ಲಂಡನ್ನಿನಲ್ಲಿ ಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ!

Posted By:
Subscribe to Oneindia Kannada

ಲಂಡನ್, ಮೇ 10: ಜಗಜ್ಯೋತಿ ಬಸವೇಶ್ವರರ 882ನೇ ಜಯಂತಿಯನ್ನು ಲಂಡನ್ನಿನಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು. ಲ್ಯಾಂಬೆತ್ ಕೌನ್ಸಿಲ್ ನ ಒಪ್ಪಿಗೆ ಪಡೆದು ಬ್ರಿಟಿಷ್ ನೆಲದಲ್ಲಿ ಅಣ್ಣ ಬಸವಣ್ಣ ಅವರ ಪ್ರತಿಮೆ ಬಳಿ 'ಬಸವ ಜಯಂತಿ' ಆಚರಿಸಿ, ಸಂಭ್ರಮಿಸಲಾಯಿತು.

ಭಾರತ ಹಾಗೂ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಸರಳ ಆಚರಣೆಗೆ ಒತ್ತು ನೀಡಲಾಗಿದೆ. ನಾವು ಇಲ್ಲಿ ಸಂಗ್ರಹಿಸಿದ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳಿಸುತ್ತಿದ್ದೇವೆ ಎಂದು ಲ್ಯಾಂಬೆತ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಹೇಳಿದರು.

882th Birth Anniversary of Basaveshwara celebrated in London

ಬಸವೇಶ್ವರ (1134-1168 ಕ್ರಿ.ಶ) ಅವರು 12ನೇ ಶತಮಾನದ ಭಾರತೀಯ ತತ್ತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾಗಿದ್ದು, ವಿಶ್ವ ಮಾನ್ಯತೆ ಪಡೆದ ಕಾಯಕ ತತ್ತ್ವವನ್ನು ಸಾರಿದರು. ಈ ಕಾರಣಕ್ಕಾಗಿ ಲಂಡನ್ನಿನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬ್ರಿಟಿಷ್ ಸಂಸತ್ತಿನ ಸಮೀಪದಲ್ಲೇ ಪ್ರತಿಮೆ ಸ್ಥಾಪಿಸಲು ಒಪ್ಪಿಗೆ ಪಡೆದು ನವೆಂಬರ್ 14, 2015ರಂದು ಬಹುದಿನಗಳ ಕನಸು ಸಾಕಾರಗೊಳಿಸಲಾಯಿತು.

ಲಂಡನ್ನಿನಲ್ಲಿ ಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ!

ಲಂಡನ್ನಿನಲ್ಲಿ ಪ್ರಥಮ ಬಾರಿಗೆ ಬಸವ ಜಯಂತಿ ಆಚರಣೆ!

-
-
-

ಯುಕೆಯ ಬಸವೇಶ್ವರ ಫೌಂಡೇಶನ್ ನ ವಿಶೇಷ ಆಹ್ವಾನಿತರಾಗಿ ಮೋದಿ ಅವರ ಯೋಗ ಗುರು ಬೆಂಗಳೂರಿನ ಡಾ. ಎಚ್.ಆರ್ ನಾಗೇಂದ್ರ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಲೀಸ್ಟೆಶೈರ್ ಸಂಸದ ಕೀತ್ ವಾಜ್ ಅವರಿಂದ ಬಸವೇಶ್ವರ ಪ್ರತಿಮೆಗೆ ನಮನ ಸಲ್ಲಿಸಿದರು. ಬಸವೇಶ್ವರರ ಪ್ರತಿಮೆಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ವಿಭೂತಿ ಬಳೆದು ಗೌರವ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಗುಜರಾತ್ ಸಮಾಚಾರ್ ನ ಸಂಪಾದಕ ಸಿ.ಬಿ ಪಟೇಲ್ ಅವರು ಆಗಮಿಸಿದ್ದರು.

ಇಡೀ ಕಾರ್ಯಕ್ರಮವನ್ನು 1 ಪೌಂಡ್ ಬಜೆಟ್ ನಲ್ಲಿ ಮಾಡಿ ಮುಗಿಸಲಾಯಿತು. ಮಾಲಾರ್ಪಣೆಗೆ ಮಾತ್ರ ಖರ್ಚು ಮಾಡಲಾಯಿತು. ಭಾರತ ಹಾಗೂ ಕರ್ನಾಟಕದ ಬರ ಪರಿಸ್ಥಿತಿಯನ್ನು ಪರಿಗಣಿಸಿ ಸರಳವಾಗಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಗ್ರಹಿಸಲಾದ ದೇಣಿಗೆಯನ್ನು ಕರ್ನಾಟಕದ ರೈತರಿಗೆ ನೀಡಲು ಮನಸ್ಸು ಮಾಡಲಾಗಿದ್ದು, ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಡಾ. ನೀರಜ್ ಪಾಟೀಲ್ ಹೇಳಿದರು. ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ನಲ್ಲಿ ಪಡೆಯಬಹುದು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
882nd Birth Anniversary of Basaveshwara (1134-1168 AD) was celebrated in London. For the first time Basaveshwara birth anniversary was officially celebrated on the British soil with the approval from Lambeth council.
Please Wait while comments are loading...