ಮಸ್ಕತ್ ನಲ್ಲಿ ಪುತ್ತೂರು ಓಂಕಾರ ನಾದಾಮೃತ

ಕಳೆದ ಎರಡು ವರ್ಷಗಳಿಂದ ಮಸ್ಕತ್ ನ ಓಂಕಾರ ಸಮಿತಿಯು ಮಸ್ಕತ್ ನ ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಆಸ್ತಿಕರಿಗೆ ಭಕ್ತಿ ರಸಕವಳವನ್ನು ಉಣ ಬಡಿಸುತ್ತ ಬಂದಿದ್ದು, ಪ್ರತಿ ವರ್ಷ ಶ್ರೀ ಆಂಜನೇಯ ಸ್ವಾಮಿ ಪೂಜೆ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಜ್ಞಾನಾಮೃತ ಹಾಗೂ ನಾದಾಮೃತ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ.

ಕಳೆದ ವರ್ಷ ಡಾ. ವಿದ್ಯಾಭೂಷಣ್ ರವರಿಂದ ನಾದಾಮೃತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವರ್ಷ ಖ್ಯಾತ ದಾಸ ಸಾಹಿತ್ಯ ಸಂಗೀತಗಾರ ಪುತ್ತೂರು ನರಸಿಂಹ ನಾಯಕ್ ರವರಿಂದ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Muscat: Music Program by Putturu Narasimha Nayak

'ಭಕ್ತಿ ಗೀತೆ', 'ಭಾವ ಗೀತೆ', 'ಜನಪದ ಗೀತೆ', 'ಚಲನಚಿತ್ರ ಗಾಯನ' ಹೀಗೆ ವಿವಿಧ ಪ್ರಾಕಾರಗಳ ಸುಗಮ ಸಂಗೀತ ಗಾಯನದಲ್ಲಿ ತಮ್ಮ ಅಚ್ಚಳಿಯದ ಮುದ್ರೆ ಒತ್ತಿ ಪ್ರಖ್ಯಾತರಾಗಿರುವ ಗಾಯಕ ಪುತ್ತೂರು ನರಸಿಂಹ ನಾಯಕ್ ಮಸ್ಕತ್ ನಲ್ಲಿ ಕಾರ್ಯಕ್ರಮ ನಡೆಸಬೇಕು ಎನ್ನುವುದು ಒಮಾನ್ ಕನ್ನಡಿಗರ ಬಹುದಿನಗಳ ಆಪೇಕ್ಷೆಯಾಗಿತ್ತು.

ಕಾರ್ಯಕ್ರಮಗಳ ವಿವರ

ದಿನಾಂಕ : 12, ಸೆಪ್ಟೆಂಬರ್ 2014
ಸಮಯ : ಸಂಜೆ 6 ಘಂಟೆಗೆ
ಸ್ಥಳ : ಶ್ರೀ ಕೃಷ್ಣ ಮಂದಿರ ಸಭಾಂಗಣ, ದಾರಸೀತ್, ಮಸ್ಕತ್

ಒಮಾನ್ ನ ಎಲ್ಲ ಸಂಗೀತ ಆಸಕ್ತರು ತಪ್ಪದೆ ಆಗಮಿಸಿ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಓಂಕಾರ ಸಮಿತಿಯ ವತಿಯಿಂದ ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+