ಮನಮುದಗೊಳಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಹೊಯ್ಸಳ ಕನ್ನಡ ಕೂಟದ ಅಧ್ಯಕ್ಷರಾದ ವೇಣು ಗುದ್ದೇರರಿಂದ ಸ್ವಾಗತ ಭಾಷಣವಾದ ಮೇಲೆ ಚಂದ್ರಭಟ್ ರವರ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಮುದ್ದಾದ ಮಕ್ಕಳು ಅಣ್ಣಾ ಹಜಾರೆ, ಶಕುಂತಲೆ, ಘಟೋದ್ಘಜ, ಶ್ರೀಕೃಷ್ಣ, ಶ್ರೀರಾಮ, ಅಪ್ಪಟ ಭಾರತ ನಾರಿ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಫೋಷಕರ ಕಂಗಳಲ್ಲಿ ಆನಂದಭಾಷ್ಪ ಬರಿಸಿದ್ದರೆ, ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲೂ ಚಿಣ್ಣರ-ಕಿನ್ನರ ಲೋಕಕ್ಕೆ ಕರೆದೊಯ್ದಂತಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳು
* ಪ್ರಿಯಾ-ಸರಿತಾ-ಸ್ವರ್ಣಾರ ಸಂಯೋಜನೆಯಲ್ಲಿ ಇಪ್ಪತ್ತು ಪುಟಾಣಿಗಳು "ಕನ್ನಡ ಮಕ್ಕಳ ಹಾಡುಗಳಿಗೆ" ಹೆಜ್ಜೆ ಹಾಕಿ ನರ್ತಿಸಿದವು.
* ನಮ್ಮ ಭೂಮಿತಾಯಿ - ಜನಪದ ನೃತ್ಯ - ರೂಪ ಕುಮಾರ್ ನಿರ್ದೇಶನ.
* ದಿ| ವಿಷ್ಣುವರ್ಧನ್ ನೆನಪಿಗೋಸ್ಕರ ಆಪ್ತರಕ್ಷಕ ಸಿನೆಮಾದ "ಸಿಂಹ-ಸಿಂಹ" ಹಾಡಿಗೆ ಹೆಜ್ಜೆ ಹಾಕಿದ್ದು ಅಮೆರಿಕನ್ನಡ ಶಾಲೆಯ ಹುಡುಗರು - ಅನಿತಾರವರ ನಿರ್ದೇಶನ.
* ರಾಧೆಯ ಕೃಷ್ಣ ನೃತ್ಯ - ಪ್ರಿಯಾ ನಿರ್ದೇಶನ.
* ಶಾಂತಿ ಮಂತ್ರ - ಶಾಂತಿ ಸಮೃದ್ದಿಗಾಗಿ ಪ್ರಾರ್ಥನೆ - ಇಂದುಕಲಾ ತಂಡದಿಂದ.
* ಮಾಯದಂತ ಮಳೆ ಜನಪದ ನೃತ್ಯ - ಸ್ನೇಹ ಸೋಸಲೆ ನಿರ್ದೇಶನ.
* ಶಂಭೋ ಶಿವ ಸಿನೆಮಾ ನೃತ್ಯ - ಪ್ರಿಯಾ ನಿರ್ದೇಶನ.
* ಮಧುರಾಷ್ಟಕಂ - ಲಘು ಶಾಸ್ತ್ರೀಯ ನೃತ್ಯ - ರಶ್ಮಿ ಸಂಯೋಜನೆ ಹಾಗೂ ಉರ್ವಿ ಪಾಠಕ್ ನೃತ್ಯ ನಿರ್ದೇಶನ.
* ವಿಚಿತ್ರಮಂಜರಿ - ದಿನೇಶ್ ಹಾಗೂ ಸಂಗಡಿಗರು.
* ಹೊಯ್ಸಳ ಸಾಮ್ರಾಜ್ಯದ ಬಗ್ಗೆ ಒಂದು ನೋಟ ನಿರೂಪಣೆ - ಅಂಜು ಸೋಮನಾಥ್ ರವರಿಂದ.
* ಸೊಗಸಾಗಿ ಮೂಡಿಬಂದ "ಭಕ್ತ ಪ್ರಹ್ಲಾದ" ನಾಟಕ - ರಘು ಸೋಸಲೆ ಮತ್ತು ಸಂಗಡಿಗರಿಂದ
* ತೆರೆಗಳ ಸಂಗಮ - ಗಿರೀಶ್ ನೀಲಕಂಠ ಮಿಮಿಕ್ರಿ
* ನಾನ್ ಸ್ಟಾಪ್ ಕನ್ನಡ ಸಾಹಿತ್ಯ ಝಲಕ್ - ಅಮೆರಿಕಾದಲ್ಲಿ ಯಮರಾಜ ನಾಟಕದ ಖ್ಯಾತಿಯ ಮಲ್ಲಿ ಸಣ್ಣಪ್ಪನವರಿಂದ. [ನಮ್ಮ ಹಳೆ ಕನ್ನಡ ಗೀತೆಗಳೇ ಚೆಂದ]













Click it and Unblock the Notifications