'ಕರ್ನಾಟಕ ಸಂಘ ಕತಾರ್' ಕಾರ್ಯಕಾರಿ ಸಮಿತಿಯ ಸಂಪೂರ್ಣ ವಿವರ
ಭಾರತದ ರಾಯಭಾರಿ ಕಚೇರಿಯ ಬೆಂಬಲ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ಸಾಂಸ್ಕೃತಿಕ ಕೇಂದ್ರದ ಸಂಯೋಜಿತ ಸಂಸ್ಥೆ 'ಕರ್ನಾಟಕ ಸಂಘ ಕತಾರ್'ಗೆ 2018-19ನೇ ಸಾಲಿಗೆ ಹೊಸ ಕಾರ್ಯಕಾರಿ ಸಮಿತಿ ರಚಿಸಲು ಇತ್ತೀಚೆಗೆ ಚುನಾವಣೆ ನಡೆಸಿತು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಭಾರತದ ರಾಯಭಾರಿ ಕಚೇರಿಯು ರಚಿಸಿ, ಅಂತಿಮಗೊಳಿಸಿದ ನೂತನ ಸಂವಿಧಾನದ ಅನುಗುಣವಾಗಿ ಈ ಪ್ರಕ್ರಿಯೆ ನಡೆಸಲಾಯಿತು. ಅಂದಹಾಗೆ ಭಾರತದ ಸಾಂಸ್ಕೃತಿಕ ಕೇಂದ್ರದ ಸಹಸಂಸ್ಥೆಗಳ ಪೈಕಿ ಈ ನೂತನ ಸಂವಿಧಾನವನ್ನು ಅಳವಡಿಸಿಕೊಂಡ ಪ್ರಪ್ರಥಮ ಸಂಸ್ಥೆ 'ಕರ್ನಾಟಕ ಸಂಘ ಕತಾರ್'.

ಚುನಾವಣೆಯಲ್ಲಿ ವೆಂಕಟ ರಾವ್ ನೂತನ ಅಧ್ಯಕ್ಷರಾಗಿ ಆಯ್ಕೆ ಆದರು. ಅಧ್ಯಕ್ಷರೊಂದಿಗೆ ಹತ್ತು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಯಿತು. ವೆಂಕಟ ರಾವ್ ಅವರು ಹಿಂದಿನ ಕಾರ್ಯಕಾರಿ ಸಮಿತಿಯ ಅವಧಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಕತಾರಿನ ಖ್ಯಾತ ಸಂಸ್ಥೆಯೊಂದರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಕಾರ್ಯ ನಿರ್ವಹಿಸುತ್ತಿದ್ದಾರೆ.
ವೆಂಕಟ ರಾವ್ ಅವರು ಚುನಾಯಿಸಿ ಬಂದ ಸದಸ್ಯರಲ್ಲಿ ವಿಭಿನ್ನ ಖಾತೆಗಳನ್ನು ಹಂಚಿದರು. ಸಂಘದ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾಗಿ ರವಿಶೆಟ್ಟಿಯವರನ್ನು ನೇಮಿಸಲಾಯಿತು. ರವಿಶೆಟ್ಟಿಯವರು ಕತಾರಿನಲ್ಲಿ ನೆಲೆಸಿರುವ ಭಾರತದ ಸಮುದಾಯದ ಖ್ಯಾತ ನಾಯಕರಲ್ಲಿ ಒಬ್ಬರು. ನಿಕಟಪೂರ್ವ ಅಧ್ಯಕ್ಷರಾದ ಎಚ್.ಕೆ. ಮಧು ಅವರು ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ನೂತನ ಸಮಿತಿಯ ಕಾರ್ಯಕಾರಿ ಹುದ್ದೆ ಪಡೆದವರ ಪಟ್ಟಿ ಇಂತಿದೆ:
ವೆಂಕಟ ರಾವ್- ಅಧ್ಯಕ್ಷ
ರವಿಶೆಟ್ಟಿ ಎಂ.- ಉಪಾಧ್ಯಕ್ಷ
ಸಂದೀಪ್ ಡಿ.ಎಸ್.- ಪ್ರಧಾನ ಕಾರ್ಯದರ್ಶಿ
ಮುರಳೀಧರ ರಾವ್- ಖಜಾಂಚಿ
ಎಚ್.ಕೆ. ಮಧು- ಸಲಹಾ ಮಂಡಳಿ ಅಧ್ಯಕ್ಷ
ಅಶ್ವಿನ್ ಪಿ ಕುಮಾರ್- ಸಾಂಸ್ಕೃತಿಕ ಕಾರ್ಯದರ್ಶಿ
ಅನಿಲ್ ಬೋಳೂರ್- ಕ್ರೀಡಾ ಕಾರ್ಯದರ್ಶಿ
ದಿನೇಶ್ ಗೌಡ- ಲಾಜಿಸ್ಟಿಕ್ಸ್ ಮತ್ತು ವಿಶಿಷ್ಟ ಅಗತ್ಯಗಳ ಸಂಯೋಜಕರು
ಯೋಗೀಶ್ ಪೈ- ಜಂಟಿ ಕಾರ್ಯದರ್ಶಿ ಹಾಗೂ ಸದಸ್ಯತ್ವದ ಸಂಯೋಜಕರು
ರಶ್ಮಿ ಜಯರಾಮ- ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ
ಆಶಾ ನಂಜಪ್ಪ- ಮಹಿಳಾ ಮತ್ತು ಮಕ್ಕಳ ವಿಭಾಗದ ಸಂಯೋಜಕರು
ಶಶಿಧರ ಹೆಬ್ಬಾಳ- ಪರಿಸರ ಹಾಗೂ ಕನ್ನಡ ಸಂಬಂಧಿತ ಸಂಯೋಜಕರು
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications