ನ್ಯೂಜೆರ್ಸಿ ಬೃಂದಾವನದಲ್ಲಿ 'ಸಂಭ್ರಮ'ದಿಂದ 'ಮಿಲನ'

ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟದಲ್ಲಿ ಉಷಾ ಪ್ರಸನ್ನ ಕುಮಾರ್ ನೇತೃತ್ವದ "ಸಂಭ್ರಮ" ತಂಡದವರು 2013-14ರಲ್ಲಿ ಯಶಸ್ವಿಯಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದರು. ಕಳೆದ ನವೆಂಬರ್/ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ಬೃಂದಾವನದ "ದಶಮಾನೋತ್ಸವ" ಆಚರಿಸಿದ್ದರು.

ಮೊಟ್ಟಮೊದಲ ಬಾರಿಗೆ "ಬೃಂದಾವನ ಯೂತ್ ಕಾನ್ಫರೆನ್ಸೆ" ಅನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಇದೇ ಜನವರಿ ಒಂದರಿಂದ ಮಲ್ಲಿಕ್ ಪ್ರಸಾದ್ ಅವರ ನೇತೃತ್ವದ "ಮಿಲನ" ತಂಡಕ್ಕೆ ಚುಕ್ಕಾಣಿಯನ್ನು ಅರ್ಪಿಸಿದ್ದಾರೆ. [ಬೃಂದಾವನ ದಶಮಾನೋತ್ಸವ ವಾಹ್ ರೇ ವಾಹ್!]

New office bearers for Brindavana Kannada Koota

ಜನವರಿ 17ರಂದು ನಡೆದ ಹೊಸ ಕಾರ್ಯಕಾರಿ ಸಮಿತಿಯ ಮೊದಲನೆಯ ಸಭೆಯ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು, ವಿಶ್ವಸ್ಥ ಸಮಿತಿಯ ಸದಸ್ಯರು ಹಾಗು ಹೊಸದಾಗಿ ನೇಮಕಗೊಂಡ ಗೌರವ ನಿರ್ದೇಶಕರು ಮತ್ತು ಎಲ್ಲಾ ನಿರ್ದೇಶಕರ ಜವಾಬ್ದಾರಿಗಳನ್ನು ಪ್ರಕಟಿಸಿ, 2015-16ರ ಕಾರ್ಯಕಾರಿ ಸಮಿತಿಗೆ "ಮಿಲನ" ತಂಡ ಎಂದು ನಾಮಕರಣ ಮಾಡಲಾಯ್ತು.
New office bearers for Brindavana Kannada Koota

ಸಂಭ್ರಮದಿಂದ ಚುಕ್ಕಾಣಿ ಹಿಡಿದ ಮಿಲನ ತಂಡ, ತಿಂಗಳೊಳಗೆ ಮಿಲನದ ಮೊದಲನೆಯ ಸಂಭ್ರಮವನ್ನು ಆಚರಿಸಲು ಸಜ್ಜಾಗಿದೆ. ಕನ್ನಡ ಬಾಂಧವರೆ, ಭಾನುವಾರ ಫೆಬ್ರವರಿ 15ರಂದು "ನಗೆ ಹಬ್ಬ"ಕ್ಕೆ ಬರಲು ಮರೆಯದಿರಿ, ಮರೆತು ನಿರಾಶರಾಗದಿರಿ! "ನಗೆ ಹಬ್ಬ"ದ ವಿವರ ಇಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+