ಮೊದಲ ಹಿಮ, ಆಗದಿರುವುದೇ ಪ್ರಕೃತಿಯ ಮೇಲೆ ಪ್ರೇಮ!

By: ನಾಗರಾಜ ಮಹೇಶ್ವರಪ್ಪ
Subscribe to Oneindia Kannada

ಹೊಸ ವರುಷ... ಅದರ ಆಚರಣೆ ಮುಗಿಸಿ ಜನವರಿಯ ಚಳಿಗೆ ಶಿವ ಶಿವ ಅಂತಾ ಜನರೆಲ್ಲಾ ಇದ್ದಬದ್ದ ಸ್ವೇಟರ್, ಟೋಪಿ ಹಾಕೊಂಡು ಕಂಬಳಿ ಹೊದ್ದುಕೊಂಡು ಬೆಂಕಿ ಕಾಯ್ಸ್ತಾ ಕೂತಿರುವಾಗ... ಈ ವರ್ಷದ ಮೊದಲ ಹಿಮಪಾತ ಬಿದ್ದಾಗ ಹೇಗಿರಬೇಡ?

ಕೆಲವರು ಅಯ್ಯೋ ಇನ್ನಷ್ಟು ಚಳಿ ಅಂತಾ ತುಂಬಾ ಹೊದ್ದುಕೊಂಡು ನಲ್ಲೆ/ನಲ್ಲನ ಬಿಗಿಯಾಗಿ ಅಪ್ಪಿಕೊಂಡು ಮನೇಲೇ ಕೂತರೆ... ಮತ್ತೆ ಕೆಲವರು ಸೆಲ್ಫಿ ಬೇಕು ಅಂತಾ ಥಟ್ ಅಂತ ಹೊರಗಡೆ ಬಂದು.. ಪಟ್ ಅಂತಾ ಕ್ಯಾಮೆರಾ ಕ್ಲಿಕ್ಕಿಸಿಕೊಂಡು ಒಳಗಡೆ ಓಡಿ, ಮತ್ತೆ ಚಟ್ ಅಂತಾ ಫೇಸ್ಬುಕ್, ವಾಟ್ಸ್ ಆಪ್ ನಲ್ಲಿ ಅಪ್ಲೋಡ್ ಮಾಡಿರ್ತಾರೆ.

ಇನ್ನು ಸ್ವಲ್ಪ ಜನ (ನಮ್ಮೋರು) ಬಿಸಿ ಬಿಸಿ ಆಂಬೊಡೆ, ಮಿರ್ಚಿ ಮೆಣಸಿಕಾಯಿ ಜೊತೆ ಬಿಸಿ ಬಿಸಿ ಕಾಫಿ ಲೋಟ ಹಿಡಕೊಂಡು, ಮೋದಿ ಇಲ್ಲ ಟ್ರಂಪ್ ಇವತ್ತು ಏನು ಟ್ವೀಟ್ ಮಾಡಿದಾರೆ ಅಂತಾ ನೋಡ್ತಾ ಬಿಸಿಬಿಸಿ ಬಜ್ಜಿ ಮೆಲ್ಲುತ್ತಿರುತ್ತಾರೆ... [ರಕ್ತ ಹೆಪ್ಪುಗಟ್ಟಿಸುವ ಚಳಿಯಲ್ಲಿ ಮರಗಟ್ಟಿರುವ ಶಿಮ್ಲಾ]

Beauty of winter and pleasure of dancing on first snowfall

ಇವರೆಲ್ಲ ಚಳಿಗಾಲವನ್ನು, ಹಿಮದ ಹೂಮಳೆಯನ್ನು ಈರೀತಿ ಆಚರಿಸುತ್ತಿದ್ದರೆ, ಉತ್ತರ ಅಮೆರಿಕಾದ ನಾರ್ತ್ ಕ್ಯಾರೊಲಿನ ರಾಜ್ಯದಲ್ಲಿರುವ ಅಪ್ಪಟ ಕನ್ನಡತಿ... ಪ್ರಖ್ಯಾತ ಭರತನಾಟ್ಯ ಮತ್ತು ಕಥಕ್ ನೃತ್ಯಗಾತಿ ಸೀಮಾ ವಿಶ್ವನಾಥ್ ಅವರು ಪ್ರಕೃತಿಯ ಈ ವೈಭವವನ್ನು ಯಾವ ರೀತಿ ಆಚರಿಸಿದ್ದಾರೆ ಗೊತ್ತಾ?

ಈ ವರುಷದ ಮೊದಲ ಹಿಮಪಾತವನ್ನು ಸುಸ್ವಾಗತ ಮಾಡಿದ್ದು ಮಾತ್ರ ಒಂದು ವಿಶಿಷ್ಟ ರೀತಿಯಲ್ಲ. ಕೊರೆಯುವ ಮೈನಸ್ ಡಿಗ್ರಿ ಉಷ್ಣತೆಯಲ್ಲಿ, ಕಾಲಿಗೆ ಕಚಗುಳಿ ಇಡುವ ಮೆತ್ತನೆಯ ಬಿಳಿ ಹಿಮದ ಮೇಲೆ ಬರಿಗಾಲಲ್ಲಿ ಆನಂದದಿಂದ, ಉಲ್ಲಾಸದಿಂದ, ತನ್ಮಯತೆಯಿಂದ ಶಾಸ್ತ್ರೀಯ ನೃತ್ಯ ಮಾಡುವ ಮೂಲಕ! [ಹೊದ್ಕೊಳ್ಳೋಣ ಅಂದ್ರೆ ರಗ್ ಇಲ್ಲಾ ತಬ್ಕೊಳ್ಳೋಣಾ ಅಂದ್ರೆ ಹಗ್ ಇಲ್ಲಾ!]

Beauty of winter and pleasure of dancing on first snowfall

ಸುತ್ತಲೂ ಶುಭ್ರವಾದ ಬಿಳಿ ಹಿಮ...
ಹಿಮದ ಮೇಲೆ ಬರಿಗಾಲಲ್ಲಿ
ಆನಂದದಿಂದ ಮೈಮರೆತು ನೃತ್ತಿಸುತ್ತಿರುವ ಸೀಮಾ...
ಹಾ ಹಾ... ಈ ನಯನ ಮನೋಹರ ದೃಶ್ಯವ
ನೋಡುತ್ತಿದ್ದರೆ... ಆಗದಿರುವದೇ, ಈ ಸುಂದರ ಪ್ರಕೃತಿಯ ಮೇಲೆ ಪ್ರೇಮ? [ನನ್ನ ಮಗಂದ್, ಯಾಕಾದ್ರೂ ಬರುತ್ತೋ ಈ ಚಳಿಗಾಲ!]

ನೀವೇ ನೋಡಿ, ಹೇಳಿ...!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People welcome winter and first snowfall in many ways. Well known Kathak dancer Seema dancer celebrated the beauty of nature by dancing on snow on barefoot. Nagaraja Maheswarappa describes the pleasure of dancing on first snowfall. Watch this beautiful video.
Please Wait while comments are loading...