ವಾಷಿಂಗ್ಟನಿನಲ್ಲಿ ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ

ಮಾರ್ಚ್ 1ರಿಂದ 20ರವರೆಗೆ ಕೆನಡಿ ಸೆಂಟರ್‌ನಲ್ಲಿ ನಡೆಯುತ್ತಿರುವ ಮ್ಯಾಕ್ಸಿಮಮ್ ಇಂಡಿಯಾ' ಸಾಂಸ್ಕೃತಿಕ ಹಬ್ಬದಲ್ಲಿ ಶುಕ್ರವಾರ (ಮಾರ್ಚ್ 4) ಸಂಜೆಯ ಪ್ರಧಾನ ಆಕರ್ಷಣೆ ರಘು ದೀಕ್ಷಿತ್ ಬಳಗದ ಸಂಗೀತ ಕಾರ್ಯಕ್ರಮ. ಬ್ಲೂಸ್, ರಾಕ್, ಸೂಫಿ, ಭಾಂಗ್ರಾ, ಲ್ಯಾಟಿನ್, ಕರ್ನಾಟಿಕ್ ಹೀಗೆ ಗಾಯನಕಲೆಯಲ್ಲೇ ಗ್ಲೋಬಲ್ ಟಚ್ ತೋರಿಸಬಲ್ಲ ರಘು ದೀಕ್ಷಿತ್ ಕಾರ್ಯಕ್ರಮಕ್ಕೆ ಸಭಾಂಗಣ ಹೌಸ್‌ಫುಲ್. ಕನ್ನಡಿಗರು ಮತ್ತು ಭಾರತೀಯರಷ್ಟೇ ಅಲ್ಲದೇ ಕಲಾರಸಿಕ ಅಮೆರಿಕನ್ ಪ್ರಜೆಗಳೂ ಬಹಳ ಸಂಖ್ಯೆಯಲ್ಲಿ ಬಂದಿದ್ದರು.
ಒಟ್ಟು ಒಂದು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಹಿಂದಿ ಮತ್ತು ಇಂಗ್ಲಿಷ್ ಹಾಡುಗಳ ಜತೆಗೇ ದ ನೆಕ್ಸ್ಟ್ ಸಾಂಗ್ ಇಸ್ ಇನ್ ಮೈ ಮದರ್‌ಟಂಗ್ ಕನ್ನಡ' ಎಂದು ಉದ್ಘೋಷಿಸಿ, ಶಿಶುನಾಳ ಶರೀಫರ ಪದಗಳ ಶ್ರೇಷ್ಠತೆಯನ್ನು ಚುಟುಕಾಗಿ ವಿವರಿಸಿ, ಗುಡುಗುಡಿಯ ಸೇದಿ ನೋಡೊ' ಮತ್ತು ಕೋಡಗನ ಕೋಳಿ ನುಂಗಿತ್ತಾ' ಹಾಡಿದರು. ಇಲ್ಲಿ ಹಾಡಲು ಬಂದ ಪಾತರದವಳ ಮದ್ದಳೆ ನುಂಗಿತು ಎಂದಾಗಲಿಲ್ಲ. ಹಾಡಲು ಬಂದ ರಘು ದೀಕ್ಷಿತ್‌ನನ್ನು ವಾಷಿಂಗ್ಟನ್ನಿಗರ ಚಪ್ಪಾಳೆಯ ಹರ್ಷೋದ್ಗಾರವೇ ನುಂಗಿತು ಎನ್ನುವಂತಾಯ್ತು.
ಮ್ಯಾಕ್ಸಿಮಮ್ ಇಂಡಿಯಾ' ಉತ್ಸವದಲ್ಲಿ ಭಾರತದಿಂದ ವಿಶೇಷವಾಗಿ ಆಹ್ವಾನಿತರಾಗಿ ಬಂದಿರುವ ನೂರಾರು ಕಲಾವಿದರು ವಿವಿಧ ನೃತ್ಯ, ಸಂಗೀತ, ನಾಟಕ, ಮತ್ತಿತರ ಕಲಾಪ್ರದರ್ಶನಗಳನ್ನು ನೀಡುತ್ತಿದ್ದಾರೆ. ವಜ್ರ ಮತ್ತು ಚಿನ್ನದ ಆಭರಣಗಳು, ರೇಷ್ಮೆಸೀರೆಗಳು ಮತ್ತು ಕರಕುಶಲ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ. ಉತ್ಸವಕ್ಕಾಗಿಯೇ ಭಾರತದಿಂದ ಬಂದಿರುವ ಪಂಚತಾರಾ ಬಾಣಸಿಗ ಹೇಮಂತ್ ಒಬೆರಾಯ್ ಇಲ್ಲಿನವರಿಗೆ ಭಾರತೀಯ ಖಾದ್ಯಗಳ ಸವಿಯುಣ್ಣಿಸುತ್ತಿದ್ದಾರೆ.
ದಿಲ್ಲಿಯ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಮತ್ತು ವಾಷಿಂಗ್ಟನ್‌ನಲ್ಲಿರುವ ಭಾರತೀಯ ದೂತಾವಾಸಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕ ಉತ್ಸವ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮೆರಿಕ ದೇಶದಲ್ಲಿ ನಡೆಯುತ್ತಿರುವುದು ಅಭೂತಪೂರ್ವ ಎನ್ನಲಾಗಿದೆ. ವಾಷಿಂಗ್ಟನ್ ಪೋಸ್ಟ್ ದಿನಪತ್ರಿಕೆಯೂ ಸೇರಿದಂತೆ ಅಮೆರಿಕದ ಮಾಧ್ಯಮಗಳು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕಷ್ಟು ಪ್ರಚಾರ ಕೊಟ್ಟಿವೆ, ಕಲಾಪ್ರದರ್ಶನಗಳನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತ ವಿಮರ್ಶೆಗಳನ್ನೂ ಪ್ರಕಟಿಸುತ್ತಿವೆ. ಒಟ್ಟಿನಲ್ಲಿ ಈಗ ವಾಷಿಂಗ್ಟನ್‌ನಲ್ಲಿ ಪರಮಾವಧಿ ಭಾರತ' ಮೇಳೈಸಿದೆ. ಭಾರತೀಯ ಕಲೆ ಮತ್ತು ಸಂಸ್ಕೃತಿಯ ಹಿತವಾದ ಗಾಳಿ ಬೀಸುತ್ತಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications