ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ ದೀಪಾವಳಿ ಸಡಗರದಲ್ಲಿ ಏನೇನಿದೆ?

By Prasad
|
Google Oneindia Kannada News

ಕ್ಯಾಲಿಫೋರ್ನಿಯಾ, ಅ. 23 : ಎರಡು ತಿಂಗಳ ಹಿಂದಷ್ಟೆ 8ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಪೂರೈಸಿರುವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ (ಕೆಕೆಎಸ್‌ಸಿ), ಅಜ್ಞಾನ ಕಳೆದು ಜ್ಞಾನಜ್ಯೋತಿಯನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿಯನ್ನು ಅ.26ರ ಭಾನುವಾರ ಭರ್ಜರಿಯಾಗಿ ಆಚರಿಸಲಿದ್ದಾರೆ.

ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆಯಲಿರುವ 'ದೀಪೋತ್ಸವ', ರಂಗೋತ್ಸಾಹಿಗಳಿಗಾಗಿ ಕೆಲ ದಿನಗಳಿಂದ ರಂಗತರಬೇತಿ ನೀಡುತ್ತಿರುವ ನಟ 'ನಟನ'ದ ಮಂಡ್ಯ ರಮೇಶ್ ಅವರ ದಿಗ್ದರ್ಶನದಲ್ಲಿ ತಯಾರಾದ ಎರಡು ನಾಟಕಗಳು ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಯಾಲಿಫೋರ್ನಿಯಾ ಕನ್ನಡಿಗರಿಗೆ ರಸದೌತಣ ಬಡಿಸಲಿವೆ ಎಂದು ಕೆಕೆಎನ್ ಸಿ ಅಧ್ಯಕ್ಷ ಧನಂಜಯ ಅವರು ಒನ್ಇಂಡಿಯಾಗೆ ತಿಳಿಸಿದ್ದಾರೆ.


ಕಾರ್ಯಕ್ರಮದ ವಿವರಗಳು

* ಸಂಧ್ಯಾ ಸುಬ್ಬರಾಮು ಮತ್ತು ತಂಡದಿಂದ ಪ್ರಾರ್ಥನೆ

* ನಧೀಂಧೀಂತನ ಮತ್ತು ಕರ್ನಾಟಕದ ದೇಗುಲಗಳು : ಲಕ್ಷ್ಮೀ ಪುರಾಣಿಕ್, ಉಷಾ ಹೆಬ್ಬಾರ್, ನಂದಿನಿ ಜಾವಗಲ್ ಮತ್ತು ಸಿಂಧು ಗೌರಿ ಅವರಿಂದ ನರ್ತನ.

* ಮಂಡ್ಯ ರಮೇಶ್ ತರಬೇತಿಯಲ್ಲಿ ತಯಾರಾದ ಮಕ್ಕಳ ಹಾಸ್ಯ ನಾಟಕ : ಹುಚ್ಚು ದೊರೆ. 20ಕ್ಕೂ ಹೆಚ್ಚು ಮಕ್ಕಳು ಅಭಿನಯಿಸುತ್ತಿದ್ದಾರೆ.

* ಲಕ್ಷ್ಮೀ ಪುರಾಣಿಕ್ ಅವರಿಂದ ಕಾಂಟೆಂಪೊರರಿ ಡಾನ್ಸ್.

* ಸಿಂಧು ಗೌರಿ ಅವರಿಂದ 'ಬ್ಲಾಕ್ ಲೈಟ್ ಡಾನ್ಸ್.'

* ಪಲ್ಸ್ : ಜ್ಯೋತಿ ಲಕ್ಕರಾಜು ಅವರಿಂದ ಸಮೂಹ ನರ್ತನ.

* ಹಾಸ್ಯ ನಾಟಕ ಚೋರ ಚರಣದಾಸ : ಮಂಡ್ಯ ರಮೇಶ್ ನಿರ್ದೇಶಿಸಿರುವ ಈ ಯಶಸ್ವಿ ನಾಟಕದ ಪ್ರದರ್ಶನ 30ಕ್ಕೂ ಹೆಚ್ಚು ಕಲಾವಿದರಿಂದ.

Deepotsava : KKNC to celebrate festival of lights Deepavali

ಕೆಕೆಎನ್‌ಸಿಯಲ್ಲಿ ಇನ್ನೇನು ಚುನಾವಣೆ ನಡೆಯಲಿದ್ದು, ಪ್ರಸ್ತುತ ಅಧ್ಯಕ್ಷರಾಗಿರುವ ಧನಂಜಯ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಡೆಯ ಬೃಹತ್ ಕಾರ್ಯಕ್ರಮ ಇದಾಗಿದೆ. ಈ ನಿಟ್ಟಿನಲ್ಲಿ ಸಿದ್ಧತೆಯೂ ಭರದಿಂದ ಸಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು, ಸ್ವಾದಿಷ್ಟ ಚಾಟ್ಸ್, ದೋಸೆ, ಬೋಂಡಾ, ಬಜ್ಜಿಯನ್ನು ಸವಿಯಲು ಕನ್ನಡಿಗರು ಕಾತುರದಿಂದ ಕಾದಿದ್ದಾರೆ.

ಯುವ ಸಮಿತಿಯ ಸಾಧನೆ : ವೀಣಾ ಗೌಡ, ಶರ್ಮಿಳಾ ವಿದ್ಯಾಧರ ಮತ್ತು ವೇಣುಗೋಪಾಲ ಅವರ ನಾಯಕತ್ವದಲ್ಲಿ, 10ರಿಂದ 18 ವರ್ಷ ವಯಸ್ಸಿನ 40ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿ, ಫುಡ್ ಡ್ರೈವ್, ಗಿಡ ನೆಡುವ ಕಾರ್ಯಕ್ರಮ, ನಂದ ಲಾಲಾ ಫುಡ್ ಪ್ಯಾಕಿಂಗ್ ಮುಂತಾದ ಕಾರ್ಯಕ್ರಮಗಳಲ್ಲಿ ಪಿಜ್ಜಾ ಮಾರಾಟ ಮಾಡಿ ಚಂದಾ ಸಂಗ್ರಹಿಸಿದ್ದಾರೆ. ಇದರ ವಿವರಗಳು ಈ ಕಾರ್ಯಕ್ರಮದಲ್ಲಿ ದೊರೆಯಲಿವೆ.

ದೀಪೋತ್ಸವ ನಡೆಯುವ ಸ್ಥಳ : ಚಾಬೋಟ್ ಕಾಲೇಜು ಪರ್ಫಾರ್ಮಿಂಗ್ ಆರ್ಟ್ ಸೆಂಟರ್, ಹೇವರ್ಡ್, ಕ್ಯಾಲಿಫೋರ್ನಿಯಾ.
ಸಮಯ : ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆಯವರೆಗೆ
ಹೆಚ್ಚಿನ ವಿವರ : ಕೆಕೆಎನ್ ಸಿ ವೆಬ್ ಸೈಟ್

English summary
Kannada Koota Northern California (KKNC) which co-hosted 8th World Kannada Conference with 'AKKA' is celebrating Deepotsava on 26th October, Sunday. US kids trained at workshop conducted by Mandya Ramesh will be staging comedy drama. Mandya Ramesh will also be enacting Chora Charana Dasa play.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X