ಅಧ್ಯಾಯ 29 : ಎದೆಯ ಕೂಗು ಮೀರಿ...

ಮದುವೆಯಾದ ಐದೇ ದಿನದಲ್ಲಿ ಗಂಡನ ತೊರೆವ ಬಯಕೆ?ಅನು ತನ್ನ ಜೀವನದಲ್ಲಿ ಎಂದೂ ಗುಟ್ಟುಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ ಈ ಗುಟ್ಟನ್ನು ಅವಳು ತನ್ನ ಮನೆಯವರ ಜೊತೆ ಹಂಚಿಕೊಳ್ಳುವ ಹಾಗೆ ಇರಲಿಲ್ಲ. ಆದರೂ ಇದನ್ನು ಯಾರ ಜೊತೆ ಹಂಚಿಕೊಳ್ಳಬಹುದು ಎಂದು ಅವಳಿಗೆ ಗೊತ್ತಿತ್ತು. ಅವಳು ಮತ್ತು ಪವನ್‌ ಎಂದಿಗೂ ಒಳ್ಳೆಯ ಸ್ನೇಹಿತರಾಗಿರಲು ವಾಗ್ದಾನ ಪಡೆದಿದ್ದರು. ಆ ಸ್ನೇಹದಲ್ಲೇನೂ ಬದಲಾವಣೆಯಾಗಿರಲಿಲ್ಲ.

ಮದುವೆಯಾಗಿ ಐದು ದಿನಗಳಾಗಿದ್ದವು. ಇನ್ನು ಕೆಲವೇ ದಿನಗಳಲ್ಲಿ ಅವಳು ದೀಪಕ್‌ನ ಜೊತೆ ಅಮೇರಿಕಕ್ಕೆ ಹಿಂದಿರುಗಲಿದ್ದಾಳೆ. ಮೊದಲ ರಾತ್ರಿ ನಡೆದ ಘಟನೆಯ ಬಗ್ಗೆ ಅವಳು ಇನ್ನೂ ಯಾತನೆ ಅನುಭವಿಸುತ್ತಿದ್ದಳು. ಅದರ ಬಗ್ಗೆ ಏನು ಮಾಡುವುದೆಂದು ಚಿಂತಿಸುತ್ತಿದ್ದಳು. ಅದನ್ನು ಕನಿಷ್ಠ ಸದ್ಯಕ್ಕಾದರೂ ಮರೆಯಲು ನಿರ್ಧರಿಸಿದ್ದಳು. ಆದರೆ ಆ ನೆನಪುಗಳನ್ನು ಪಕ್ಕಕ್ಕೆ ತಳ್ಳುವುದು ಅವಳಂದುಕೊಂಡಿದ್ದಷ್ಟು ಸುಲಭವಾಗಿರಲಿಲ್ಲ.

ಕೊನೆಗೆ, ತನ್ನ ಹಳೆಯ ಹಾಗೂ ಇನ್ನೂ ಅತ್ಮಿಯ ಸ್ನೇಹಿತನಾಗಿರುವ ಪವನ್‌ನ ಸಹಾಯ ಪಡೆಯಲು ನಿರ್ಧರಿಸಿದಳು.

''ಪವನ್‌, ನಾನು ಹೋಗುವುದಕ್ಕಿಂತ ಮುಂಚೆ ನೀನೊಮ್ಮೆ ಮೈಸೂರಿಗೆ ಬಂದು ನನ್ನನ್ನು ಭೇಟಿಯಾಗಲು ಸಾಧ್ಯವೆ?""

''ಖಂಡಿತ, ಅನು. ನಾನು ನಾಳೆಯೆ ಬರುತ್ತೇನೆ."" ಎಷ್ಟೊಂದು ಒಳ್ಳೆಯವನು! ಅವನು ಬೆಂಗಳೂರಿನಿಂದ ಮೈಸೂರಿಗೆ ಇಷ್ಟೊಂದು ದೂರ ಯಾಕೆ ಏನು ಎಂದು ಕೇಳದೆ ಬರುತ್ತಿದ್ದಾನೆ.

ಪವನ್‌ ಮಾರನೆಯ ದಿನ ಬಂದ. ನೀತು ಮನೆಗೆಲಸದಲ್ಲಿ ನಿರತಳಾಗಿದ್ದಳು. ಅನೂಳ ಅಪ್ಪಅಮ್ಮ ಮನೆಯಲ್ಲಿ ಇರಲಿಲ್ಲ. ಅವನು ಅವಳನ್ನು ಆಲಿಂಗಿಸಲು ತನ್ನ ತೊಳುಗಳನ್ನು ತೆರೆದಾಗ ಅವಳು ಆಶ್ಚರ್ಯಚಕಿತಳಾದಳು. ಇದೆಲ್ಲ ಅವನಿಗೆ ಹೊಸದಾಗಿತ್ತು. ನಾನು ಕಷ್ಟದಲ್ಲಿ ಇದ್ದೇನೆ ಎಂದೇನಾದರೂ ಅವನಿಗೆ ಗೊತ್ತಾಯಿತಾ?

''ನಿನ್ನ ಮದುವೆ ಬಹಳ ಚೆನ್ನಾಗಿ ಆಯಿತು,"" ಅವನು ಹೇಳಿದ. ''ದೀಪಕ್‌ ಮನೋಹರವಾದ ವ್ಯಕ್ತಿ. ನನಗೆ ನನ್ನ ಅಪ್ಪನನ್ನು ನೆನಪಿಸುತ್ತಾರೆ.""

ಇವನು ಅದನ್ನು ಯಾಕೆ ಹೇಳಿದ? ದೀಪಕ್‌ ದೌರ್ಜನ್ಯದ ಸ್ವಭಾವದವನು ಎಂದೇನಾದರೂ ಇವನು ಊಹಿಸಿದನೆ? ಅವಳು ಕೇಳಿಸಿಕೊಳ್ಳಬೇಕಾಗಿದ್ದದ್ದು ಅಷ್ಟೇ. ಅವಳ ಕಣ್ಣೀರು ಕಟ್ಟೆಯೊಡೆಯಿತು. ''ಪವನ್‌, ಬಹುಶಃ ಅವನು ನಿನ್ನ ಅಪ್ಪನ ಹಾಗೆಯೇ!""

'' ನೀನು ಏನು ಹೇಳುತ್ತಿದ್ದೀಯ, ಅನು?""

''ನನ್ನನ್ನು ಕ್ಷಮಿಸು! ನನಗೆ ನಿನ್ನನ್ನು ಬಿಟ್ಟು ಇನ್ನು ಯಾರ ಜೊತೆ ಮಾತನಾಡಬೇಕೆಂದು ಗೊತ್ತಾಗುತ್ತಿಲ್ಲ. ನಮ್ಮ ಮನೆಯವರಿಗೆ ನನ್ನ ಜೀವನ ಒಂದು ತೆರೆದ ಪುಸ್ತಕದ ಹಾಗೆ ಇತ್ತು. ಎಲ್ಲವನ್ನೂ ಅವರ ಜೊತೆ ಹಂಚಿಕೊಂಡಿದ್ದೆ. ಆದರೆ ಇದ್ದಕ್ಕಿದ್ದಂತೆ, ನನ್ನ... ಅವರಿಗೆ ತೊಂದರೆ ಕೊಡುವುದಕ್ಕೆ ನನಗಿಷ್ಟವಿಲ್ಲ.""

''ಅವರಿಗೆ ತೊಂದರೆ ಕೊಡುವುದು ಅಂದರೆ ಏನು, ಅನು? ನಿನ್ನ ಮದುವೆಯಾಗಿ ಕೆಲವೇ ದಿನಗಳಾಗಿವೆ. ನಿನಗೆ ದೀಪಕ್‌ ಚೆನ್ನಾಗಿ ಗೊತ್ತಿರಬೇಕು, ಅಲ್ಲವೇ?""

ಸಮಾಧಾನವಾಗಲು ಹೆಣಗುತ್ತ ಅನು ತನ್ನ ಅಂಗೈಯ ಹಿಂದೆಯಿಂದ ತನ್ನ ಮುಖದ ಮೇಲಿನ ಕಣ್ಣೀರನ್ನು ಒರೆಸಿಕೊಂಡಳು. ''ನಾನು ಅಂದುಕೊಂಡಿದ್ದಷ್ಟು ಚೆನ್ನಾಗಿ ಅವನನ್ನು ತಿಳಿದುಕೊಂಡಿಲ್ಲ. ಬಹುಶಃ ನನಗೆ ಅವನು ಗೊತ್ತೇ ಇಲ್ಲವೇನೊ.""

''ಅನು, ನಾವಿಬ್ಬರೂ ನಮ್ಮ ಜೀವನದುದ್ದಕ್ಕೂ ಒಬ್ಬರಿಗೊಬ್ಬರು ಬೆಸ್ಟ್‌ ಫ್ರೆಂಡ್ಸ್‌ ಆಗಿರುತ್ತೇವೆ ಎಂದು ಮಾತು ತೆಗೆದುಕೊಂಡಿದ್ದೇವೆ. ಅದು ನಿಜ ಎಂದು ನಮ್ಮಿಬ್ಬರಿಗೂ ಗೊತ್ತು. ನೀನು ಅವನನ್ನು ಬಿಟ್ಟುಬಿಡಬೇಕು ಎಂದು ಅಂದುಕೊಂಡಿದ್ದೀಯಾ?"" ಅವನು ಅವಳ ಕೈಯನ್ನು ತನ್ನ ಅಂಗೈಗಳ ನಡುವೆ ಇಟ್ಟುಕೊಂಡ. ನಾನು ವಾರಣಾಸಿ ಬಿಟ್ಟು ಮೈಸೂರಿಗೆ ಹೋಗುತ್ತಿದ್ದೇನೆ ಎಂದ ದಿನವೂ ಅವನು ಹೀಗೆ ನನ್ನ ಕೈಗಳನ್ನು ಹಿಡಿದುಕೊಂಡಿದ್ದ.

ಅನು ತಲೆಯಾಡಿಸಿದಳು. ಅವಳಿಗೆ ಮುಂದಕ್ಕೆ ಏನು ಹೇಳಬೇಕೆಂದೆ ತಿಳಿಯಲಿಲ್ಲ.

''ಅನು, ನಿನಗೇನಾದರೂ ಸಹಾಯ ಬೇಕಾದರೆ, ಎಂತಹ ಸಮಯದಲ್ಲೇ ಆಗಲಿ, ಹಗಲಾಗಲಿ ರಾತ್ರಿಯಾಗಲಿ, ನನ್ನನ್ನು ಕರೆಯುತ್ತೇನೆಂದು ಮಾತು ಕೊಡು. ""

''ಖಂಡಿತ, ಖಂಡಿತವಾಗಿ, ಪವನ್‌.""

ಸ್ವಲ್ಪ ಹೊತ್ತು ಅವರಿಬ್ಬರೂ ಮೌನವಾಗಿದ್ದರು. ಕೊನೆಗೆ ಅನು ಅವನತ್ತ ನೋಡಿದಳು. ''ಪವನ್‌, ನಿನಗೆ ಯಾರು ಸಂತೋಷ ಕೊಡಬಲ್ಲರೊ ಅಂತಹವಳನ್ನು ನೀನು ಹುಡುಕಿಕೊಳ್ಳಬೇಕು.""

''ನಾನು ಬೇರೆ ಯಾರನ್ನಾದರೂ ಪ್ರೀತಿಸ ಬಲ್ಲೆ ಎಂದು ನನಗೆ ಗೊತ್ತಿಲ್ಲ, ಅನು.""

ಅದರ ಅರ್ಥ ಅವಳನ್ನು ಬಿಟ್ಟು ಬೇರೆಯವರು ಎಂದೆ?

''ಬೈ, ಅನು."" ಪವನ್‌ ಎದ್ದು ನಿಂತ. ''ನನಗೆ ಇ-ಮೇಯ್ಲ್‌ು ಮಾಡುತ್ತಿರು. ಅದರಿಂದಲಾದರೂ ನೀನು ಹೇಗಿರುವೆ ಎಂದು ನನಗೆ ಗೊತ್ತಾಗುತ್ತಿರುತ್ತೆ....""

ಅವನು ಈಗಲೂ ನನ್ನನ್ನು ಪ್ರೀತಿಸುತ್ತಿದ್ದಾನೆ. ನನಗೆ ಗೊತ್ತು. ಒಳ್ಳೆಯ ವ್ಯಕ್ತಿ, ಅದರೆ ಜೀವವಿಲ್ಲದವನು. ಸುಮ್ಮನೆ ಕಾಲೆಳೆದುಕೊಂಡು ಓಡಾಡುತ್ತಿರುತ್ತಾನೆ. ಆದರೆ ಇವನಿಗಿಂತ ಒಳ್ಳೆಯ ಸ್ನೇಹಿತನಾದರೂ ಎಲ್ಲಿ ಸಿಗುತ್ತಾನೆ?

(ಸಶೇಷ)

ಅಧ್ಯಾಯ - 28 ಅಧ್ಯಾಯ - 30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+