• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟಾದ ರಾಯರ ಮಠದಲ್ಲಿ ಉಪಾಕರ್ಮ ಮತ್ತು ಆರಾಧನೆ

By Prasad
|
Google Oneindia Kannada News

ಜಾರ್ಜಿಯಾ ರಾಜ್ಯದ ಅಟ್ಲಾಂಟಾ ನಗರದಲ್ಲಿ ಆಗಸ್ಟ್ 2015ರಲ್ಲಿ ಸ್ಥಾಪಿತವಾಗಿರುವ ನಮ್ಮ RAMA ಸಂಸ್ಥೆಯು 'ಅನಂತಾದಿ ರಾಯರ ಮಠ' ಎಂದು ಗುರುತಿಸಿಕೊಂಡು ಪ್ರಚಲಿತವಾಗಿದೆ. ಭಾರತದಲ್ಲಿರುವ ಮಂತ್ರಾಲಯ ಮಹಾಮಠದ ರೀತಿಯಲ್ಲಿಯೇ ಇಲ್ಲಿಯೂ ಪೂಜಾದಿ ಸೇವೆಗಳನ್ನು ನಡೆಸಿಕೊಂಡು ಹೋಗುವುದು ನಮ್ಮ ಆಶಯವಾಗಿದ್ದು, ನಿತ್ಯಪೂಜೆಗಳು, ವಿಶೇಷ ಪೂಜೆಗಳು, ಪ್ರವಚನ, ಹಾಗೂ ಅಪರ ಕರ್ಮ ಇತ್ಯಾದಿಗಳನ್ನು ನಡೆಸುವ ಉದ್ದೇಶವಿದೆ.

ರಾಯರಮಠ, ಅಲ್ಲಿನ ಕಾರ್ಯಕರ್ತರ ವಸತಿ, ಬಹೂಪಯೋಗಿ ಒಳಾಂಗಣ, ಮತ್ತು ಭಕ್ತರಿಗಾಗಿ ಧ್ಯಾನ ಮಂದಿರ ಇವುಗಳನ್ನೆಲ್ಲ ನಿರ್ಮಿಸಲು ಆಸ್ತಿಕ ಜನರಿಂದ ದೇಣಿಗೆಗಳನ್ನು ಸಂಗ್ರಹಿಸುವುದು ನಮ್ಮ ಉದ್ದೇಶವಾಗಿದೆ.

ಪ್ರಸಕ್ತ ನಾವು ರಾಘವೇಂದ್ರ ಸ್ವಾಮಿಗಳ ಮಠವನ್ನು ಸ್ಥಾಪಿಸುವುದಕ್ಕಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದೇವೆ. ನಾವು ಈಗ ಪ್ರತಿ ಶನಿವಾರದಂದು ಶ್ರೀ ಲಕ್ಷ್ಮಿ ನರಸಿಂಹ ದೇವತೆಗಳು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಪಾದುಕಾ ಪೂಜಾ ಕೈಂಕರ್ಯವನ್ನು ಐವಿ ಲೀಗ್ ಅಕಾಡೆಮಿ, ಪೀಚ್ ಟ್ರೀ ಪಾರ್ಕ್ವೇ, ಕಮ್ಮಿಂಗ್ 30041ಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಿಕೊಂಡು ಬರುತ್ತಿದ್ದೇವೆ.

ಇಲ್ಲಿಗೆ ಎಲ್ಲರೂ ಬಂದು ಪಾಲ್ಗೊಂಡು ದೈವೀ ಕೃಪಾಶೀರ್ವಾದವನ್ನು ಪಡೆಯಬಹುದಾಗಿದೆ. ನಮ್ಮ ವಿನಂತಿಯ ಮೇರೆಗೆ ಇದೆಲ್ಲದಕ್ಕೂ ಭಾರತದ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಹಾಮಠದವರಿಂದ ನಮಗೆ ತಿಳಿವಳಿಕೆಯ ಪತ್ರವು ( Memorandum of Understanding) ಲಭ್ಯವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಈ ಕಾರ್ಯವನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನಾವು ನಿರತರಾಗಿದ್ದೇವೆ.

ನಮ್ಮ ಭವಿಷ್ಯದ ಹಲವು ಯೋಜನೆಗಳು ಹೀಗಿವೆ

* ಅತ್ಯದ್ಭುತವಾದ ರಾಯರ ಸನ್ನಿಧಿ ಮಠದ ನಿರ್ಮಾಣ.
* ಮಠದಲ್ಲಿ ಆಗಮೋಕ್ತವಾದ ನಿತ್ಯ ಪೂಜೆಗಳು ಮತ್ತು ಪ್ರಾರ್ಥನೆ.
* ನಿತ್ಯ ಪೂಜಾ ನಂತರ ತೀರ್ಥಪ್ರಸಾದ ವಿತರಣೆ.
* ಹಿಂದೂ ಧಾರ್ಮಿಕ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳು.
* ಮಠದಲ್ಲಿ ಮತ್ತು ಭಕ್ತರ ಮನೆಗಳಲ್ಲಿ ನಿಷ್ಣಾತ ಅರ್ಚಕರಿಂದ ಪೂಜಾವಿಧಿಗಳನ್ನು ಒದಗಿಸುವುದು.
* ಶ್ರಾದ್ಧ, ಪಿತೃಪಕ್ಷ ಇತ್ಯಾದಿ ಅಪರಕರ್ಮ ಸೌಲಭ್ಯಗಳು.
* ಹಿಂದೂ ಪರಂಪರೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿರ್ದಿಷ್ಟ ಹಾಗೂ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
* ಮಕ್ಕಳು, ಯುವಕ, ಯುವತಿಯರು ಮತ್ತು ದೊಡ್ಡವರಿಗಾಗಿ ಗುರುಕುಲಂ ತರಗತಿಗಳನ್ನು ನಡೆಸುತ್ತ ಮುಂದಿನ ಪೀಳಿಗೆಗಾಗಿ ಹಿಂದೂ ಧಾರ್ಮಿಕ ಭಾವನೆ ಮತ್ತು ಮೌಲ್ಯಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಕೊಡುವುದು.

ಅನಂತಾದಿ ರಾಯರ ಮಠದ (RAMA) ಟ್ರಸ್ಟಿ ಪ್ರದೀಪ ವಿಠ್ಠಲಮೂರ್ತಿ ಸಂದೇಶ

ಅಟ್ಲಾಂಟಾ ಘಟಕದ ವಿಶ್ವ ಮಾಧ್ವಸಂಘವನ್ನು ನಾವು ಮಾಧ್ವ ತತ್ವ ಸಿದ್ಧಾಂತಗಳನ್ನು ಅರಿಯುವುದಕ್ಕೋಸುಗ 2008ರಲ್ಲಿ ಐದು ಕುಟುಂಬಗಳೊಡನೆ ಸೇರಿ ಸ್ಥಾಪಿಸಿದೆವು. ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದಾಗಿ ಈಗ ನಾವಿಲ್ಲಿ ಹತ್ತು ಪಟ್ಟು ಬೆಳೆದಿದ್ದೇವೆ ಹಾಗೂ ಅಟ್ಲಾಂಟಾದಲ್ಲಿ ಒಂದು ರಾಯರ ಮಠವನ್ನು ಸ್ಥಾಪಿಸಲು ಸಂಕಲ್ಪಿಸಿದ್ದೇವೆ.

ಶ್ರೀ ಲಕ್ಷ್ಮೀ ನರಸಿಂಹ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಅತ್ಯಂತ ಶಾಂತ ಸ್ಥಳ ಪರಿಸರದಲ್ಲಿ ಪೂಜಾದಿ ಕೈಂಕರ್ಯಗಳನ್ನು ನೆರವೇರಿಸುವ ನಮ್ಮ ಕನಸನ್ನು ಸಾಕಾರವಾಗಿಸಲು ನಾವೀಗ ಅನೇಕ ಸಹೃದಯ ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸಲು ಆರಂಭಿಸಿದ್ದೇವೆ. ಈ ಬಗ್ಗೆ ಹಲವು ವಿಧಗಳಲ್ಲಿ ಪ್ರಯತ್ನ ನಡೆದಿದ್ದು ಪ್ರತಿ ವಾರ ರಾಯರ ಪಾದುಕಾ ಪೂಜೆಯನ್ನು ನೆರವೇರಿಸುವುದು ಇದರಲ್ಲಿ ಒಂದು.

ಆಸಕ್ತ ಭಕ್ತರು ಪೂಜಾದಿ ಸೇವೆಗಳನ್ನು ಮಾಡಿಸಲು ನಮ್ಮನ್ನು 404 -939 -2833 ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಭಕ್ತಾದಿಗಳು ಈ ಸೇವೆಗಳಲ್ಲಿ ಸ್ವಯಂಸೇವಾ ಕರ್ತರಾಗಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ಈ ಗುರಿಯನ್ನು ಸಾಧಿಸುವುದಕ್ಕಾಗಿ ತಮ್ಮ ಅಮೂಲ್ಯ ಸಮಯ ಹಾಗೂ ಧನಸಹಾಯವನ್ನು ನೀಡಬೇಕೆಂದು ಕೋರುತ್ತೇವೆ. ಈ ದೇಣಿಗೆಗಳಿಗೆ 501 (ಸಿ) {3}ರ ಅನ್ವಯ ತೆರಿಗೆ ವಿನಾಯಿತಿ ಇದೆ.

ಭಕ್ತಾದಿಗಳು ನಮ್ಮ ಈ ಮಹತ್ಕಾರ್ಯದ ಬಗ್ಗೆ ತಮ್ಮ ಕುಟುಂಬ ವರ್ಗ ಮತ್ತು ಬಂಧು ಮಿತ್ರರಿಗೆ ತಿಳಿಯಪಡಿಸಬೇಕಾಗಿ ವಿನಂತಿ. ನಮ್ಮ ವೆಬ್ ಸೈಟ್ ನಲ್ಲಿ ನೀವು ನಮ್ಮ ಬಗ್ಗೆ ಎಲ್ಲ ಮಾಹಿತಿ ಪಡೆಯಬಹುದು. ನಮ್ಮ ಫೇಸ್ ಬುಕ್ ಪುಟವು ಇದೆ ಅದನ್ನೂ ಗಮನಿಸಬೇಕಾಗಿ ಕೋರಿಕೆ.

ನಮ್ಮ ಮುಂಬರಲಿರುವ ಕಾರ್ಯಕ್ರಮಗಳು

ಉಪಾಕರ್ಮ. ಆಗಸ್ಟ್ 25, ಶನಿವಾರ 2018.
ಸಮಯ : 7:30ರಿಂದ 8:30 ನೂತನ ಉಪಾಕರ್ಮ.
8:30ರಿಂದ 9:30 ಸಾಮಾನ್ಯ ಉಪಾಕರ್ಮ. @ Ivy League School, 1607 Peachtree Pkwy, Cumming, GA-30041

ರಾಯರ ಆರಾಧನೆ : ಆಗಸ್ಟ್ 26, ಭಾನುವಾರ 2018.

@ Yugal Kunj/Radha Madhav Temple - upstairs
2769, Duluth Hwy, Duluth,GA-30096

ಸಮಯ:
ಪೂಜೆ - 9ರಿಂದ ಮಧ್ಯಾಹ್ನ 1
ಪ್ರಸಾದ - 1:30 - 2:30
ಸಾಂಸ್ಕೃತಿಕ ಕಾರ್ಯಕ್ರಮ - 3:30 - 4:30
ಪಲ್ಲಕ್ಕಿ - 4:30 - 5:30
ಉಂಜಾಲು - 6 - 7
ಸಾಯಂಕಾಲದ ಆರತಿ - 7 - 7:30

English summary
Upakarma and Rayara Aradhana at Ananthaadi Rayara Matha (RAMA), Atlanta, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X