ರೂಪಾ ದೀಪಕ್‌ನನ್ನು ಕೊಲೆ ಮಾಡಿದಳೇ...?


ಹೌದು. ನಿನಗೆ ಮದುವೆ ಆಗುವುದಕ್ಕೆ ಮುಂಚೆಯೆ ಒಬ್ಬ ಬಾಯ್‌ಫ್ರೆಂಡ್‌ ಇದ್ದ, ಅದನ್ನು ನೀನು ದೀಪಕ್‌ಗೆ ಹೇಳಿರಲಿಲ್ಲ ಎಂದು ಹೇಳಿದ್ದ. ಆಮೇಲೆ, ದೀಪಕ್‌ನ ಜೊತೆ ಮದುವೆಯಾದ ಕೆಲವು ತಿಂಗಳುಗಳಿಗೆಲ್ಲ ನೀನು ಆ ಬಾಯ್‌ಫ್ರೆಂಡ್‌ ಜೊತೆ ಓಡಿ ಹೋದೆಯಂತೆ.

ನೀನು ಅದನ್ನು ನಂಬುತ್ತೀಯಾ, ಅನು?

ನನಗೆ ಗೊತ್ತಿಲ್ಲ, ಅನು, ನನಗೆ ನಿಜವಾಗಲೂ ಭಯವಾಗುತ್ತಿದೆ. ರೂಪ ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದಳು. ನೀನು ಬರುತ್ತೇನೆ ಎಂದು ಹೇಳಿದ್ದೆ. ಎರಡು ಸಲ ಬರುತ್ತೇನೆ ಎಂದು ಹೇಳಿದೆ, ಬರಲಿಲ್ಲ.

ರೂಪ, ನಾನು ಅಲ್ಲಿಗೆ ಬಂದಿದ್ದೆ. ಇಲ್ಲಿಂದ ಅಷ್ಟು ದೂರ ಸ್ಟ್ಯಾನ್‌ಫರ್ಡ್‌ಗೆ ಬಂದಿದ್ದೆ. ಪಾರ್ಕಿಂಗ್‌ ಲಾಟ್‌ನಲ್ಲಿ ಇದ್ದೆ. ಆದರೆ - ಇದು ಬಹಳ ಸಂಕೀರ್ಣವಾಗಿಬಿಟ್ಟಿದೆ, ರೂಪ.

ಡ್ಯಾನ್‌ ಪೋನನ್ನು ವಾಪಸು ತೆಗೆದುಕೊಂಡ. ರೂಪ, ಅನು ಈಗ ನಿಮ್ಮನ್ನು ಕಾಣಲು ಆಗುವುದಿಲ್ಲ. ಬೆಳಿಗ್ಗೆಗೆ ಡಿಟೆಕ್ಟಿವ್‌ಗಳು ಬಂದು ನಿಮ್ಮನ್ನು ಮತ್ತೆ ಕರೆದುಕೊಂಡು ಬರುತ್ತಾರೆ. ಅವರು ನಿಮ್ಮನ್ನು ಮತ್ತೊಮ್ಮೆ ಪ್ರಶ್ನಿಸಬೇಕಿದೆ. ನಮಗೆ ಈಗ ಇನ್ನೂ ಬಹಳಷ್ಟು ಮಾಹಿತಿ ಬೇಕಾಗಿದೆ. ಈಗ ಅವರಿಗಾಗಿ ಕಾಯಿರಿ, ದಯವಿಟ್ಟು. ಗುಡ್‌ನೈಟ್‌. ಅವನು ಕರೆ ತುಂಡು ಮಾಡಿದ.

ಇದು ಬಹಳ ಒರಟಾಯಿತು, ಡ್ಯಾನ್‌. ಈ ದೇಶವೆ ಒರಟು ದೇಶ. ಇಡೀ ರಾತ್ರಿಯೆಲ್ಲ ಅದು ಹೇಗೆ ಅವಳು ಅಲ್ಲಿ ಒಬ್ಬಳೆ ಸುಮ್ಮನೆ ಕುಳಿತಿರಲು ಸಾಧ್ಯ? ಹಾಗೇನಾದರೂ ನನಗಾಗಿದ್ದರೆ ನನಗೂ ಭಯವಾಗುತ್ತಿತ್ತು. ಅವಳಿಗೆ ನಿಜವಾಗಲೂ ಇಲ್ಲಿ ಬೇರೆ ಯಾರೂ ಗೊತ್ತಿಲ್ಲ.

ಅನು, ನನ್ನನ್ನು ಕ್ಷಮಿಸು. ಅವನ ಸ್ವರ ದೃಢವಾಗಿತ್ತು. ಈಗ ನೀನು ಅವಳನ್ನು ನೋಡಲಾಗದು.

ನೀನು ಯಾಕೆ ಇಲ್ಲಿ ಇದ್ದೀಯ, ಡ್ಯಾನ್‌?

ನಿನಗೆ ಒಬ್ಬಳೆ ಇರಲು ಆಗುತ್ತಿಲ್ಲ ಎಂದುಕೊಂಡೆ ನಾನು.

ಆಗುತ್ತಿಲ್ಲ! ಅವಳನ್ನು ಪ್ರಶ್ನೆ ಮಾಡಲು ಅವನು ಅಲ್ಲಿ ಇದ್ದಾನೆಯೆ? ಅಥವ, ರೂಪಾಳ ತರಹ ಇವಳೂ ಒಂಟಿಯಾಗಿರುವುದು ಬೇಡ ಎಂದೆ?

ಅನು, ಇವತ್ತು ಬೆಳಿಗ್ಗೆ ನೀನು ಮತ್ತು ರೂಪ ಏನೇನು ಮಾತನಾಡಿದಿರಿ? ಅಥವ, ಅಲ್ಲಿ ಪವನ್‌ನೂ ಇದ್ದನೆ? ಅವಳಿಗೆ ಆಶ್ಚರ್ಯವಾಯಿತು. ತಾವು ಮೂವರೂ, ಅಂದರೆ ಪವನ್‌, ರೂಪ ಮತ್ತು ತಾನು, ಇದರಲ್ಲಿ ಹೇಗೊ ಭಾಗಿಯಾಗಿದ್ದೇವೆ ಎಂದು ಅವನು ಅಂದುಕೊಂಡಿದ್ದಾನೆಯೆ?

ನಾನು ದೀಪಕ್‌ನ ಮನೆಗೆ ಹೋಗಲೆ ಇಲ್ಲ, ಡ್ಯಾನ್‌.

ಯಾಕೆ? ನಾನು ಅಲ್ಲಿ ಬಹಳಷ್ಟು ಹೊತ್ತು ದೀಪಕ್‌ನ ಕಾರನ್ನು ಕಾಯುತ್ತ ಕುಳಿತಿದ್ದೆ, ಅಲ್ಲವೆ? ಅಷ್ಟು ಹೊತ್ತು ಎಲ್ಲಿ ಹೋಗಿದ್ದೆ? ಅನು, ಇಲ್ಲಿ ನಾನು ನಿನಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ದಯವಿಟ್ಟು ರೂಪಾಳನ್ನು ರಕ್ಷಿಸಲು ಹೋಗಬೇಡ. ಅವಳು ನಿನ್ನ ಮೇಲೆ ತಿರುಗಿ ಬೀಳುತ್ತಾಳೆ. ನೀನು ಅದನ್ನು ನಂಬು. ಅವಳು ಈಗಾಗಲೆ ಅದನ್ನು ಮಾಡಿದ್ದಾಳೆ.

ದೀಪಕ್‌ನ ಮನೆಯ ಹತ್ತಿರ ಸೆಲ್‌ಫೋನ್‌ ಸಿಗ್ನಲ್‌ ಇರಲಿಲ್ಲ. ನನ್ನ ಫೋನ್‌ ಕೆಲಸ ಮಾಡದೆ ಆ ಮನೆಯ ಒಳಗೆ ಹೋಗುವ ರಿಸ್ಕ್‌ ತೆಗೆದುಕೊಳ್ಳಲು ನಾನು ಸಿದ್ಧಳಿರಲಿಲ್ಲ. ಕಾರನ್ನು ವಾಪಸು ತಿರುಗಿಸಿಕೊಂಡು ಕೆಳಗೆ ಬಂದುಬಿಟ್ಟೆ. ಆಗ ನನ್ನ ಬಾಸ್‌ ಕೆಲಸದಲ್ಲಿ ಏನೊ ತುರ್ತುಪರಿಸ್ಥಿತಿ ಎಂದು ಕರೆ ಮಾಡಿದ್ದ. ಹಾಗಾಗಿ ನಿನಗೆ ನಾನು ತಕ್ಷಣವೆ ಕರೆ ಮಾಡಿ, ನಾನು ಅಲ್ಲಿಗೆ ಹೋಗಲಾಗಲಿಲ್ಲ ಎಂದು ಹೇಳಲು ಆಗಲಿಲ್ಲ.

ನೀನು ನನಗೆ ಹೇಳುತ್ತಿರುವುದು ಏನೆಂದರೆ, ನೀನು ಅಲ್ಲಿಗೆ ಹೋಗಿ ರೂಪಾಳನ್ನು ಭೇಟಿಯಾಗಲಿಲ್ಲ ಎಂದು, ಅಲ್ಲವೆ?

ಹೌದು, ಖಂಡಿತವಾಗಿ. ನಾನು ಇದನ್ನೇನೂ ಸೃಷ್ಟಿಸಿಕೊಂಡು ಹೇಳುತ್ತಿಲ್ಲ.

ಅನು, ನಾನು ನನ್ನ ಜೀವನವನ್ನು ಕಡೆಯ ತನಕ ಇವಳ ಜೊತೆ ಸಾಗಿಸಬೇಕು ಎಂದುಕೊಂಡ ವ್ಯಕ್ತಿ ಕೊನೆಗೂ ನನಗೆ ಸಿಕ್ಕಿದ್ದಾಳೆ. ನಾವಿಬ್ಬರೂ ಒಬ್ಬರಿಗೊಬ್ಬರು ಸರಿಜೋಡಿ ಎಂದುಕೊಳ್ಳಲು ನಾನು ಇಷ್ಟಪಡುತ್ತೇನೆ. ಈಗ ನಮಗಿಬ್ಬರಿಗೂ ಎಲ್ಲವೂ ಸರಿಯಾಗಿಯೆ ನಡೆಯುತ್ತಿದೆ. ದಯವಿಟ್ಟು ಇದನ್ನು ಹಾಳು ಮಾಡಬೇಡ.

ಡ್ಯಾನ್‌, ಸುಳ್ಳು ಹೇಳುವುದರಲ್ಲಿ ನಾನು ಬಹಳ ಅಸಮರ್ಥಳು. ಹಾಗೂ, ನಿನಗಂತೂ ನಾನು ಎಂದಿಗೂ ಸುಳ್ಳು ಹೇಳುವುದಿಲ್ಲ.

ಬಹಳವಾದ ಬಳಲಿಕೆಯಿಂದ ಅವನು ಗೋಡೆಗೆ ಒರಗಿಕೊಂಡ. ಅವನ ಕಣ್ಣುಗಳು ಮುಚ್ಚಿಕೊಳ್ಳುತ್ತಿದ್ದವು. ಸರಿ, ಈಗ ನನ್ನ ಕೈಯಲ್ಲಿ ಏನೂ ಮಾಡಲಾಗುವುದಿಲ್ಲ. ಈಗ ಹೋಗಿ ಮಲಗೋಣ. ನಾಳೆ ಬೆಳಿಗ್ಗೆಗಾದರೂ ಎಲ್ಲವೂ ಚೆನ್ನಾಗಿ ಕಾಣಿಸುತ್ತದೆ ಎಂದು ಬಯಸೋಣ.

ನೀನು ಹೇಳಿದ್ದು ಇವತ್ತು ಇನ್ನು ಸ್ವಲ್ಪ ಹೊತ್ತು ಹೋದ ಮೇಲೆ ಎಂದು, ಡ್ಯಾನ್‌. ಈಗ ಸಮಯ ಬೆಳಿಗ್ಗೆ 4 ಗಂಟೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+