ದುಬೈನ 'ಧ್ವನಿ' ರಂಗಸಿರಿ ಉತ್ಸವದಲ್ಲಿ 'ಮೃಚ್ಛಕಟಿಕ' ನಾಟಕ
ಭಾರತೀಯ ರಂಗಭೂಮಿಯ ಶ್ರೇಷ್ಠ ಹಾಗು ಪ್ರಖ್ಯಾತ ಕನ್ನಡ ನಾಟಕಗಳನ್ನು ದುಬೈಯಲ್ಲಿ ಸತತವಾಗಿ ರಂಗವೇರಿಸುತ್ತಿರುವ ಏಕೈಕ ಕನ್ನಡ ವೇದಿಕೆ, 'ಧ್ವನಿ ಪ್ರತಿಷ್ಠಾನ'ದ 33ನೇ ವಾರ್ಷಿಕೋತ್ಸವದ ಅಂಗವಾಗಿ "ಧ್ವನಿ" ರಂಗ ಸಿರಿ ಉತ್ಸವವನ್ನು 2019ರ ಫೆಬ್ರವರಿ 8ರಂದು ಆಯೋಜಿಸಲಾಗಿದೆ.
ಪ್ರೆಶಿಯಸ್ ಪಾರ್ಟೀಸ್ ಮತ್ತು ಎಂಟರ್ಟೈನ್ಮೆಂಟ್ ಅವರ ಪ್ರಸ್ತುತಿಯಲ್ಲಿ ನಡೆಸಲಾಗುತ್ತಿರುವ ಈ ಉತ್ಸವವನ್ನು ಫೆಬ್ರವರಿ 8ರಂದು ಸಂಜೆ 5-15ರಿಂದ ಎಮಿರೇಟ್ಸ್ ಥಿಯೇಟರ್ ಜುಮೇರಾ, ದುಬೈಯಲ್ಲಿ ನಡೆಯಲಿದೆ. ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿ 'ಮೃಚ್ಛಕಟಿಕ' ಎಂಬ ಕನ್ನಡ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.
ಮೃಚ್ಛಕಟಿಕ - ಸಂಸ್ಕೃತ ಮಹಾಕವಿ ಶೂದ್ರಕನಿಂದ ಸುಮಾರು 3-4ನೇ ಶತಮಾನದಲ್ಲಿ ರಚನೆಗೊಂಡ ಭಾರತದ ಮೊಟ್ಟ ಮೊದಲ ಸಾಮಾಜಿಕ ನಾಟಕ. ಇದರಲ್ಲಿ ಕವಿ ಬಳಸಿಕೊಂಡ ಘಟನೆಗಳು ಹಾಗು ವಿಚಾರಗಳು ಇಂದಿಗೂ ಪ್ರಸುತ ಮತ್ತು ಸರ್ವಕಾಲಿಕ. ಈ ನಾಟಕ ಭಾರತದ ಬಹುತೇಕ ಎಲ್ಲಾ ಭಾಷೆಗಳ ಜೊತೆಗೆ ಇಂಗ್ಲಿಷ್ ಭಾಷೆಗೂ ತರ್ಜಿಮೆಗೊಂಡಿದೆ. 18ನೆಯ ಶತಮಾನದಲ್ಲಿಯೇ ಇದರ ಇಂಗ್ಲಿಷ್ ರೂಪ Toy cart ನಂತರ ಪುನಃ ಭಾಷಾಂತರಗೊಂಡು The Little Clay Cart ಅಮೆರಿಕ ಹಾಗು ಯುರೋಪಿನಾದ್ಯಂತ ಪ್ರದರ್ಶನಗೊಂಡಿದೆ. ಡಾ. ಎನ್ .ಎಸ್ .ಲಕ್ಷ್ಮೀನಾರಾಯಣ ಭಟ್ಟರವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿರುತ್ತಾರೆ.

ಖ್ಯಾತ ರಂಗ ನಿರ್ದೇಶಕ, ಸಾಹಿತಿಗಳಾದ, ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ರಾವ್ ಪಯ್ಯಾರ್ ಅವರು 'ಮೃಚ್ಚಕಟಿಕ' ನಾಟಕವನ್ನು ನಿರ್ದೇಶಿಸಿದ್ದಾರೆ. ಕರ್ನಾಟಕದ ಉದ್ದಗಲಗಳಿಂದ ಯು.ಎ.ಇ.ಗೆ ಬಂದು ನೆಲೆಸಿರುವ ಪ್ರತಿಭಾವಂತ ಹವ್ಯಾಸಿ ರಂಗಕಲಾವಿದರುಗಳು ಪಾತ್ರಗಳಿಗೆ ಜೀವ ತುಂಬಲಿದ್ದಾರೆ.

ಆರತಿ ಅಡಿಗ, ಪ್ರಭಾಕರ್ ಕಾಮತ್, ವಾಸು ಬಾಯರ್, ನಾಗಭೂಷಣ್ ಕಶ್ಯಪ್, ಮೋಹನ್ ಬಿ.ಪಿ, ಸಪ್ನಾಕಿರಣ್, ಅಶೋಕ್ ಅಂಚನ್, ಜಾನೆಟ್ ಸಿಕ್ವೆರಾ, ಜೇಶ್ ಬಾಯರ್, ಆದೇಶ ಹಾಸನ, ರುದ್ರಯ್ಯ ನವಲಿ ಹಿರೇಮಠ್, ವೆಂಕಟೇಶ್ ರಾವ್, ಸಂಧ್ಯಾ ರವಿಕುಮಾರ್, ಶೋಭಿತಾ ಪ್ರೇಮ್ ಜೀತ್, ಬೇಬಿ ಸಾನ್ವಿ ರಾಕೇಶ್ ಶರ್ಮ, ನರಸಿಂಹನ್ ಜಿ.ಎಸ್, ಗುರುರಾಜ್ ಪುತ್ತೂರು, ಸಂದೀಪ್ ದೇವಾಡಿಗ, ರಮೇಶ್ ಲಾಕ್ಯ, ಹರೀಶ್ ಪೂಜಾರಿ, ಜಯಂತ್ ಶೆಟ್ಟಿ, ಕೃಷ್ಣ ಕುಮಾರ್, ವಿನಾಯಕ್ ಹೆಗ್ಡೆ ಮತ್ತು ಶ್ವೇತಾ ನಾಡಿಗ್ ಶರ್ಮ ನಾಟಕದ ಪಾತ್ರಗಳನ್ನು ಪೋಷಿಸಲಿದ್ದಾರೆ.

ಗಣೇಶ್ ರೈ ವೇದಿಕೆ ವಿನ್ಯಾಸ, ಅರುಣ್ ಕಾರ್ಲೊ ಸಂಗೀತ, ಅರುಣ್ ಮಣಿಪಾಲ್ ಬೆಳಕಿನ ಸಂಯೋಜನೆ ಜೊತೆಗೆ ಮೃಚ್ಛಕಟಿಕ ನಾಟಕದ ಪರದೆಯ ಹಿಂದೆ ಸಹಕರಿಸುವ ರಂಗಾಸಕ್ತರು ಸತೀಶ್ ಹೆಗ್ಡೆ, ಅನಿಲ್ ಪೂಜಾರ, ರಿತೇಶ್ ಅಂಚನ್, ಸಂತೋಷ್ ಪೂಜಾರಿ, ಅಶೋಕ್ ಬೈಲೂರ್, ಗಣೇಶ ಕುಲಾಲ್, ಸುಗಂಧ ರಾಜ್ ಬೇಕಲ್ ಉದಯ್ ನಂಜಪ್ಪ, ಸಾಯಿ ಮಲ್ಲಿಕಾ, ಲತಾ ಹೆಗ್ಡೆ, ದೀಪಾ ಮರಿಯಾ ಮುಂತಾದವರು.












Click it and Unblock the Notifications