಚೆ ಅವಳು ಸಂತೋಷವಾಗಿ ತನ್ನ ತಾಯ್ತನವನ್ನು ನಿರೀಕ್ಷಿಸುತ್ತಿದಳು. ಈಗ, ಮತ್ತೊಮ್ಮೆ, ಎಲ್ಲವೂ ಬದಲಾಯಿತು. ಅಂಧಕಾರ ಅವಳನ್ನು ಅವರಿಸಿತು.

ಡ್ಯಾನ್‌ ಅನುಕಂಪದಿಂದ ಕೂಡಿದ್ದರೂ ಬಹಳ ಕೋಪ ಬಂದಿದ್ದರಿಂದಾಗಿ ಏನೂ ಮಾತನಾಡಲಾಗದ ಸ್ಥಿತಿಯಲ್ಲಿ ಇದ್ದ. ಅವಳ ಪಕ್ಕದಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದ ಮೇಲೆ ಮಾತನಾಡಿದ. ''ಅನು, ಅವನು ಇದಕ್ಕೆ ಬೆಲೆ ತೆರಲೇ ಬೇಕು. ದೀಪಕ್‌ ಕಂಬಿಗಳ ಹಿಂದೆ ಇರುವುದನ್ನು, ಅದು ಒಂದು ದಿನವಾದರು ಸರಿ, ನಾನು ನೋಡಬೇಕು. ಅದು ಅವನು ತಾನು ಮಾಡಿದ ಕೆಲಸದ ಬಗ್ಗೆ ಯೋಚಿಸುವಂತೆ ಮಾಡುತ್ತದೆ...""

''ಆದರೆ ಅದರಿಂದ ನನ್ನ ಜೀವನದಲ್ಲಿ ಏನೂ ಬದಲಾಗುವುದಿಲ್ಲ. ಅಲ್ಲವೆ?""

ಆದ ಆಘಾತ ತನ್ನ ಸುಂಕವನ್ನು ತೆಗೆದುಕೊಂಡಿತ್ತು. ದೈಹಿಕ ಮತ್ತು ಮಾನಸಿಕ ನೋವುಗಳೆರಡೂ ಅವಳ ಅರಿವಿಗೆ ಬಾರದಷ್ಟು ಅವಳು ಜೋಮುಗಟ್ಟಿಬಿಟ್ಟಿದ್ದಳು. ಕೋಪ ಮಾಡಿಕೊಳ್ಳಲೂ ಸಹ ಅವಳು ತ್ರಾಣ ಕಳೆದುಕೊಂಡಿದ್ದಳು.

ಅವಳನ್ನು ಶಸ್ತ್ರಚಿಕಿತ್ಸೆಯ ಕೋಣೆಗೆ ಸ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋದದ್ದು ಹಾಗು ನಂತರ ಅರಿವಳಿಕೆಯ ಪ್ರಭಾವದಿಂದಾಗಿ ನಿಧಾನವಾಗಿ ಪರಮಸುಖದ ಪ್ರಜ್ಞೆ ಕಳೆದುಕೊಳ್ಳುತ್ತಿದ್ದ ಸ್ಥಿತಿಯನ್ನು ಶಸ್ತ್ರಚಿಕಿತ್ಸೆ ಮುಗಿದನಂತರ ಜ್ಞಾಪಿಸಿಕೊಂಡಳು. ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಕೊಂಡು ಕಿಟಕಿಯ ಹೊರಗೆ ದಿಟ್ಟಿಸುತ್ತಿದ್ದಳು. ಡ್ಯಾನ್‌ ಕೆಲಸಕ್ಕೆ ಹೋಗಿದ್ದ ಹಾಗು ಇನ್ನು ರಾತ್ರಿ ಊಟದ ಸಮಯದವರೆಗೂ ಹಿಂದಿರುಗುವುದಿಲ್ಲ. ರಾತ್ರಿ ಊಟವನ್ನು ಅಸ್ಪತ್ರೆಯಲ್ಲಿ ಬೇಗನೆ ಕೊಟ್ಟುಬಿಡುತ್ತಾರೆ. ಔಷಧಿಗಳ ಪ್ರಭಾವ ಇನ್ನೂ ಇದ್ದಿದ್ದರಿಂದಾಗಿ ಗೋಡೆಯ ಮೇಲೆ ಹೊರಚಾಚಿದ್ದ ಮರದ ಹಲಗೆಯ ಮೇಲೆ ಇಟ್ಟಿದ್ದ ಟಿವಿಯ ಮೇಲೆ ತನ್ನ ದೃಷ್ಟಿ ಕೇಂದ್ರೀಕರಿಸಲು ಆಗುತ್ತಿರಲಿಲ್ಲ. ಸಮಯ ಕಳೆಯಲು ಎಷ್ಟೊಂದು ಅನುಕೂಲ! ಅಮೇರಿಕಾದವರು ಎಲ್ಲದರ ಬಗ್ಗೆಯೂ ಯೋಚಿಸುತ್ತಾರೆ - ಹಾಸಿಗೆ ಹಿಡಿದಿರುವ ರೋಗಿಗಳಿಗೂ ಸಹ ವೈಯಕ್ತಿಕ ಟಿವಿ.

ವೈದ್ಯರು ಕೊನೆಯಲ್ಲಿ ಹೇಳಿದ ಮಾತನ್ನು ಅವಳ ಕೈಯಲ್ಲಿ ಮರೆಯಲು ಸಾಧ್ಯವೇ ಆಗುತ್ತಿರಲಿಲ್ಲ: ನಿಮ್ಮ ದೇಹದ ಒಳಗೆ ಆಗಿರುವ ಗಾಯಗಳು ನೀವು ಮತ್ತೆ ಪೂರ್ಣಾವಧಿಯ ತನಕ ಗರ್ಭಧರಿಸುವ ಸಾಧ್ಯತೆ ಇಲ್ಲದಿರುವ ಹಾಗೆ ಮಾಡಿರಬಹುದು. ಅವರು ಅದನ್ನು ನಿಸ್ಸಂದೇಹವಾಗಿ ಹೇಳುವುದಕ್ಕೆ ಆಗುವುದಿಲ್ಲ. ಆದರೆ ಅವಳಿಗೆ ತನ್ನ ಮುಂದಿನ ಗರ್ಭಧಾರಣೆಯ ಮುಂಚೆ ಇದರ ಅರಿವು ಇರಬೇಕು.

ಅಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಗ ಅವಳಿಗೆ ದೀಪಕ್‌ನ ಬಗ್ಗೆ ಯೋಚಿಸದೆ ಇರಲು ಸಾಧ್ಯವಾಗುತ್ತಿರಲಿಲ್ಲ. ಅವನನ್ನು ಬಿಟ್ಟ ನಂತರದ ಮೊದಲ ಒಂದೆರಡು ವಾರಗಳು ಅವನು ತನ್ನದು ತಪ್ಪಾಯಿತು ಎನ್ನುತ್ತ, ಕ್ಷಮೆ ಯಾಚಿಸುತ್ತ ಇ-ಮೇಯ್ಲ್‌ು ಕಳುಹಿಸುತ್ತಲೆ ಇದ್ದ. ಆದರೆ ಅವಳು ಮಾತ್ರ ಅವನ ಇ-ಮೇಯ್ಲ್‌ುಗಳನ್ನು ಯಾವುದೇ ಮುಲಾಜಿಲ್ಲದೆ ತನ್ನ ಕಂಪ್ಯೂಟರ್‌ನಿಂದ ಡಿಲೀಟ್‌ ಮಾಡಿ ಹಾಕುತ್ತಿದಳು.

ಅವಳು ಕನಿಷ್ಠ ತನ್ನ ಇ-ಮೇಯ್ಲ್‌ುಗಳನ್ನಾದರೂ ನೋಡುತ್ತಿರಲಿ ಎಂದು ಡ್ಯಾನ್‌ ಅವಳ ಲ್ಯಾಪ್‌ಟಾಪ್‌ ತಂದುಕೊಟ್ಟಿದ್ದ. ಹಾಸಿಗೆಯ ಪಕ್ಕದ ಕುರ್ಚಿಯ ಮೇಲೆ ಇದ್ದ ಲ್ಯಾಪ್‌ಟಾಪಿಗೆ ಕೈಚಾಚಿ, ಅದಕ್ಕೆ ಲಾಗಿನ್‌ ಆಗಿ, ಟೈಪ್‌ ಮಾಡಲು ಆರಂಭಿಸಿದಳು.

ಹಾಯ್‌ು ದೀಪಕ್‌,

ನಾನು ನಿನ್ನ ಇ-ಮೇಯ್ಲ್‌ುಗಳಿಗೆ ಉತ್ತರಿಸದೆ ಇದ್ದದ್ದರಿಂದಾಗಿ ನಿನಗೆ ಅರ್ಥವಾಗಿರಬಹುದಾದಂತೆ ಇತ್ತೀಚಿಗೆ ಆದ ಘಟನೆಗಳಿಂದಾಗಿ ನಾನು ಇನ್ನೂ ಆಘಾತದ ಸ್ಥಿತಿಯಲ್ಲಿಯೇ ಇದ್ದೇನೆ. ನಾನು ಗರ್ಭಿಣಿ ಎಂದು ತಿಳಿಯಿತು. ದುರದೃಷ್ಟವಶಾತ್‌, ನಾನು ನಿನ್ನನ್ನು ಬಿಟ್ಟು ಹೋದ ದಿನ ನೀನು ಎಸಗಿದ ದೌರ್ಜನ್ಯ ನನಗೆ ಸರಿಪಡಿಸಲಾಗದ ಅಪಾಯ ಮಾಡಿದಂತಿದೆ. ನಾನು ಎಂದೂ ಪೂರ್ಣಾವಧಿಯವರೆಗೆ ಗರ್ಭಿಣಿಯಾಗಿರಲು ಸಾಧ್ಯವಿಲ್ಲ. ನೀನು ಮಾಡಿರುವ ಅಪಾಯದ ಗಂಭೀರತೆಯ ಅರಿವು ನಿನಗಾಗಿದೆ ಎಂದು ನಾನು ಆಶಿಸುತ್ತೇನೆ.

- ಅನು.

ಅವಳು ಅಂದು ಮತ್ತು ಮಾರನೆಯ ದಿನ ತನ್ನ ಇ-ಮೇಯ್ಲ್‌ು ನೋಡಿದಾಗ ಆ ಪತ್ರಕ್ಕೆ ಅವನಿಂದ ಯಾವುದೆ ಉತ್ತರ ಬಂದಿರಲಿಲ್ಲ. ಯಾವ ಹೆಂಗಸು ಅವನಿಗೆ ಒಂದು ಗಂಡು ಮಗುವನ್ನು ಹೆತ್ತುಕೊಡಲು ಸಾಧ್ಯವಿಲ್ಲವೊ ಅಂತಹವಳ ಜೊತೆ ಇರುವುದು ದೀಪಕ್‌ಗೆ ಬೇಕಾಗಿರಲಿಲ್ಲ. ಅವನು ಕ್ಷಮೆ ಕೇಳುತ್ತಿದ್ದದ್ದೆಲ್ಲ ಇಷ್ಟಕ್ಕೆ.

ಅಧ್ಯಾಯ - 33 ಅಧ್ಯಾಯ - 35
(c) ಹಕ್ಕುಗಳು : ಲೇಖಕರದು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X