ಸ್ಟಾನ್ಫರ್ಡ್ ರೇಡಿಯೊದಲ್ಲಿ ಮಾ. ಹಿರಣ್ಣಯ್ಯ ಸಂದರ್ಶನ

Master Hirannaiah
ನಟರತ್ನಾಕರ ಡಾ| ಮಾಸ್ಟರ್ ಹಿರಣ್ಣಯ್ಯ ಅವರೊಂದಿಗೆ ಜೂ.1 ಬುಧವಾರದಂದು ಅಮೆರಿಕಾದ ಸ್ಟಾನ್ಫರ್ಡ್ ರೇಡಿಯೋದಲ್ಲಿ ವಿಶೇಷ ಸಂದರ್ಶನ ನಡೆಸಲಾಗುತ್ತಿದೆ. ಲಂಚಾವತಾರ, ನಡುಬೀದಿ ನಾರಾಯಣ ಮುಂತಾದ ನಾಟಕಗಳಲ್ಲಿ ರಾಜಕಾರಣಿಗಳ ಬಂಡವಾಳವನ್ನು ಬೆತ್ತಲೆ ಮಾಡಿದ್ದಾರೆ. ನೇರ, ದಿಟ್ಟ, ಹರಿತವಾದ ಮಾತುಗಳಿಗೆ ಹೆಸರಾಗಿರುವ ರಂಗಕರ್ಮಿಯ ಮಾತುಗಳನ್ನು ಕೇಳಲು ಮರೆಯದಿರಿ. ಸಂದರ್ಶನ ನಡೆಸುತ್ತಿರುವವರು ಮಧು ಕೃಷ್ಣಮೂರ್ತಿ.

ಕನ್ನಡದ ಖ್ಯಾತ ನಾಟಕಾರರಾದ ಇವರು ರಾಜಕೀಯ ಮತ್ತು ಸಾಮಾಜಿಕ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತ ತಮ್ಮ ಹರಿತವಾದ ಹಾಸ್ಯ ಮತ್ತು ವಿಡಂಬನೆಯಿಂದ ನಾಟಕಪ್ರಿಯರನ್ನು ನಾಡಿನಾದ್ಯಂತ ರಂಜಿಸುತ್ತಿದ್ದಾರೆ. ಕನ್ನಡದ ಈ ಹಿರಿಯ ನಟ ಮತ್ತು ನಾಟಕಕಾರ ಮಾತುಗಳನ್ನು ಕೇಳಲು ಮತ್ತು ಅವರೊಂದಿಗೆ ಮಾತನಾಡಲು ಇದು ಸುವರ್ಣಾವಕಾಶ. ಕಾರ್ಯಕ್ರಮದ ಸಮಯದಲ್ಲಿ ನೀವು ದೂರವಾಣಿ ಮೂಲಕ ಕರೆ ಮಾಡಿ ಭಾಗವಹಿಸಬಹುದು.

ಕಾರ್ಯಕ್ರಮದ ವಿವರಗಳು:

ದಿನಾಂಕ : ಜೂನ್ 1, 2011 (ಬುಧವಾರ)
ಸಮಯ : (ಕ್ಯಾಲಿಫೋರ್ನಿಯ ಸಮಯ)
ಬೆಳಗ್ಗೆ 6.00 AM PST - 7.30 AM PST – ಸಂಗೀತ
7.30 AM PST - 8.45 AM PST : ಡಾ| ಮಾಸ್ಟರ್ ಹಿರಣ್ಣಯ್ಯ ಅವರೊಂದಿಗೆ ಸಂದರ್ಶನ
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]

ಇಂಟರ್ನೆಟ್ ಮೂಲಕ: http://www.itsdiff.com/Kannada.html
(Listen live and to archives from anywhere in the world)
ನಿರ್ವಹಣೆ : ಮಧು ಕೃಷ್ಣಮೂರ್ತಿ

ಭಾರತದಲ್ಲಿ ಇಂಟರ್ನೆಟ್ ಮೂಲಕ ಕೇಳುವವರಿಗೆ : ಮಾಸ್ಟರ್ ಹಿರಣ್ಣಯ್ಯನವರ ಸಂದರ್ಶನ ಭಾರತೀಯ ಕಾಲಮಾನದಲ್ಲಿ: ಬುಧವಾರ ರಾತ್ರಿ: 8 ಗಂಟೆಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+