ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕಲಿ ದಿನ

ಕನ್ನಡ ಕಲಿ ತರಗತಿಗಳಲ್ಲಿ, ಕನ್ನಡ ನುಡಿ, ಕರ್ನಾಟಕ, ಮತ್ತು ಕನ್ನಡ ಸಂಸ್ಕೃತಿಗಳನ್ನು ನಿಯತವಾಗಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಒಂದೆಡೆ ಸೇರಿ ತಮ್ಮ ಸಾಧನೆಗಳೊಂದಿಗೆ ಜ್ಞಾನ ಪ್ರತಿಭೆಗಳನ್ನು ಪ್ರದರ್ಶಿಸಲು ಸುವರ್ಣಾವಕಾಶ; ಕನ್ನಡ ಕುಡಿಗಳನ್ನು ಬೆಳೆಸಿದ ತಂದೆ ತಾಯಿಗಳಿಗೆ ಇದೊಂದು ಹೆಮ್ಮೆಯ ಗಳಿಗೆ. ನಿಸ್ವಾರ್ಥದಿಂದ ವರ್ಷವಿಡೀ ದುಡಿದ ಕನ್ನಡ ಕಲಿಯ ಶಿಕ್ಷಕರಿಗೆ ಮತ್ತು ಸ್ವಯಂಸೇವಕರಿಗೆ ಕೃತಕೃತ್ಯತೆಯ ದಿನ. ಹತ್ತು ವರ್ಷಗಳಿಂದ ಕನ್ನಡ ತರಗತಿಗಳನ್ನು ನಡೆಸುತ್ತ ಈ ವರ್ಷ 101 ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ. ಅಂತೂ ಎಲ್ಲ ಕನ್ನಡಿಗರಿಗೂ ಗೆಲುವಿನ ದಿನ.
ಎಲ್ಲ ವಿದ್ಯಾರ್ಥಿಗಳು ಸ್ವರದುಂಬಿಯಿಂದ ಜಾಣ-ಪ್ರವೀಣ ಹಂತಗಳವರಗೂ ವಾರ್ಷಿಕ ಪರೀಕ್ಷೆಗಳನ್ನು, ಮೌಖಿಕ ಮತ್ತು ಲಿಖಿತ ರೂಪದಲ್ಲಿ, ತೆಗೆದುಕೊಳ್ಳುತ್ತಿದ್ದಾರೆ. ಕನ್ನಡ ಕಲಿ ಮತ್ತು ಹೈಸ್ಕೂಲುಗಳಿಂದ ಹೊರಬಿದ್ದು ತಮ್ಮ ಮುಂದಿನ ಅಭ್ಯಾಸಕ್ಕಾಗಿ ಆರು ವಿದ್ಯಾರ್ಥಿಗಳು ಕಾಲೇಜು ಸೇರುತ್ತಿದ್ದಾರೆ. ಇವರಿಗಾಗಿ ಪದವಿ ಪ್ರದಾನ ಸಮಾರಂಭವೂ ಇಲ್ಲಿದೆ. ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣಗಳನ್ನು ಇವರು ಕನ್ನಡದಲ್ಲೇ ನೀಡಬೇಕಾದುದು ವಿಶೇಷ. ತಂದೆತಾಯಿಗಳನ್ನು ಅಭಿನಂದಿಸುತ್ತ, ಶಿಕ್ಷಕರಿಗೆ ನಮ್ಮ ಗೌರವ ತೋರಿಸುತ್ತ, ಎಲ್ಲ ಕನ್ನಡಿಗರಲ್ಲೂ ಅಭಿಮಾನ ಉಕ್ಕಿಸುವ ಈ ವಿದ್ಯಾರ್ಥಿಗಳಿಗ ಶುಭ ಕೋರುವ.
ದಿನ : ಶನಿವಾರ ಮಾರ್ಚ್ 26, 2011, ಮಧಾಹ್ನ 12ರಿಂದ
ಸ್ಥಳ : ವ್ಯಾಲಿ ವ್ಯೂ ಮಿಡಲ್ ಸ್ಕೂಲ್, 3347 ತಾಪೊ ಸ್ಟ್ರೀಟ್, ಸಿಮಿ ವ್ಯಾಲಿ, ಕ್ಯಾ. 93063.
ಹೆಚ್ಚಿನ ಮಾಹಿತಿಗಾಗಿ http://www.kannadakali.com ನೋಡಿರಿ; [email protected]ಗೆ ಈಮೇಲ್ ಕಳಿಸಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications