ಶಂಕರ ಕಣ್ಣಾಸ್ಪತ್ರೆಯಿಂದ ಅಮೆರಿಕಾದಲ್ಲಿ ಕೋಲಾಟ
ನವರಾತ್ರಿಯಲ್ಲಿ ನವದೇವಿಯರನ್ನು ಆರಾಧಿಸುವುದರ ಜೊತೆಗೆ ದೇಶದಾದ್ಯಂತ ಮಹಿಳೆಯರು ಲಂಗ ದಾವಣಿ ಉಟ್ಟುಕೊಂಡು ದಾಂಡಿಯಾ (ಕೋಲಾಟ) ಆಡಿ ಸಡಗರಪಡುತ್ತಾರೆ. ಕೋಲಾಟ ಆಡುವವರಿಗೆ ಮಾತ್ರವಲ್ಲ ನೋಡುಗರಿಗೂ ವಿಶಿಷ್ಟ ರೀತಿಯ ಮನರಂಜನೆ ಸಿಗುತ್ತದೆ.
ಅಮೆರಿಕಾದ ಬೇ ಏರಿಯಾದಲ್ಲಿರುವ ಶಂಕರ ಐ ಫೌಂಡೇಷನ್ ದಾಂಡಿಯಾವನ್ನು ಹಣ ಸಂಗ್ರಹಣೆಗೆ ಬಳಸಿಕೊಂಡು ಹೊಸ ಮುನ್ನುಡಿ ಬರೆದಿದೆ. ಭಾರತದಲ್ಲಿ ಮತ್ತಷ್ಟು ಕಣ್ಣಿನ ಆಸ್ಪತ್ರೆಗಳನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ಅಕ್ಟೋಬರ್ 19ರಿಂದ 27ರವರೆಗೆ 'ದಾಂಡಿಯಾ 2012' ಸ್ಪರ್ಧೆಯನ್ನು ಶಂಕರ ಐ ಫೌಂಡೇಷನ್ ಏರ್ಪಡಿಸಿತ್ತು.
ಅಮೆರಿಕಾದ ಮಿಲ್ಪಿಟಸ್‌ನಲ್ಲಿ ಇರುವ ಶಂಕರ್ ಐ ಫೌಂಡೇಷನ್ ಆಯೋಜಿಸಿದ್ದ ಈ ದಾಂಡಿಯಾ ಉತ್ಸವಕ್ಕೆ ಅಮೆರಿಕದ ದಾನಿಗಳಿಂದ ಭಾರೀ ಸ್ಪಂದನೆ ವ್ಯಕ್ತವಾಯಿತು. ಈಗ ಸಂಗ್ರಹಿಸಲಾಗಿರುವ ಹಣದ ಸಹಾಯದಿಂದ ಭಾರತದ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಸಹಾಯವಾಗಲೆಂದು ಅನೇಕ ಆಸ್ಪತ್ರೆಗಳನ್ನು ಕಟ್ಟಿಸುತ್ತಿದ್ದಾರೆ.

2013ರಲ್ಲಿ ಕಾನ್ಪುರದಲ್ಲಿ 10ನೇ ಕಣ್ಣಿನಾಸ್ಪತ್ರೆ ಮತ್ತು ಉತ್ತರಪ್ರದೇಶದಲ್ಲಿಯೂ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಮುಂದಿನ ಒಂದೇ ವರ್ಷದಲ್ಲಿ ಈ ಆಸ್ಪತ್ರೆಗಳು ಕಣ್ಣುತೆರೆಯಲಿವೆ. ಅಲ್ಲದೆ, ಜನರ ಆಗ್ರಹದ ಮೇರೆಗೆ ಗುಜರಾತ್ ಮತ್ತು ಗುಂಟೂರಿನಲ್ಲಿರುವ ಕಣ್ಣಿನಾಸ್ಪತ್ರೆಗಳನ್ನು ವೃದ್ಧಿಸಲು ನಿರ್ಧರಿಸಿದೆ.
ಈ ಎಲ್ಲ ಆಸ್ಪತ್ರೆಗಳನ್ನು ನಿರ್ಮಿಸಲು ಜಮೀನನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಫೌಂಡೇಷನ್ನಿನ ಪ್ರಕಟಣೆ ಹೇಳಿದೆ. ಈ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ 20 ಸಾವಿರ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಉದ್ದೇಶಿಸಲಾಗಿದೆ. ಶಂಕರ್ ಐ ಫೌಂಡೇಷನ್‌ಗಾಗಿ 2008ರಲ್ಲಿ ನ್ಯೂಜೆರ್ಸಿಯಲ್ಲಿರುವ ಬೃಂದಾವನ ಕನ್ನಡ ಕೂಟದಲ್ಲಿ ಹಣ ಸಂಗ್ರಹಿಸಲಾಗಿತ್ತು.
ಶಂಕರ್ ಐ ಫೌಂಡೇಷನ್ ಮಾಡುತ್ತಿರುವ ಈ ಉದಾತ್ತ ಕೆಲಸಕ್ಕೆ ಉದಾರವಾಗಿ ದೇಣಿಗೆ ನೀಡಬಯಸುವವರು ತಮ್ಮ ಶಕ್ತ್ಯಾನುಸಾರ ದಾನ ಮಾಡಬಹುದು. ಈ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಈ ವೆಬ್ ಸೈಟ್ ಸಂದರ್ಶಿಸಿ ಮಾಹಿತಿ ಪಡೆಯಬಹುದು : http://www.giftofvision.org
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications