• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದ ಚಳಿಗಾಳಿ ಸುಂದರ ಮಾತ್ರವಲ್ಲ, ಭೀಕರ ಕೂಡ!

|
   ಚಳಿಗಾಳಿಗೆ ತತ್ತರಿಸುತ್ತಿದೆ ಅಮೇರಿಕಾ | ಈ ವಿಡಿಯೋ ನೋಡಿ | Oneindia Kannada

   ಅಮೆರಿಕದಲ್ಲಿ ಅಮರಿಕೊಂಡಿರುವ, ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿರುವ ಚಳಿಗಾಳಿಯನ್ನು 'ಭೀಕರ, ಭಯಾನಕ' ಎಂದು ಅಮೆರಿಕದ ಕನ್ನಡಿಗರು ಮತ್ತು ಒನ್ಇಂಡಿಯಾ ಕನ್ನಡ ಅಂಕಣಕಾರರಾದ ಶ್ರೀನಾಥ್ ಭಲ್ಲೆ ಅವರು ವರ್ಣಿಸಿದ್ದಾರೆ.

   ಅಲ್ಲಿ ಯಾವ ಪರಿ ಚಳಿಗಾಳಿ ಆಕ್ರಮಿಸಿಕೊಂಡಿದೆಯೆಂದರೆ, ಅಂಟಾರ್ಕಟಿಕಾನೇ ಅಮೆರಿಕಾದ ಮಧ್ಯ-ಪಶ್ಚಿಮ ಭಾಗಕ್ಕಿಂತ ಬೆಚ್ಚಗಿದೆ ಎಂದು ಹೇಳಿದ್ದಾರೆ. ಅಯ್ಯೋ, ಚಳಿಗಾಳಿಯ ಹೊಡೆತವೇನೇ ಇರಲಿ, ಇಲ್ಲಿನ ರಾಜಕೀಯ ನಮ್ಮ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತಿದೆ ಎಂದು ವಿಡಂಬನಾತ್ಮಕವಾಗಿ ಹೇಳಿದ್ದಾರೆ.

   ಅಮೆರಿಕದ ಅಸಾಧ್ಯ ಚಳಿಗಾಳಿಯನ್ನು ತಡೆಯಲು 10 ಉಪಯುಕ್ತ ಟಿಪ್ಸ್

   ತಾಪಮಾನ ಮೈನಸ್ ಡಿಗ್ರಿಗೆ ಜಾರಿದರೇ ತಡೆದುಕೊಳ್ಳಲು ಸಾಧ್ಯವಿಲ್ಲ. ಅಂತಹುದರಲ್ಲಿ ತಾಪಮಾನ ಮೈನಸ್ 50 ಡಿಗ್ರಿ ಫ್ಯಾರನ್ ಹೀಟ್ ಗೆ ಜಾರಿದರೆ ಏನಾಗಬಹುದು ಊಹಿಸಿಕೊಳ್ಳಿ. ನಮ್ಮ ಕಣ್ಣುಗುಡ್ಡೆಗಳನ್ನೇ ಫ್ರೀಜ್ ಮಾಡಿಬಿಡುತ್ತದೆ. ಅದೃಷ್ಟವಶಾತ್, ಅಮೆರಿಕದ ನಿರ್ವಸಿತರ ಬಗ್ಗೆ ಸರಕಾರ ಕಾಳಜಿ ವಹಿಸಿದ್ದರಿಂದ ಅವರು ಬಚಾವಾಗಿದ್ದಾರೆ. ಇಲ್ಲದಿದ್ದರೆ, ಇಂಥ ಚಳಿಯಲ್ಲಿ ಒಂದು ಗಂಟೆಗಿಂತ ಹೆಚ್ಚು ಬದುಕುಳಿಯುವುದೇ ಸಾಧ್ಯವಿಲ್ಲ ಎಂದಿದ್ದಾರೆ ಭಲ್ಲೆ ಅವರು.

   ಈಗಾಗಲೆ ಮತ್ತೊಬ್ಬ ಅಮೆರಿಕನ್ನಡಿಗ ಮತ್ತು ಖ್ಯಾತ ಹಾಡುಗಾರರಾದ ರಾಮ್ ಪ್ರಸಾದ್ ಅವರು, ಅಮೆರಿಕದಲ್ಲಿ ಕಂಡುಕೇಳರಿಯದ ಚಳಿಗಾಳಿಯನ್ನು ಎದುರಿಸುವುದು ಹೇಗೆ, ಮನೆಯನ್ನು ಹೇಗೆ ಬೆಚ್ಚಗಿಡಬೇಕು, ಏನೇನು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿವರಿಸಿದ್ದಾರೆ.

   ಶರದ್ ಋತು ಆಗಮನ, ದೇಶದ 10 ಅತಿ ಹೆಚ್ಚು ಶೀತ ಪ್ರದೇಶಗಳಿವು

   ಉತ್ತರ ಧ್ರುವದಲ್ಲಿ ಸಂಭವಿಸಿರುವ ವಾಯುಭಾರ ಕುಸಿತದಿಂದಾಗಿ ಅಮೆರಿಕದ ಮಧ್ಯ ಮತ್ತು ಪಶ್ಚಿಮ ಭಾಗದಲ್ಲಿ ಭಾರೀ ಚಳಿಗಾಳಿ ಬೀಸಿದೆ. ಕೆಲವೆಡೆಗಳಲ್ಲಿ ಮೈನಸ್ 70 ಡಿಗ್ರಿ ದಾಖಲಾಗಿದೆ ಎಂದು ಮಿನ್ನೆಸೋಟಾದಲ್ಲಿ ವಾಸಿಸುತ್ತಿರುವ ಕನ್ನಡಿಗ ಗೌತಮ್ ನಾರಾಯಣ್ ಅವರು ಪ್ರತಿಕ್ರಿಯೆ ಕಳಿಸಿದ್ದಾರೆ.

   ಶಿಕಾಗೋದ ನಿವಾಸಿಯಾಗಿರುವ ಸುಕನ್ಯಾ ಸುಗಿ ಎಂಬುವವರು ಬಿಸಿನೀರು ಕೂಡ ಕ್ಷಣಾರ್ಧದಲ್ಲಿ ಹೇಗೆ ಹಿಮದ ಬಿಂದುವಿಂತೆ ಪರಿವರ್ತನೆಯಾಗುತ್ತದೆ ಎಂಬುದನ್ನು ತೋರಿಸುವ ಹಲವಾರು ವಿಡಿಯೋಗಳನ್ನು ಕಳಿಸಿದ್ದಾರೆ. ಕುದಿಯುವ ನೀರು ಮೇಲಕ್ಕೆ ಚಿಮ್ಮಿದರೆ ಕ್ಷಣದಲ್ಲಿಯೇ ಹಿಮವಾಗಿ ಪುಡಿಪುಡಿಯಾಗಿ ಧರೆಗೆ ಉರುಳುತ್ತಿರುವುದನ್ನು ನೋಡುವುದು ನಿಜಕ್ಕೂ ಸೋಜಿಗ.

   ಆರು ವರ್ಷಗಳಲ್ಲೇ ಜನವರಿಯಲ್ಲಿ ಅಧಿಕ ಚಳಿ ಕಂಡ ಬೆಂಗಳೂರು

   ಎಲ್ಲೆಡೆಯಲ್ಲಿಯೂ ಚಳಿಗಾಳಿಯ ಪ್ರಭಾವ ಕಂಡುಬರುತ್ತಿದೆ. ಜಲಪಾತಗಳು ನದಿಗಳು ಸರೋವರಗಳು ಹಿಮದ ಗಡ್ಡೆಗಳಾಗಿವೆ, ಎಲ್ಲೆಡೆಯಲ್ಲಿಯೂ ಹಿಮ ಸುರಿಯುತ್ತಿದ್ದು ರಸ್ತೆಗಳು ಸಂಪೂರ್ಣ ಮುಚ್ಚಿಹೋಗಿವೆ. ಒಂದು ಪ್ರದೇಶದಲ್ಲಿ ಎರಡೇ ಎರಡು ದಿನಗಳಲ್ಲಿ 63 ಇಂಚ್ ಹಿಮ ಸುರಿದಿದೆಯೆಂದರೆ ಲೆಕ್ಕಹಾಕಿ. ಜನರು ಬೆಚ್ಚಗಿನ ದಿರಿಸು ಧರಿಸಿ ಅಡ್ಡಾಡುತ್ತಿರುವುದು ಕಂಡುಬಂದಿದೆ.

   ಕೆಂಟಕಿಯಲ್ಲಿ ಮುನ್ನೆಚ್ಚರಿಕೆಯಾಗಿ ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಶಾಲೆಗೆ ರಜಾ ಕೊಟ್ಟಿರುವುದನ್ನು ಕೆಂಟಕಿ ಗವರ್ನರ್ ಪ್ರತಿಭಟಿಸಿ, ನಾವು ಇಷ್ಟು ಮೆತ್ತಗಾದರೆ ಹೇಗೆ? ಎಂದು ನುಡಿದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೆಂಟಕಿಯ ಶಿಕ್ಷಕಿಯೊಬ್ಬರು, ನಮ್ಮ ಶಾಲಾಮಕ್ಕಳು ಧರಿಸುವ ಉಡುಪನ್ನು ಧರಿಸಿ ಅರ್ಧಗಂಟೆ ಬಸ್ ನಿಲ್ದಾಣದಲ್ಲಿ ನಿಲ್ಲಿ ಸಾಕು ಎಂದು ಸವಾಲು ಹಾಕಿದ್ದಾರೆ. ಆ ಪರಿಯ ಚಳಿಗಾಳಿ ಬೀಸಿದ್ದರಿಂದಲೇ ಮುನ್ನೆಚ್ಚರಿಕೆಯಾಗಿ ಶಾಲೆಗಳಿಗೆ ರಜಾ ನೀಡಲಾಗಿದೆ.

   ಇದು ಎಂದೂ ಕಂಡರಿಯದ ವಿದ್ಯಮಾನ ಎಂಬಂತೆ ಅಲ್ಲಿನ ಜನರು ಕಂಡಕಂಡಲ್ಲಿ ಫೋಟೋ ತೆಗೆಯುತ್ತಿದ್ದಾರೆ, ಚಳಿಯ ಹೊಡೆತಕ್ಕೆ ಸಿಲುಕಿ ಒಡೆದ ಕಿಟಕಿ ಗಾಜುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಡೀ ನ್ಯೂಯಾರ್ಕ್ ನಗರವೇ ಹಿಮದಿಂದ ಮುಚ್ಚಿಹೋಗಿರುವ ಫೋಟೋಗಳು ಲಭ್ಯವಿವೆ. ಕೆಲವರು ತಮ್ಮ ಮುದ್ದು ಸಾಕುಪ್ರಾಣಿಗಳಿಗೆ ತಮ್ಮ ಬೆಚ್ಚಗಿನ ಕೋಟ್ ಹಾಕಿದ್ದಾರೆ. ತಮಾಷೆ ಅಂದ್ರೆ ಧುಮ್ಮಿಕ್ಕುವ ನಯಾಗರಾ ಜಲಪಾತ ಸದ್ದು ಮಾಡದೆ ಹಿಮದಿಂದಾಗಿ ತಟಸ್ಥವಾಗಿದೆ. (ಫೋಟೋ ಮತ್ತು ವಿಡಿಯೋ : ಸುಕನ್ಯಾ ಸುಗಿ, ಶಿಕಾಗೋ)

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   American cold wave is not just beautiful, it is brutal too, says US resident Kannadiga Srinath Bhalle. He also says, Antarctica seems to be warmer than US Midwest. Midwest of America is gripped by extreme cold weather due to polar vortex. Many places like Minnesota has registered a temperature of minus 70. Another US resident Sukanya Sugi has sent some wonderful and videos.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more