ಆಕೆ ಅನುಭವಿಸುತ್ತಿದ್ದ ತಾಯ್ತನದ ಆನಂದ ವರ್ಣಿಸಲು ಅಸಾಧ್ಯ
ನನ್ನ ಮಗಳೊಡನೆ ಆ ಮಗುವಿಗೂ ಮೊಲೆಯುಡಿಸುತ್ತಾ ಕುಳಿತ ಅವಳನ್ನು, ಅವಳು ಅನುಭವಿಸುತ್ತಿದ್ದ ಆ ತಾಯ್ತನದ ಆನಂದವನ್ನು ಕಂಡಾಗ, ಅವಳು ನನಗೆ ಒಮ್ಮೊಮ್ಮೆ ಜಗನ್ಮಾತೆಯಂತೆಯೇ ಕಾಣುತ್ತಿದ್ದಳು. ಆ ಎಳೆಯ ಮಗುವನ್ನು ಅದೆಲ್ಲಿ ತಿರಸ್ಕರಿಸುವಳೋ, ಆ ಮಗುವಿನ ಪಾಡೇನಾಗುವುದೋ ಎಂದು ನನ್ನ ಮನದ ಮೂಲೆಯಲ್ಲಿದ್ದ ಆತಂಕವನ್ನೆಲ್ಲಾ ತೊಡೆದು ಹಾಕಿದ್ದಳು.
ಹೀಗೆಯೇ ಮೂರು ದಿನಗಳು ಕಳೆದಿದ್ದವು, ಆ ಮೂರು ದಿನಗಳಲ್ಲಿ ಎರಡೆರಡು ಎಳೆಯ ಮಕ್ಕಳನ್ನು ತನ್ನ ಎರಡೂ ಮೂಲೆಗಳಲ್ಲಿ ಹಾಲೂಡಿಸುತ್ತಾ, ಆ ಮಾತೃತ್ವದ ಆನಂದವನ್ನು ಅನುಭವಿಸುತ್ತಿದ್ದ ನನ್ನವಳ ಆನಂದಕ್ಕೆ ಕೊನೆಗೂ ಬ್ರೇಕ್ ಬಿದ್ದಿತ್ತು!
ಆ ಮಗು ನಮ್ಮ ಮನೆಗೆ ಬಂದ ನಾಲ್ಕನೆಯ ದಿನ ಬೆಳ್ಳಂಬೆಳಿಗ್ಗೆ ಧಡಧಡನೆ ಬಾಗಿಲು ಬಡಿದ ಸದ್ದಿಗೆ ನಾನು ಧಡಾರನೆದ್ದು ಹೋಗಿ ಬಾಗಿಲು ತೆರೆದಿದ್ದೆ, ಅಲ್ಲಿ ಅದೇ ಕೃಶದೇಹದ ಕಪ್ಪು ಹೆಂಗಸು ಆರ್ತವಾಗಿ ನಿಂತಿದ್ದಳು. (ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು)

ಆಕೆಯನ್ನು ಒಳಗೆ ಬರಲು ಹೇಳಿ ನಾನು ಹಿಂದಿರುಗಿದೆ, ನನ್ನ ಹಿಂದೆಯೇ ಬಂದ ಆಕೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಥಟಾರನೆತ್ತಿಕೊಂಡು ಮುದ್ದಾಡಲಾರಂಭಿಸಿದ್ದಳು.
ಆಗಿನ್ನೂ ನಿದ್ದೆಯೆಂದಿದ್ದ ನನ್ನವಳು ಇದೇನೆಂದರಿಯದೆ ಮೂಕವಾಗಿ ಕುಳಿತು ಆಕೆಯ ನಡವಳಿಕೆಯನ್ನೇ ಗಮನಿಸುತ್ತಿದ್ದಳು. ತನ್ನ ಮಗುವನ್ನು ಕೈಗೆತ್ತಿಕೊಂಡ ಆಕೆ ತನ್ನ ಸೆರಗನ್ನು ಕಿತ್ತೆಸೆದು, ತನ್ನ ಮಗುವಿಗೆ ಮೊಲೆಯೂಡಿಸಿ ಆ ಮಗು ಚಪ್ಪರಿಸಿ ಹಾಲನ್ನು ಹೀರುವಾಗ ಕಣ್ಮುಚ್ಚಿ ತನ್ನ ತಾಯ್ತನದ ಆನಂದವನ್ನು ಅನುಭವಿಸುತ್ತಿದ್ದಳು.
ಕಿರ್ರೆಂದು ಅಳುತ್ತಾ ಎದ್ದ ನನ್ನ ಮಗಳಿಗೆ ನನ್ನ ಅರ್ಧಾಂಗಿ ತನ್ನ ಮೊಲೆಯೂಡಿಸಿ ಅವಳನ್ನು ಸಮಾಧಾನಿಸುತ್ತಾ ಆ ಹೆಣ್ಣು ಬೆಳ್ಳಂಬೆಳಗ್ಗೆ ನಮ್ಮ ಮನೆಗೆ ಬಂದಿದ್ದೇಕೆಂಬ ಪ್ರಶ್ನಾರ್ಥಕ ಚಿಹ್ನೆಯನ್ನು ಮುಖದ ತುಂಬಾ ತುಂಬಿಕೊಂಡು ಕುಳಿತಿದ್ದಳು.
ಕೊನೆಗೆ ಆ ಅಸಾಧ್ಯ ಮೌನವನ್ನು ಬೇಧಿಸಿ ನಾನೇ ಮಾತಿಗಾರಂಭಿಸಿದ್ದೆ, ಆಕೆ ಮೂರು ದಿನ ಎಲ್ಲಿಗೆ ಹೋಗಿದ್ದಳು, ಈಗ ಬಂದಿದ್ದು ಯಾಕೆ ಎಂದ ನನ್ನ ಪ್ರಶ್ನೆಗೆ ಆಕೆ ಕೊಟ್ಟ ಉತ್ತರ,,, ಬಹುಶಃ ಜೀವನದಲ್ಲಿ ನಾನೆಂದಿಗೂ ಮರೆಯಲಾಗದಂಥದ್ದಾಗಿತ್ತು!
ಅಣ್ಣಾ...ನಾನು ನನ್ನ ತವರು ಮನೆಗೆ ಹೋದೆ, ಅವರು ಸೇರಿಸಲಿಲ್ಲ, ಗಂಡನ ಮನೆಯವರು ಸಹಾ ನನ್ನನ್ನು ಸೇರಿಸಲಿಲ್ಲ! ನನಗಾದ ಅವಮಾನ, ನೋವು ಎಲ್ಲವನ್ನೂ ಸಹಿಸಿಕೊಂಡೆ, ಆದರೆ ಮೂರು ದಿನಗಳಿಂದ ಒಂದೇ ಸಮನೆ ನನ್ನ ಎದೆಯಲ್ಲಿ ಸುರಿಯುತ್ತಿರುವ ಹಾಲನ್ನು ನಾನು ತಡೆಯಲಾಗಲೇ ಇಲ್ಲ!
ನನಗೆ ನನ್ನ ಮಗುವನ್ನು ಬಿಟ್ಟು ಇರಲು ಸಾಧ್ಯವೇ? ಇಲ್ಲಣ್ಣಾ.. ದಯವಿಟ್ಟು ನನ್ನ ಮಗುವನ್ನು ನನಗೆ ವಾಪಸ್ ಕೊಡಿ ಎಂದವಳ ಕಣ್ಣಲ್ಲಿ ಧಾರಾಕಾರವಾಗಿ ಕಂಬನಿ ಹರಿಯುತ್ತಿತ್ತು. ಮಗಳಿಗೆ ಹಾಲೂಡಿಸುತ್ತಾ ಅವಳ ಮಾತುಗಳನ್ನು ಕೇಳುತ್ತಾ ಕುಳಿತಿದ್ದ ನನ್ನವಳ ಕಣ್ಣಲ್ಲಿಯೂ ಕಂಬನಿ ತೊಟ್ಟಿಕ್ಕುತ್ತಿತ್ತು. (ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ರಕ್ಷಿಸಿದ ಮಹಾತಾಯಿ)

ಮೂರು ದಿನಗಳ ಕಾಲ ನಮ್ಮ ಮನೆ ಮನ ತುಂಬಿದ್ದ ಪುಟ್ಟ ಮಗು ಈಗ ಮರಳಿ ತನ್ನ ತಾಯ್ತೆಕ್ಕೆಗೆ ಸೇರಿತ್ತು. ನಾನು ಕೊಟ್ಟ ಹಣವನ್ನು ಹಿಂದಿರುಗಿಸಲು ಬಂದವಳ ಕೈಗೆ ಮತ್ತಷ್ಟು ಹಣ ನೀಡಿ, ಮುಂದೆ ಯಾವುದೇ ಸಮಯದಲ್ಲಿ ಯಾವುದಾದರೂ ಸಹಾಯ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸುವಂತೆ ತಿಳಿಸಿ ಬಸ್ ಹತ್ತಿಸಿ ಬಂದಿದ್ದೆ.
ಆ ನಂತರ ಆಕೆ ಅದೆಲ್ಲಿ ಹೋದಳೋ, ಏನಾದಳೋ, ಆ ಮಗು ಹೇಗಿದೆಯೋ ಒಂದೂ ತಿಳಿಯಲಿಲ್ಲ! ಕಾಲನ ಹೊಡೆತಕ್ಕೆ ಸಿಕ್ಕ ನಾನು ತಿಪಟೂರಿನಿಂದ ಬೆಂಗಳೂರಿಗೆ, ಅಲ್ಲಿಂದ ದುಬೈಗೆ ಬಂದೆ. ಆದರೂ ಅಮ್ಮನ ದಿನದಂದು ಆ ಅಸಹಾಯಕ ಹೆಣ್ಣು ಹಾಗೂ ಅವಳ ಮುದ್ದಾದ ಗಂಡು ಮಗುವಿನ ನೆನಪು ಮಾತ್ರ ನನ್ನ ಮನಸ್ಸಿನಲ್ಲಿ ಚಿರನೂತನ!
ಅಮ್ಮ ಎಂದರೆ ಆಕಾಶವಲ್ಲವೇ,,,,ಅವಳ ಪ್ರೀತಿಗೊಂದು ಕೊನೆಯುಂಟೆ? ಎಲ್ಲಾ ಅಮ್ಮಂದಿರಿಗೂ ವಿಶ್ವ ಅಮ್ಮನ ದಿನದ ಹಾರ್ಥಿಕ ಶುಭಾಶಯಗಳು.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications