7ನೇ ಅಕ್ಕ ಸಮ್ಮೇಳನಕ್ಕೆ ನೃಪತುಂಗದ ಸಡಗರ

ಮೊದಲನೇ ವಿಶ್ವ ಕನ್ನಡ ಸಮ್ಮೇಳನ 2000ನೇ ಇಸವಿಯಲ್ಲಿ ಹೂಸ್ಟನ್ ನಗರದಲ್ಲಿ ನಡೆಯಿತು. ನಂತರ 2002ರಲ್ಲಿ ಡೆಟ್ರಾಯಿಟ್‌ನಲ್ಲಿ, 2004ರಲ್ಲಿ ಒರ್ಲಾಂಡೋದಲ್ಲಿ, 2006ರಲ್ಲಿ ಬಾಲ್ಟಿಮೋರ್‌ನಲ್ಲಿ, 2008ರಲ್ಲಿ ಶಿಕಾಗೋ ನಗರದಲ್ಲಿ ಮತ್ತು 2010ರಲ್ಲಿ ನ್ಯೂ ಜೆರ್ಸಿಯಲ್ಲಿ ಅಕ್ಕ ಸಮ್ಮೇಳನಗಳು ನಡೆದಿವೆ. ಪ್ರತಿಯೊಂದು ಸಮ್ಮೇಳನವೂ ಯಶಸ್ವಿಯಾಗಿ ಜನ-ಮನ ಗೆದ್ದಿದೆ. ಈ ಬಾರಿಯ ಅಕ್ಕ ವಿಶ್ವ ಕನ್ನಡ ಸಮ್ಮೇಳನ-2012 ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ, ಅಟ್ಲಾಂಟ ನಗರದಲ್ಲಿ ನಡೆಯಲಿದೆ.
7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ತಯಾರಿಯ ಪ್ರಯುಕ್ತ ಅಕ್ಕ ಪದಾಧಿಕಾರಿಗಳು ಇತ್ತೀಚಿಗಷ್ಟೇ Atlantaಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ "ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಉತ್ತರ ಅಮೇರಿಕದ ಎಲ್ಲ ಕನ್ನಡಿಗರು ಉತ್ಸುಕರಾಗಿದ್ದಾರೆಂದು" ಅಕ್ಕ ಸಮ್ಮೆಳನದ ಅಧ್ಯಕ್ಷರಾದ ದಯಾನಂದ ಅಡಪ್ಪ ಅವರು ತಿಳಿಸಿದರು. ಕನ್ನಡ ಭಾಷೆಯ ಕಲೆ ಮತ್ತು ಸಂಸ್ಕೃತಿಯನ್ನು ಎಲ್ಲ ವಯೋಮಾನದವವರಿಗೆ ತಲಿಪಿಸುವಂತೆ ಮಾಡುವುದು ಅಕ್ಕದ ಉದ್ದೇಶವೆಂದು ತಿಳಿಸಿದರು. ಅಕ್ಕ ಧರ್ಮದರ್ಶಿಗಳ ಸಮಿತಿ ಅಧ್ಯಕ್ಷ ಅಮರನಾಥ ಗೌಡ ಅವರು ಮಾತನಾಡುತ್ತ "ಅಕ್ಕ ಸಮೆಳನದಲ್ಲಿದಲ್ಲಿ ಯುವ ಜನತೆಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುವುದು ಮತ್ತು ಅದರ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವುದು ಸಮ್ಮೇಳನದ ಉದ್ದೇಶ. ಯುವ ಪೀಳಿಗೆ ತಮ್ಮ ವ್ಯವಹಾರವನ್ನು ಅಮೆರಿಕದಲ್ಲಿ ಬೆಳೆಸಲು ಇದು ಸೇತುವೆಯಾಗಿ ಕೆಲಸ ಮಾಡುತ್ತದೆ" ಎಂದು ಅಭಿಪ್ರಾಯ ಪಟ್ಟರು.
ನೃಪತುಂಗದ ಸಾಮಾಜಿಕ ಕಳಕಳಿ : ಅಮೆರಿಕದ ಅತಿ ಹಳೆಯ ಕನ್ನಡ ಕೂಟಗಳಲ್ಲಿ ಒಂದಾಗಿರುವ ನೃಪತುಂಗ ಕನ್ನಡ ಕೂಟ 1973ರಲ್ಲಿ ಸ್ತಾಪಿತವಾಯಿತು. ಈ ಸಂಸ್ಥೆಯು ನಾಡಿನ ಹಬ್ಬ ಹಾಗು ಇತರ ಹಬ್ಬಗಳನ್ನು ಆಚರಿಸಿ ಕನ್ನಡಿಗರೆಲ್ಲರು ಸೇರುವ ವೇದಿಕೆಯಾಗಿದೆ. ಕೂಟದ ಮೂಲಕ ಸಂಗ್ರಹಿಸಿದ ದೇಣಿಗೆಯು ಅನೇಕ ಕುಟುಂಬಗಳ ಕಷ್ಟದಲ್ಲಿ ಹಾಗು ನೈಸರ್ಗಿಕ ವಿಕೋಪಕ್ಕೆ ಸಿಲುಕಿದ ಸಂತ್ರಸ್ತರ ಕಷ್ಟದಲ್ಲಿ ಭಾಗಿಯಾಗಿದೆ. ಪ್ರತಿ ವರ್ಷವು ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ, ಗುಜರಾತ್ ದುರಂತದಲ್ಲಿ ತೊಂದರೆಗೆ ಈಡಾದವರಿಗೆ ದೇಣಿಗೆ ನೀಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ತನ್ನ ಹೆಗಲು ನೀಡಿದೆ.
Shankari Narasimhaiya Muteri Foundation ಮೂಲಕ ರಾಜ್ಯೋತ್ಸವದಂದು ಅರ್ಹರಿಗೆ $4000 ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸದಸ್ಯರು ಕನ್ನಡ ಗ್ರಂಥಾಲಯ, ವೆಬ್‌ಸೈಟ್ ಸ್ಥಾಪಿಸಿ, ಕನ್ನಡ ತರಗತಿಗಳನ್ನು ನಡೆಸಿ, ಭಾಷೆಯ ಸಂರಕ್ಷಣೆಗೆ/ ಬೆಳವಣಿಗೆಗೆ ದುಡಿಯುತ್ತಿದ್ದಾರೆ. ಕೂಟದ ಸದಸ್ಯರು Habitat For Humanity, Vibha-walkthon ಮತ್ತು adopt -a-mile(adopted Douglas Road starting at McGinnes ferry Rd to Jones Bridge Rd) ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಬೆಳಗಾವಿ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಮನೆಯನ್ನು ನಿರ್ಮಿಸಲು ಅಲ್ಲಿಯ ರಾಮಕೃಷ್ಣ ಆಶ್ರಮದೊಂದಿಗೆ ಕೂಟ ತನ್ನ ಸಹಾಯ ಹಸ್ತ ನೀಡಿ, ಒಂದು ಮನೆಯನ್ನು ನಿರ್ಮಾಣ ಮಾಡಲು ಧನ ಸಹಾಯ ನೀಡಿದೆ.
ಸಮಾರಂಭಕ್ಕೆ ಅಮೆರಿಕ-ಭಾರತದ ರಾಯಭಾರಿಯಾದ ಗೌರವಾನ್ವಿತ ನಿರುಪಮ ರಾವ್ ಹಾಗು ಇತರ ಗಣ್ಯರನ್ನು ಆಹ್ವಾನಿಸಲಾಗಿದೆ. ಸಾಂಸ್ಕೃತಿಕ ಹಾಗು ಕರ್ನಾಟಕ ವಾಣಿಜ್ಯ ಮಂಡಳಿಯ ಅಧಿಕಾರಿಗಳು ಭಾಗವಹಿಸುತದ್ದಾರೆ. 7ನೇ ಅಕ್ಕ ಸಮ್ಮೇಳನವನ್ನು ಅಟ್ಲಾಂಟದಲ್ಲಿ ಆಚರಿಸಲು ಅಕ್ಕ ಹಾಗು ನೃಪತುಂಗ ಕನ್ನಡ ಕೂಟ ಸ್ವಾಗತಿಸುತ್ತಿದೆ. ಸಮಾರಂಭಕ್ಕೆ ಎಲ್ಲರಿಗೂ ಸ್ವಾಗತವಿದೆ. ಎಲ್ಲ ಕನ್ನಡ ಮಿತ್ರರನ್ನು ಮನರಂಜಿಸುವುದು ನಮ್ಮ ಗುರಿ. ಅವರ ಬಿಡುವಿನ ದಿನವನ್ನು ಮರೆಯಲಾರದ ದಿನವಾಗಿಸುವಿದೆ ಕಾರ್ಯಕರ್ತರ ಉದ್ದೇಶವಾಗಿದೆ. ಈ ಸಮ್ಮೆಳನವನ್ನು ತಾವು ಜೀವನ ಪೂರ್ತಿ ನೆನೆಯುವಂತೆ ಮಾಡುವ ಉದ್ದೇಶದಿಂದ ತಮ್ಮನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಎಂದು ಡಾ|| ರಾಮಸ್ವಾಮಿಯವರು ತಿಳಿಸಿದ್ದಾರೆ.












Click it and Unblock the Notifications