ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ (ಭಾಗ 3)

ಜಯತೀರ್ಥ : ಹೌದು ಅವರು ತಮ್ಮ ಗುರುಗಳಾದ ಭೀಮಸೇನರ ದೈತ್ಯ ಪ್ರತಿಭೆಯ ಆರಾಧಕರಾಗಿ ಬೆಳೆದವರು. ಅವರ ಗುರುಭಕ್ತಿ ಅಪಾರವಾದದ್ದು. ಸ್ವಲ್ಪ ಮಟ್ಟಿಗೆ ಗುರುಗಳೆಂದರೆ ಅಂಜಿಕೆ ಸಹ. ಅಲ್ಲದೇ ತಾವಾಗಿಯೇ ಮುನ್ನುಗ್ಗಿ ಸಾಧಿಸುವ ಸ್ವಭಾವ ಅವರದಾಗಿರಲಿಲ್ಲ.
ಪ್ರಶ್ನೆ : ಅವರು ನಿಮ್ಮನ್ನು ಹೇಗೆ ಒಬ್ಬ ಸಮರ್ಥ "Performing Artist" ಆಗಿ ಪರಿವರ್ತಿಸಿದರು ಎಂದು ಹೇಳುತ್ತೀರಾ?
ಜಯತೀರ್ಥ : ಅವರು ನನಗೆ ಸಂಗೀತದಲ್ಲಿ ತಲ್ಲೀನರಾಗಿ ಆನಂದಿಸುವದನ್ನು ಕಲಿಸಿದರು. ಅವರ ಪ್ರಕಾರ ನಾವು ನಮ್ಮ ಸಂಗೀತದಿಂದ ಆನಂದ ಅನುಭವಿಸಿದರೆ ಪ್ರೇಕ್ಷಕರೂ ಕೂಡ ಅದರಿಂದ ಆನಂದ ಪಡೆಯುತ್ತಾರೆ ಮತ್ತು ಗಾಯಕನ ಗುಣಗಳನ್ನು ಗುರುತಿಸುತ್ತಾರೆ ಎಂದು ಹೇಳುತ್ತಿದ್ದರು. ನಮ್ಮ ಅಭ್ಯಾಸವನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದರು. ಒಳ್ಳೆಯ ಕೇಳುಗರ ಮುಂದೆ ಕಾರ್ಯಕ್ರಮಗಳನ್ನು ನೀಡಿ ಅನುಭವ ಪಡೆಯುವದಕ್ಕೆ ಅನುವು ಮಾಡಿ ಕೊಡುತ್ತಿದ್ದರು. ನನ್ನ ಗಾಯನದ ಬಗ್ಗೆ ಕೇಳಿದ ಭೀಮಸೇನ್ ಜೋಶಿ ಅವರು ನನ್ನನ್ನು ಪುಣೆಯ ಸವಾಯಿ ಗಂಧರ್ವ ಸಂಗೀತ ಕಾರ್ಯಕ್ರಮಕ್ಕೆ ಅಹ್ವಾನಿಸಿದಾಗ ನನ್ನ ಗುರುಗಳಿಗಾದ ಸಂತೋಷ ಅಮಿತವಾದದ್ದು. ಅವರು ನನಗೆ ಪುಣೆಯ ರಸಿಕ ಶೋತೃಗಳ ಸಂಗೀತ ಜ್











Click it and Unblock the Notifications