• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧ್ಯಾಯ 13: ಎದೆಯ ಕೂಗು ಮೀರಿ...

By Staff
|

ಅನು ಮನದಲ್ಲಿ ಭಾರತಕ್ಕೆ ಹಿಂದಿರುಗುವ ಕನಸುಅನು ತನ್ನ ಪ್ರಶಾಂತವಾದ, ತಾನು ಒಬ್ಬಳೆ ಏಕಾಂಗಿಯಾಗಿ ಇರುತ್ತಿದ್ದ ಮನೆಗೆ ಹಿಂದಿರುಗಿದಳು. ಅವಳು ಇತ್ತೀಚೆಗಷ್ಟೇ ವಿಲ್ಲೊ ಗ್ಲೆನ್‌ನಲ್ಲಿ ಕೊಂಡ ಈ ಸಣ್ಣ ಮನೆಯನ್ನು ಬಹಳ ಇಷ್ಟಪಡುತ್ತಿದ್ದಳು. ಆದರೆ ಆಕೆ ದ್ವೇಷಿಸುತ್ತಿದ್ದ ಪ್ರಯಾಣದ ಒಂದು ಮುಖ ಏನೆಂದರೆ ಖಾಲಿ ಮನೆಗೆ ಹಿಂದಿರುಗುವ ಶೂನ್ಯ ಭಾವ. ಅವಳ ಸಾಹಸಗಳನ್ನು ಕಾತರದಿಂದ ಕೇಳಲು ಆ ಮನೆಯಲ್ಲಿ ಅವಳಿಗಾಗಿ ಯಾರೂ ಕಾಯುತ್ತ ಕುಳಿತಿರುತ್ತಿರಲಿಲ್ಲ. ಪ್ರವಾಸದಿಂದ ಹಿಂದಿರುಗಿ ಬಂದಾಗಲೆಲ್ಲ ಸಾಮಾನ್ಯವಾಗಿ ಭಾರತದಲ್ಲಿನ ತನ್ನ ಪೋಷಕರಿಗೆ ಫೋನ್‌ ಮಾಡಿ ತಾನು ವಾಪಸು ಬಂದಿರುವುದನ್ನು ತಿಳಿಸುತ್ತಿದ್ದಳು.ಈ ಬಾರಿ ಅವರಿಗೆ ತಿಳಿಸಲು ಹೊಸದೊಂದು ವಿಷಯ ಇತ್ತು; ದೀಪಕ್‌ ರಂಜನ್‌ ಅನ್ನು ಭೇಟಿಯಾಗಿದ್ದು. ಆದರೆ, ಆತ ನಿಜವಾಗಲೂ ಅವಳಿಗೆ ಫೋನ್‌ ಮಾಡಲಿದ್ದಾನೆಯೆ? ಬಹುಶಃ ಇಲ್ಲ.ಆಕೆ ತನ್ನ ಅಂಚೆ ಕಾಗದಗಳ ಮೇಲೆ ಕಣ್ಣಾಡಿಸಿದಳು. ಬಹಳಷ್ಟೆಲ್ಲ ಪ್ರಯೋಜನಕ್ಕೆ ಬಾರದ ಜಾಹಿರಾತುಗಳು ಮತ್ತು ಮನೆಯ ವಿದ್ಯುತ್‌, ಟೆಲಿಫೋನ್‌ ಮತ್ತಿತರ ಬಿಲ್ಲುಗಳು. ಹಾಗಾಗಿ ಅವನ್ನೆಲ್ಲ ಅಡಿಗೆ ಕೋಣೆಯ ಟೇಬಲ್‌ ಮೇಲೆ ಒಗೆದಳು. ಫೋನಿನ ಆನ್ಸರಿಂಗ್‌ ಯಂತ್ರದ ದೀಪ ಮಿನುಗುತ್ತಿತ್ತು. ಹೊಸ ಸಂದೇಶಗಳನ್ನು ಕೇಳಲು ಗುಂಡಿ ಒತ್ತಿದಳು.''ಹಾಯ್‌ು ಅನು, ನಾನು ಡ್ಯಾನ್‌... ಡೇನಿಯಲ್‌ ಕೂಪರ್‌. ನನ್ನ ನೆನಪಿದೆಯಾ? ಸ್ಯಾನ್‌ ಹೋಸೆ ವಿಶ್ವವಿದ್ಯಾನಿಲಯ? ನನಗೊಂದು ಫೋನ್‌ ಮಾಡಿ, ಮತ್ತೆ ಒಂದಷ್ಟು ಮಾತನಾಡಬಹುದು. ನನ್ನ ಫೋನ್‌ ನಂಬರ್‌...""ಯಾಕೆ ಮಳೆಯಾದಾಗಲೆಲ್ಲ ಧೋ ಎಂದೇ ಸುರಿಯುತ್ತದೆ? ಆಕೆಯ ಗೋಡೆ ಗಡಿಯಾರ ಹತ್ತೂವರೆ ತೋರಿಸಿತು. ಇನ್ನೊಂದು ಕೊನೆಯಲ್ಲಿ ಫೋನ್‌ ರಿಂಗುಣಿಸುತ್ತಿರುವ ಶಬ್ದ ಕೇಳಿಸುತ್ತಿರಲು ಇತ್ತ ಅನೂ ಎದೆ ನಗಾರಿಯಂತೆ ಬಡಿದುಕೊಳ್ಳಲಾರಂಭಿಸಿತು. ಡ್ಯಾನ್‌ನೊಡನೆ ಮಾತನಾಡುವ ಅವಕಾಶಕ್ಕಾಗಿ ತಾನು ಸಂಭ್ರಮಿಸುತ್ತಿರುವುದನ್ನು ನೋಡಿ ತನ್ನನ್ನು ತಾನೆ ದ್ವೇಷಿಸಿದಳು. ಇಡೀ ಒಂದು ವರ್ಷವಾಯಿತು, ಆದರೆ ಈಗಲೂ ನಾನು ಶಾಲಾ ಬಾಲಕಿಯಂತೆ ಆಡುತ್ತಿದ್ದೇನೆ. ಫೋನಿನಲ್ಲಿ ಆನ್ಸರಿಂಗ್‌ ಯಂತ್ರದ ಸ್ವಯಂಚಾಲಿತ ಸಂದೇಶ ಕೇಳಿಸಲಾರಂಭವಾಯಿತು. ಆಕೆ ತನ್ನ ಸಂದೇಶವನ್ನು ಬಿಡಬೇಕೆ?ತಕ್ಷಣ ಫೋನ್‌ ಎತ್ತಿಕೊಂಡದ್ದು ಕೇಳಿಸಿತು: ''ಒಂದು ಸೆಕೆಂಡ್‌ ಇರಿ, ಆನ್ಸರಿಂಗ್‌ ಯಂತ್ರ ಆಫ್‌ ಮಾಡುತ್ತೇನೆ.""ಅವನೇ, ಡ್ಯಾನ್‌!

''ಡ್ಯಾನ್‌? ನಾನು ಅನು. ನಾನು ಬೋಸ್ಟನ್‌ಗೆ ಕಂಪನಿ ವ್ಯವಹಾರದ ಮೇಲೆ ಹೋಗಿದ್ದೆ. ಈಗ ತಾನೆ ಬಂದೆ. ಈ ಮಧ್ಯೆ ನೀವು ಹೇಗಿದ್ದೀರಿ?""''ಈಗ ತಾನೆ ಸ್ಯಾನ್‌ ಹೋಸೆ ಪೊಲೀಸ್‌ ವಿಭಾಗದಲ್ಲಿ ಪತ್ತೇದಾರನಾಗಿ ಸೇರಿಕೊಂಡಿದ್ದೇನೆ. ಆರು ತಿಂಗಳ ಹಿಂದೆ, ನಾನು ಲಾಸ್‌ ಏಂಜಲೀಸ್‌ನಿಂದ ಹಿಂದಿರುಗಿದ ಬಳಿಕ ನಿಮ್ಮ ಅಪಾರ್ಟ್‌ಮೆಂಟಿನ ಹತ್ತಿರ ಬಂದಿದ್ದೆ. ಆದರೆ ನೀವು ಮನೆ ಬದಲಾಯಿಸಿದ್ದಿರಿ. ನನಗೆ ನಿಮ್ಮ ಹೊಸ ನಂಬರ್‌ ಸಿಗಲಿಲ್ಲ. ಫೋನ್‌ ಡೈರೆಕ್ಟರಿ ನಿಮ್ಮದು ಅನ್‌ಲಿಸ್ಟೆಡ್‌ ಎಂದು ಹೇಳುತ್ತದೆ.""''ಹೌದು,"" ಆಕೆ ಚುಡಾಯಿಸಿದಳು. ''ನಾನು ಅದನ್ನು ಯಾರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕೆಂದು ಬಯಸುತ್ತೇನೊ ಅವರಿಗೆ ಮಾತ್ರ ಕೊಡುತ್ತೇನೆ."" ಯಾರಿಗೆ ಗೊತ್ತಿತ್ತು ನೀನು ವಾಪಸ್ಸು ಬರುತ್ತೀಯೆ ಎಂದು!''ಹ್ಞೂಂ... ಆ ಪಟ್ಟಿಯಲ್ಲಿ ನಾನು ಸೇರಬಲ್ಲೆನೆ?""''ಅದನ್ನು ನೀವೇ ಹೇಳಿ! ನೀವು ಹಾಗೇ ಮಾಯವಾಗಿಬಿಟ್ಟಿರಿ.""''ಹೌದು,"" ಅವನು ನಿಟ್ಟುಸಿರು ಬಿಟ್ಟ. ''ನಾನೇನೊ ಪತ್ತೆದಾರನಾಗಿ ಆಯ್ಕೆಯಾಗಿರಬಹುದು, ಆದರೆ ನಿಮಗಾಗಿ ಕಾಣೆಯಾದವರ ಪಟ್ಟಿಯನ್ನೆಲ್ಲ ಹುಡುಕಿದೆ. ನಿಮ್ಮನ್ನು ನಾನು ಊಟಕ್ಕೆ ಕರೆದುಕೊಂಡು ಹೋಗಬಹುದೆ? ಆಗ ಅದರ ಬಗ್ಗೆ ಎಲ್ಲ ಮಾತನಾಡಬಹುದು.""

''ಓ, ಖಂಡಿತ. ಭೇಟಿಯಾಗೋಣ."" ಅನು ದೀರ್ಘವಾದ ಉಸಿರೆಳೆದುಕೊಂಡಳು. ''ಅಂದ ಹಾಗೆ, ನನ್ನ ಹೊಸ ಫೋನ್‌ ನಂಬರ್‌ ನಿಮಗೆ ಹೇಗೆ ಸಿಕ್ಕಿತು?""''ಈಗ ನಾನು ಪೊಲೀಸ್‌ನವನು. ಜನರನ್ನು ಕಂಡುಹಿಡಿಯುವುದು ಅದರ ಜೊತೆ ಬರುವ ಸವಲತ್ತುಗಳಲ್ಲಿ ಒಂದು. ಮತ್ತೆ ನನಗೆ ಕೆಲವೊಂದು ವಿಶೇಷ ಸೌಲಭ್ಯಗಳೂ ಇವೆ.""

''ಕೆಟ್ಟವರು ನೀವು, ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ!"" ಅನು ಸಂತೋಷದಿಂದ ನಕ್ಕಳು. ಫೋನಿನ ಆ ಕಡೆಯಲ್ಲಿರುವ ಆತ ಅವಳ ನಗುವನ್ನು ಕಾಣಲಾಗುವುದಿಲ್ಲ ಎಂದು ಅವಳಿಗೆ ಖುಷಿಯಾಯಿತು. ಕೇವಲ ಅವನ ಸ್ವರ ಕೇಳಿದರೆ ಸಾಕು ಇಂತಹ ಒಂದು ಪರಿಣಾಮ ಈಗಲೂ ಆಗುತ್ತದೆ ಎನ್ನುವುದನ್ನು ಅವಳಿಗೇ ನಂಬಲಾಗಲಿಲ್ಲ.

''ನೀವು ಹೇಗೆ ಹೇಳಿದರೆ ಹಾಗೆ. ಊಟಕ್ಕೆ ಬುಧವಾರದ ರಾತ್ರಿ ಹೇಗೆ? ನನಗೆ ನಿಮ್ಮ ವಿಳಾಸ ಕೊಡಿ. ನಾನೇ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ಅಥವಾ ನನ್ನನ್ನು ಮುಚ್ಚಿಡಬೇಕಾಗುವಂಥ ರೂಮ್‌ಮೇಟ್‌ಗಳು ನಿಮಗೆ ಇನ್ನೂ ಇದ್ದಾರೆಯೇ ಹೇಗೆ?""''ಇಲ್ಲ, ಈಗ ಯಾವ ರೂಮ್‌ಮೇಟ್‌ಗಳೂ ಇಲ್ಲ. ಸರೀ, ನಿಮಗೀಗಾಗಲೆ ನನ್ನ ಅನ್‌ಲಿಸ್ಟೆಡ್‌ ನಂಬರ್‌ ಗೊತ್ತಿದ್ದರೆ ನನ್ನ ವಿಳಾಸವನ್ನೂ ನೀವು ಹುಡುಕಿರುತ್ತೀರಿ ಎಂದುಕೊಳ್ಳುತ್ತೇನೆ?""

ಆತ ತುಸುವೆ ವ್ಯಸನಗೊಂಡಂತೆ ಕಂಡ. ''ನಾನು ಸಭ್ಯ. ಹಾಗೆಲ್ಲ ಮಾಡುವುದಿಲ್ಲ.""''ಇಲ್ಲ, ನೀವು ಖಂಡಿತ ಮಾಡಬಲ್ಲಿರಿ,"" ಅವಳು ತಮಾಷೆ ಮಾಡಿದಳು. ಆತ ಅವಳನ್ನು ಡಿಸ್ನಿಲ್ಯಾಂಡ್‌ಗೆ ಹೋಗಲು ಆಹ್ವಾನಿಸಿದ್ದ. ಆದರೆ ಮತ್ತೆ ಎಂದೂ ಫೋನ್‌ ಮಾಡಿರಲಿಲ್ಲ. ಈಗ ಇಲ್ಲಿ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ''ಕಂಡುಕೊಳ್ಳಿ, ಡ್ಯಾನ್‌. ನಿಮಗೀಗಾಗಲೆ ಗೊತ್ತಿಲ್ಲದ ಪಕ್ಷದಲ್ಲಿ.""

''ಅನು, ನೀವು ನನಗೆ ವಾಪಸು ಫೋನ್‌ ಮಾಡಿದ್ದಕ್ಕೆ ನನಗೆ ನಿಜವಾಗಲೂ ಸಂತೋಷವಾಗಿದೆ. ನಿಮ್ಮನ್ನು ಕಾಣಲು ನಾನು ಎದುರು ನೋಡುತ್ತಿದ್ದೆ. ನಾವು ಒಂದು ವರ್ಷದ ಹಿಂದೆ ಎಲ್ಲಿ ಬಿಟ್ಟಿದ್ದೆವೊ ಅಲ್ಲಿಂದ ಶುರು ಮಾಡಿಕೊಳ್ಳಬಹುದು. ಅದು ಒಂದು ವರ್ಷವಾಗಿಬಿಟ್ಟಿತೆ? ಏನನ್ನು ಶುರು ಮಾಡಿಕೊಳ್ಳುವುದು? ನಮ್ಮ ಗೆಳೆತನವನ್ನೆ ಅಥವಾ ಭಾರತದ ಬಗೆಗಿನ ನನ್ನ ಕತೆಗಳನ್ನೆ?

''ಈ ಸಲ ಪೊಲೀಸ್‌ ಸಾಹಸಗಳ ಬಗ್ಗೆ ಮತ್ತು ನಿಮ್ಮ ಜೀವನದ ಗುಂಡಿನ ಕಾಳಗಗಳ ಬಗ್ಗೆ ಮಾತನಾಡೋಣ.""

''ಸರಿ ಮತ್ತೆ. ಬುಧವಾರ 6 ಗಂಟೆಗೆ ಭೇಟಿಯಾಗೋಣ.""

''ಶುಭ ರಾತ್ರಿ, ಡ್ಯಾನ್‌."" ಫೋನನ್ನು ಕೆಳಗಿಡುತ್ತಿರುವಾಗ ಅವಳಿಗೆ ಹುಮ್ಮಸ್ಸನ್ನು ತಡೆದುಕೊಳ್ಳಲಾಗಲಿಲ್ಲ. ಯಾಹೂ!!

ಇನ್ನು, ದೀಪಕ್‌. ಅವನು ಅವಳಿಗೆ ಎಂದಾದರೂ ಕರೆ ಕೊಡಲಿದ್ದಾನೆಯೆ? ಹಾಗೂ, ಪವನ್‌ ಏನಾದರೂ ಅವನು ಅವಳನ್ನು ಪ್ರೀತಿಸುತ್ತಾನೆ ಎಂದು ಹೇಳಿದರೂ, ಅವಳು ಎಂದಾದರೂ ಭಾರತಕ್ಕೆ ಹಿಂದಿರುಗಬಲ್ಲಳೆ? ಅಮೆರಿಕಾ ಎಂದಿಗೂ ಸ್ವಂತ ಮನೆಯಾಗದಿರಬಹುದು, ಆದರೆ ಇಲ್ಲಿರುವುದನ್ನೇ ಅವಳು ಇಷ್ಟಪಡಲು ಆರಂಭಿಸಿಬಿಟ್ಟಿದ್ದಳು.

ಡ್ಯಾನ್‌ ಉತ್ಸಾಹ ಕೆರಳಿಸುವ ಮನುಷ್ಯನಾಗಿರಬಹುದು, ಅದರೆ ಆತನೊಬ್ಬ ಸ್ವತಂತ್ರ ಜೀವಿ. ಚೀನಾದ, ಭಾರತದ ಹುಡುಗಿಯರನ್ನೆಲ್ಲಾ, ಬಹುಶಃ ಸೂರ್ಯನ ಕೆಳಗೆ ಹೆಣ್ಣು ಎಂದು ಯಾವುದಿದೆಯೊ ಅದರ ಜೊತೆಯೆಲ್ಲ ಪ್ರಯೋಗ ನಡೆಸಿರುತ್ತಾನೆ. ಅವರು ಡಿಸ್ನಿಲ್ಯಾಂಡ್‌ಗೆ ಎಂದೂ ಹೋಗಲಾಗದಿದ್ದರೂ ಡ್ಯಾನ್‌ಗೆ ಮಾತ್ರ ಇದು ಬಹಳ ಚಿಕ್ಕ ಪ್ರಪಂಚ. ಇತರೆ ಜನಾಂಗದವರನ್ನು ನಮ್ಮೊಳಗೆ ಸೇರಿಸಿಕೊಳ್ಳಲು ಸಾವಿರಾರು ವರ್ಷಗಳಾದರೂ ನಮಗೆ, ಭಾರತೀಯರಿಗೆ ಯಾಕೆ ಸಾಧ್ಯವಿಲ್ಲ? ಧರ್ಮ ಹಾಳಾಗಿ ಹೋಗಲಿ, ಕನಿಷ್ಠ ನಮ್ಮ ಕುಬ್ಜ ಜಾತಿಯ ಪರಿ-ಯನ್ನು ಸಹ ಮೀರಿ ಹೋಗಲು ಯಾಕೆ ಆಗುವುದಿಲ್ಲ?

ತಾನು ಬಹುವಾಗಿ ಬಯಸುವ ಡೇವಿಡ್‌ ಲೆಟ್ಟರ್‌ಮನ್‌ನ ದಿ ಲೇಟ್‌ನೈಟ್‌ ಶೋ ಹಿನ್ನೆಲೆಯಲ್ಲಿ ಕೇಳಿಬರುತ್ತಿರಲು ಅನು ತನ್ನ ಅಂಚೆ ಪತ್ರಗಳನ್ನು ವಿಂಗಡಿಸುತ್ತ ಕುಳಿತಳು. ಹಾಗೆಯೇ, ಡ್ಯಾನ್‌ ಲಾಸ್‌ ಏಂಜಲೀಸ್‌ನಲ್ಲಿ ಎಷ್ಟು ಜನ ಹೆಂಗಸರೊಂದಿಗೆ ಮಲಗಿರಬಹುದು ಎಂದು ಆಲೋಚಿಸಿದಳು. ಆತನ ರೂಪಕ್ಕೆ ಮರುಳಾಗಿ ಅವನ ಹಿಂದೆ ಬೀಳುವ ಟೊಳ್ಳು ಮನದ ಅಮೆರಿಕನ್ನರಿಗಿಂತ ಏಷಿಯಾದ ಹೆಂಗಸರು ಹೆಚ್ಚು ಸ್ಥಿರ ಎಂದು ಆತನೇನಾದರೂ ಭಾವಿಸಿದನೆ? ಅವನು ಅದನ್ನೆಲ್ಲ ಲೆಕ್ಕಿಸುತ್ತಾನಾ? ಅವನು ಅವಳನ್ನು ಚುಂಬಿಸಿದರೆ ಅಥವಾ ಸ್ನೇಹಕ್ಕಿಂತ ಹೆಚ್ಚಿನದನ್ನು ಬಯಸಿದರೆ ಆಗ ಏನು? ಅವಳು ಅದಕ್ಕೆಲ್ಲ ಒಪ್ಪಿಕೊಳ್ಳುತ್ತಾಳಾ? ತಾನು ಈಗ ಅವನು ಮೊದಲ ಸಲ ಭೇಟಿಯಾದದ್ದಕ್ಕಿಂತ ಹೆಚ್ಚು ಪ್ರಮಾಣದ ಪಾಶ್ಚಿಮಾತ್ಯಳಾಗಿರುವುದಾಗಿ ಅನು ಭಾವಿಸಿದಳು. ಆದರೆ ಅವಳು ನಿಜವಾಗಲೂ ಹೆಚ್ಚು ಪಾಶ್ಚಿಮಾತ್ಯಳಾಗಿದ್ದಾಳೆಯೆ?ಅವನು ಪ್ರತಿ ಸಲ ಫೋನ್‌ ಮಾಡಿದಾಗಲೂ ಮದುವೆಯ ವಿಷಯ ಯಾಕೆ ಅವಳ ಮನಸ್ಸಿನಲ್ಲಿ ಸುಳಿಯುತ್ತದೆ? ಅವಳು ಡ್ಯಾನ್‌ನನ್ನಾಗಲಿ, ಅಥವ ಆ ಮಾತಿಗೆ ಬಂದರೆ, ಭಾರತೀಯನಲ್ಲದ ಯಾರನ್ನೂ ಮದುವೆಯಾಗಲಾರಳು. ಯಾಕೆಂದರೆ, ಆಂತರ್ಯದಲ್ಲಿ ಅವಳು ಏನೂ ಬದಲಾಗಿರಲಿಲ್ಲ. ಅವಳು ಜೀನ್ಸ್‌, ಸೂಟು ಧರಿಸಬಹುದು, ಆದರೆ ನಡುವಿನ ಕೆಳಗಿನವರೆಗಿನ ತನ್ನ ನೀಳ ಕೂದಲನ್ನು ಇನ್ನೂ ಹಾಗೆ ಬಿಟ್ಟುಕೊಂಡಿದ್ದಳು. ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುವುದು ಪಾಶ್ಚಾತ್ಯ ಶೈಲಿಗೆ ಶರಣಾದ ಅರ್ಥವನ್ನು ಕೊಡಬಹುದು. ಅವಳಿಗೆ ಮೈಸೂರಿನ ತನ್ನ ಹಳೇ ಸ್ನೇಹಿತೆಯರ ಜೊತೆ ಅವರು ನೀನು ಬಹಳ ಅಮೇರಿಕನ್‌ ಆಗಿಬಿಟ್ಟೆ ಎನ್ನಿಸಿಕೊಳ್ಳದೆ ಬೆರೆಯುವುದು ಬೇಕಿತ್ತು. ಅದರ ಬದಲು ಅವಳಿಗೆ ಅವರು ಇವಳೆಷ್ಟು ಸರಳ ಎಂದು ಮಾತನಾಡಿಕೊಳ್ಳುವುದನ್ನು ಕೇಳಿಸಿಕೊಳ್ಳವುದು ಬೇಕಾಗಿತ್ತು. ಅವಳು ನಕಲಿ ಉಚ್ಚಾರಣೆ ಮಾಡುತ್ತಿರಲಿಲ್ಲ. ಅಮೇರಿಕ ಅವಳನ್ನು ಸ್ವಲ್ಪವೂ ಬದಲಾಯಿಸಿರಲಿಲ್ಲ.ಇದನ್ನೆಲ್ಲ ಕೇಳಿದರೆ ಅವಳ ಪೋಷಕರಿಗೆ ಬಹಳ ಹೆಮ್ಮೆಯಾಗಬಹುದು. ಅಮೇರಿಕನ್ನರ ತರಹ ಉಚ್ಚಾರಣೆ ಮಾಡುವುದಾಗಲಿ ಅಮೇರಿಕನ್‌ ಒಬ್ಬನನ್ನು ಡೇಟ್‌ ಮಾಡುವುದಾಗಲಿ ಅವಳು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿರುವಂತೆ ತೋರಿಸಬಹುದು. ಈಗಾಗಲೆ ಅವಳ ಕೆಲವು ಭಾರತೀಯ ಸ್ನೇಹಿತರು ಇನ್ನು ಅಮೇರಿಕವೆ ತಮ್ಮ ದೇಶ ಎಂದು ಘೋಷಿಸಿಬಿಟ್ಟಿದ್ದರು. ಅವರೆಲ್ಲ ಅಮೇರಿಕದ ಉಚ್ಚಾರಣೆ ಮಾಡುತ್ತಿದ್ದರು. ಭಾರತಕ್ಕೆ ಹೋದಾಗ ಅಮೇರಿಕದ ಬಗ್ಗೆ ಅದ್ಭುತವೆನಿಸುವ ಕತೆಗಳನ್ನು ಹೇಳುತ್ತಿದ್ದರು. ತಾವೆಷ್ಟು ಶ್ರೀಮಂತರು, ಅಲ್ಲಿ ತಮಗೆ ಎಂತೆಂತಹ ಮನೆ, ಕಾರುಗಳು ಇವೆ, ತಮ್ಮ ದೊಡ್ಡಸ್ತಿಕೆ ಎಷ್ಟು ಎಂದೆಲ್ಲ ಹೇಳಿಕೊಳ್ಳುತ್ತಿದ್ದರು. ಆದರೆ ತಮ್ಮ ಮನೆಗಳ ಮೇಲೆ ಇರುತ್ತಿದ್ದ 30 ವರ್ಷಗಳ ಸಾಲದ ಅಡಮಾನದ ವಿಷಯ ಮಾತ್ರ ಹೇಳುತ್ತಿರಲಿಲ್ಲ. ಅವರೂ ಸಹ ಒಂದು ರೀತಿಯಲ್ಲಿ ಸುಳ್ಳಿನ ಜೀವನ ನಡೆಸುತ್ತಿದ್ದರು.

ಅಷ್ಟಾದರೂ, ಡ್ಯಾನ್‌ ಜೊತೆಗಿನ ಭೋಜನ ಅತಿ ರಮ್ಯ ಎನ್ನಿಸಿತು ಅವಳಿಗೆ!

(ಸಶೇಷ)

ಅಧ್ಯಾಯ - 10 ಅಧ್ಯಾಯ - 12
(c) ಹಕ್ಕುಗಳು : ಲೇಖಕರದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more