ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತಾರ್‌ನಲ್ಲಿ 'ಕರ್ನಾಟಕ ಕಪ್ 2016' ಕ್ರಿಕೆಟ್ ಪಂದ್ಯಾವಳಿ

By Prasad
|
Google Oneindia Kannada News

ಕತಾರ್, ಮಾರ್ಚ್ 21 : ಭಾರತದಲ್ಲಿ ವಿಶ್ವ ಟಿ20 ಕ್ರಿಕೆಟ್ ಹವಾ ಶುರುವಾಗಿದ್ದರೆ, ಕತಾರ್ ನಲ್ಲಿ ಕೂಡ ನಾಲ್ಕು ದಿನಗಳ ಕ್ರಿಕೆಟ್ ಜ್ವರ ಶುರುವಾಗಲಿದೆ.

ಬಹುದಿನಗಳಿಂದ ನಿರೀಕ್ಷಿಸುತ್ತಿರುವ ಕನ್ನಡ ಸಂಘ ಕತಾರ್‌ನ 'ಕರ್ನಾಟಕ ಕಪ್ 2016' ಮಾರ್ಚ್ 22ರಿಂದ 25ರವರೆಗೆ ನಡೆಯಲಿದೆ. ಫ್ಲಡ್ ಲೈಟ್ ನಲ್ಲಿ ಸಾಫ್ಟ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಓಲ್ಡ್ ಐಡಿಯಲ್ ಇಂಡಿಯನ್ ಸ್ಕೂಲ್ ಗ್ರೌಂಡ್ ನಲ್ಲಿ ನಡೆಯಲಿದೆ.

Kannada Sangha Qatar Karnataka Cup 2016 cricket tournament

ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಅವುಗಳಿಗೆ ಟಸ್ಕರ್, ಬಿಐಸಿಟಿ ರಾಕರ್ಸ್, ಇಂಟರ್ಕಾಲ್ ಬಹರೇನ್ ಫೈಟರ್ಸ್, ಎಂ ಪಲ್ಲೊಂಜಿ ಕತಾರ್, ಅಲ್ ಮುಫ್ತಾಹ್, ಕುವೈತ್ ರೈಡರ್ಸ್, ಲಾಮಾ ಮತ್ತು ಹನನ್ ಎಂದು ಹೆಸರಿಡಲಾಗಿದೆ ಎಂದು ಕನ್ನಡ ಸಂಘ ಕತಾರ್ ಅಧ್ಯಕ್ಷ ಎಚ್.ಎಂ. ಮಧು ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಕನ್ನಡ ಸಂಘ ಕತಾರ್ ನೀಡಿದ ಆಹ್ವಾನದ ಮೇರೆಗೆ ಕುವೈತ್ ಮತ್ತು ಬಹರೇನ್‌ನ ಎರಡು ವಿದೇಶಿ ತಂಡಗಳು ಈ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳುತ್ತಿವೆ. ಮಾರ್ಚ್ 22ರ ಸಂಜೆ 7.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಫೈನಲ್ ಪಂದ್ಯ ಮಾರ್ಚ್ 25ರಂದು ಸಂಜೆ ಜರುಗಲಿದೆ.

Kannada Sangha Qatar Karnataka Cup 2016 cricket tournament

ಪಂದ್ಯ ಎಲ್ಲೆಲ್ಲಿ, ಯಾವ್ಯಾವ ತಂಡಗಳ ನಡುವೆ ನಡೆಯಲಿದೆ ಎಂಬುದನ್ನು ಈಗಾಗಲೆ ತಿಳಿಸಲಾಗಿದೆ. ಈ ವರ್ಷದ ವಿಶೇಷತೆಯೇನೆಂದರೆ, ಮಹಿಳಾ ಅಂಪೈರ್ ಕೂಡ ಪಾಲ್ಗೊಳ್ಳುತ್ತಿರುವುದು. ಕನ್ನಡ ಸಂಘ ಕತಾರ್‌ನ ಥೀಮ್ ಸಾಂಗ್ ಕೂಡ ಬಿಡುಗಡೆ ಮಾಡಲಾಗಿದೆ. ಎಲ್ಲ ತಂಡಗಳಿಗೆ ಟಿ-ಶರ್ಟ್ ಕೂಡ ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಕನ್ನಡ ಸಂಘ ಕತಾರ್‌ನ ಮಧು ಅವರು ಎಲ್ಲ ತಂಡದವರನ್ನು ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಸಂದೇಶ್ ಆನಂದ್ ಅವರು ವಂದನಾರ್ಪಣೆ ಮಾಡಿದರು. ಕ್ರೀಡಾ ಕಾರ್ಯದರ್ಶಿ ತುಫೇಲ್ ಮಥೀನ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

English summary
The much awaited annual Kannada Sangha Qatar(KSQ)'s Karnataka Cup -2016, an invitational soft ball flood light Cricket Tournament will be held from 22nd March 2016 to 25th March 2016 at Old Ideal Indian School Ground. KSQ President H.K.Madhu briefed about the tournament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X